Blood Donation: ಟ್ಯಾಟೂ ಇದ್ದರೆ ರಕ್ತವನ್ನು ಏಕೆ ದಾನ ಮಾಡಬಾರದು?

ಮೊದಲು ವಿಶೇಷವಾಗಿ ಯುವಕರು ತಮ್ಮ ದೇಹದ ಮೇಲೆ ವಿವಿಧ ರೀತಿಯ ಹಚ್ಚೆಗಳನ್ನು ಹಾಕಿಸಿಕೊಳ್ಳುತ್ತಿದ್ದರು ಆದರೆ ಈಗ ಪ್ರತಿಯೊಬ್ಬರೂ ಅಂದರೆ ಪುರುಷರು ಮತ್ತು ಮಹಿಳೆಯರು ಎಂಬ ಭೇದವಿಲ್ಲದೆ ಟ್ಯಾಟೂಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಆದರೆ ಹಚ್ಚೆಗಳು ಅಥವಾ ಟ್ಯಾಟೂಗಳು ಇದ್ದರೆ ಅವರಿಗೆ ರಕ್ತದಾನ ಮಾಡುವುದು ಕೆಲವೊಮ್ಮೆ ಸಮಸ್ಯೆಯಾಗಬಹುದು. ಹಾಗಾದರೆ ದೇಹದ ಮೇಲೆ ಹಚ್ಚೆ ಇದ್ದರೆ ನೀವು ರಕ್ತವನ್ನು ಏಕೆ ನೀಡಬಾರದು? ಇದರಿಂದ ಆಗುವ ಸಮಸ್ಯೆ ಏನು? ಈ ಬಗ್ಗೆ ಯಾವುದೇ ರೀತಿಯ ಸಂದೇಹಗಳಿದ್ದರೂ ಇಲ್ಲಿದೆ ಮಾಹಿತಿ.

Blood Donation: ಟ್ಯಾಟೂ ಇದ್ದರೆ ರಕ್ತವನ್ನು ಏಕೆ ದಾನ ಮಾಡಬಾರದು?
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 24, 2024 | 12:55 PM

ಇಂದಿನ ಯುವ ಜನತೆ ಫ್ಯಾಷನ್ ಹೆಸರಿನಲ್ಲಿ ವಿವಿಧ ರೀತಿಯ ಹಚ್ಚೆಗಳನ್ನು ಅಥವಾ ಟ್ಯಾಟೂಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಆದರೆ ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡಬೇಕಾದರೆ ವೈದ್ಯರು ಅಂತವರಿಗೆ ರಕ್ತದಾನ ಮಾಡಲು ಬಿಡುವುದಿಲ್ಲ ಎಂಬುದು ನಿಮಗೆ ತಿಳಿದಿದೆಯೇ? ನೀವು ನೋಡಿರಬಹುದು, ಸಾಮಾನ್ಯವಾಗಿ ಪ್ರಸ್ತುತ ಪೀಳಿಗೆಯಲ್ಲಿ ಹಚ್ಚೆಗಳಿಗೆ ಸಾಕಷ್ಟು ಕ್ರೇಜ್ ಇದೆ. ಕೈ, ಕುತ್ತಿಗೆ, ಬೆನ್ನು ಹೀಗೆ ದೇಹದ ಅನೇಕ ಭಾಗದಲ್ಲಿ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಕೆಲವರು ತಮ್ಮ ಪ್ರೀತಿಪಾತ್ರರ ಹೆಸರನ್ನು ಇನ್ನು ಕೆಲವರು ತಮಗಿಷ್ಟವಾದ ಡಿಸೈನ್ ಗಳನ್ನು ದೇಹದ ಮೇಲೆ ವಿಭಿನ್ನ ವಿನ್ಯಾಸಗಳ ಮೂಲಕ ಟ್ಯಾಟೂಗಳನ್ನು ಹಾಕಿಸಿಕೊಳ್ಳುತ್ತಾರೆ.

ಮೊದಲು ವಿಶೇಷವಾಗಿ ಯುವಕರು ತಮ್ಮ ದೇಹದ ಮೇಲೆ ವಿವಿಧ ರೀತಿಯ ಹಚ್ಚೆಗಳನ್ನು ಹಾಕಿಸಿಕೊಳ್ಳುತ್ತಿದ್ದರು ಆದರೆ ಈಗ ಪ್ರತಿಯೊಬ್ಬರೂ ಅಂದರೆ ಪುರುಷರು ಮತ್ತು ಮಹಿಳೆಯರು ಎಂಬ ಭೇದವಿಲ್ಲದೆ ಟ್ಯಾಟೂಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಆದರೆ ಹಚ್ಚೆಗಳು ಅಥವಾ ಟ್ಯಾಟೂಗಳು ಇದ್ದರೆ ಅವರಿಗೆ ರಕ್ತದಾನ ಮಾಡುವುದು ಕೆಲವೊಮ್ಮೆ ಸಮಸ್ಯೆಯಾಗಬಹುದು. ಹಾಗಾದರೆ ದೇಹದ ಮೇಲೆ ಹಚ್ಚೆ ಇದ್ದರೆ ನೀವು ರಕ್ತವನ್ನು ಏಕೆ ನೀಡಬಾರದು? ಇದರಿಂದ ಆಗುವ ಸಮಸ್ಯೆ ಏನು? ಈ ಬಗ್ಗೆ ಯಾವುದೇ ರೀತಿಯ ಸಂದೇಹಗಳಿದ್ದರೂ ಇಲ್ಲಿದೆ ಮಾಹಿತಿ.

ಮಾರ್ಗಸೂಚಿಗಳೇನು?

ವಾಸ್ತವವಾಗಿ, ದೇಹದ ಮೇಲೆ ಹಚ್ಚೆ ಇದ್ದರೆ ರಕ್ತದಾನ ಮಾಡಲು ಯಾವುದೇ ಅಡೆತಡೆಗಳಿಲ್ಲ ಎಂದು ವೈದ್ಯರು ಹೇಳುತ್ತಾರೆ. ಹಚ್ಚೆ ಹಾಕಿಸಿಕೊಂಡು ನೀವು ಸುಲಭವಾಗಿ ರಕ್ತದಾನ ಮಾಡಬಹುದು. ಇದು ರೋಗಿಗೆ ಯಾವುದೇ ಹಾನಿಯನ್ನುಂಟು ಮಾಡುವ ಸಾಧ್ಯತೆ ಇರುವುದಿಲ್ಲ. ಆದರೆ ಹಚ್ಚೆ ಹಾಕಿಸಿಕೊಂಡವರು ಕೆಲವು ಮಾರ್ಗಸೂಚಿಗಳನ್ನು ಅನುಸರಿಸುವುದು ಅವಶ್ಯಕವಾಗಿರುತ್ತದೆ. ಟ್ಯಾಟೂಗಳನ್ನು ಯಾವಾಗಲೂ ಹೊಸ ಸೂಜಿಗಳನ್ನು ಬಳಸಿಯೇ ಹಾಕಿಸಿಕೊಳ್ಳಬೇಕು. ಕೆಲವೊಮ್ಮೆ ಹೆಚ್ಚಿನ ಜನರು ಒಂದೇ ಸೂಜಿಗಳಿಂದ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಹಚ್ಚೆ ಹಾಕಿಸಿಕೊಂಡ ವ್ಯಕ್ತಿಗೆ ಇದು ಒಳ್ಳೆಯದಲ್ಲ. ಅಂತಹ ಸಂದರ್ಭದಲ್ಲಿ, ಮಾರಣಾಂತಿಕ ಕಾಯಿಲೆಗಳು ರಕ್ತದ ಮೂಲಕ ದೇಹವನ್ನು ಪ್ರವೇಶಿಸುತ್ತವೆ. ನಂತರ ಅದು ರೋಗಿಯ ದೇಹಕ್ಕೆ ಹರಡುತ್ತದೆ.

ಇದನ್ನೂ ಓದಿ: ಬೆಳಿಗ್ಗೆ ಎದ್ದ ತಕ್ಷಣ ದೇಹ ಭಾರವಾದಂತೆ ಅನಿಸಿದರೆ ನಿರ್ಲಕ್ಷ್ಯ ಮಾಡಬೇಡಿ

ಸೋಂಕಿನ ನಂತರ ವೈರಸ್ ಸಂತಾನೋತ್ಪತ್ತಿ ಮಾಡುವ ಅವಧಿಯನ್ನು ಇನ್ಕ್ಯುಬೇಷನ್ ಅವಧಿ ಎಂದು ಕರೆಯಲಾಗುತ್ತದೆ. ಇದರರ್ಥ ಒಬ್ಬ ವ್ಯಕ್ತಿಯು ಆರು ತಿಂಗಳೊಳಗೆ ಎಚ್ಐವಿ, ಹೆಪಟೈಟಿಸ್ ಬಿ ಅಥವಾ ಹೆಪಟೈಟಿಸ್ ಸಿ ವೈರಸ್ ಸೋಂಕಿಗೆ ಒಳಗಾಗಿದ್ದು ಆ ಸಮಯದಲ್ಲಿ ರಕ್ತ ಪರೀಕ್ಷೆಗೆ ಒಳಗಾಗಿದ್ದರೆ, ವರದಿ ನೆಗೆಟಿವ್ ಬರಬಹುದು. ಆದ್ದರಿಂದ ಹಚ್ಚೆ ಹಾಕಿಸಿಕೊಂಡ ಆರು ತಿಂಗಳೊಳಗೆ ರಕ್ತದಾನ ಮಾಡಬಾರದು. ಏಕೆಂದರೆ ಆರೋಗ್ಯವಂತ ವ್ಯಕ್ತಿಯು ರಕ್ತದ ಮೂಲಕ ಮಾರಣಾಂತಿಕ ಕಾಯಿಲೆಗೆ ತುತ್ತಾಗುವ ಅಪಾಯವಿರುತ್ತದೆ. ಆದ್ದರಿಂದ ಹಚ್ಚೆ ಹಾಕಿಸಿಕೊಳ್ಳುವ ಮೊದಲು ಕನಿಷ್ಠ ಆರು ತಿಂಗಳು ಜಾಗರೂಕರಾಗಿರಬೇಕು. ಆರು ತಿಂಗಳ ನಂತರ, ಸರಿಯಾಗಿ ಖಚಿತಪಡಿಸಿಕೊಳ್ಳಲು ರಕ್ತ ಪರೀಕ್ಷೆ ಮಾಡಬೇಕು. ಆಗ ನೀವು ಹಚ್ಚೆ ಹಾಕಿಸಿಕೊಂಡಿದ್ದರೂ ಸುರಕ್ಷಿತವಾಗಿ ರಕ್ತದಾನ ಮಾಡಬಹುದು. ಆದರೆ ಕೆಲವು ವಿಶೇಷ ಸಂದರ್ಭಗಳಲ್ಲಿ, ಕೆಲವು ವೈದ್ಯರು ಒಂದು ವರ್ಷದವರೆಗೆ ರಕ್ತದಾನ ಮಾಡುವುದನ್ನು ನಿಷೇಧಿಸುತ್ತಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್