ಚಳಿಗಾಲದಲ್ಲಿ ಕೀಲು, ಭುಜದ ನೋವು ಹೆಚ್ಚಾಗಲು ಕಾರಣವೇನು? ಇಲ್ಲಿದೆ ಮಾಹಿತಿ

ಚಳಿಗಾಲದಲ್ಲಿ ಕೀಲು, ಭುಜದ ನೋವು ಹೆಚ್ಚಾಗಲು ಕಾರಣವೇನು? ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ

ನೀವು ಕುಳಿತುಕೊಳ್ಳುವ ಶೈಲಿಯಿಂದ ನಿಮ್ಮ ಭುಜದ ಹಾಗೂ ಕೀಲುಗಳಲ್ಲಿ  ಅತಿಯಾಗಿ ನೋವು ಕಾಣಿಸಕೊಳ್ಳುತ್ತದೆ. ಒದೇ ಕಡೆ ಹೆಚ್ಚು ಹೊತ್ತು ಭುಜವನ್ನು ಅಲುಗಾಡಿಸದೆ ಕುಳಿತರೆ ಹಿಡಿದುಕೊಂಡಂತಾಗಿ ನೋವು ಉಲ್ಬಣವಾಗುತ್ತದೆ.

TV9kannada Web Team

| Edited By: Pavitra Bhat Jigalemane

Dec 28, 2021 | 2:16 PM

ಚಳಿಗಾಲದಲ್ಲಿ ದೇಹದ ವಿವಿಧ  ಭಾಗಗಳಲ್ಲಿ ಅತಿಯಾದ ನೋವು ಕಾಣಿಸಕೊಳ್ಳುವುದು ಹೆಚ್ಚು. ಅದರಲ್ಲೂ  ಸ್ನಾಯುಗಳು, ಕೀಲುಗಳಲ್ಲಿ ಹಾಗೂ ಭುಜದ ನೋವು ನಿಮಗೆ ಹಿಂಸೆ ನೀಡುತ್ತವೆ. ಯಾವ ಕೆಲಸಕ್ಕೆ ಹೋದರೂ ಅಸಾಧ್ಯ ನೋವನ್ನು ಸಹಿಸಲಾಗಿದೆ ಕೆಲಸವನ್ನು ಅರ್ಧಕ್ಕೆ ಬಿಡುವ ಸಂದರ್ಭ ಬರಬಹುದು. ಚಳಿಗಾಲದಲ್ಲಿ  ಬೆಳಗ್ಗಿನ ಮೈಕೊರೆಯುವ ಚಳಿ ನಿಮ್ಮನ್ನು ಇನ್ನಷ್ಟು ಜಡರನ್ನಾಗಿ ಮಾಡುತ್ತದೆ.ಆಗ ನೀವು ಮನೆಯಿಂದ ಹೊರಬರದೆ ಕುಳಿತಲ್ಲೇ ಕುಳಿತರೆ ನಿಮ್ಮ ಸ್ನಾಯುಗಳು ಹಿಡಿದುಕೊಳ್ಳುತ್ತವೆ. ಆಗ ಅತಿಯಾದ ನೋವು ಕಾಣಿಸಿಕೊಳ್ಳುತ್ತದೆ.

ಚಳಿಗಾಲದಲ್ಲಿ ಕಾಡುವ ಈ ರೀತಿ ನೋವು ಹೆಚ್ಚಾಗಲು ಕಾರಣವೇನು? ನೀವು ಕುಳಿತುಕೊಳ್ಳುವ ಶೈಲಿಯಿಂದ ನಿಮ್ಮ ಭುಜದ ಹಾಗೂ ಕೀಲುಗಳಲ್ಲಿ  ಅತಿಯಾಗಿ ನೋವು ಕಾಣಿಸಕೊಳ್ಳುತ್ತದೆ. ಒದೇ ಕಡೆ ಹೆಚ್ಚು ಹೊತ್ತು ಭುಜವನ್ನು ಅಲುಗಾಡಿಸದೆ ಕುಳಿತರೆ ಹಿಡಿದುಕೊಂಡಂತಾಗಿ ನೋವು ಉಲ್ಬಣವಾಗುತ್ತದೆ. ವಾತಾವರಣದಲ್ಲಿರುವ ಚಳಿಗೆ ದೇಹವನ್ನು ಬಿಗಿಯಾಗಿ ಹಿಡಿದುಕೊಳ್ಳುವುದರಿಂದಲೂ ಈ ನೋವು ಕಾಣಿಸಿಕೊಳ್ಳುತ್ತದೆ. ಚಳಿಗಾಲದಲ್ಲಿ ಕೀಲುಗಳಲ್ಲಿ ನೋವು ಕಾಣಸಿಕೊಳ್ಳಲು ಇನ್ನೊಂದು ಮುಖ್ಯ  ಕಾರಣವೆಂದರೆ ಜಡವಾದ ದೇಹಕ್ಕೆ ಸರಿಯಾದ ವ್ಯಾಯಾಮ ಮಾಡದೇ ಇರುವುದು. ನೀವು ವ್ಯಾಯಾಮ ಮಾಡದೇ ಇರಲು ನಿಮ್ಮ ಮನಸ್ಸೂ ಕೂಡ ಕಾರಣವಾಗುತ್ತದೆ. ಹೀಗಾಗಿ, ಎಷ್ಟೇ ಚಳಿ ಇದ್ದರೂ ಮನೆಯಿಂದ ಹೊರಹೋಗಲು ಸಾಧ್ಯವಾಗದೆ ವೇಳೆ ಮನೆಯಲ್ಲೇ  ಏರೋಬಿಕ್ಸ್​ ವ್ಯಾಯಾಮವನ್ನಾದರೂ ಮಾಡಿ. ಇದು ನಿಮ್ಮ ದೇಹವನ್ನು ಬಿಸಿಗೊಳಿಸಿ ಚಳಿಯನ್ನೂ ನಿವಾರಿಸುತ್ತದೆ. ಇದರಿಂದ ನಿಮ್ಮ ಕೀಲು ಹಾಗೂ ಭುಜದ ಮೇಲಿನ ನೋವು ನಿವಾರಣೆಯಾಗುತ್ತದೆ.

ಚಳಿಗಾಲದಲ್ಲಿ ಕಾಡುವ ನೋವಿಗೆ ಪರಿಹಾರವೇನು? ಚಳಿಗಾಲದಲ್ಲಿ ಕಾಡುವ ಕೀಲು ನೋವು, ಭುಜದ ನೋವಿಗೆ ನೀವೇ ಪರಿಹಾರ ಕಂಡುಕೊಳ್ಳಬಹುದು. ಇಲ್ಲಿದೆ ಸರಳ ಪರಿಹಾರ

ತಂಪಾದ ಸ್ಥಳ ಅಥವಾ ಎಸಿ ಇರುವ ಕಡೆ ಹೆಚ್ಚು ಹೊತ್ತು ಕುಳಿತುಕೊಳ್ಳಬೇಡಿ. ಚಳಿಗಾಲದಲ್ಲಿ ಕಚೇರಿಗಳಲ್ಲಿ ಆದಷ್ಟು ಎಸಿಯಿಂದ ದೂರವಿರಿ. ಮನೆಯೊಳಗೆ ಇರುವಾಗಲೂ ಆದಷ್ಟು ಬೆಚ್ಚಗಿರಿ. ಕಾಲುಗಳಿಗೆ ಸಾಕ್ಸ್​, ತಲೆಗೆ ಟೋಪಿಯನ್ನು ಧರಿಸಿ. ಭುಜ ಹಾಗೂ ಕೀಲುಗಳ ನೋವನ್ನು ನಿವಾರಿಸಲು ಬಿಸಿ ನೀರಿನ ಶಾಖ ನೀಡಿ. ಇದು ನಿಮ್ಮ ದೇಹವನ್ನೂ ಬೆಚ್ಚಗಾಗಿಸುತ್ತದೆ. ದೈಹಿಕ ಹಾಗೂ ಮಾನಿಸಿಕವಾಗಿ ವಿಶ್ರಾಂತಿ ಪಡೆಯುವುದನ್ನು ಅಭ್ಯಸಿಸಿಕೊಳ್ಳಿ. ಕೆಲಸದ ನಡುವೆ ಭುಜಕ್ಕ ಒಂದೈದು ನಿಮಿಷವಾದರೂ ಬ್ರೇಕ್​​ ನೀಡಿ ರಿಲಾಕ್ಸ್​ ಆಗಿ. ನೀವು ಕುಳಿತುಕೊಳ್ಳುವ ಭಂಗಿಯನ್ನು ಸರಿಪಡಿಸಿಕೊಳ್ಳಿ, ಮುದುಡಿ ಅಥವಾ ಸುರುಳಿಯಾಗಿ ಕುಳಿತುಕೊಳ್ಳುವುದನ್ನು ತಪ್ಪಸಿ. ಈಜುವ ಅಭ್ಯಾಸವಿದ್ದರೆ ತಪ್ಪದೇ ಹೋಗಿ. ಅದಿಲ್ಲದಿದ್ದರೆ ಬಿಸಿ ನೀರಿನಲ್ಲಿ ಸ್ನಾನ ಮಾಡಿ ಅಥವಾ ಸ್ಪಾಗೆ ತೆರಳಿ ಮಸಾಜ್​ ಮಾಡಿಸಿಕೊಳ್ಳಿ. ಮನೆಯಿಂದ ಹೊರಹೋಗುವಾಗ ಬೆಚ್ಚನೆಯ ಉಡುವು ಧರಿಸಿ. ಕಿವಿಗೆ ಗಾಳಿ ಸೋಕದಂತೆ ಜಾಗೃತೆ ವಹಿಸಿ. ಖಾಲಿ ಕುಳಿತ ವೇಳೆ ಸಂಗೀತ ಆಲಿಸಿ ಅಥವಾ ನೆಚ್ಚಿನ ಹವ್ಯಾಸದಲ್ಲಿ ತೊಡಗಿಗೊಳ್ಳಿ ಇದರಿಂದ ಮನಸ್ಸು ನೋವಿನತ್ತ ಗಮನ ನೀಡದೆ ನೀವು ರಿಲಾಕ್ಸ್​ ಆಗಬಹದು.

ಇದನ್ನೂ ಓದಿ:

Immunity Power: ನಿಮ್ಮ ದೇಹದಲ್ಲಿ ಈ ಲಕ್ಷಣಗಳು ಕಂಡುಬಂದರೆ ರೋಗ ನಿರೋಧಕ ಶಕ್ತಿ ಕುಂದಿದೆ ಎಂದರ್ಥ

Follow us on

Related Stories

Most Read Stories

Click on your DTH Provider to Add TV9 Kannada