ಬೆಂಗಳೂರು: ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ನಗರದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿಂದು ಮೂತ್ರಪಿಂಡ ಕಸಿ ಮಾಡುವ, ಓಸ್ಟಿರೋಪೊರೊಸಿಸ್ ಮತ್ತು ಮಕ್ಕಳಲ್ಲಿ ಚರ್ಮರೋಗದ ಕಾಯಿಲೆಗಳಿಗಾಗಿ ವಿಶೇಷ ಘಟಕವನ್ನು ಉದ್ಘಾಟಿಸಿದರು.
‘ಕೇಂದ್ರ ಸರ್ಕಾರವು ದೇಶಾದ್ಯಂತ 7,000ಕ್ಕೂ ಅಧಿಕ ಜನೌಷಧಿ ಕೇಂದ್ರಗಳ ಮೂಲಕ ಸಾಮಾನ್ಯರಿಗೂ ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ಔಷಧಗಳನ್ನು ಒದಗಿಸುತ್ತಿದೆ. ವೈದ್ಯಮಿತ್ರರಿಗೆ ನನ್ನ ಪ್ರೀತಿಪೂರ್ವಕ ಆಗ್ರಹವೆನೆಂದರೆ ನಿಮ್ಮಲ್ಲಿ ಬರುವ ಆರ್ಥಿಕವಾಗಿ ದುರ್ಬಲರಾದ ರೋಗಿಗಳಿಗಳಿಗೆ ಜನರಿಕ್ ಔಷಧಗಳನ್ನೇ ಪ್ರಿಸ್ಕ್ರೈಬ್ ಮಾಡಿ’ ಎಂದರು.
‘ಭಾರತವು ಔಷಧ ತಯಾರಿಕೆಗೆ ಬೇಕಾಗುವ ಎಪಿಐ ಹಾಗೂ ವೈದ್ಯಕೀಯ ಉಪಕರಣಗಳಿಗೆ ವಿದೇಶಗಳನ್ನು ಅವಲಂಬಿಸಿದೆ. ಈ ವಲಯದಲ್ಲಿ ಸ್ವಾವಲಂಬನೆ ಗಳಿಸಲು 3 ಬಲ್ಕ್ ಡ್ರಗ್ ಪಾರ್ಕ್ ಮತ್ತು 4 ಮೆಡಿಕಲ್ ಡಿವೈಸ್ ಪಾರ್ಕ್ಗಳನ್ನು ಸ್ಥಾಪಿಸಲಾಗುತ್ತಿದೆ. ಇವುಗಳ ಮೂಲಸೌಕರ್ಯಕ್ಕಾಗಿ ಕೇಂದ್ರವು ತಲಾ 1,000 ಕೋಟಿ ರೂ ವೆಚ್ಚ ಮಾಡುತ್ತಿದೆ’ ಎಂದು ಈ ಸಂದರ್ಭದಲ್ಲಿ ಸಚಿವರು ಹೇಳಿದರು.
ಬ್ಯಾಪ್ಟಿಸ್ಟ್ ಆಸ್ಪತ್ರೆಯು ಉತ್ಕೃಷ್ಟ ಗುಣಮಟ್ಟದ ವೈದ್ಯಕೀಯ ನೆರವನ್ನು ಸಾರ್ವಜನಿಕರಿಗೆ ಒದಗಿಸುತ್ತಿದೆ ಎಂದು ಹೇಳಿ, ಡಾ ನವೀನ್ ಥಾಮಸ್ ಮತ್ತವರ ತಂಡದ ಸಮರ್ಪಣಾ ಮನೋಭಾವದ ಸೇವೆಯನ್ನು ಕೊಂಡಾಡಿದರು.
ಸದಾನಂದ ಗೌಡರಿಗೆ ಪ್ರಧಾನಿ ಕರೆ; ಆರು ತಿಂಗಳು ಕಡಿಮೆ ಕೆಲಸ, ಆಮೇಲೆ ದುಪ್ಪಟ್ಟು ಮಾಡಿ