ಮಲಬದ್ಧತೆ ನಿವಾರಣೆಗೆ ದಿನವೂ ಔಷಧಿ ತೆಗೆದುಕೊಂಡರೆ ಏನಾಗುತ್ತದೆ?
Constipation: ಮಲಬದ್ಧತೆಯನ್ನು ನಿವಾರಿಸಲು ಅನೇಕ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಔಷಧಿಗಳು ಮಲವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ. ಆದರೆ, ನೀವು ಮಲ ವಿಸರ್ಜನೆಗೆ ಪ್ರತಿದಿನ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಇವು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು.
ಜಡ ಜೀವನಶೈಲಿ, ಅನಿಯಮಿತ ಆಹಾರ ಪದ್ಧತಿ ಮತ್ತು ಆಹಾರದಲ್ಲಿ ಆಗಾಗ ಬದಲಾವಣೆಗಳಿಂದಾಗಿ ಪ್ರಪಂಚದಾದ್ಯಂತ ಅನೇಕ ಜನರು ದೀರ್ಘಕಾಲದ ಮಲಬದ್ಧತೆಯಿಂದ ಬಳಲುತ್ತಿದ್ದಾರೆ. ತಜ್ಞರ ಪ್ರಕಾರ, ವಾರಕ್ಕೆ 3ಕ್ಕಿಂತ ಕಡಿಮೆ ಬಾರಿ ಮಲ ವಿಸರ್ಜನೆಯಾದರೆ ಅದು ನಿರ್ಜಲೀಕರಣ, ಗುದನಾಳದ ರಕ್ತಸ್ರಾವ ಮತ್ತು ಅನಿಯಮಿತ ಹೃದಯ ಬಡಿತ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.
ಹೀಗಾಗಿ, ಮಲಬದ್ಧತೆಯಿಂದ ಪಾರಾಗಲು ಸೂಕ್ತ ರೀತಿಯ ಆಹಾರ ಸೇವಿಸುವುದು ಬಹಳ ಮುಖ್ಯ. ಮಲಬದ್ಧತೆಯನ್ನು ನಿವಾರಿಸಲು ಅನೇಕ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಔಷಧಿಗಳು ಮಲವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ. ಇದು ಮಲಬದ್ಧತೆಯನ್ನು ನಿವಾರಿಸಲು ಮಾತ್ರವಲ್ಲದೆ ಜೀರ್ಣಾಂಗ ವ್ಯವಸ್ಥೆಯನ್ನು ಸರಾಗವಾಗಿ ನಡೆಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Gut Health: ಟ್ರಾವೆಲ್ ಮಾಡುವಾಗ ಮಲಬದ್ಧತೆ ಸಮಸ್ಯೆ ನಿಮ್ಮನ್ನು ಕಾಡುತ್ತದೆಯೇ? ಇದನ್ನು ತಡೆಯಲು ಇಲ್ಲಿದೆ ಸುಲಭ ಉಪಾಯ
ಆದರೆ, ನೀವು ಮಲ ವಿಸರ್ಜನೆಗೆ ಪ್ರತಿದಿನ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಇವು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಆ ಬಗ್ಗೆ ಮಾಹಿತಿ ಇಲ್ಲಿದೆ.
ಹೆಚ್ಚಿದ ಅವಲಂಬನೆ:
ದಿನವೂ ಔಷಧಿ ತೆಗೆದುಕೊಂಡು ಮಲ ವಿಸರ್ಜನೆ ಮಾಡುವುದು ರೂಢಿಯಾದರೆ ನಿಮ್ಮ ಕರುಳು ನೈಸರ್ಗಿಕವಾಗಿ ಮಲವನ್ನು ಹೊರಹಾಕುವ ಸಾಮರ್ಥ್ಯವನ್ನೇ ಕಳೆದುಕೊಳ್ಳಬಹುದು.
ಅತಿಸಾರ:
ಔಷಧಿಗಳ ಅತಿಯಾದ ಅಥವಾ ದೀರ್ಘಕಾಲದ ಬಳಕೆಯು ಅತಿಸಾರವನ್ನು ಉಂಟುಮಾಡಬಹುದು. ಇದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಇದು ಅಪಾಯಕಾರಿ ವೈದ್ಯಕೀಯ ಸಮಸ್ಯೆಯಾಗಿದೆ. ಔಷಧಿಗಳು ದೇಹದಿಂದ ನೀರಿನ ತ್ವರಿತ ನಷ್ಟವನ್ನು ಉಂಟುಮಾಡುತ್ತದೆ. ಅಧ್ಯಯನಗಳ ಪ್ರಕಾರ, ನಿರ್ಜಲೀಕರಣ ಮತ್ತು ಎಲೆಕ್ಟ್ರೋಲೈಟ್ ಅಸಮತೋಲನವನ್ನು ಸಮಯಕ್ಕೆ ಸರಿಯಾಗಿ ಪರಿಹರಿಸದಿದ್ದರೆ ಮಾರಕವಾಗಬಹುದು.
ಪೋಷಕಾಂಶಗಳ ಕೊರತೆ:
ಔಷಧಿಗಳನ್ನು ದೀರ್ಘಕಾಲದವರೆಗೆ ಬಳಸುವುದರಿಂದ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಕರುಳಿನ ಸುಗಮಗೊಳಿಸುವಿಕೆಗಳು ಕರುಳಿನ ಮೂಲಕ ಆಹಾರದ ಸಾಗಣೆಯನ್ನು ಹೆಚ್ಚಿಸುವುದರಿಂದ, ದೇಹವು ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳಲು ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ನಾರ್ಮಲ್ ಡೆಲಿವರಿ ಆಗಲು ಗರ್ಭಿಣಿಯರು ರೂಢಿಸಿಕೊಳ್ಳಬೇಕಾದ 8 ಅಭ್ಯಾಸಗಳಿವು
ತೀವ್ರ ಕಿಬ್ಬೊಟ್ಟೆಯ ನೋವು:
ನಿಮ್ಮ ದೇಹದಲ್ಲಿನ ಮಲವನ್ನು ಹೊರಹಾಕಲು ದಿನವೂ ಔಷಧಿ ತೆಗೆದುಕೊಳ್ಳುವುದರಿಂದ ತೀವ್ರವಾದ ಹೊಟ್ಟೆನೋವು ಮತ್ತು ಸೆಳೆತ ಉಂಟಾಗಬಹುದು. ತಜ್ಞರ ಪ್ರಕಾರ, ಹೊಟ್ಟೆಯ ಸ್ನಾಯುಗಳು ಅನಿಯಮಿತವಾಗಿ ಸಂಕುಚಿತಗೊಂಡಾಗ ಸಮಸ್ಯೆ ಉಂಟಾಗುತ್ತದೆ, ಇದು ಅಸ್ವಸ್ಥತೆಯನ್ನು ಉಂಟುಮಾಡುತ್ತದೆ.
ಮಲಬದ್ಧತೆಯನ್ನು ತಡೆಯಲು ಆಹಾರ ಸೇವನೆಯಲ್ಲಿ ಬದಲಾವಣೆ ಮಾಡಿಕೊಳ್ಳಿ. ಹೆಚ್ಚು ಧಾನ್ಯಗಳು, ಬ್ರೌನ್ ರೈಸ್ ಮತ್ತು ಓಟ್ಸ್, ಹಣ್ಣುಗಳಾದ ಸೇಬು, ಪೇರಲೆ, ಬಾಳೆಹಣ್ಣುಗಳನ್ನು ಹೆಚ್ಚು ಸೇವಿಸಿ. ಇದು ಫೈಬರ್ ಅಂಶವನ್ನು ಹೊಂದಿರುತ್ತದೆ. ಎಲೆಕೋಸು, ಪಾಲಕ ಅಥವಾ ಕ್ಯಾರೆಟ್ ಮತ್ತು ಆಲೂಗಡ್ಡೆಗಳಂತಹ ಹಸಿರು ಎಲೆಗಳ ತರಕಾರಿಗಳನ್ನು ಸೇವಿಸಿ. ದ್ವಿದಳ ಧಾನ್ಯಗಳನ್ನು ಸೇವಿಸಿ. ಹೆಚ್ಚು ನೀರು ಕುಡಿಯುವ ಮೂಲಕ ನಿಮ್ಮ ದೇಹವನ್ನು ಹೈಡ್ರೇಟ್ ಮಾಡಿ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ