ಕೊರೊನಾದ 3ನೇ ಅಲೆ ಖಚಿತ… ಯಾವಾಗ ಬರಬಹುದು ಅನ್ನುವ ಬಗ್ಗೆಯಷ್ಟೇ ಭಿನ್ನಾಭಿಪ್ರಾಯ: ಏನದರ ಲೆಕ್ಕಾಚಾರ?

Coronavirus third wave: ದೇಶದಲ್ಲಿ ಹೆಚ್ಚಿನ ಜನಸಂಖ್ಯೆ ಇರುವುದರಿಂದ ಎಲ್ಲರಿಗೂ ಕೊರೊನಾ ಲಸಿಕೆ ನೀಡಿಕೆಯೇ ದೊಡ್ಡ ಸವಾಲು. ಕೊವಿಶೀಲ್ಡ್ ಲಸಿಕೆಯ ಎರಡು ಡೋಸ್ ಗಳ ನಡುವಿನ ಅಂತರ ಹೆಚ್ಚಳ ತಪ್ಪಲ್ಲ. ಕೊರೊನಾ ವೈರಸ್ ತಾನು ಬದುಕುಳಿಯಲು ರೂಪಾಂತರ ಹೊಂದುತ್ತಲೇ ಇರುತ್ತೆ. ಹೀಗಾಗಿ ಕೊರೊನಾದ ರೂಪಾಂತರದ ಬಗ್ಗೆ ಈಗ ನಿಗಾವಹಿಸಿ ಅಧ್ಯಯನ ಮಾಡಬೇಕು ಎಂದು ರಣದೀಪ್ ಗುಲೇರಿಯಾ ಹೇಳಿದ್ದಾರೆ.

  • Updated On - 3:08 pm, Sat, 19 June 21 Edited By: sadhu srinath
ಕೊರೊನಾದ 3ನೇ ಅಲೆ ಖಚಿತ... ಯಾವಾಗ ಬರಬಹುದು ಅನ್ನುವ ಬಗ್ಗೆಯಷ್ಟೇ ಭಿನ್ನಾಭಿಪ್ರಾಯ: ಏನದರ ಲೆಕ್ಕಾಚಾರ?
ಕೊರೊನಾದ 3ನೇ ಅಲೆ ಖಚಿತ... ಯಾವಾಗ ಬರಬಹುದು ಎನ್ನುವ ಬಗ್ಗೆಯಷ್ಟೇ ಭಿನ್ನಾಭಿಪ್ರಾಯ: ಏನದರ ಲೆಕ್ಕಾಚಾರ?

ಭಾರತದಲ್ಲಿ ಕೊರೊನಾದ ಮೂರನೇ ಅಲೆ ಬರುತ್ತೆ ಎನ್ನುವ ಬಗ್ಗೆ ಆರೋಗ್ಯ ತಜ್ಞರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಆದರೆ, ಕೊರೊನಾದ ಮೂರನೇ ಅಲೆ ಯಾವಾಗ ಬರಬಹುದು ಎನ್ನುವ ಬಗ್ಗೆ ಮಾತ್ರ ಭಿನ್ನಾಭಿಪ್ರಾಯ ಇದೆ. ಕೆಲ ತಜ್ಞರು 2 ರಿಂದ ನಾಲ್ಕು ತಿಂಗಳಲ್ಲಿ ಕೊರೊನಾದ ಮೂರನೇ ಅಲೆ ಬರುತ್ತೆ ಎಂದು ಹೇಳಿದ್ದಾರೆ. ಈಗ ದೆಹಲಿಯ ಏಮ್ಸ್ ಆಸ್ಪತ್ರೆಯ ಮುಖ್ಯಸ್ಥ ರಣದೀಪ್ ಗುಲೇರಿಯಾ ಆರರಿಂದ 8ವಾರಗಳಲ್ಲಿ ಕೊರೊನಾದ ಮೂರನೇ ಅಲೆ ಬರಬಹುದು ಎಂದಿದ್ದಾರೆ.

ಭಾರತದಲ್ಲಿ 6 ರಿಂದ 8 ವಾರದಲ್ಲಿ 3ನೇ ಅಲೆ ಬರಬಹುದು! ಏಮ್ಸ್ ಆಸ್ಪತ್ರೆಯ ಮುಖ್ಯಸ್ಥ ರಣದೀಪ್ ಗುಲೇರಿಯಾ
ಭಾರತವು ಕೊರೊನಾದ ಮೂರನೇ ಅಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಭಾರತದಲ್ಲಿ ಮುಂದಿನ 6 ರಿಂದ 8 ವಾರಗಳಲ್ಲಿ ಕೊರೊನಾದ ಮೂರನೇ ಅಲೆ ಬರಬಹುದು ಎಂದು ದೆಹಲಿಯ ಏಮ್ಸ್ ಆಸ್ಪತ್ರೆಯ ಮುಖ್ಯಸ್ಥ ರಣದೀಪ್ ಗುಲೇರಿಯಾ ಶನಿವಾರ ಬೆಳಿಗ್ಗೆ ಹೇಳಿದ್ದಾರೆ. ದೇಶದಲ್ಲಿ ಹೆಚ್ಚಿನ ಜನಸಂಖ್ಯೆ ಇರುವುದರಿಂದ ಎಲ್ಲರಿಗೂ ಕೊರೊನಾ ಲಸಿಕೆ ನೀಡಿಕೆಯೇ ದೊಡ್ಡ ಸವಾಲು. ಕೊವಿಶೀಲ್ಡ್ ಲಸಿಕೆಯ ಎರಡು ಡೋಸ್ ಗಳ ನಡುವಿನ ಅಂತರ ಹೆಚ್ಚಳ ತಪ್ಪಲ್ಲ. ಕೊರೊನಾ ವೈರಸ್ ತಾನು ಬದುಕುಳಿಯಲು ರೂಪಾಂತರ ಹೊಂದುತ್ತಲೇ ಇರುತ್ತೆ. ಹೀಗಾಗಿ ಕೊರೊನಾದ ರೂಪಾಂತರದ ಬಗ್ಗೆ ಈಗ ನಿಗಾವಹಿಸಿ ಅಧ್ಯಯನ ಮಾಡಬೇಕು ಎಂದು ರಣದೀಪ್ ಗುಲೇರಿಯಾ ಹೇಳಿದ್ದಾರೆ.

ನಾವು ಈಗ ಆನ್ ಲಾಕ್ ಮಾಡುತ್ತಿದ್ದಂತೆ, ಕೊರೊನಾ ತಡೆ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ. ಕೊರೊನಾದ ಮೊದಲ ಹಾಗೂ ಎರಡನೇ ಅಲೆಯಿಂದ ಆದ ಹಾನಿಯಿಂದ ನಾವು ಪಾಠ ಕಲಿತಂತೆ ಕಾಣುತ್ತಿಲ್ಲ. ಈಗ ಮತ್ತೆ ಜನದಟ್ಟಣೆ ಕಂಡು ಬರುತ್ತಿದೆ. ಜನರು ಗುಂಪುಗೂಡುತ್ತಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಕೊರೊನಾ ಕೇಸ್ ಹೆಚ್ಚಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತೆ. ಕೊರೊನಾದ ಮೂರನೇ ಅಲೆಯನ್ನು ತಡೆಯಲಾಗಲ್ಲ. ಮೂರನೇ ಅಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮುಂದಿನ 6 ರಿಂದ 8 ವಾರದಲ್ಲಿ ಕೊರೊನಾದ ಮೂರನೇ ಅಲೆ ಭಾರತಕ್ಕೆ ಬರಬಹುದು. ಸ್ಪಲ್ಪ ಹೆಚ್ಚಿನ ಕಾಲಾವಕಾಶ ತೆಗೆದುಕೊಳ್ಳಬಹುದು. ಇದೆಲ್ಲವೂ ನಾವು ಹೇಗೆ ವರ್ತಿಸುತ್ತೇವೆ ಎನ್ನುವುದನ್ನು ಅವಲಂಬಿಸಿದೆ. ಜನದಟ್ಟಣೆ ನಿಯಂತ್ರಿಸಿದರೇ, ವಿಳಂಬವಾಗಬಹುದು.

ಭಾರತದಲ್ಲಿ ಕೊರೊನಾ ಲಸಿಕೆ ನೀಡಿಕೆಯೇ ಈಗ ದೊಡ್ಡ ಸವಾಲು. ಕೊರೊನಾದ ಹೊಸ ಅಲೆ ಸಾಮಾನ್ಯವಾಗಿ 3 ತಿಂಗಳ ಸಮಯ ತೆಗೆದುಕೊಳ್ಳುತ್ತೆ. ಆದರೆ, ಕಡಿಮೆ ಸಮಯವನ್ನು ತೆಗೆದುಕೊಳ್ಳಬಹುದು. ಕಳೆದ ಭಾರಿ ಹೊಸ ಪ್ರಭೇದದ ವೈರಸ್ ಪತ್ತೆಯಾಗಿತ್ತು. ಹೊರಗಿನಿಂದ ಭಾರತಕ್ಕೆ ಬಂದು, ಭಾರತದಲ್ಲಿ ಹೊಸ ಪ್ರಭೇದದ ವೈರಸ್ ಬೆಳವಣಿಗೆಯಾಗಿತ್ತು. ಇದರಿಂದಾಗಿ ಭಾರತದಲ್ಲಿ ಕೊರೊನಾ ಕೇಸ್ ಹೆಚ್ಚಾಗಿದ್ದವು. ವೈರಸ್ ರೂಪಾಂತರ ಹೊಂದುತ್ತಲೇ ಇರುತ್ತೆ ಎನ್ನುವುದನ್ನು ನಾವು ಮರೆಯಬಾರದು. ಹಾಟ್ ಸ್ಪಾಟ್ ಗಳಲ್ಲಿ ತೀವ್ರ ನಿಗಾ ವಹಿಸಬೇಕು ಎಂದು ದೆಹಲಿಯ ಏಮ್ಸ್ ಆಸ್ಪತ್ರೆಯ ಮುಖ್ಯಸ್ಥ ರಣದೀಪ್ ಗುಲೇರಿಯಾ ಹೇಳಿದ್ದಾರೆ.

ಇಂಗ್ಲೆಂಡ್ ಈಗ ಒಂದೇ ಡೋಸ್ ಲಸಿಕೆ ನೀಡುವ ಕಾರ್ಯತಂತ್ರ ಆಳವಡಿಸಿಕೊಂಡಿದೆ. ಅಸ್ಟ್ರಾಜನಿಕ್, ಫೈಜರ್ ಲಸಿಕೆಯ ಒಂದೇ ಡೋಸ್ ಲಸಿಕೆಯನ್ನು ಜನರಿಗೆ ನೀಡುತ್ತಿದೆ. ಇದು ತಪ್ಪು ಕಾರ್ಯತಂತ್ರ ಅಲ್ಲ ಎಂದು ರಣದೀಪ್ ಗುಲೇರಿಯಾ ಹೇಳಿದ್ದಾರೆ. ಇದರಿಂದಾಗಿ ಹೆಚ್ಚಿನ ಜನರಿಗೆ ಕೊರೊನಾದಿಂದ ರಕ್ಷಣೆ ಸಿಗುತ್ತೆ ಎಂದು ಗುಲೇರಿಯಾ ಹೇಳಿದ್ದಾರೆ.

ಇನ್ನೂ ಡೆಲ್ಟಾ ಪ್ಲಸ್ ಪ್ರಭೇದದ ಬಗ್ಗೆ ಪ್ರತಿಕ್ರಿಯಿಸಿದ ರಣದೀಪ್ ಗುಲೇರಿಯಾ, ನಾವು ತೀವ್ರವಾಗಿ ಜೆನೋಮ್ ಸಿಕ್ವೇನ್ಸಿಂಗ್ ಮಾಡುವ ಮೂಲಕ ವೈರಸ್ ಹೇಗೆ ವರ್ತಿಸುತ್ತೆ ಎಂದು ಅರ್ಥ ಮಾಡಿಕೊಳ್ಳಬೇಕು. ಲಸಿಕೆಯ ಪರಿಣಾಮಕಾರಿತನ ಕಡಿಮೆಯಾಗುತ್ತಾ, ಮಾನೋಕ್ಲೋನಲ್ ಆ್ಯಂಟಿಬಾಡಿ ಕಾಕ್ ಟೈಲ್ ವೈರಸ್ ವಿರುದ್ಧ ಕೆಲಸ ಮಾಡುತ್ತಾ, ಇವೆಲ್ಲವನ್ನೂ ಅರ್ಥ ಮಾಡಿಕೊಳ್ಳಲು ಡಾಟಾ ಬಗ್ಗೆ ಅಧ್ಯಯನ ಮಾಡಲು ದೊಡ್ಡ ಮಟ್ಟದ ಲ್ಯಾಬ್ ಗಳು ಬೇಕು. ಈ ಬಗ್ಗೆ ಮುಂದಿನ ಕೆಲ ವಾರಗಳಲ್ಲಿ ನಾವು ಗಮನ ಹರಿಸಬೇಕು. ನಾವು ಕೋವಿಡ್ ವಿರುದ್ಧದ ಹೋರಾಟದಲ್ಲಿ ಯಶಸ್ವಿಯಾಗಬೇಕಾದರೇ, ಹೆಚ್ಚಿನ ಲ್ಯಾಬ್ ಗಳನ್ನು ನಾವು ನಿರ್ಮಾಣ ಮಾಡಬೇಕು ಎಂದು ರಣದೀಪ್ ಗುಲೇರಿಯಾ ಹೇಳಿದ್ದಾರೆ.

(ಲೇಖನ: ಎಸ್.​ ಚಂದ್ರಮೋಹನ್​, ಹಿರಿಯ ವರದಿಗಾರ, ಟಿವಿ9)

(Coronavirus third wave in india certain but timing in question says aiims dr randeep guleria)

ಕೊರೊನಾ ಅವಕೃಪೆ: ಲಾಕ್‌ಡೌನ್‌ನಿಂದ ಇಡೀ ದೇಶಕ್ಕೆ 5.4 ಲಕ್ಷ ಕೋಟಿ ರೂ ನಷ್ಟ, 3ನೇ ಅಲೆ ಬಂದರಂತೂ… ಇನ್ನೂ ನಷ್ಟ ನಷ್ಟ