ಕೊವಿಡ್​-19ಗೆ ರಾಜ್ಯದಲ್ಲಿಂದು ಮೂರು ಬಲಿ, 708 ಹೊಸ ಸೋಂಕಿತರು

ಗುರುವಾರಕ್ಕೆ ಹೋಲಿಸಿದರೆ, ಕರ್ನಾಟಕದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ ಸ್ವಲ್ಪ ಜಾಸ್ತಿಯಾಗಿದೆ ಮತ್ತು ಕಳೆದ 24 ಗಂಟೆಗಳಲ್ಲಿ ಮೂರು ಜನ ವ್ಯಾಧಿಗೆ ಬಲಿಯಾಗಿದ್ದಾರೆ.

  • TV9 Web Team
  • Published On - 22:41 PM, 15 Jan 2021
ಕೊವಿಡ್​-19ಗೆ ರಾಜ್ಯದಲ್ಲಿಂದು ಮೂರು ಬಲಿ, 708 ಹೊಸ ಸೋಂಕಿತರು
ಪ್ರಾತಿನಿಧಿಕ ಚಿತ್ರ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಶುಕ್ರವಾರ ಸಾಯಂಕಾಲ ಲಭ್ಯವಾಗಿರುವ ಮಾಹಿತಿ ಪ್ರಕಾರ ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಕೊರೊನಾ ಸೋಂಕಿನಿಂದ ಮೂವರು ಸಾವನ್ನಪ್ಪಿದ್ದಾರೆ ಮತ್ತು ಹೊಸದಾಗಿ 708 ಜನರಲ್ಲಿ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 12,158 ಜನ ಮರಣಿಸಿದ್ದಾರೆ ಮತ್ತು ಸೋಂಕಿತರ ಸಂಖ್ಯೆ 9,30,668ಕ್ಕೇರಿದೆ.

ಸೋಂಕಿತರ ಪೈಕಿ 9,09,701 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಮಿಕ್ಕಿದ 8,790 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ ಮತ್ತು ಹೊಸದಾಗಿ 399 ಜನರಿಗೆ ಸೋಂಕು ತಗುಲಿದೆ. ನಗರದರಲ್ಲಿ ಕೊರೊನಾದಿಂದ ಈವರೆಗೆ 4,357 ಜನ ಸತ್ತಿದ್ದಾರೆ ಮತ್ತು ಒಟ್ಟು ಕೊರೊನಾ ಪೀಡಿತರ ಸಂಖ್ಯೆ 3,94,213 ತಲುಪಿದೆ.

ಸೋಂಕಿತರ ಪೈಕಿ 3,84,145 ಜನರು ಗುಣಮುಖರಾಗಿದ್ದಾರೆ, ಉಳಿದ 5,710 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಲಭ್ಯವಾಗಿರುವ ಮಾಹಿತಿ ತಿಳಿಸುತ್ತದೆ.