ಕೊವಿಡ್-19: ರಾಜ್ಯದಲ್ಲಿಂದು 7 ಸಾವು ಮತ್ತು 772 ಹೊಸ ಪ್ರಕರಣಗಳು

ರಾಜ್ಯದಲ್ಲಿ ಕೊರೊನಾ ಸಂಬಂಧಿತ ಸಾವುಗಳ ಸಂಖ್ಯೆ ಮತ್ತೊಮ್ಮೆ ಒಂದಂಕಿಗೆ ಇಳಿದಿದೆ. ಇಂದು ರಾಜ್ಯದಲ್ಲಿ 7 ಸಾವಿನ ಪ್ರಕರಣಗಳು ವರದಿಯಾಗಿವೆ.

ಕೊವಿಡ್-19: ರಾಜ್ಯದಲ್ಲಿಂದು 7 ಸಾವು ಮತ್ತು 772 ಹೊಸ ಪ್ರಕರಣಗಳು
ಪ್ರಾತಿನಿಧಿಕ ಚಿತ್ರ
Arun Belly

|

Dec 21, 2020 | 10:52 PM

ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಿಂದ ಸೋಮವಾರ ಸಾಯಂಕಾಲ ಲಭ್ಯವಾಗಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 7 ಜನ ಸಾವನ್ನಪ್ಪಿದ್ದಾರೆ ಮತ್ತು ಹೊಸದಾಗಿ 772 ಜನರಲ್ಲಿ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 12,016 ಜನ ಮರಣಿಸಿದ್ದಾರೆ ಮತ್ತು ಸೋಂಕಿತರ ಸಂಖ್ಯೆ 9,10,241 ಕ್ಕೇರಿದೆ.

ಸೋಂಕಿತರ ಪೈಕಿ 8,84,205 ಜನ ಗುಣಮುಖರಾಗಿದ್ದಾರೆ, ಮಿಕ್ಕಿದ 14,001 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ ಐವರು ಬಲಿಯಾಗಿದ್ದಾರೆ ಮತ್ತು 363 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ನಗರದಲ್ಲಿ ಕೊರೊನಾದಿಂದ ಈವರೆಗೆ 4,273 ಜನ ಸಾವನ್ನಪ್ಪಿದ್ದಾ ರೆ ಮತ್ತು ಸೋಂಕು ಪೀಡಿತರ ಸಂಖ್ಯೆ 3,83,231 ತಲುಪಿದೆ.

ಸೋಂಕಿತರ ಪೈಕಿ 3,69,701 ಜನರು ಗುಣಮುಖರಾಗಿದ್ದಾರೆ, ಉಳಿದ 9,256 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಯೆಂದು ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಿಂದ ಸಿಕ್ಕಿರುವ ಮಾಹಿತಿ ತಿಳಿಸುತ್ತದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada