ಕೊವಿಡ್-19: ರಾಜ್ಯದಲ್ಲಿ ಮತ್ತೆ ಒಂದಂಕಿಗಿಳಿದ ಸಾವುಗಳ ಸಂಖ್ಯೆ

ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಸತ್ತವರ ಸಂಖ್ಯೆ ಮತ್ತೆ ಒಂದಂಕಿಗೆ ಇಳಿದಿದ್ದು ಕಳೆದ 24 ಗಂಟೆಗಳಲ್ಲಿ 8 ಸಾವುಗಳು ದಾಖಲಾಗಿವೆ.

ಕೊವಿಡ್-19: ರಾಜ್ಯದಲ್ಲಿ ಮತ್ತೆ ಒಂದಂಕಿಗಿಳಿದ ಸಾವುಗಳ ಸಂಖ್ಯೆ
ಸಾಂದರ್ಭಿಕ ಚಿತ್ರ
Arun Belly

|

Dec 18, 2020 | 10:45 PM

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಶುಕ್ರವಾರ ಲಭ್ಯವಾಗಿರುವ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 8 ಜನರು ಸತ್ತಿದ್ದಾರೆ ಮತ್ತು ಹೊಸದಾಗಿ 1,222 ಜನರಲ್ಲಿ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಕೊವಿಡ್-19 ವ್ಯಾಧಿಯಿಂದ 11,989 ಜನರು ಮರಣಿಸಿದ್ದಾರೆ, ಸೋಂಕಿತರ ಸಂಖ್ಯೆ 9,07,123ಕ್ಕೇರಿದೆ.

ಸೋಂಕಿತರ ಪೈಕಿ 8,79,735 ಜನ ಗುಣಮುಖರಾಗಿದ್ದಾರೆ ಮಿಕ್ಕಿದ 15,380 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹಾಗೆಯೇ, ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 4 ಜನರು ಬಲಿಯಾಗಿದ್ದಾರೆ ಮತ್ತು 687 ಜನರಿಗೆ ಸೋಂಕು ತಗುಲಿದೆ. ನಗರದಲ್ಲಿ ಕೊರೊನಾದಿಂದ ಈವರೆಗೆ 4256 ಜನ ಮರಣಿಸಿದ್ದಾರೆ ಸೋಂಕು ಪೀಡಿತರ ಸಂಖ್ಯೆ 3,81,623 ತಲುಪಿದೆ.

ಸೋಂಕಿತರ ಪೈಕಿ 3,66,888 ಜನರು ಗುಣಮುಖರಾಗಿದ್ದಾರೆ, ಉಳಿದ 10,478 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಯೆಂದು ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಿಂದ ಲಭ್ಯವಾಗಿರುವ ಮಾಹಿತಿ ತಿಳಿಸುತ್ತದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada