Explainer: 18ರಿಂದ 45 ವಯೋಮಾನದವರಿಗೆ ಕೋವಿಡ್ ಲಸಿಕೆ; ನೋಂದಣಿ ಹೇಗೆ? ಪಡೆದುಕೊಳ್ಳುವುದು ಎಲ್ಲಿ? ಡೇಟ್ ಮಿಸ್ ಆದ್ರೆ ಏನು ಮಾಡಬೇಕು?

Covid-19 Vaccine: 18ರಿಂದ 45 ವಯೋಮಾನದವರು ಕೋವಿಡ್-19 ಲಸಿಕೆ ಪಡೆಯಲು CoWin ನೋಂದಣಿ ಕಡ್ಡಾಯಗೊಳಿಸಲಾಗಿದೆ. ಲಸಿಕೆ ಪಡೆಯುವ ಬಗ್ಗೆ ನೀವು ತಿಳಿಯಲು ಬಯಸುವ ಸಂಪೂರ್ಣ ಮಾಹಿತಿ ಇಲ್ಲಿದೆ.

Explainer: 18ರಿಂದ 45 ವಯೋಮಾನದವರಿಗೆ ಕೋವಿಡ್ ಲಸಿಕೆ; ನೋಂದಣಿ ಹೇಗೆ? ಪಡೆದುಕೊಳ್ಳುವುದು ಎಲ್ಲಿ? ಡೇಟ್ ಮಿಸ್ ಆದ್ರೆ ಏನು ಮಾಡಬೇಕು?
ಕೊರೊನಾ ಲಸಿಕೆ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Apr 25, 2021 | 7:12 PM

ಬೆಂಗಳೂರು: ಭಾರತದಲ್ಲಿ ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ವೈರಸ್​ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿದೆ. ಆರಂಭದ ದಿನಗಳಲ್ಲಿ ನೂಕುನುಗ್ಗಲು ಹೆಚ್ಚಾಗಬಹುದು ಎಂದು ನಿರೀಕ್ಷಿಸಿರುವ ಸರ್ಕಾರವು 18ರಿಂದ 45 ವಯೋಮಾನದವರು CoWin ಪೋರ್ಟಲ್ ಅಥವಾ ಆ್ಯಪ್​ನಲ್ಲಿ ನೋಂದಣಿ ಮಾಡಿಕೊಂಡು, ನಿಗದಿತ ಸಮಯದಲ್ಲಿ ಮಾತ್ರವೇ ಲಸಿಕೆ ಪಡೆಯಲು ಬರಬೇಕು ಎಂದು ಸೂಚಿಸಿದೆ. ನೋಂದಣಿ ಮಾಡಿಕೊಳ್ಳದೇ ಲಸಿಕೆ ಕೇಂದ್ರಗಳಿಗೆ ಬಂದವರನ್ನು ವಾಪಸ್ ಕಳಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

CoWin ವೇದಿಕೆಗಳು ಮತ್ತು ಆರೋಗ್ಯ ಸೇತು ಆ್ಯಪ್​ನಲ್ಲಿ ಏಪ್ರಿಲ್ 28ರ ನಂತರ ಕೊರೊನಾ ವೈರಸ್​ ನಿರೋಧಕ ಲಸಿಕೆ ವಿತರಣೆಗೆ 18 ವರ್ಷ ದಾಟಿದವರು ನೋಂದಣಿ ಮಾಡಿಕೊಳ್ಳಲು ಅವಕಾಶ ಸಿಗಲಿದೆ. 45 ವರ್ಷ ದಾಟಿದವರಿಗೂ ಹಿಂದಿನಂತೆ CoWin ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಒಂದು ವೇಳೆ ನೋಂದಣಿ ಮಾಡಿಕೊಳ್ಳದೇ ಲಸಿಕೆ ಕೇಂದ್ರಕ್ಕೆ ಹೋದರೂ ಅಂಥವರಿಗೆ ಲಸಿಕೆ ನೀಡಲಾಗುವುದು. ಆದರೆ 18ರಿಂದ 45ರ ವಯೋಮಾನವರಿಗೆ ಮಾತ್ರ ನೋಂದಣಿ ಕಡ್ಡಾಯವಾಗಿದೆ.

18 ವರ್ಷ ದಾಟಿದ ಎಲ್ಲರಿಗೂ ಲಸಿಕೆ ಪಡೆಯಲು ಮುಕ್ತ ಅವಕಾಶ ನೀಡಿದ ನಂತರ ಸಹಜವಾಗಿಯೇ ಲಸಿಕಾ ಕೇಂದ್ರಗಳಲ್ಲಿ ಜನದಟ್ಟಣೆ ಹೆಚ್ಚಾಗಬಹುದು ಎಂದು ಸರ್ಕಾರ ನಿರೀಕ್ಷಿಸಿದೆ. ಜನಸಂದಣಿಗೆ ಕಡಿವಾಣ ಹಾಕಲೆಂದೇ CoWin ಪೋರ್ಟಲ್​ನಲ್ಲಿ ನೋಂದಣಿ ಮಾಡಿಕೊಂಡು, ಸಮಯ ನಿಗದಿಪಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ವಯೋಮಾನದವರು ನೇರವಾಗಿ ಲಸಿಕಾ ಕೇಂದ್ರಗಳಿಗೆ ಬಂದರೆ ಲಸಿಕೆ ನೀಡಲಾಗುವುದಿಲ್ಲ ಎಂದು ಸರ್ಕಾರಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಲಸಿಕೆ ಪಡೆಯುವ ಮುನ್ನ ಈ ಅಂಶಗಳನ್ನು ಗಮನಿಸಿ.. 1) CoWin ಪೋರ್ಟಲ್​ನಲ್ಲಿ ಲಸಿಕೆಗೆ ಏಪ್ರಿಲ್ 28ರಿಂದ ನೋಂದಣಿ ಆರಂಭವಾಗಲಿದೆ 2) ಮೇ 1ರ ನಂತರ ಲಸಿಕೆ ನೀಡಲಾಗುವುದು 3) ಕೇವಲ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಮಾತ್ರ ಲಸಿಕೆ ನೀಡಲಾಗುವುದು 4) ಮುಂಚಿತವಾಗಿ ನಿಮ್ಮ ಸಮಯವನ್ನು CoWin ಪೋರ್ಟಲ್ ಮೂಲಕ ನಿಗದಿಪಡಿಸಿಕೊಳ್ಳಬೇಕು 5) ನೇರವಾಗಿ ಲಸಿಕಾ ಕೇಂದ್ರಕ್ಕೆ ಹೋದರೆ ಲಸಿಕೆ ನೀಡುವುದಿಲ್ಲ

ನೋಂದಣಿ ಹೇಗೆ? 1) cowin.gov.in ಪೋರ್ಟಲ್​ಗೆ ಭೇಟಿ ನೀಡಿ. 2) ನಿಮ್ಮ ಮೊಬೈಲ್ ನಂಬರ್, ಆಧಾರ್ ನಂಬರ್​ ಕೊಟ್ಟು ಒಟಿಪಿಗಾಗಿ ಕಾಯಿರಿ. 3) ಒಟಿಪಿ ನೀಡಿದ ನಂತರ ನಿಮ್ಮ ಹೆಸರು, ಜನ್ಮ ದಿನಾಂಕ ಇತ್ಯಾದಿ ವಿವರಗಳನ್ನು ತುಂಬಬೇಕು. ಈ ಹಂತದಲ್ಲಿ ಯಾವುದೇ ತಪ್ಪುಗಳು ಆಗದಂತೆ ಎಚ್ಚರಿಕೆ ವಹಿಸಿ. 4) ಸರ್ಕಾರದ ಮಾನ್ಯತೆಯಿರುವ ಯಾವುದಾದರೂ ಒಂದು ಫೋಟೊ ಗುರುತಿನ ಚೀಟಿಯನ್ನು ಅಪ್​ಲೋಡ್ ಮಾಡಬೇಕಾಗುತ್ತೆ. ಆಧಾರ್, ಪ್ಯಾನ್ ಕಾರ್ಡ್​, ವೋಟರ್ ಐಡಿ ಸೇರಿದಂತೆ ಹಲವು ದಾಖಲೆಗಳನ್ನು ಬಳಸಬಹುದು. 5) ಲಸಿಕಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಿ. ಸದ್ಯ ಸರ್ಕಾರ ತೆಗೆದುಕೊಂಡಿರುವ ತೀರ್ಮಾನದ ಪ್ರಕಾರ 18-45 ವಯೋಮಾನದವರಿಗೆ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಮಾತ್ರ ಲಸಿಕೆ ನೀಡಲಾಗುತ್ತಿದೆ. 6) ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿಕೊಳ್ಳಿ. ಒಂದು ವೇಳೆ ನೀವು ಇಷ್ಟಪಟ್ಟ ಸಮಯ, ವೇಳೆ ಸಿಗದಿದ್ದರೆ ಮುಂದಿನ ದಿನಾಂಕಗಳನ್ನು ಪರಿಶೀಲಿಸಿ. 7) ಸಮಯ ನಿಗದಿಯಾದ ದಾಖಲೆ ಜನರೇಟ್​ ಆಗುತ್ತದೆ. ಇದರ ಜೊತೆಗೆ ಒಂದು ಫೋಟೊ ಐಡಿ ಕಾರ್ಡ್ ತೆಗೆದುಕೊಂಡು ನಿಗದಿತ ದಿನ, ಸಮಯಕ್ಕೆ ​ಲಸಿಕಾ ಕೇಂದ್ರಕ್ಕೆ ಹೋಗಿ.

ನಿಮ್ಮ ಮನದಲ್ಲಿ ಮೂಡಬಹುದಾದ ಕೆಲ ಸಾಮಾನ್ಯ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..

1) ನಿಗದಿಯಾದ ಸಮಯವನ್ನು ಬದಲಿಸಲು ಸಾಧ್ಯವೇ? ಸಮಯವನ್ನು ಬದಲಿಸಲು ಪೋರ್ಟಲ್​ನಲ್ಲಿ ಅವಕಾಶವಿಲ್ಲ. ಒಂದು ವೇಳೆ ನಿಮಗೆ ನಿಗದಿತ ದಿನಾಂಕ, ಸಮಯದಲ್ಲಿ ಲಸಿಕೆ ತೆಗೆದುಕೊಳ್ಳಲು ಆಗದಿದ್ದರೆ ಮತ್ತೊಮ್ಮೆ (ನಂತರದ ದಿನ) ರಿಶೆಡ್ಯೂಲ್​ ಟ್ಯಾಬ್ ಮೂಲಕ ಹೊಸದಾಗಿ ಸಮಯ ನಿಗದಿಪಡಿಸಿಕೊಳ್ಳಬಹುದು.

2) ಲಸಿಕೆಯ 2ನೇ ಡೋಸ್​ಗೆ ಸಮಯ ನಿಗದಿಪಡಿಸಿಕೊಳ್ಳುವುದು ಹೇಗೆ? ಮೊದಲ ಡೋಸ್ ಪಡೆದುಕೊಂಡ ನಂತರ 2ನೇ ಡೋಸ್​ಗೆ ನೀವು ಸಮಯ ನಿಗದಿಪಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಮೊದಲ ಡೋಸ್ ತೆಗೆದುಕೊಂಡ 29ನೇ ದಿನಕ್ಕೆ ತನ್ನಿಂತಾನೆ ಅದೇ ಲಸಿಕಾ ಕೇಂದ್ರದಲ್ಲಿ ಸಮಯ ನಿಗದಿಯಾಗುತ್ತದೆ.

3) ಒಂದೇ ಲಾಗಿನ್ ಐಡಿ ಬಳಸಿ ಎಷ್ಟು ಜನರು ನೋಂದಣಿ ಮಾಡಿಕೊಳ್ಳಬಹುದು? ಒಂದು ಲಾಗಿನ್ ಐಡಿಯಿಂದ ಗರಿಷ್ಠ ನಾಲ್ವರು ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಬಹುದು. ಫೋನ್ ನಂಬರ್ ಒಂದೇ ಕೊಟ್ಟರೂ ಪ್ರತ್ಯೇಕ ಫೋಟೊ ಐಡಿ ಅಪ್​ಲೋಡ್ ಮಾಡಬೇಕಾಗುತ್ತದೆ.

4) ನೋಂದಣಿಗೆ ಇರುವ ಇತರ ಅವಕಾಶಗಳು ಏನು? ಸ್ವಯಂ ನೋಂದಣಿ ಮಾಡಿಕೊಳ್ಳಲು ತಿಳಿಯುವುದಿಲ್ಲ ಎನ್ನುವವರಿಗಾಗಿ ಸರ್ಕಾರವು ನೋಂದಣಿ ಮಾಡಿಕೊಡಲು ವ್ಯವಸ್ಥೆ ಮಾಡಿದೆ. ಇಂಥ ವ್ಯವಸ್ಥೆ ಎಲ್ಲಿದೆ ಎಂಬ ಬಗ್ಗೆ ವೆಬ್​ಸೈಟ್​ಗಳಲ್ಲಿ ಮಾಹಿತಿಯಿಲ್ಲ. ಸ್ಥಳೀಯ ಆಸ್ಪತ್ರೆಗಳಲ್ಲಿ, ಲಸಿಕಾ ಕೇಂದ್ರಗಳಲ್ಲಿ ವಿಚಾರಿಸಿಕೊಳ್ಳಬೇಕಾಗುತ್ತದೆ.

5) ನಾವು ತಿಳಿದಿರಬೇಕಾದ ಇತರ ಅಂಶಗಳೇನಾದರೂ ಇದೆಯೇ? ಲಸಿಕೆ ತೆಗೆದುಕೊಂಡ ಒಂದು ತಿಂಗಳ ಅವಧಿಯಲ್ಲಿ ರಕ್ತದಾನ ಮಾಡಬಾರದು. ಲಸಿಕೆ ಪಡೆದುಕೊಂಡ ನಂತರವೂ ಕೈತೊಳೆಯುವ, ಅಂತರ ಪಾಲಿಸುವ ಮತ್ತು ಮಾಸ್ಕ್ ಧರಿಸುವ ನಿಯಮಗಳನ್ನು ಪಾಲಿಸಬೇಕು. ಹೆಚ್ಚಿನ ಮಾಹಿತಿಗೆ http://mohfw.gov.in/ ವೆಬ್​ಸೈಟ್​ ಗಮನಿಸಿ.

(Covid Vaccine Things you need to know about corona vaccine for all aged 18 registering in cowin portal how to get appointment)

ಇದನ್ನೂ ಓದಿ: ವೈರಸ್ ಅಧ್ಯಯನ ಕೇಂದ್ರ, ಲಸಿಕೆ ಉತ್ಪಾದನಾ ಸಂಸ್ಥೆಯಿರುವ ಪುಣೆಯಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚುತ್ತಿರುವುದೇಕೆ?

ಇದನ್ನೂ ಓದಿ: ಮೇ 1ರಿಂದ ಮೂರನೇ ಹಂತದ ಕೊವಿಡ್​ ಲಸಿಕೆ ಅಭಿಯಾನ; ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

Published On - 6:57 pm, Sun, 25 April 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ