AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dengue: ಡೆಂಗ್ಯೂ ಜ್ವರ ಬಂದಾಗ ಏನು ತಿನ್ನಬೇಕು? ಏನು ತಿನ್ನಲೇಬಾರದು?

ಕಡಿಮೆ ಪ್ಲೇಟ್‌ಲೆಟ್ ಕೌಂಟ್, ವೀಕ್​ನೆಸ್ ಮತ್ತು ನಿರ್ಜಲೀಕರಣವು ಡೆಂಗ್ಯೂ ಜ್ವರದ ಲಕ್ಷಣಗಳಲ್ಲಿ ಮುಖ್ಯವಾದುದು. ಈ ಸಂದರ್ಭದಲ್ಲಿ ನಿರ್ಜಲೀಕರಣವನ್ನು ತಡೆಗಟ್ಟಲು ದೇಹಕ್ಕೆ ಹೆಚ್ಚು ನೀರಿನ ಅಂಶ ನೀಡುವ ಹಣ್ಣುಗಳನ್ನು ಸೇವಿಸಿ, ಕುದಿಸಿ ಆರಿಸಿದ ನೀರು ಕುಡಿಯಿರಿ.

Dengue: ಡೆಂಗ್ಯೂ ಜ್ವರ ಬಂದಾಗ ಏನು ತಿನ್ನಬೇಕು? ಏನು ತಿನ್ನಲೇಬಾರದು?
ಹಣ್ಣುImage Credit source: iStock
ಸುಷ್ಮಾ ಚಕ್ರೆ
|

Updated on: Sep 19, 2023 | 6:52 PM

Share

ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಜ್ವರದ ಪ್ರಕರಣಗಳು ಹೆಚ್ಚಾಗುತ್ತಿವೆ. ಈಡಿಪಸ್ ಎಂಬ ಸೋಂಕಿತ ಸೊಳ್ಳೆಗಳಿಂದ ಹರಡುವ ಈ ರೋಗ ಬಂದಾಗ ಔಷಧಿ, ಮಾತ್ರೆಗಳನ್ನು ತೆಗೆದುಕೊಳ್ಳುವುದು ಮಾತ್ರವಲ್ಲದೆ ನಮ್ಮ ಆಹಾರದಲ್ಲೂ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಡೆಂಗ್ಯೂ ಜ್ವರ ಕಾಣಿಸಿಕೊಂಡಾಗ ನಮ್ಮ ಪ್ಲೇಟ್ಲೆಟ್ ಮಟ್ಟ ಕಡಿಮೆಯಾಗುತ್ತದೆ. ಈ ವೈರಸ್ ರಕ್ತನಾಳಗಳಿಗೆ ಹಾನಿಯನ್ನು ಉಂಟುಮಾಡುತ್ತದೆ. ಡೆಂಗ್ಯೂ ಜ್ವರದಲ್ಲಿ ಹಲವಾರು ವಿಧಗಳಿವೆ. ತಕ್ಷಣವೇ ಚಿಕಿತ್ಸೆ ನೀಡದಿದ್ದರೆ, ಅದು ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ.

ಡೆಂಗ್ಯೂ ವೈರಸ್ ವಿರುದ್ಧ ಹೋರಾಡಲು ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಅತ್ಯಗತ್ಯ. ಈ ವೈರಲ್ ಜ್ವರಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲದಿದ್ದರೂ ಆರೋಗ್ಯಕರ, ಸಮತೋಲಿತ, ಪೋಷಕಾಂಶಭರಿತವಾದ ಆಹಾರ ಸೇವಿಸಿದರೆ ಈ ರೋಗದಿಂದ ಕೊಂಚ ಮಟ್ಟಿಗೆ ಆರಾಮ ಪಡೆಯಬಹುದು.

ಕಡಿಮೆ ಪ್ಲೇಟ್‌ಲೆಟ್ ಕೌಂಟ್, ವೀಕ್​ನೆಸ್ ಮತ್ತು ನಿರ್ಜಲೀಕರಣವು ಡೆಂಗ್ಯೂ ಜ್ವರದ ಲಕ್ಷಣಗಳಲ್ಲಿ ಮುಖ್ಯವಾದುದು. ಈ ಸಂದರ್ಭದಲ್ಲಿ ನಿರ್ಜಲೀಕರಣವನ್ನು ತಡೆಗಟ್ಟಲು ದೇಹಕ್ಕೆ ಹೆಚ್ಚು ನೀರಿನ ಅಂಶ ನೀಡುವ ಹಣ್ಣುಗಳನ್ನು ಸೇವಿಸಿ, ಕುದಿಸಿ ಆರಿಸಿದ ನೀರು ಕುಡಿಯಿರಿ. ನೀರು, ಸೂಪ್, ಎಳನೀರು ಮತ್ತು ಎಲೆಕ್ಟ್ರೋಲೈಟ್ ಪಾನೀಯಗಳನ್ನು ಸೇವಿಸಿ. ಆದಷ್ಟೂ ಸಕ್ಕರೆ ಇರುವ, ಪ್ರಿಸರ್ವೇಟಿವ್ ಹಾಕಿರುವ ಜ್ಯೂಸ್​ಗಳನ್ನು ಸೇವಿಸಬೇಡಿ.

ಇದನ್ನೂ ಓದಿ: ಮೀನು ಪ್ರಿಯರೇ….ಮೀನು ಸೇವಿಸುವ ಮುನ್ನ ಈ ಮಾರಕ ಕಾಯಿಲೆಯ ಬಗ್ಗೆ ತಿಳಿದುಕೊಳ್ಳಿ

ಡೆಂಗ್ಯೂ ಬಂದಾಗ ದೊಡ್ಡ ಪ್ರಮಾಣದ ಊಟಕ್ಕಿಂತ ಹೆಚ್ಚಾಗಿ ಸಣ್ಣ ಪ್ರಮಾಣದ ಆಹಾರವನ್ನು ಸೇವಿಸುವುದು ಉತ್ತಮ. ಜಠರಗರುಳಿನ ವ್ಯವಸ್ಥೆಗೆ ಹೆಚ್ಚಿನ ಒತ್ತಡವನ್ನು ನೀಡದೆಯೇ ನಿಮ್ಮ ದೇಹವು ಸರಿಯಾದ ಪ್ರಮಾಣದ ಪೋಷಕಾಂಶಗಳು ಸಿಗಬೇಕೆಂದರೆ ಗಂಜಿ, ಹಣ್ಣುಗಳನ್ನು ಹೆಚ್ಚು ಸೇವಿಸಿ. ಇವು ಜೀರ್ಣವಾಗಲು ಸುಲಭವಾಗುತ್ತದೆ.

ಜೀವಸತ್ವಗಳು ಮತ್ತು ಖನಿಜಗಳು ಹೇರಳವಾಗಿರುವ ಆಹಾರಗಳನ್ನು ಆಹಾರಕ್ರಮಕ್ಕೆ ಸೇರಿಸುವ ಮೂಲಕ ನೀವು ಪ್ರತಿರಕ್ಷಣಾ ವ್ಯವಸ್ಥೆಯನ್ನು ಪ್ರಚೋದಿಸಬಹುದು. ಹಣ್ಣುಗಳು, ತರಕಾರಿಗಳು, ದ್ವಿದಳ ಧಾನ್ಯಗಳನ್ನು ಹೆಚ್ಚು ಬಳಸಿ. ಅಧಿಕ ಕೊಬ್ಬು ಮತ್ತು ನಾರಿನಂಶವಿರುವ ಆಹಾರಗಳನ್ನು ಕಡಿಮೆ ಮಾಡಿ. ಕೊಬ್ಬು ಅಥವಾ ಫೈಬರ್ ಹೊಂದಿರುವ ಆಹಾರಗಳಿಂದ ದೂರವಿರುವುದು ಸೂಕ್ತವಾಗಿದೆ. ಈ ಆಹಾರಗಳು ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು ಮತ್ತು ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡಬಹುದು.

ಡೆಂಗ್ಯೂ ಬಂದಾಗ ವಿಟಮಿನ್ ಸಿ ಇರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಿ. ಕಿತ್ತಳೆ, ನಿಂಬೆ, ಪಪ್ಪಾಯಿ, ಪೇರಲೆ, ಹಸಿರು ಎಲೆಗಳ ತರಕಾರಿಗಳು, ಕ್ಯಾಪ್ಸಿಕಂ, ಹೂಕೋಸು, ಕೋಸುಗಡ್ಡೆ ಮುಂತಾದ ತರಕಾರಿಗಳನ್ನು ಹೆಚ್ಚು ಸೇವಿಸಿ.

ಡೆಂಗ್ಯೂ ಜ್ವರದ ಸಮಯದಲ್ಲಿ ಪ್ಲೇಟ್ಲೆಟ್ ಎಣಿಕೆ ಕಡಿಮೆಯಾಗುತ್ತದೆ. ನಿಮ್ಮ ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಪ್ಲೇಟ್‌ಲೆಟ್‌ಗಳನ್ನು ಉತ್ಪಾದಿಸಲು ಬೀನ್ಸ್ ಮತ್ತು ದ್ವಿದಳ ಧಾನ್ಯಗಳು, ಹಸಿರು ಎಲೆಗಳ ತರಕಾರಿಗಳು ಮತ್ತು ಖರ್ಜೂರದಂತಹ ಐರನ್ ಭರಿತ ಆಹಾರಗಳು ಕಬ್ಬಿಣಾಂಶವನ್ನು ಒದಗಿಸುತ್ತದೆ.

ಇದನ್ನೂ ಓದಿ: ಕೆಂಪು ಸೇಬು ಹಣ್ಣಿಗಿಂತಲೂ ಹಸಿರು ಸೇಬು ಒಳ್ಳೆಯದಾ? ಡೆಂಗ್ಯೂ ವೈರಸ್ ಸೋಂಕಿಗೆ ಒಳಗಾದಾಗ ನಿಮ್ಮ ದೇಹವು ದುರ್ಬಲಗೊಳ್ಳುತ್ತದೆ ಮತ್ತು ದಣಿದಿರುತ್ತದೆ. ಹೀಗಾಗಿ, ಕ್ಯಾಲೋರಿ ಜಾಸ್ತಿ ಇರುವ ಅಕ್ಕಿ, ಹಾಲು ಮತ್ತು ಆಲೂಗಡ್ಡೆಗಳನ್ನು ಸೇವಿಸಿ. ಅದು ನಿಮಗೆ ಕಳೆದುಹೋದ ಶಕ್ತಿಯನ್ನು ಮರಳಿ ಪಡೆಯಲು ಮತ್ತು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.

ಡೆಂಗ್ಯೂ ಬಂದಾಗ ಯಾವ ಆಹಾರ ಸೇವಿಸಬಾರದು?: ಕೆಫೀನ್ ಮೂತ್ರವರ್ಧಕವಾಗಿದ್ದು ಅದು ಮೂತ್ರದ ಮೂಲಕ ನೀರನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಹೀಗಾಗಿ, ಡೆಂಗ್ಯೂ ಜ್ವರದಿಂದ ಬಳಲುತ್ತಿರುವಾಗ ಕೆಫೀನ್ ಹೊಂದಿರುವ ಪಾನೀಯಗಳನ್ನು ಸೇವಿಸದಿರುವುದು ಅತ್ಯಗತ್ಯ.

ಮಸಾಲೆಯುಕ್ತ ಆಹಾರಗಳು ಹೊಟ್ಟೆಯನ್ನು ಕೆರಳಿಸಬಹುದು ಮತ್ತು ಹೆಚ್ಚಿನ ಆಮ್ಲ ಸ್ರವಿಸುವಿಕೆಯಿಂದ ಕರುಳನ್ನು ಹಾನಿಗೊಳಿಸಬಹುದು. ಡೆಂಗ್ಯೂ ಜ್ವರದಿಂದ ಆಹಾರದ ಜೀರ್ಣಕ್ರಿಯೆಯು ಸಾಮಾನ್ಯವಾಗಿ ನಿಧಾನವಾಗಿರುತ್ತದೆ, ಕೊಬ್ಬಿನ ಆಹಾರವನ್ನು ಜೀರ್ಣಿಸಿಕೊಳ್ಳಲು ಹೊಟ್ಟೆಗೆ ಕಷ್ಟವಾಗುತ್ತದೆ. ಆದ್ದರಿಂದ, ಕೊಬ್ಬಿನ ಮಾಂಸ, ಬೆಣ್ಣೆ ಮತ್ತು ಕರಿದ ಆಹಾರಗಳಂತಹ ಆಹಾರವನ್ನು ನಿರ್ಬಂಧಿಸುವುದು ಅತ್ಯಗತ್ಯ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ವ್ಯಕ್ತಿಯಿಂದ ಏಕಾಏಕಿ ಹಲ್ಲೆ
ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ವ್ಯಕ್ತಿಯಿಂದ ಏಕಾಏಕಿ ಹಲ್ಲೆ
Daily Devotional: ಶ್ರೀ ಸೂಕ್ತದ ಮಹತ್ವ ಹಾಗೂ ಯಾವಾಗ ಪಠಿಸಬೇಕು ತಿಳಿಯಿರಿ
Daily Devotional: ಶ್ರೀ ಸೂಕ್ತದ ಮಹತ್ವ ಹಾಗೂ ಯಾವಾಗ ಪಠಿಸಬೇಕು ತಿಳಿಯಿರಿ
Daily horoscope: ಗಂಡ-ಹೆಂಡತಿಯ ನಡುವೆ ಸಣ್ಣಪುಟ್ಟ ಕಲಹಗಳಾಗುವ ಸಾಧ್ಯತೆ
Daily horoscope: ಗಂಡ-ಹೆಂಡತಿಯ ನಡುವೆ ಸಣ್ಣಪುಟ್ಟ ಕಲಹಗಳಾಗುವ ಸಾಧ್ಯತೆ
ಡಾ. ರಾಜ್​ಕುಮಾರ್ ಅಪಹರಣಕ್ಕೂ ಮುನ್ನ ಏನೆಲ್ಲ ನಡೆದಿತ್ತು? ವಿವರಿಸಿದ ಅಳಿಯ
ಡಾ. ರಾಜ್​ಕುಮಾರ್ ಅಪಹರಣಕ್ಕೂ ಮುನ್ನ ಏನೆಲ್ಲ ನಡೆದಿತ್ತು? ವಿವರಿಸಿದ ಅಳಿಯ
ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ