Papaya Leaves: ಪಪ್ಪಾಯಿ ಎಲೆಯ ರಸ ಡೆಂಗ್ಯೂಗೆ ಸೂಕ್ತ ಔಷಧಿಯೇ? ತಜ್ಞರು ಹೇಳುವುದೇನು?

ಮಳೆಗಾಲ ಪ್ರಾರಂಭವಾಗಿದ್ದು, ಭಾರತದಾದ್ಯಂತ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಪಪ್ಪಾಯಿ ಎಲೆಯ ರಸ ಡೆಂಗ್ಯೂಗೆ ಸೂಕ್ತ ಔಷಧಿಯೇ? ತಜ್ಞರು ನೀಡಿರುವ ಉತ್ತರ ಇಲ್ಲಿದೆ.

Papaya Leaves: ಪಪ್ಪಾಯಿ ಎಲೆಯ ರಸ ಡೆಂಗ್ಯೂಗೆ ಸೂಕ್ತ ಔಷಧಿಯೇ? ತಜ್ಞರು ಹೇಳುವುದೇನು?
Papaya LeavesImage Credit source: greendna.in
Follow us
ಅಕ್ಷತಾ ವರ್ಕಾಡಿ
|

Updated on: Jul 21, 2023 | 3:28 PM

ಸಾಮಾನ್ಯವಾಗಿ ಪಪ್ಪಾಯಿ ಹಣ್ಣು ಮಾತ್ರವಲ್ಲ, ಅದರ ಎಲೆಯಲ್ಲಿಯೂ ಔಷಧೀಯ ಗುಣಗಳನ್ನು ಹೇರಳವಾಗಿರುವುದರಿಂದ ಇದರ ಎಲೆಯನ್ನು ಜ್ಯೂಸ್​​ ಮಾಡಿ ಕುಡಿವವರೂ ಇದ್ದಾರೆ. ಆದರೆ ನಿಮ್ಮಲ್ಲಿ ಡೆಂಗ್ಯೂ ಜ್ವರದ ಲಕ್ಷಣಗಳು ಕಂಡುಬಂದರೆ ಎಂದಿಗೂ ಪಪ್ಪಾಯಿ ಎಲೆಗಳನ್ನು ಸೇವಿಸಬೇಡಿ. ಇದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಬಹುದು ಎಂದು ಡಾ ರಾಕೇಶ್ ಕುಮಾರ್ ಎಚ್ಚರಿಸುತ್ತಾರೆ. ಮಳೆಗಾಲ ಪ್ರಾರಂಭವಾಗಿದ್ದು, ಭಾರತದಾದ್ಯಂತ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (MCD) ಹಂಚಿಕೊಂಡ ಅಂಕಿಅಂಶಗಳ ಪ್ರಕಾರ, ಈ ವರ್ಷ ಜುಲೈ 15 ರವರೆಗೆ ಒಟ್ಟು 163 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ, 2022 ಮತ್ತು 2021 ರಲ್ಲಿ ಇದೇ ಅವಧಿಯಲ್ಲಿ ಕ್ರಮವಾಗಿ 158 ಮತ್ತು 40 ಪ್ರಕರಣಗಳು ಕಂಡುಬಂದಿವೆ. ಕಳೆದ ವಾರವೊಂದರಲ್ಲೇ 39 ಪ್ರಕರಣಗಳು ವರದಿಯಾಗಿವೆ ಎಂದು ಅಂಕಿಅಂಶಗಳು ಬಹಿರಂಗಪಡಿಸಿವೆ. ವರದಿಗಳ ಪ್ರಕಾರ, ಇದುವರೆಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಡೆಂಗ್ಯೂ ಒಂದು ವೈರಲ್ ಸೋಂಕು, ಇದು ಸೊಳ್ಳೆಗಳಿಂದ ಜನರಿಗೆ ಹರಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಉಷ್ಣವಲಯದ ಮತ್ತು ಉಪೋಷ್ಣವಲಯದ ಹವಾಮಾನದಲ್ಲಿ ಇದು ಹೆಚ್ಚು ಸಾಮಾನ್ಯವಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ, ಹೆಚ್ಚಿನ ಜನರು ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಜ್ವರ, ತಲೆನೋವು, ಮೈ ಕೈ ನೋವು, ವಾಕರಿಕೆ ಮತ್ತು ದದ್ದುಗಳು ಇದರ ಸಾಮಾನ್ಯ ಲಕ್ಷಣಗಳಾಗಿವೆ.

ಇದನ್ನೂ ಓದಿ: ಮೆದುಳು ತಿನ್ನುವ ಅಮೀಬಾಗೆ ಮತ್ತೊಂದು ಬಲಿ; 2 ವರ್ಷದ ಮಗು ನಿಧನ

ಡೆಂಗ್ಯೂ ಲಕ್ಷಣಗಳೇನು?

ತಜ್ಞರ ಪ್ರಕಾರ, ಡೆಂಗ್ಯೂ ಹೊಂದಿರುವ ಹೆಚ್ಚಿನ ಜನರು ಸೌಮ್ಯ ಅಥವಾ ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ ಮತ್ತು 1-2 ವಾರಗಳಲ್ಲಿ ಗುಣಮುಖರಾಗುತ್ತಾರೆ. ಕೆಲವು ಅಪರೂಪದ ಸಂದರ್ಭಗಳಲ್ಲಿ, ಡೆಂಗ್ಯೂ ತೀವ್ರವಾಗಿರುತ್ತದೆ ಮತ್ತು ಸಾವಿಗೆ ಕಾರಣವಾಗಬಹುದು. ರೋಗಲಕ್ಷಣಗಳು ಕಂಡುಬಂದರೆ, ಅವು ಸಾಮಾನ್ಯವಾಗಿ ಸೋಂಕಿನ 4-10 ದಿನಗಳ ನಂತರ ಪ್ರಾರಂಭವಾಗುತ್ತದೆ ಮತ್ತು 2-7 ದಿನಗಳವರೆಗೆ ಇರುತ್ತದೆ.

  • ವಿಪರೀತ  ಜ್ವರ
  • ತೀವ್ರ ತಲೆನೋವು
  • ಕಣ್ಣು ನೋವು
  • ಸ್ನಾಯು ಮತ್ತು ಕೀಲು ನೋವು
  • ವಾಕರಿಕೆ, ವಾಂತಿ
  • ಊದಿಕೊಂಡ ಗ್ರಂಥಿಗಳು
  • ದದ್ದು.

ಡೆಂಗ್ಯೂಗೆ ಪಪ್ಪಾಯಿ ಎಲೆ ಸಹಕಾರಿಯೇ?

ಪ್ರತಿ ವರ್ಷ, ಡೆಂಗ್ಯೂ ಪ್ರಕರಣಗಳ ಹೆಚ್ಚಳವು ಪಪ್ಪಾಯಿ ಎಲೆಗಳ ಬೇಡಿಕೆಯ ಉಲ್ಬಣಕ್ಕೆ ಕಾರಣವಾಗುತ್ತದೆ ಏಕೆಂದರೆ ಅವುಗಳು ಡೆಂಗ್ಯೂ ರೋಗಿಗಳಲ್ಲಿ ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸುತ್ತವೆ ಎಂದು ನಂಬಲಾಗಿದೆ. ಆದರೆ ಇದು ನಿಜವಾಗಿಯೂ ಕೆಲಸ ಮಾಡುತ್ತದೆಯೇ ಎಂಬುದನ್ನು ತಿಳಿದುಕೊಳ್ಳಬೇಕು.  ಹಲವು ಕಾರಣಗಳಿಂದ ಡೆಂಗ್ಯೂನಿಂದ ಬಳಲುತ್ತಿರುವಾಗ ಪಪ್ಪಾಯಿ ಎಲೆಗಳನ್ನು ಸೇವಿಸಬಾರದು. ಮೊದಲನೆಯದಾಗಿ, ಪಪ್ಪಾಯಿ ಎಲೆಗಳು ಡೆಂಗ್ಯೂ ರೋಗಿಗಳಿಗೆ ಚಿಕಿತ್ಸಕ ಪ್ರಯೋಜನಗಳನ್ನು ಹೊಂದಿವೆ ಎಂಬ ಸಮರ್ಥನೆಯನ್ನು ಬೆಂಬಲಿಸಲು ಸಾಕಷ್ಟು ವೈಜ್ಞಾನಿಕ ಪುರಾವೆಗಳಿಲ್ಲ.

ಗುರುಗ್ರಾಮ್‌ನ ಸಿಕೆ ಬಿರ್ಲಾ ಆಸ್ಪತ್ರೆಯ ಡಾ. ತುಷಾರ್ ತಯಾಲ್ ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ನೀಡಿರುವ ಸಂದರ್ಶನದಲ್ಲಿ ಪಪ್ಪಾಯಿ ಎಲೆಗಳನ್ನು ಸೇವಿಸುವುದರಿಂದ ಪ್ರತಿಕೂಲ ಪ್ರತಿಕ್ರಿಯೆಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ. ಇದಲ್ಲದೇ ಅಲರ್ಜಿಯ ಪ್ರತಿಕ್ರಿಯೆಗಳು, ಜಠರಗರುಳಿನ ಅಸ್ವಸ್ಥತೆ ಅಥವಾ ಇತರ ತೊಡಕುಗಳಿಗೆ ಕಾರಣವಾಗಬಹುದು. ಡೆಂಗ್ಯೂ ರೋಗಿಗಳಿಗೆ ಉತ್ತಮ ಫಲಿತಾಂಶವನ್ನು ಖಚಿತಪಡಿಸಿಕೊಳ್ಳಲು ವೃತ್ತಿಪರ ವೈದ್ಯಕೀಯ ಆರೈಕೆಯನ್ನು ಪಡೆಯುವುದು ಮತ್ತು ವೈದ್ಯಕೀಯ ಸಲಹೆಯನ್ನು ಅನುಸರಿಸುವುದು ಅತ್ಯಗತ್ಯ. ಪಪ್ಪಾಯಿ ಎಲೆಗಳಂತಹ ಸಾಬೀತಾಗದ ಪರಿಹಾರಗಳನ್ನು ಅವಲಂಬಿಸುವ ಬದಲು ಸೂಕ್ತವಾದ ಚಿಕಿತ್ಸೆಗಳಿಗಾಗಿ ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸುವುದು ಯಾವಾಗಲೂ ಸೂಕ್ತವಾಗಿದೆ ಎಂದು ಅವರು ಎಚ್ಚರಿಸಿದ್ದಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: