Diabetes: ರಕ್ತದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಲು ಎರಡು ಸರಳ ಮಾರ್ಗಗಳು

Health Tips: ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಜತೆಗೆ ಸುರಕ್ಷಿತ ಆರೋಗ್ಯಕ್ಕಾಗಿ ಇನ್ಸುಲಿನ್ ಅವಶ್ಯಕ. ದೇಹದಲ್ಲಿ ಇನ್ಸುಲಿನ್ ಮಟ್ಟ ಕಡಿಮೆಯಾದಾಗ ಯಾವೆಲ್ಲಾ ಸಮಸ್ಯೆ ಕಂಡು ಬರವುದು ಎಂಬುದು ಈ ಕೆಳಗಿನಂತಿದೆ.

Diabetes: ರಕ್ತದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಲು ಎರಡು ಸರಳ ಮಾರ್ಗಗಳು
ಸಂಗ್ರಹ ಚಿತ್ರ
Follow us
TV9 Web
| Updated By: shruti hegde

Updated on: Oct 11, 2021 | 1:41 PM

ರಕ್ತದಲ್ಲಿ ಸಕ್ಕರೆ ಮಟ್ಟದ ಹೆಚ್ಚಳದಿಂದ ಮಧುಮೇಹ ಸಮಸ್ಯೆ ಉಂಟಾಗುತ್ತದೆ. ಜನರು ಆಹಾರದ ಮೂಲಕ ಕಾರ್ಬೋಹೈಡ್ರೇಟ್ ಅಥವಾ ಸಕ್ಕರೆ ಅಂಶವನ್ನು ಸೇವಿಸಿದಾಗ ಅದು ಗ್ಲೂಕೋಸ್ಆಗಿ ವಿಭಜನೆಯಾಗುತ್ತದೆ. ಹಾಗಿರುವಾಗ ದೇಹದಲ್ಲಿ ಇನ್ಸುಲಿನ್​ ಅಗತ್ಯ. ಇನ್ಸುಲಿನ್ ಒಂದು ಹಾರ್ಮೋನ್ ಆಗಿದ್ದು ಇದು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯಕವಾಗಿದೆ. ಇದು ಗ್ಲೂಕೊಸ್ಅನ್ನು ಹೀರಿಕೊಳ್ಳುವ ಮೂಲಕ ಶಕ್ತಿಯಾಗಿ ಪರಿವರ್ತಿಸುತ್ತದೆ. ಟೈಪ್ 2 ಡಯಾಬಿಟಿಸ್ ಸಮಸ್ಯೆ ಇರುವವರು ಇನ್ಸುಲಿನ್ ನಿರೋಧಕವನ್ನು ಸಾಕಷ್ಟು ಪಡೆಯದಿದ್ದಲ್ಲಿ ಔಷಧದ ರೂಪದಲ್ಲಿ ತೆಗೆದುಕೊಳ್ಳಬೇಕಾಗುತ್ತದೆ. ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಜತೆಗೆ ಸುರಕ್ಷಿತ ಆರೋಗ್ಯಕ್ಕಾಗಿ ಇನ್ಸುಲಿನ್ ಅವಶ್ಯಕ. ದೇಹದಲ್ಲಿ ಇನ್ಸುಲಿನ್ ಮಟ್ಟ ಕಡಿಮೆಯಾದಾಗ ಯಾವೆಲ್ಲಾ ಸಮಸ್ಯೆ ಕಂಡು ಬರವುದು ಎಂಬುದು ಈ ಕೆಳಗಿನಂತಿದೆ.

ಆಗಾಗ ಬಾಯಾರಿಕೆ ಪದೇ ಪದೇ ಮೂತ್ರ ವಿಸರ್ಜನೆ ತೂಕ ನಷ್ಟ ಗಾಯ ಬಹುಬೇಗ ಗುಣವಾಗುವುದಿಲ್ಲ ತುರಿಕೆ ದೃಷ್ಟಿ ದೋಷ

ತಜ್ಞರ ಪ್ರಕಾರ ಇನ್ಸುಲಿನ್ ಪೂರೈಕೆಯನ್ನು ಆಹಾರ ಮತ್ತು ವ್ಯಾಯಾಮದಿಂದ ಸುಧಾರಿಸಬಹುದು. ಇದನ್ನು ಹೊರತುಪಡಿಸಿ ಇನ್ಸುಲಿನ್ ಹೆಚ್ಚಳಕ್ಕೆ ಇತರ ಮಾರ್ಗಗಳಿವೆ. ಸಾಕಷ್ಟು ನಿದ್ರೆ ಪಡೆಯುವುದರಿಂದ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಕೆಲವು ಅಧ್ಯಯನಗಳ ಪ್ರಕಾರ, ಸಾಕಷ್ಟು ನಿದ್ರೆ ಪಡೆಯದಿರವುದೂ ಸಹ ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂಬುದು ತಿಳಿದು ಬಂದಿದೆ.

ಜತೆಗೆ ಶಾಂತಿಯಿಂದಿರುವುದು ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ. ದೇಹದಲ್ಲಿ ಒತ್ತಡವು ಹೆಚ್ಚು ತೊಂದರೆಯನ್ನುಂಟು ಮಾಡುತ್ತದೆ. ಇದು ಮಧುಮೇಹದ ಸಮಸ್ಯೆಯನ್ನೂ ಹೆಚ್ಚಿಸುತ್ತದೆ. ಹಾಗಿರುವಾಗ ಸಮಾಧಾನದಿಂದಿರುವ ಅಭ್ಯಾಸವನ್ನು ಮಾಡಿಕೊಳ್ಳಿ ಎಂದು ತಜ್ಞರು ಸಲಹೆ ನೀಡುತ್ತಾರೆ. ಇದರ ಜತೆಗೆ ಪ್ರತಿನಿತ್ಯ ವ್ಯಾಯಾಮ ಮತ್ತು ಉತ್ತಮ ಆಹಾರ ಪದ್ಧತಿ ಆರೋಗ್ಯಕ್ಕೆ ಮುಖ್ಯ.

ಇದನ್ನೂ ಓದಿ:

Health Tips: ಪ್ರತಿನಿತ್ಯ ನೀವು ಮಾಡುವ ಈ ಕೆಲವು ತಪ್ಪುಗಳು ನಿಮ್ಮ ಆರೋಗ್ಯವನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ!

Health Tips: ಡ್ರೈ ಫ್ರೂಟ್ಸ್ ಸೇವಿಸುವ ಅಭ್ಯಾಸ ಇದೆಯೇ? ಆರೋಗ್ಯಕರ ಬದಲಾವಣೆಯ ಬಗ್ಗೆ ತಿಳಿಯಿರಿ