Bottle Feeding: ಮಗುವಿಗೆ ಬಾಟಲಿಯಲ್ಲಿ ಹಾಲುಣಿಸುತ್ತಿದ್ದೀರಾ? ಹಾಗಿದ್ದರೆ ಈ ವಿಷಯಗಳನ್ನು ತಿಳಿದುಕೊಳ್ಳಿ

ಬಾಟಲಿಯಲ್ಲಿ ಹಾಲುಣಿಸುತ್ತಿದ್ದರೆ ನೈರ್ಮಲ್ಯಕ್ಕೆ ವಿಶೇಷ ಗಮನ ಕೊಡುವುದು ಅತ್ಯಂತ ಅಗತ್ಯವಾಗಿರುತ್ತದೆ. ಮಗು ಮಲಗಿರುವಾಗ ಯಾವುದೇ ಕಾರಣಕ್ಕೂ ಹಾಲುಣಿಸಬೇಡಿ. ಯಾಕೆಂದರೆ ಹೆಚ್ಚುವರಿ ಹಾಲು ಕೆಲವೊಮ್ಮೆ ಗಂಟಲಲ್ಲಿ ಸಿಲುಕಿ,ಮೂಗಿನಿಂದ ಹೊರಬರಬಹುದು. ಇದು ಮಗುವಿನ ಪ್ರಾಣಕ್ಕೂ ಅಪಾಯ ತಂದೊಡ್ಡಬಹುದು.

Bottle Feeding: ಮಗುವಿಗೆ ಬಾಟಲಿಯಲ್ಲಿ ಹಾಲುಣಿಸುತ್ತಿದ್ದೀರಾ? ಹಾಗಿದ್ದರೆ ಈ ವಿಷಯಗಳನ್ನು ತಿಳಿದುಕೊಳ್ಳಿ
Feeding Bottle
Follow us
ಅಕ್ಷತಾ ವರ್ಕಾಡಿ
|

Updated on:Jan 07, 2024 | 12:11 PM

ಹುಟ್ಟಿನಿಂದ ಆರು ತಿಂಗಳವರೆಗೆ ಎದೆಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ‘ತಾಯಿ ಎದೆಹಾಲು ನವಜಾತ ಶಿಶುವಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹುಟ್ಟಿದಾಗಿನಿಂದ ಆರು ತಿಂಗಳುಗಳ ಕಾಲ ತಾಯಿಯ ಹಾಲನ್ನು ಉಣಿಸಬೇಕು’. ಕೆಲವೊಮ್ಮೆ ಎದೆಹಾಲಿನ ಕೊರತೆ ಅಥವಾ ಇನ್ಯಾವುದೋ ಸಮಸ್ಯೆಯಿಂದ ಮಕ್ಕಳು ಬಾಟಲಿ ಮೂಲಕ ಕುಡಿಸಬೇಕಾಗುತ್ತದೆ. ಆದರೆ ಬಾಟಲಿಯಲ್ಲಿ ಹಾಲುಣಿಸುತ್ತಿದ್ದರೆ ಅದರ ನೈರ್ಮಲ್ಯಕ್ಕೆ ವಿಶೇಷ ಗಮನ ಕೊಡುವುದು ಅತ್ಯಂತ ಅಗತ್ಯವಾಗಿರುತ್ತದೆ.

ಮಗುವಿನ ಹಾಲಿನ ಬಾಟಲಿಗೆ ಸಂಬಂಧಿಸಿದಂತೆ ಮಾರುಕಟ್ಟೆಯಲ್ಲಿ ಪ್ಲ್ಯಾಸ್ಟಿಕ್,ಸ್ಟೀಲ್ ಮತ್ತು ಗಾಜಿನ ಬಾಟಲಿಗಳು ಲಭ್ಯವಿವೆ. ಆದರೆ ಬಿಸಿ ಹಾಲಿಗೆ ಪ್ಲಾಸ್ಟಿಕ್​​ ಬಾಟಲಿ ಬಳಸುವುದು ಅಷ್ಟು ಸೂಕ್ತವಲ್ಲ. ನೀವು ಸ್ಟೀಲ್​​ ಅಥವಾ ಗಾಜಿನ ಬಾಟಲಿಗಳನ್ನು ಬಳಸಬಹುದು. ಗಾಲಿನ ಬಾಟಲಿ ಬೇಗ ಒಡೆದು ಹೋಗುವುದರಿಂದ ಹೆಚ್ಚಿನ ಜಾಗ್ರತೆ ವಹಿಸಿ. ಮಗುವಿಗೆ ಹಾಲು ನೀಡುವ ಮೊದಲು ಬಾಟಲಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಇದಲ್ಲದೆ, ಬಾಟಲಿಯನ್ನು ನೀರಿನಲ್ಲಿ ಕುದಿಸಿ ಸ್ವಚ್ಛಗೊಳಿಸಿ. ಮಗುವಿನ ಬಾಟಲ್ ಸ್ವಚ್ಛಗೊಳಿಸುವ ಬ್ರಷ್ಗಳನ್ನು ಸ್ವಚ್ಛವಾದ ಪ್ರದೇಶದಲ್ಲಿ ಪ್ರತ್ಯೇಕವಾಗಿ ಇರಿಸಿ. ಹಾಲು ತಯಾರಿಸುವ ಮೊದಲು ಕೈಗಳನ್ನು ತೊಳೆಯಬೇಕು. ಬರಿಗಣ್ಣಿಗೆ ಕಾಣದ ಅನೇಕ ಸೂಕ್ಷ್ಮಾಣುಜೀವಿಗಳಿವೆ. ಅಲ್ಲದೆ, ಬಾಟಲಿಗೆ ಜೋಡಿಸಲಾದ ಮೊಲೆತೊಟ್ಟುಗಳನ್ನು ನಿಯಮಿತವಾಗಿ ಬದಲಾಯಿಸುತ್ತೀರಿ.

ಇದನ್ನೂ ಓದಿ: ಎಚ್ಚರವಿದ್ದಾಗಲೇ 5 ವರ್ಷದ ಕಂದಮ್ಮನಿಗೆ ಬ್ರೈನ್ ಸರ್ಜರಿ, ಈ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ವಿಶ್ವದ ಅತ್ಯಂತ ಕಿರಿಯ ವ್ಯಕ್ತಿ

ಸ್ತನ್ಯಪಾನ ಮಾಡುವಾಗ ಈ ಅಂಶ ನೆನಪಿಡಿ:

ಮಗುವನ್ನು ನಿಮ್ಮ ತೊಡೆಯ ಮೇಲೆ ಇರಿಸಿ ಮತ್ತು ತಲೆಯ ಕೆಳಗೆ ಒಂದು ಕೈಯನ್ನು ಇರಿಸಿ ಮಗುವಿಗೆ ಹಾಲುಣಿಸಿ. ಮಗು ಮಲಗಿರುವಾಗ ಯಾವುದೇ ಕಾರಣಕ್ಕೂ ಹಾಲುಣಿಸಬೇಡಿ. ಯಾಕೆಂದರೆ ಹೆಚ್ಚುವರಿ ಹಾಲು ಕೆಲವೊಮ್ಮೆ ಗಂಟಲಲ್ಲಿ ಸಿಲುಕಿ,ಮೂಗಿನಿಂದ ಹೊರಬರಬಹುದು. ಇದು ಮಗುವಿನ ಪ್ರಾಣಕ್ಕೂ ಅಪಾಯ ತಂದೊಡ್ಡಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:08 pm, Sun, 7 January 24

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್