AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪದೇ ಪದೇ ಮೂತ್ರ ಸೋಂಕು ಬರುತ್ತಿದೆಯೇ? ಚಿಂತೆ ಬೇಡ ಇಲ್ಲಿದೆ ನೋಡಿ ಪರಿಹಾರ

ಮೂತ್ರದ ಸೋಂಕಿನ ಬಗ್ಗೆ ಚಿಂತೆ ಮಾಡುವವರು ಹಾಗೂ ಇದು ಬರದಂತೆ ತಡೆಯಬೇಕೆಂದರೆ ಡಾ. ಶ್ವೇತಾ ಶಾ ಅವರು ಹೇಳಿರುವ ಆಯುರ್ವೇದ ಸಲಹೆಯನ್ನು ಪಾಲಿಸಬೇಕು. ಸರಳ ವಿಧಾನಗಳ ಮೂಲಕ ಮೂತ್ರದ ಸೋಂಕನ್ನು ಹೇಗೆ ಪರಿಹಾರ ಮಾಡಬಹುದು ಎಂಬುದರ ಬಗ್ಗೆ ಪೋಸ್ಟ್​​ವೊಂದನ್ನು ಅವರು ಹಂಚಿಕೊಂಡಿದ್ದಾರೆ. ಈ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಪದೇ ಪದೇ ಮೂತ್ರ ಸೋಂಕು ಬರುತ್ತಿದೆಯೇ? ಚಿಂತೆ ಬೇಡ ಇಲ್ಲಿದೆ ನೋಡಿ ಪರಿಹಾರ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
|

Updated on: Jun 30, 2025 | 4:01 PM

Share

ಮೂತ್ರದ ಸೋಂಕು (Urine Infection) ಕಂಡು ಬಂದರೆ ಭಯಪಡುವ ಅಗತ್ಯವಿಲ್ಲ, ಆದರೆ ಇದನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಆ ಕಾರಣಕ್ಕೆ ಮೂತ್ರದ ಸೋಂಕನ್ನು ಹೇಗೆ ಪರಿಹಾರ ಮಾಡಬಹುದು ಎಂಬುದನ್ನು ನೋಡಿಕೊಳ್ಳಬೇಕು. ಈ ಮೂತ್ರದ ಸೋಂಕಿಗೆ ಆಯುರ್ವೇದ ಒಳಿತು. ನಿಧಾನವಾಗಿ ಆದ್ರು, ದೊಡ್ಡ ಮಟ್ಟದ ಪರಿಹಾರವನ್ನು ನೀಡುತ್ತದೆ. ಮೂತ್ರ ವಿಸರ್ಜಿಸುವಾಗ ತೀವ್ರವಾದ ಊರಿ, ತುರಿಕೆ ಅಥವಾ ನೋವನ್ನು ಎದುರಿಸಬೇಕಾಗುತ್ತದೆ. ಇದರಿಂದ ಪ್ರತಿ ಕೆಲವು ನಿಮಿಷಗಳಿಗೊಮ್ಮೆ ಮೂತ್ರ ವಿಸರ್ಜನೆಯ ಸಮಸ್ಯೆಯೂ ಹೆಚ್ಚಾಗುತ್ತದೆ. ಈಗಾಗಲೇ ಈ ಸಮಸ್ಯೆಯನ್ನು ಎದುರಿಸುತ್ತಿರುವವರು, ಸೆಲೆಬ್ರಿಟಿ ಆಯುರ್ವೇದ ಪೌಷ್ಟಿಕತಜ್ಞೆ ಶ್ವೇತಾ ಶಾ ಅವರು ಹೇಳಿರುವ ಈ ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು. ಶ್ವೇತಾ ಶಾ ಅವರು ಹೇಳಿದ ರೀತಿ ಮಾಡಿದ್ರೆ, ನೈಸರ್ಗಿಕವಾಗಿ ಮೂತ್ರದ ಸೋಂಕಿನ ಸಮಸ್ಯೆಯಿಂದ ನೀವು ಪರಿಹಾರ ಪಡೆಯಬಹುದು.

ಶ್ವೇತಾ ಶಾ ಅವರು ಮೂತ್ರದ ಸೋಂಕಿನ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮೂತ್ರದ ಸೋಂಕು ಉಂಟಾದಾಗ ಜನರು ಮತ್ತೆ ಮತ್ತೆ ಮಾತ್ರೆಗಳನ್ನು ತೆಗೆದುಕೊಳ್ಳಲು ಆರಂಭಿಸುತ್ತಾರೆ.  ಹೀಗಿರುವಾಗ ಮನೆಯಲ್ಲಿ ಕೆಲವು ಸುಲಭ ಪರಿಹಾರಗಳನ್ನು ಅನುಸರಿಸುವ ಮೂಲಕ ಇದರಿಂದ ಸಂಪೂರ್ಣ ಪರಿಹಾರವನ್ನು ಪಡೆಯಬಹುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ
Image
ಬೆಳಿಗ್ಗೆ ಉಪಾಹಾರದಲ್ಲಿ ಆವಕಾಡೊ ಸೇರಿಸುವುದರಿಂದ ಸಿಗುವ ಲಾಭಗಳು
Image
ಮೂತ್ರದಲ್ಲಿ ರಕ್ತ ಬರುತ್ತಾ? ಈ ವೈಟ್ ಜ್ಯೂಸ್ ಕುಡಿದು ನೋಡಿ
Image
ಹಾಲಿಗೆ ಇದೊಂದು ಪುಡಿ ಬೆರೆಸಿ ಕುಡಿದರೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ
Image
ಹುರುಳಿ ಸೂಪ್ ಮಾಡಲು ಇಲ್ಲಿದೆ ಸುಲಭ ವಿಧಾನ

ಪೋಸ್ಟ್​​​ ಇಲ್ಲಿದೆ ನೋಡಿ;

ಪ್ರತಿದಿನ ಹೀಗೆ ಮಾಡಿ:

ಕೊತ್ತಂಬರಿ ಬೀಜದ ನೀರು: ಕೊತ್ತಂಬರಿ ಬೀಜಗಳಲ್ಲಿ ಅನೇಕ ಔಷಧಿ ಗುಣಗಳಿವೆ. ಈ ಬಗ್ಗೆ ಅನೇಕ ಸಂಶೋಧಕರು ಕೂಡ ಅಧ್ಯಯನ ನಡೆಸಿದ್ದಾರೆ. ಕೊತ್ತಂಬರಿ ಬೀಜದ ನೀರು ಮೂತ್ರದ ಸೋಂಕಿನಿಂದ ಪರಿಹಾರ ನೀಡುವಲ್ಲಿ ಪರಿಣಾಮಕಾರಿ ಎಂದು ಹೇಳಲಾಗಿದೆ.

ಸೇವಿಸುವ ವಿಧಾನ: ಒಂದು ಹಿಡಿ ಕೊತ್ತಂಬರಿ ಬೀಜವನ್ನು 500 ಮಿಲಿ ನೀರಿನಲ್ಲಿ ಕುದಿಸಿ, ಅರ್ಧದಷ್ಟು ನೀರು ಉಳಿದಾಗ, ಗ್ಯಾಸ್ ಆಫ್ ಮಾಡಿ ಫಿಲ್ಟರ್ ಮಾಡಿ. ಈ ನೀರನ್ನು ದಿನಕ್ಕೆ 3 ಬಾರಿ ಕುಡಿಯಿರಿ. ಇದು ಊರಿ ಸಂವೇದನೆ ಮತ್ತು ಆಗಾಗ್ಗೆ  ಬರುವ ಮೂತ್ರ ವಿಸರ್ಜನೆ ಸಮಸ್ಯೆಯನ್ನು ನಿವಾರಿಸುತ್ತದೆ. ಇದರ ಜತೆಗೆ ಮೂತ್ರನಾಳದಿಂದ ಸಾಂಕ್ರಾಮಿಕ ಬ್ಯಾಕ್ಟೀರಿಯಾಗಳನ್ನು ದೂರ ಮಾಡುತ್ತದೆ.

ಅಲೋವೆರಾ ಮತ್ತು ಆಮ್ಲಾ : ಅಲೋವೆರಾ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇವೆರಡೂ ಮೂತ್ರಕೋಶದ ಒಳಪದರವನ್ನು ಬಲಪಡಿಸುತ್ತವೆ.

ಸೇವಿಸುವ ವಿಧಾನ: 10–15 ಮಿಲಿ ಅಲೋವೆರಾ ಜೆಲ್, 10 ಮಿಲಿ ಆಮ್ಲಾ ರಸ, ಅರ್ಧ ಸೌತೆಕಾಯಿ ಮತ್ತುಪುದೀನ ಎಲೆಗಳನ್ನು ಒಟ್ಟಿಗೆ ಬೆರೆಸಿ ರಸ ತಯಾರಿಸಿ ದಿನಕ್ಕೆ ಎರಡು ಬಾರಿ ಸೇವಿಸಿ. ಈ ಮಿಶ್ರಣವು ಆಂತರಿಕ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಮೂತ್ರಕೋಶವನ್ನು ಸರಿಪಡಿಸುತ್ತದೆ ಎಂದು ಶ್ವೇತಾ ಶಾ ಹೇಳುತ್ತಾರೆ.

ಇದನ್ನೂ ಓದಿ: ಸುಂದರವಾಗಿ ಕಾಣಬೇಕೆಂಬ ಒತ್ತಡದಿಂದ ಜೀವ ಕಳೆದುಕೊಳ್ಳಬೇಡಿ, ಎಚ್ಚರಿಕೆ ನೀಡಿದ ವೈದ್ಯರು

ಬಾರ್ಲಿ ನೀರು : ಬಾರ್ಲಿಯು ನೈಸರ್ಗಿಕ ಮೂತ್ರವರ್ಧಕವಾಗಿದ್ದು, ದೇಹದಿಂದ ಹೆಚ್ಚುವರಿ ಶಾಖ ಮತ್ತು ಊತವನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಸೇವಿಸುವ ವಿಧಾನ: ಬಾರ್ಲಿಯನ್ನು ಕುದಿಸಿ ಅದರ ನೀರನ್ನು ಶೋಧಿಸಿ ದಿನವೆಲ್ಲ ಕುಡಿಯಬಹುದು. ಇದು ಮೂತ್ರದ ಅಡಚಣೆಯನ್ನು ನಿವಾರಿಸುತ್ತದೆ ಮತ್ತು ಮೂತ್ರನಾಳವನ್ನು ಸ್ವಚ್ಛಗೊಳಿಸುತ್ತದೆ.

ಒಣದ್ರಾಕ್ಷಿ: ಉತ್ಕರ್ಷಣ ನಿರೋಧಕಗಳು ಮತ್ತು ಸೌಮ್ಯ ವಿರೇಚಕ ಗುಣಗಳನ್ನು ಹೊಂದಿದ್ದು, ಇದು ದೇಹವನ್ನು ತಂಪಾಗಿಸುವುದರ ಜೊತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಸೇವಿಸುವ ವಿಧಾನ: ಒಣದ್ರಾಕ್ಷಿಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಲು ಶಿಫಾರಸು ಮಾಡುತ್ತಾರೆ. ಇದು ದೇಹದಲ್ಲಿನ ಶಾಖವನ್ನು ಕಡಿಮೆ ಮಾಡುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ