AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಕ್ಕಳಿಗೆ ಈ 5 ಎಣ್ಣೆಗಳನ್ನು ಹಚ್ಚಿ, ಮತ್ತೆ ದೇಹದಲ್ಲಾಗುವ ಬದಲಾವಣೆ ನೋಡಿ

ಹೊಕ್ಕಳಿಗೆ ಎಣ್ಣೆ ಹಚ್ಚುವುದರಿಂದ ದೇಹದ ಆರೋಗ್ಯದಲ್ಲಿ ಉತ್ತಮ ಬದಲಾವಣೆಗಳನ್ನು ಕಾಣಬಹುದು. ಆ ಬದಲಾವಣೆಗಳು ಯಾವುವು ಎಂಬುದನ್ನು ಇಲ್ಲಿದೆ. ಹೊಕ್ಕಳಿಗೆ ಎಣ್ಣೆ ಹಚ್ಚಿದ್ರೆ ಹಲವಾರು ಪ್ರಯೋಜನಗಳಿದ್ದು, ಖ್ಯಾತ ಯೋಗ ಗುರು ಮತ್ತು ಲೇಖಕಿ ಹಂಸ ಯೋಗೇಂದ್ರ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ  ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ.

ಹೊಕ್ಕಳಿಗೆ ಈ 5 ಎಣ್ಣೆಗಳನ್ನು ಹಚ್ಚಿ, ಮತ್ತೆ ದೇಹದಲ್ಲಾಗುವ ಬದಲಾವಣೆ ನೋಡಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
|

Updated on:Sep 18, 2025 | 7:38 PM

Share

ಹೊಕ್ಕಳಿಗೆ (belly button) ಎಣ್ಣೆ ಹಾಕುವುದರಿಂದ ಹಲವು ಪ್ರಯೋಜನಗಳು ಇದೆ. ಇದು ದೇಹದ ಪ್ರತಿಯೊಂದು ಭಾಗವೂ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ಹೊಕ್ಕಳಿಗೆ ಎಣ್ಣೆ ಹಚ್ಚುವುದರಿಂದಾಗುವ ಹಲವು ಪ್ರಯೋಜನಗಳು ಇದೆ. ಹೊಕ್ಕಳಿಗೆ ಎಣ್ಣೆ ಹಚ್ಚುವುದನ್ನು “ನಾಭಿ ಚಿಕಿತ್ಸಾ” ಎಂದು ಕರೆಯಲಾಗುತ್ತದೆ. ಆಯುರ್ವೇದದ ಪ್ರಕಾರ, ಅನೇಕ ನರಗಳು ಹೊಕ್ಕಳಿಗೆ ಸಂಪರ್ಕ ಹೊಂದಿವೆ. ಹೀಗಾಗಿ ಎಣ್ಣೆ ಹಚ್ಚಿ ಮಸಾಜ್ ಮಾಡುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು. ಆದರೆ ಹೊಕ್ಕಳಿಗೆ ಯಾವ ಎಣ್ಣೆಯನ್ನು ಬಳಸಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಇಲ್ಲಿದೆ ಮಾಹಿತಿ  ನೋಡಿ.

ಯಾವ ಎಣ್ಣೆ ಉತ್ತಮ?

ಖ್ಯಾತ ಯೋಗ ಗುರು ಮತ್ತು ಲೇಖಕಿ ಹಂಸ ಯೋಗೇಂದ್ರ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಷಯದ ಕುರಿತು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ಹೊಕ್ಕಳಿಗೆ ವಿಭಿನ್ನ ಎಣ್ಣೆಗಳನ್ನು ಹಚ್ಚುವುದರಿಂದ ವಿಭಿನ್ನ ಪ್ರಯೋಜನಗಳನ್ನು ಪಡೆಯಬಹುದು ಎಂದು ವಿವರಿಸಿದ್ದಾರೆ.

ಬಾದಾಮಿ ಎಣ್ಣೆ

ನಿದ್ರಾಹೀನತೆಯಿಂದ ಬಳಲುತ್ತಿದ್ದರೆ, ಆಗಾಗ್ಗೆ ಎಚ್ಚರಗೊಳ್ಳುತ್ತಿದ್ದರೆ ಹಾಗೂ ವಿಶ್ರಾಂತಿ ಪಡೆಯದಿದ್ದರೆ, ನಿಮ್ಮ ಹೊಕ್ಕಳಿಗೆ ಬಾದಾಮಿ ಎಣ್ಣೆಯನ್ನು ಹಚ್ಚುವುದು ತುಂಬಾ ಪ್ರಯೋಜನಕಾರಿ. ಮಲಗುವ ಮುನ್ನ ನಿಮ್ಮ ಹೊಕ್ಕಳಿಗೆ 2-3 ಹನಿ ಬೆಚ್ಚಗಿನ ಬಾದಾಮಿ ಎಣ್ಣೆಯನ್ನು ಹಚ್ಚಿ, ಅದನ್ನು ಕೈಗಳಿಂದ ನಿಧಾನವಾಗಿ ಮಸಾಜ್ ಮಾಡುವುದರಿಂದ ಮನಸ್ಸನ್ನು ಶಾಂತಗೊಳಿಸುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಲು ಮತ್ತು ಆಳವಾದ ನಿದ್ರೆಯನ್ನು ನೀಡುತ್ತದೆ.

ಇದನ್ನೂ ಓದಿ
Image
ಮನೆಯಲ್ಲಿರುವ ಈ 6 ವಸ್ತುಗಳನ್ನು ಈಗಲೇ ಹೊರಗೆ ಹಾಕಿ
Image
ಹಲ್ಲುಜ್ಜುವ ಬ್ರಷ್ ಬಳಸುವ ಬದಲು ಈ ಮೂರು ಗಿಡಮೂಲಿಕೆ ಕಡ್ಡಿ ಬಳಸಿ
Image
ಮಲ್ಲಿಗೆಯ ಸುವಾಸನೆಯಲ್ಲಿದೆ ಆರೋಗ್ಯದ ಗುಟ್ಟು
Image
ತಡವಾಗಿ ಉಪಾಹಾರ ಸೇವಿಸಿದ್ರೆ ನಿಮ್ಮ ಆಯಸ್ಸು ಕಡಿಮೆಯಾಗುತ್ತೆ

ಸಾಸಿವೆ ಎಣ್ಣೆ

ಊಟದ ನಂತರ ಊಟಯಲ್ಲಿ ಉಬ್ಬರ, ಗ್ಯಾಸ್​​​ನಂತಹ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಈ ಎಣ್ಣೆಯನ್ನು ಹೊಕ್ಕಳಿಗೆ ಹಚ್ಚಿಕೊಳ್ಳುವುದು ಪರಿಣಾಮಕಾರಿ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಿ, ಹೊಟ್ಟೆಯ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ. ವಿಶೇಷವಾಗಿ ಶೀತ ವಾತಾವರಣದಲ್ಲಿ ವಾಸಿಸುವ ಜನರಿಗೆ ಪ್ರಯೋಜನಕಾರಿಯಾಗಿದೆ.

ಬೇವಿನ ಎಣ್ಣೆ ಅಥವಾ ತೆಂಗಿನ ಎಣ್ಣೆ

ಮುಖದಲ್ಲಿ ಮೊಡವೆಗಳಿದ್ದರೆ ಬೇವಿನ ಎಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಹೊಕ್ಕಳಿಗೆ ಹಚ್ಚುವುದು ಪ್ರಯೋಜನಕಾರಿ. ಈ ಎರಡೂ ಎಣ್ಣೆ ದೇಹದ ಹೆಚ್ಚುವರಿ ಶಾಖವನ್ನು ಕಡಿಮೆ ಮಾಡುತ್ತದೆ ಹಾಗೂ ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದು ಮುಖ ಮತ್ತು ಬೆನ್ನಿನ ಮೇಲಿನ ಮೊಡವೆಗಳನ್ನು ಕ್ರಮೇಣ ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಮನೆಯಲ್ಲಿರುವ ಈ 6 ವಸ್ತುಗಳನ್ನು ಈಗಲೇ ಹೊರಗೆ ಹಾಕಿ, ಇದು ಆರೋಗ್ಯಕ್ಕೆ ಒಳ್ಳೆಯದಲ್ಲ

ಕ್ಯಾಸ್ಟರ್ ಆಯಿಲ್

ಕ್ಯಾಸ್ಟರ್ ಆಯಿಲ್ ಕೂಡ ದೇಹಕ್ಕೆ ಉತ್ತಮ. ಇದನ್ನು ಹೊಕ್ಕಳಿಗೆ ಹಚ್ಚುವುದರಿಂದ ಬೆನ್ನು ನೋವು, ಕೀಲು ನೋವು ಅಥವಾ ಮುಟ್ಟಿನ ಸೆಳೆತವನ್ನು ನಿವಾರಣೆಯಾಗುತ್ತದೆ. ಈ ಎಣ್ಣೆ ಉರಿಯೂತವನ್ನು ಕಡಿಮೆ ಮಾಡಿ, ಇದು ದೇಹದ ಒಳಗಿನ ನೋವು ಮತ್ತು ಬಿಗಿತವನ್ನು ಕಡಿಮೆ ಮಾಡುತ್ತದೆ.

ದೇಸಿ ಹಸು ತುಪ್ಪ

ಋತುಚಕ್ರ, ಒತ್ತಡ ಅಥವಾ ಮನಸ್ಥಿತಿ ಬದಲಾವಣೆಗಳಂತಹ ಸಮಸ್ಯೆಗಳು ಮಹಿಳೆಯರಲ್ಲಿ ಸಾಮಾನ್ಯ.  ಹೊಕ್ಕಳಿಗೆ ದೇಸಿ ಹಸುವಿನ ತುಪ್ಪವನ್ನು ಹಚ್ಚುವುದರಿಂದ ಪ್ರಯೋಜನಕಾರಿ. ತುಪ್ಪವು ದೇಹವನ್ನು ತಂಪಾಗಿಸುತ್ತದೆ ಹಾಗೂ ಮಾನಸಿಕ ಸಮತೋಲನವನ್ನು ಸುಧಾರಿಸುತ್ತದೆ .

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:30 pm, Thu, 18 September 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ