AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳೆಯುವ ಎಳೆ ವಯಸ್ಸಿನ ಮಕ್ಕಳ ಕುರಿತಾಗಿ ನಿರ್ಲಕ್ಷ್ಯ ಬೇಡ; ಮಾನಸಿಕ ಆರೋಗ್ಯದ ಬಗ್ಗೆ ಲಕ್ಷ್ಯವಹಿಸಲೇ ಬೇಕಾದ ಅಂಶಗಳು ಹೀಗಿವೆ

Susan Stephans: ಮಕ್ಕಳು ತಮ್ಮ ಹೆತ್ತವರು ಮತ್ತು ಇತರರನ್ನು ಗಮನಾರ್ಹವಾಗಿ ಗಮನಿಸುವುದರ ಮೂಲಕ ತಮ್ಮ ನಡುವಳಿಕೆ ಅಥವಾ ವರ್ತನೆಯ ಮೊದಲ ಹೆಜ್ಜೆ ಇಡುತ್ತಾರೆ. ಹೀಗಿರುವಾಗ ಉಜ್ವಲ ಭವಿಷ್ಯಕ್ಕಾಗಿ, ಪೋಷಕರು ತಮ್ಮ ಮಕ್ಕಳಿಗೆ ಧನಾತ್ಮಕ ಮತ್ತು ಆರೋಗ್ಯಕರ ನಡವಳಿಕೆಯನ್ನು ಬಾಲ್ಯದಿಂದಲೇ ಕಲಿಸಿಕೊಡುವುದು ಮುಖ್ಯ.

ಬೆಳೆಯುವ ಎಳೆ ವಯಸ್ಸಿನ ಮಕ್ಕಳ ಕುರಿತಾಗಿ ನಿರ್ಲಕ್ಷ್ಯ ಬೇಡ; ಮಾನಸಿಕ ಆರೋಗ್ಯದ ಬಗ್ಗೆ ಲಕ್ಷ್ಯವಹಿಸಲೇ ಬೇಕಾದ ಅಂಶಗಳು ಹೀಗಿವೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on: Jun 10, 2021 | 4:51 PM

ಬಾಲ್ಯವು ಪ್ರತಿಯೊಬ್ಬರ ಜೀವನದ ಮುಖ್ಯ ಘಟ್ಟ. ಇದು ಮಕ್ಕಳ ಭವಿಷ್ಯದ ಏಳಿಗೆಯನ್ನು ನಿರ್ಧರಿಸುತ್ತದೆ. ಬಾಲ್ಯದ ಮಾನಸಿಕ ಆರೋಗ್ಯವು ಕುಟುಂಬದೊಂದಿಗೆ ಹೊಂದಿರುವ ಸಕಾರಾತ್ಮಕ ಸಂಬಂಧದೊಂದಿಗೆ ಅವಲಂಬಿತವಾಗಿರುತ್ತದೆ. ಹಾಗಿದ್ದಾಗ ಮಾತ್ರ ಮಕ್ಕಳು ಅಭಿವೃದ್ಧಿಯ ಮೈಲಿಗಲ್ಲು ದಾಟುತ್ತಾರೆ. ನಾವು ಇಂದು ಮಕ್ಕಳ ಸುತ್ತಲೂ ಕೌಶಲ್ಯಗಳನ್ನು ನಿಭಾಯಿಸುವ, ಬೆಂಬಲಿಸುವ ಆರೋಗ್ಯಕರ ವಾತಾವರಣವನ್ನು ಕಲ್ಪಿಸುವ ಕುರಿತಾಗಿ ಗಮನಹರಿಸುವುದು ಅನಿವಾರ್ಯವಾಗಿದೆ. ಅದರಲ್ಲಿಯೂ ಮುಖ್ಯವಾಗಿ ಕೊವಿಡ್​19 ಸಾಂಕ್ರಾಮಿಕ ಸಮಯದಲ್ಲಿ ಕಟ್ಟು-ನಿಟ್ಟಿ ಕ್ರಮ ಜಾರಿಯಲ್ಲಿರುವುದರಿಂದ ಮಕ್ಕಳು ಹೆಚ್ಚು ಮೊಬೈಲ್, ಕಂಪ್ಯೂಟರ್ ಹೀಗೆ ಮುಂತಾದ ವಿದ್ಯುನ್ಮಾನ ಯಂತ್ರಗಳಿಗೆ ಒಗ್ಗಿಬಿಡುತ್ತಾರೆ. ಹೀಗಿರುವಾಗ ಎಳೆ ಕಂದಮ್ಮಗಳ ಕುರಿತಾಗಿ ಲಕ್ಷ್ಯವಹಿಸಲೇ ಬೇಕಾಗಿದೆ.

ಮಕ್ಕಳು ತಮ್ಮ ಹೆತ್ತವರು ಮತ್ತು ಇತರರನ್ನು ಗಮನಾರ್ಹವಾಗಿ ಗಮನಿಸುವುದರ ಮೂಲಕ ತಮ್ಮ ನಡುವಳಿಕೆ ಅಥವಾ ವರ್ತನೆಯ ಮೊದಲ ಹೆಜ್ಜೆ ಇಡುತ್ತಾರೆ. ಹೀಗಿರುವಾಗ ಉಜ್ವಲ ಭವಿಷ್ಯಕ್ಕಾಗಿ, ಪೋಷಕರು ತಮ್ಮ ಮಕ್ಕಳಿಗೆ ಧನಾತ್ಮಕ ಮತ್ತು ಆರೋಗ್ಯಕರ ನಡವಳಿಕೆಯನ್ನು ಬಾಲ್ಯದಿಂದಲೇ ಕಲಿಸಿಕೊಡುವುದು ಮುಖ್ಯ. ಪೋಷಕರು ಸದಾ ತಮ್ಮ ಮಕ್ಕಳಲ್ಲಿ ಸಮಗ್ರ ಬೆಳವಣಿಗೆಗಾಗಿ ಹೆಚ್ಚು ಜಾಗರೂಕರಾಗಿರಬೇಕಾಗಿರುವುದು ಅತ್ಯವಶ್ಯಕ.

ಬೆಳೆಯುವ ಮಕ್ಕಳಲ್ಲಿ ಲಕ್ಷ್ಯವಹಿಸಲೇ ಬೇಕಾದ ಕೆಲವು ಮಾನಸಿಕ ಆರೋಗ್ಯ ಸಲಹೆಗಳು ವರ್ತನೆ ಅಥವಾ ನಡವಳಿಕೆ ಮಕ್ಕಳ ಸುತ್ತಲಿನ ಪರಿಸರದಲ್ಲಿ ಉಂಟಾಗುವ ಕೆಲವು ಮಾರ್ಪಾಡುಗಳು ಅವರ ನಡವಳಿಕೆಯ ಬದಲಾವಣೆಗೆ ಕಾರಣವಾಗಬಹುದು. ಸಮಾನ ಮನಸ್ಕರು, ಕುಟುಂಬ ಮತ್ತು ಗಮನಾರ್ಹವಾಗಿ ಇತರರೊಂದಿಗೆ ಸಂವಹನ ನಡೆಸುವುದರ ಮೂಲಕ ಅವರಿಗೂ ಗೋಚರವಾಗದಂತೆ ವರ್ತನೆ ಬದಲಾಗುತ್ತದೆ. ಸಾಮಾನ್ಯವಾಗಿ ಮಕ್ಕಳ ಅತಿಯಾದ ಉದ್ವೇಗ, ಇತರರಿಗೆ ಹಾನಿಯುಂಟು ಮಾಡುವುದು. ಕ್ಷಮಾಯಾಚಿಸಿ ಹಿಂತೆಗೆದುಕೊಳ್ಳುವುದು, ಅತಿಯಾಗಿ ತಿನ್ನುವುದು ಅಥವಾ ಕಡಿಮೆ ತಿನ್ನುವುದು, ನಿದ್ರೆಯ ಮಾದರಿಗಳಲ್ಲಿ ಬದಲಾವಣೆಗಳು ಮತ್ತು ವಿದ್ಯುನ್ಮಾನ ಯಂತ್ರಗಳೊಡನೆ ಹೆಚ್ಚು ಅವಲಂಬಿತವಾಗುವುದು ಮಕ್ಕಳ ವರ್ತನೆಯನ್ನು ಬದಲಾಯಿಸುತ್ತದೆ. ಹಾಗಾಗಿ ಮಕ್ಕಳ ಮುಂದಿನ ಭವಿಷ್ಯದ ಏಳಿಗೆಗಾಗಿ ಈ ಅಂಶವನ್ನು ಮುಖ್ಯವಾಗಿ ಗಮನದಲ್ಲಿಡಿ.

ಭಾವನೆ ಭಾವನೆಗಳು ಮನುಷ್ಯನ ಆಲೋಚನೆ ಮತ್ತು ಸಾಮರ್ಥ್ಯದ ಚೌಕಟ್ಟನ್ನು ರೂಪಿಸುತ್ತವೆ. ವಯಸ್ಕರು ಹೇಗೆ ಸಂಕೀರ್ಣ ಭಾವನೆಗಳನ್ನು ಅನುಭವಿಸುತ್ತಾರೊ ಹಾಗೆ ಮಕ್ಕಳು ಸಹ ವ್ಯಾಪಕವಾದ ಭಾವನೆಗಳನ್ನು ಅನುಭವಿಸುತ್ತಾರೆ. ಆದಾಗ್ಯೂ, ಕೆಲವೊಮ್ಮೆ ಮಕ್ಕಳು ತಾವು ಅನುಭವಿಸುತ್ತಿರುವ ಭಾವನೆಗಳನ್ನು ವಿವರಿಸಲು ಕಷ್ಟಪಡುತ್ತಾರೆ. ಇದು ಬಹಳಷ್ಟು ಭಾವನಾತ್ಮಕ ಯಾತನೆಗಳಿಗೆ ಕಾರಣವಾಗುತ್ತದೆ. ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಕೌಟುಂಬಿಕ ಹಿಂಸಾಚಾರವು ಸಹ ಮಕ್ಕಳಲ್ಲಿ ಈ ಭಾವನಾತ್ಮಕ ಕಾಳಜಿಗಳಿಗೆ ಪ್ರಮುಖ ಕಾರಣವಾಗುತ್ತದೆ. ಭಾವನಾತ್ಮ ಸಮಸ್ಯೆಯಿಂದಾಗಿ ಮಕ್ಕಳ ಯೋಚನೆ ಬದಲಾಗುತ್ತದೆ. ಅತಿಯಾಗಿ ಅಳುವುದು, ಆತಂಕ, ಅತಿಯಾದ ಭಯ, ಕೋಪದ ಮಾತುಗಳು, ಖಿನ್ನತೆ ಮತ್ತು ಗಮನದ ಕೊರತೆಗಳು ಕಂಡು ಬರುತ್ತದೆ.

ಶಿಕ್ಷಣದ ಕುರಿತಾಗಿ ಕಾಳಜಿ ಶಿಕ್ಷಣವೇ ಮಕ್ಕಳ ಮುಂದಿನ ಜೀವನವನ್ನು ನಿರ್ಧರಿಸುತ್ತದೆ. ಏಕೆಂದರೆ ಇದು ಅವರ ತಿಳುವಳಿಕೆ, ಜ್ಞಾನ ಮತ್ತು ಕಲಿತ ಮಾಹಿತಿಯನ್ನು ಉಳಿಸಿಕೊಳ್ಳುವ ಸಾಮರ್ಥ್ಯವನ್ನು ನಿರ್ಧರಿಸುತ್ತದೆ. ಮಗು ಅನುಭವಿಸುವ ಸಾಮಾನ್ಯ ಶೈಕ್ಷಣಿಕ ತೊಂದರೆಗಳೆಂದರೆ, ಗಮನವಿಲ್ಲದಿರುವುದು, ಗ್ರಹಿಕೆಯ ತೊಂದರೆ, ಕಲಿಕೆಯ ತೊಂದರೆಗಳು, ಶಿಕ್ಷಣದ ಬಗ್ಗೆ ನಿರಾಸಕ್ತಿ ಮತ್ತು ಶಾಲೆಗಳನ್ನು ಬಿಟ್ಟುಬಿಡುವ ಯೋಚನೆ. ಮಕ್ಕಳಲ್ಲಿ ಶಿಕ್ಷಣದ ಮೇಲೆ ಪರಿಣಾಮ ಬೀರುವಲ್ಲಿ ಪಾತ್ರ ವಹಿಸಬಹುದಾದ ಇತರ ಕಾಳಜಿಗಳೆಂದರೆ ಅವರ ಪರಿಸರದಲ್ಲಿನ ಬದಲಾವಣೆಗಳು ಅಥವಾ ಭಾವನೆಗಳನ್ನು ನಿಭಾಯಿಸುವುದು.

ಸಾಮಾಜಿಕ ಸಂಬಂಧಿತ ಕಾಳಜಿ ಬಾಲ್ಯವು ಮಗುವಿಗೆ, ತನ್ನೊಂದಿಗೆ ಮತ್ತು ತಮ್ಮ ಸುತ್ತಲಿನ ಇತರರೊಂದಿಗೆ ಆರೋಗ್ಯಕರ ಸಂಬಂಧವನ್ನು ಹೊಂದಲು ಸಹಾಯ ಮಾಡುತ್ತದೆ. ಮಕ್ಕಳು ಬೆಳೆದಂತೆ ಅವರು ಯಾವಾಗಲೂ ತಮ್ಮ ನಿಜವಾದ ನೈಜತೆ ಮತ್ತು ಅವರ ಆದರ್ಶ ಸ್ವಭಾವದ ನಡುವೆ ನಿರಂತರ ಹೋರಾಟದಲ್ಲಿರುತ್ತಾರೆ. ಈ ಜಂಜಾಟದಲ್ಲೂ ಅವರು ಸಮಾನ ಮನಸ್ಕರ ಒತ್ತಡ, ಪೋಷಕರ ಶೈಲಿಗಳು ಮತ್ತು ಸಾಮಾಜಿಕ ಸಂವಹನಗಳಿಂದ ಪ್ರಭಾವಿತವಾಗುತ್ತಾರೆ. ಹೀಗಿರುವಾಗ ಮಗುವು, ಅನುಮಾನ ಮತ್ತು ಸಮಾನ ಮನಸ್ಕರೊಂದಿಗೆ ನಿರಂತರ ಹೋಲಿಕೆ, ಸಂಕೀರ್ಣವಾದ ಕೀಳರಿಮೆಯನ್ನು ಕಾಣಬಹುದು. ಈ ಕುರಿತಾಗಿ ಗಮನವಿರಲಿ.

ಇದನ್ನೂ ಓದಿ: 

ನಿಮ್ಮ ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಗಮನ ವಹಿಸುತ್ತಿದ್ದೀರಾ? ಎಳೆ ಮನಸ್ಸುಗಳಿಗೆ ಗಾಯವಾಗದಂತೆ ನೋಡಿಕೊಳ್ಳುವುದು ಮುಖ್ಯ