Ayurveda Tips: ವಾಕರಿಕೆ ಸಮಸ್ಯೆ ಕಡಿಮೆ ಮಾಡಲು ಇಲ್ಲಿವೆ ಬೆಸ್ಟ್​ ಆಯುರ್ವೇದ ಸಲಹೆಗಳು

ಸಾಮಾನ್ಯವಾಗಿ ಮುಂಗಾರಿನಲ್ಲಿ ಬಾಯಿ ರುಚಿ ತುಸು ಹೆಚ್ಚು, ಬಗೆಬಗೆಯ ಎಣ್ಣೆಯ ಪದಾರ್ಥಗಳನ್ನು ತಿಂದು ಹೊಟ್ಟೆ ಕೆಡಿಸಿಕೊಳ್ಳುವವರೂ ಕೂಡ ಹೆಚ್ಚೇ.

Ayurveda Tips: ವಾಕರಿಕೆ ಸಮಸ್ಯೆ ಕಡಿಮೆ ಮಾಡಲು ಇಲ್ಲಿವೆ ಬೆಸ್ಟ್​  ಆಯುರ್ವೇದ ಸಲಹೆಗಳು
Vomit
Follow us
TV9 Web
| Updated By: ನಯನಾ ರಾಜೀವ್

Updated on: Jul 17, 2022 | 10:33 AM

ಸಾಮಾನ್ಯವಾಗಿ ಮುಂಗಾರಿನಲ್ಲಿ ಬಾಯಿ ರುಚಿ ತುಸು ಹೆಚ್ಚು, ಬಗೆಬಗೆಯ ಎಣ್ಣೆಯ ಪದಾರ್ಥಗಳನ್ನು ತಿಂದು ಹೊಟ್ಟೆ ಕೆಡಿಸಿಕೊಳ್ಳುವವರೂ ಕೂಡ ಹೆಚ್ಚೇ. ಹೀಗಾಗಿ ಅಜೀರ್ಣದಿಂದಾಗಿ ಹಲವು ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಅದರಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆ ವಾಕರಿಕೆ, ಈ ವಾಕರಿಕೆಯನ್ನು ಹೋಗಲಾಡಿಸಲು ಕೆಲವು ಮನೆಮದ್ದುಗಳನ್ನು ನಾವು ನೀಡಲಾಗಿದೆ.

ವಾಕರಿಕೆ ಅಥವಾ ವಾಂತಿ ಸಮಸ್ಯೆ ಪರಿಹರಿಸಲು ನಿಮ್ಮ ದೇಹವನ್ನು ಹೈಡ್ರೇಟ್​ ಆಗಿರಿಸಿಕೊಳ್ಳುವುದು ಕೂಡ ಮುಖ್ಯವಾಗುತ್ತದೆ. ಮನೆಮದ್ದುಗಳನ್ನು ಗಮನಿಸಿ

ಶುಂಠಿ: ನಿಮ್ಮ ಅಡುಗೆ ಮನೆಯಲ್ಲಿ ಸಾಮಾನ್ಯವಅಗಿ ಯಾವಅಗಲೂ ಇರುವ ವಸ್ತುವೆಂದರೆ ಅದು ಶುಂಠಿ, ಶುಂಠಿಯಲ್ಲಿ ಜೀರ್ಣಕಾರಿ ಅಂಶಗಳಿಗೆ, ಅದು ಸುಲಭವಾಗಿ ಆಹಾರ ಪದಾರ್ಥಗಳನ್ನು ಜೀರ್ಣ ಮಾಡುತ್ತದೆ. ಹೀಗಾಗಿ ಅಡುಗೆಯಲ್ಲ ಸ್ವಲ್ಪವಾದರೂ ಶುಂಠಿಯನ್ನು ಬಳಕೆ ಮಾಡಿಯೇ ಮಾಡುತ್ತಾರೆ. ಶುಂಠಿಯನ್ನು ತೆಗೆದುಕೊಂಡು ನಿಧಾನವಾಗಿ ಅಗಿಯಿರಿ ಇಲ್ಲವಾದರೆ ಅದಕ್ಕೆ ಉಪ್ಪು ಅಥವಾ ಜೇನುತುಪ್ಪ ಮಿಶ್ರಣ ಮಾಡಿಯೂ ತಿನ್ನಬಹುದು.

ನಿಂಬೆಹಣ್ಣು: ನಿಂಬೆಯ ಪರಿಮಳವು ವಾಕರಿಕೆಯನ್ನು ನಿವಾರಿಸಬಲ್ಲದು. ವಾಕರಿಕೆ ನಿವಾರಣೆಗೆ ನಿಂಬೆ ರಸ ಮತ್ತು ಜೇನುತುಪ್ಪವನ್ನು ಸಮಾನ ಭಾಗಗಳಲ್ಲಿ ಮಿಶ್ರಣ ಮಾಡಿ ಸೇವಿಸಬಹುದು.

– ನೀವು ಉಸಿರಾಟವನ್ನು ನಿಯಂತ್ರಿಸುವ ಮೂಲಕವೂ ವಾಕರಿಕೆಯಿಂದ ಮುಕ್ತಿ ಪಡೆಯಬಹುದು, ನಿಧಾನವಾಗಿ ಆಳವಾದ ಉಸಿರು ತೆಗೆದುಕೊಂಡರೆ ಕ್ರಮೇಣವಾಗಿ ವಾಕರಿಕೆ ಸಮಸ್ಯೆ ಕಡಿಮೆಯಾಗುವುದು.

– ನಿರ್ಜಲೀಕರಣವು ವಾಕರಿಕೆಯನ್ನು ಉಲ್ಬಣಗೊಳಿಸಬಹುದು, ಸ್ವಲ್ಪ ಪ್ರಮಾಣದ ಬೆಚ್ಚಗಿನ ನೀರನ್ನು ಕುಡಿಯಿರಿ ಮತ್ತು ತಣ್ಣನೆಯ ನೀರನ್ನು ಕುಡಿಯಬೇಡಿ ಏಕೆಂದರೆ ಅದು ಕಫವನ್ನು ಇನ್ನಷ್ಟು ಹೆಚ್ಚಿಸುತ್ತದೆ.

– 1-2 ಏಲಕ್ಕಿ ಬೀಜಗಳನ್ನು ಜಗಿಯುವುದರಿಂದ ವಾಂತಿ ಪ್ರವೃತ್ತಿಯನ್ನು ನಿವಾರಿಸಬಹುದು.

– ವಾಂತಿ ಮಾಡಿದ ನಂತರ ನೀವು ಸುಸ್ತಾಗಿದ್ದರೆ, ORS ಕುಡಿಯುವುದರಿಂದ ನಿಮ್ಮ ಶಕ್ತಿ ಮರಳುತ್ತದೆ, ಜತೆ ಎಳನೀರನ್ನು ಕೂಡ ಕುಡಿಯಬಹುದು.

– 1 ಚಮಚ ದಾಲ್ಚಿನ್ನಿ ಪುಡಿಯನ್ನು ನೀರಿಗೆ ಸೇರಿಸಿ, ನಂತರ ಕುದಿಸಿ ಮತ್ತು ಸೋಸಿಕೊಳ್ಳಿ. ಜೇನುತುಪ್ಪದ ಕೆಲವು ಹನಿಗಳನ್ನು ಸೇರಿಸಿ ಮತ್ತು ಅದನ್ನು ಆಗಾಗ್ಗೆ ಕುಡಿಯಲು ಪ್ರಯತ್ನಿಸಿ.