ನೀರಿಗೂ ಇದೆ ಎಕ್ಸ್‌ಪೈರ್ಡ್ ಡೇಟ್! ಕುಡಿಯುವ ಮುಂಚೆ ಯೋಚನೆ ಮಾಡಿ
ಸಿಕ್ಕ ಸಿಕ್ಕ ನೀರಿನ ಬಾಟಲಿಗಳಿಂದ ನೀರು ಕುಡಿಯುವ ಮೊದಲು ಅದು ಕುಡಿಯಲು ಯೋಗ್ಯವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಆದರೆ ನಾವು ಆ ರೀತಿ ಮಾಡುವುದಿಲ್ಲ. ಕೆಲವರಿಗೆ ನೀರು ಹಾಳಾಗುವುದಿಲ್ಲ ಎಂಬ ನಂಬಿಕೆ ಇರುತ್ತದೆ. ಅಂತವರು ಎಕ್ಸ್‌ಪೈರ್ಡ್ ಡೇಟ್ ಅನ್ನು ಪರಿಶೀಲನೆ ಮಾಡದೆಯೇ ನೀರನ್ನು ಕುಡಿಯುತ್ತಾರೆ ಈ ಅಭ್ಯಾಸ ನಮ್ಮ ಆರೋಗ್ಯಕ್ಕೆ ಕಂಟಕವಾಗಬಹುದು. ಹಾಗಾದರೆ ನೀರು ಎಲ್ಲಿಯ ವರೆಗೆ ಕುಡಿಯಲು ಯೋಗ್ಯವಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ನಾವು ದಿನನಿತ್ಯ ಬಳಕೆ ಮಾಡವ ದಿನಸಿ ಪದಾರ್ಥಗಳು (Groceries), ಹಾಲಿನ ಉತ್ಪನ್ನಗಳ ಮೇಲೆ ಅವಧಿ ಮುಕ್ತಾಯ ದಿನಾಂಕ (Expired date) ಇರುವುದು ಸಾಮಾನ್ಯ. ತಿನ್ನುವ ಪದಾರ್ಥ ಮಾತ್ರವಲ್ಲ ಶಾಂಪೂ, ಸೋಪು ಹೀಗೆ ನಾವು ಬಳಕೆ ಮಾಡುವ ಪ್ರತಿಯೊಂದು ವಸ್ತುವಿನ ಮೇಲೆ ಅದನ್ನು ಎಲ್ಲಿಯ ವರೆಗೆ ಬಳಕೆ ಮಾಡಲು ಯೋಗ್ಯವಾಗಿದೆ ಎಂಬುದನ್ನು ನಮೂದಿಸಿರುತ್ತಾರೆ. ಆದರೆ ನಿಮಗೆ ಗೊತ್ತಾ? ನೀರಿಗೂ ಎಕ್ಸ್‌ಪೈರ್ಡ್ ಡೇಟ್ ಇರುತ್ತದೆ. ಕಂಡ ಕಂಡಲ್ಲಿ ಸಿಕ್ಕ ಸಿಕ್ಕ ನೀರಿನ ಬಾಟಲಿಗಳಿಂದ ನೀರು (Water) ಕುಡಿಯುವ ಮೊದಲು ಅದು ಕುಡಿಯಲು ಯೋಗ್ಯವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಈ ರೀತಿ ಅವಧಿ ಮೀರಿದ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಅನೇಕ ರೀತಿಯಲ್ಲಿ ಸಮಸ್ಯೆ ಉಂಟಾಗಬಹುದು. ಹಾಗಾದರೆ ಈ ರೀತಿ ಎಕ್ಸ್‌ಪೈರ್ಡ್ ಡೇಟ್ ಆದಂತಹ ನೀರನ್ನು ಕುಡಿಯುವುದರಿಂದ ಆರೋಗ್ಯದ (Health) ಮೇಲೆ ಏನೆಲ್ಲಾ ದುಷ್ಪರಿಣಾಮಗಳು ಉಂಟಾಗುತ್ತದೆ? ಸಂಗ್ರಹಿಸಿಟ್ಟ ನೀರು ಎಲ್ಲಿಯ ವರೆಗೆ ಕುಡಿಯಲು ಯೋಗ್ಯವಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಪ್ಲಾಸ್ಟಿಕ್ ಬಾಟಲಿಗಳಲ್ಲಿರುವ ನೀರನ್ನು ಎಷ್ಟು ಸಮಯದವರೆಗೆ ಕುಡಿಯಬಹುದು?
ನೀರಿನ ಬಾಟಲಿಗಳ ಮೇಲೆ ಮುಕ್ತಾಯ ದಿನಾಂಕ ಅಥವಾ ಎಕ್ಸ್‌ಪೈರ್ಡ್ ಡೇಟ್ ಹಾಕುವುದು ಕಡ್ಡಾಯ. ಆದರೆ ನಿಜವಾಗಿಯೂ ಪ್ಲಾಸ್ಟಿಕ್ ಬಾಟಲಿಗಳಲ್ಲಿರುವ ನೀರನ್ನು ಎಷ್ಟು ಸಮಯದ ವರೆಗೆ ಕುಡಿಯಬಹುದು? ಸಾಮಾನ್ಯವಾಗಿ ಸಂಶೋಧನೆಗಳು ಹೇಳುವ ಪ್ರಕಾರ, ನಳ್ಳಿ ಮತ್ತು ಪ್ಲಾಸ್ಟಿಕ್ ಬಾಟಲಿಗಳಲ್ಲಿ 6 ತಿಂಗಳಿಗಿಂತ ಹೆಚ್ಚು ಸಮಯ ಸಂಗ್ರಹಿಸಿಟ್ಟ ನೀರನ್ನು ಕುಡಿಯಬಾರದು. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಸಂಗ್ರಹಿಸಿಟ್ಟ ನೀರಿನಲ್ಲಿ ಅನಿಲಗಳು ಆವಿಯಾಗಲು ಪ್ರಾರಂಭವಾಗುವುದರಿಂದ ನೀರಿನ ರುಚಿ ಬದಲಾಗುತ್ತದೆ. ಏಕೆಂದರೆ ಗಾಳಿಯಲ್ಲಿನ ಇಂಗಾಲದ ಡೈ ಆಕ್ಸೈಡ್ ನೀರಿನೊಂದಿಗೆ ಬೆರೆತು ಹೋಗುತ್ತದೆ. ಹಾಗಾಗಿ 6 ತಿಂಗಳಿಗಿಂತ ಹೆಚ್ಚು ಸಮಯ ನೀರನ್ನು ಯಾವುದೇ ಪಾತ್ರೆ ಅಥವಾ ಬಾಟಲಿಗಳಲ್ಲಿ ಸಂಗ್ರಹಿಸಿಟ್ಟು ಕುಡಿಯಬಾರದು. ಆರೋಗ್ಯದ ದೃಷ್ಟಿಯಿಂದ ಕನಿಷ್ಠ 6 ತಿಂಗಳ ವರೆಗೆ ಕುಡಿಯುವ ನೀರನ್ನು ಸುರಕ್ಷಿತವಾಗಿ ಇಡಬೇಕೆಂದರೆ ಶೀತ, ಶುಷ್ಕ ಸ್ಥಳದಲ್ಲಿ ನೀರನ್ನು ಶೇಖರಿಸಿಡಬೇಕು. ಜೊತೆಗೆ ಆ ಸ್ಥಳದಲ್ಲಿ ಶುಚಿತ್ವವನ್ನು ಕೂಡ ಕಾಪಾಡಬೇಕು.
ಇದನ್ನೂ ಓದಿ: Liver Health: ಲಿವರ್ ಚೆನ್ನಾಗಿರಬೇಕು ಅಂದರೆ ಈ ಹಣ್ಣುಗಳನ್ನು ತಪ್ಪದೆ ತಿನ್ನಿ
ಅದರಲ್ಲಿಯೂ ಪ್ಲಾಸ್ಟಿಕ್ ಬಾಟಲಿಗಳಲ್ಲಿರುವ ನೀರು 6 ತಿಂಗಳಿಗಿಂತ ಹಳೆಯದಾದರೆ ಅವುಗಳನ್ನು ಕುಡಿಯುವುದು ಒಳ್ಳೆಯದಲ್ಲ. ಇದರಿಂದ ಆರೋಗ್ಯ ಹಾಳಾಗುತ್ತದೆ. ಏಕೆಂದರೆ ಸಾಮಾನ್ಯವಾಗಿ ಪ್ಲಾಸ್ಟಿಕ್ ಬಿಪಿಎ (ಬಿಸ್ಫೆನಾಲ್) ನೀರನ್ನು ಕಲುಷಿತಗೊಳಿಸುವ ಇತರ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಇದನ್ನು ಮಾನವರು ಬಳಸುವುದರಿಂದ ಕರುಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಉಂಟಾಗಿ ಆರೋಗ್ಯ ಕ್ಷೀಣಿಸಬಹುದು. ಜೊತೆಗೆ ಇದು ರೋಗ ನಿರೋಧಕ ಶಕ್ತಿಯನ್ನು ಕೂಡ ಕಡಿಮೆ ಮಾಡಬಹುದು. ಹಾಗಾಗಿಯೇ ನೀರನ್ನು ಬಿಸಿಯಾದ ವಾತಾವರಣದಲ್ಲಿ ಇಡುವುದಕ್ಕಿಂತ ತಂಪಾದ ಮತ್ತು ಶುಷ್ಕ ಸ್ಥಳದಲ್ಲಿ ಸಂಗ್ರಹಿಸುವುದರಿಂದ ಅಡ್ಡಪರಿಣಾಮಗಳನ್ನು ತಪ್ಪಿಸಬಹುದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ