Kidney Problem: ಅತಿಯಾಗಿ ನೀರು ಕುಡಿಯುವುದು ಕಿಡ್ನಿ ಮೇಲೆ ಪರಿಣಾಮ ಬೀರಬಹುದು
ಬಿಸಿಗಾಳಿ ಅಥವಾ ಸೆಕೆ ಎಂದು ಹೆಚ್ಚು ನೀರು (Water)ಕುಡಿಯಬೇಡಿ ಇದು ನಿಮ್ಮ ಕಿಡ್ನಿ(Kidney)ಗೆ ಅಪಾಯ ಮಾಡಬಹುದು ಎಂದು ವೈದ್ಯರು ಸಲಹೆ ನೀಡಿದ್ದಾರೆ. ದೆಹಲಿಯಲ್ಲಿ ಬಿಸಿಗಾಳಿ ಶುರುವಾಗಿದ್ದು, 47.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 25 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು.
ಬಿಸಿಗಾಳಿ ಅಥವಾ ಸೆಕೆ ಎಂದು ಹೆಚ್ಚು ನೀರು (Water)ಕುಡಿಯಬೇಡಿ ಇದು ನಿಮ್ಮ ಕಿಡ್ನಿ(Kidney)ಗೆ ಅಪಾಯ ಮಾಡಬಹುದು ಎಂದು ವೈದ್ಯರು ಸಲಹೆ ನೀಡಿದ್ದಾರೆ. ದೆಹಲಿಯಲ್ಲಿ ಬಿಸಿಗಾಳಿ ಶುರುವಾಗಿದ್ದು, 47.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 25 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು. ಬಿಸಿಲು ಹಲವು ರೀತಿಯ ರೋಗಗಳಿಗೆ ಕಾರಣವಾಗುತ್ತದೆ. ಮನುಷ್ಯನ ದೇಹವು ನಿರ್ಜಲೀಕರಣವಾಗುತ್ತದೆ. ಹಣ್ಣಿನ ಜ್ಯೂಸ್ಗಳು, ಮನೆಯಲ್ಲಿಯೇ ತಯಾರಿಸಿದ ಆಹಾರ, ಕಲ್ಲಂಗಡಿ, ಕಿತ್ತಳೆ ಹಣ್ಣು ಸೇವನೆ ಉತ್ತಮ.
ಆದರೆ ಅತಿ ಹೆಚ್ಚು ನೀರು ಸೇವನೆಯಿಂದ ಒಳ್ಳೆಯದಕ್ಕಿಂತ ಕೆಟ್ಟದ್ದೇ ಹೆಚ್ಚಿದೆ. ಹಾಗಾದರೆ ಯಾವ ಪ್ರಮಾಣದಲ್ಲಿ ನೀರು ಕುಡಿಯಬೇಕು ಎಂದು ವೈದ್ಯರು ಹೇಳುತ್ತಾರೆ. ಡಾ. ಹನಿ ಸಾವ್ಲಾ ಹೇಳುವ ಪ್ರಕಾರ, ಮನೆಯೊಳಗೇ ಇದ್ದರೆ ನಿತ್ಯ 8 ರಿಂದ 12 ಲೋಟ ನೀರನ್ನು ಕುಡಿಯಬೇಕು. ಹಾಗೆಯೇ ಮನೆಯಿಂದ ಹೊರಗಿದ್ದರೆ ನಿಮಗೆ ಬಾಯಾರಿಕೆಯಾದಾಗ ನೀರು ಕುಡಿಯಿರಿ.
ಒಂದೊಮ್ಮೆ ವ್ಯಕ್ತಿಗೆ ಹೃದಯ ಅಥವಾ ಕಿಡ್ನಿ ಸಮಸ್ಯೆ ಇದ್ದರೆ 8 ರಿಂದ 12 ಲೋಟ ನೀರು ಕುಡಿಯುವ ಮೊದಲು ವೈದ್ಯರನ್ನು ಭೇಟಿಯಾಗಬೇಕು. ಅಂಥವರು ನೀರನ್ನು ಕುಡಿಯುವಾಗ ತುಂಬಾ ಎಚ್ಚರಿಕೆಯಿಂದಿರಬೇಕು, ಹೆಚ್ಚು ನೀರು ಕುಡಿಯುವುದರಿಂದ ಕಿಡ್ನಿ ಮೇಲೆ ಒತ್ತಡ ಉಂಟಾಗಬಹುದು. ಅದರಿಂದ ಕಾಲಿನಲ್ಲಿ ಊತ, ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು.
ನಿತ್ಯ ಹೆಚ್ಚಿನ ನೀರು ಕುಡಿಯುವುದರಿಂದಾಗುವ ಪರಿಣಾಮ -ವಾಕರಿಕೆ -ಕಾಲುಗಳಲ್ಲಿ ಊತ -ಸುಸ್ತಾಗುವಿಕೆ -ತಲೆ ನೋವು
ಅಪೆಂಡಿಸೈಟಿಸ್ ಹೊಟ್ಟೆ ಉಬ್ಬರಕ್ಕೆ ಕಾರಣವಾಗುತ್ತದೆ. ಬಿಸಿ ನೀರನ್ನು ಸೇವಿಸುವುದು ಸಹ ಪ್ರಯೋಜನಕಾರಿ. ಬಿಸಿ ನೀರು ಕುಡಿಯುವುದರಿಂದ ಹೊಟ್ಟೆನೋವು ಕೂಡ ನಿವಾರಣೆಯಾಗುತ್ತದೆ, ಆದರೆ ಹೆ2 ಚ್ಚು ಬಿಸಿ ನೀರು ಕುಡಿಯದಂತೆ ಎಚ್ಚರ ವಹಿಸಬೇಕು. ಇದು ನಿಮ್ಮ ಅಸ್ವಸ್ಥತೆಯನ್ನು ಹೆಚ್ಚಿಸಬಹುದು.
ನಿರ್ಜಲೀಕರಣವು (Dehydration) ಮೂತ್ರಪಿಂಡದ ಕಲ್ಲುಗಳಿಗೆ ಪ್ರಮುಖ ಕಾರಣಗಳಲ್ಲಿ ಒಂದು. ಕಡಿಮೆ ನೀರು ಮೂತ್ರವನ್ನು ಕೇಂದ್ರೀಕರಿಸುತ್ತದೆ ಮತ್ತು ಅನೇಕ ಖನಿಜಗಳು ಮತ್ತು ಲವಣಗಳು ಒಗ್ಗೂಡಲು ಅನುವು ಮಾಡಿಕೊಡುತ್ತದೆ. ಇದರಿಂದ ಕಿಡ್ನಿ ಸ್ಟೋನ್ ಸಮಸ್ಯೆ ಕಾಡುತ್ತದೆ.
ಹೆಚ್ಚು ನೀರು ಕುಡಿಯುವುದರಿಂದ, ಕನಿಷ್ಠ ಎಂಟು ಲೋಟಗಳು ದೇಹವು ಹೈಡ್ರೇಟ್ ಆಗಿರುವುದನ್ನು ಖಚಿತಪಡಿಸುತ್ತವೆ ಮತ್ತು ಮೂತ್ರಪಿಂಡದ ಕಲ್ಲುಗಳ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ. ಆದುದರಿಂದ ನೀರನ್ನು ಮಿಸ್ ಮಾಡದೆ ಕುಡಿಯಿರಿ.
ಮೂತ್ರದ ಕಲ್ಲುಗಳು (kidney stones) ಮೂತ್ರ ವ್ಯವಸ್ಥೆಯಲ್ಲಿ ಎಲ್ಲಿಯಾದರೂ ಕಂಡುಬರುವ ಆರೋಗ್ಯ ಸಮಸ್ಯೆ. ಮೂತ್ರಕೋಶದಿಂದ ಮೂತ್ರಪಿಂಡಗಳವರೆಗೆ. ಅನೇಕ ಅಂಶಗಳಿಂದಾಗಿ ಅವು ರೂಪುಗೊಳ್ಳಬಹುದು, ಆದರೆ ಆನುವಂಶಿಕ ಸಂಭಾವ್ಯತೆ ಮತ್ತು ನೀವು ಕುಡಿಯುವ ದ್ರವಗಳ ಪ್ರಮಾಣವೂ ಮೂತ್ರಪಿಂಡದ ಕಲ್ಲುಗಳನ್ನು ಹೊಂದುವ ಅಡೆತಡೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ