ಕಣ್ಣಿನ ಕ್ಯಾನ್ಸರ್​ ಲಕ್ಷಣಗಳೇನು? ಅದನ್ನು ತಡೆಗಟ್ಟುವುದು ಹೇಗೆ?

ಭಾರತದಲ್ಲಿ ಕಣ್ಣಿನ ಕ್ಯಾನ್ಸರ್ ಪ್ರಮಾಣ ಕಡಿಮೆಯಿದೆ. ಈ ರೋಗವನ್ನು ನಿಯಂತ್ರಿಸಲು ಆರಂಭಿಕ ಪತ್ತೆ ಬಹಳ ಮುಖ್ಯವಾಗಿದೆ. ಅನೇಕ ರೋಗಿಗಳಿಗೆ ಕಣ್ಣಿನ ಕ್ಯಾನ್ಸರ್​ನ ಲಕ್ಷಣಗಳ ಬಗ್ಗೆ ಮಾಹಿತಿ ಇರದ ಕಾರಣ ಅವರು ಅದನ್ನು ನಿರ್ಲಕ್ಷ್ಯ ಮಾಡುತ್ತಾರೆ.

ಕಣ್ಣಿನ ಕ್ಯಾನ್ಸರ್​ ಲಕ್ಷಣಗಳೇನು? ಅದನ್ನು ತಡೆಗಟ್ಟುವುದು ಹೇಗೆ?
ಕಣ್ಣಿನ ಕ್ಯಾನ್ಸರ್
Follow us
|

Updated on:Dec 21, 2023 | 6:51 PM

ಕಣ್ಣಿನ ಕ್ಯಾನ್ಸರ್ ಎನ್ನುವುದು ಕಣ್ಣುಗಳಲ್ಲಿ ಅಥವಾ ಅದರ ಸುತ್ತಲೂ ಆರೋಗ್ಯಕರ ಕೋಶಗಳು ಅನಿಯಂತ್ರಿತವಾಗಿ ಬೆಳೆಯುವ ಸ್ಥಿತಿಯಾಗಿದ್ದು, ಇದು ಕ್ರಮೇಣ ಗೆಡ್ಡೆಯನ್ನು ರೂಪಿಸುತ್ತದೆ. ಕೆಲವೊಮ್ಮೆ ಇದು ಹಾನಿಕರವಲ್ಲದೇ ಇರಬಹುದು. ಕೆಲವೊಮ್ಮೆ ಮಾರಣಾಂತಿಕ ಗೆಡ್ಡೆಗಳು ಕೂಡ ಬೆಳೆಯಬಹುದು. ಇನ್ನು ಕೆಲವೊಮ್ಮೆ ಇದು ದೇಹದ ವಿವಿಧ ಭಾಗಗಳಿಗೆ ಹರಡಬಹುದು. ಭಾರತದಲ್ಲಿ ಕಣ್ಣಿನ ಕ್ಯಾನ್ಸರ್ ಪ್ರಮಾಣ ಕಡಿಮೆಯಿದೆ. ಈ ರೋಗವನ್ನು ನಿಯಂತ್ರಿಸಲು ಆರಂಭಿಕ ಪತ್ತೆ ಬಹಳ ಮುಖ್ಯವಾಗಿದೆ. ಅನೇಕ ರೋಗಿಗಳಿಗೆ ಕಣ್ಣಿನ ಕ್ಯಾನ್ಸರ್​ನ ಲಕ್ಷಣಗಳ ಬಗ್ಗೆ ಮಾಹಿತಿ ಇರದ ಕಾರಣ ಅವರು ಅದನ್ನು ನಿರ್ಲಕ್ಷ್ಯ ಮಾಡುತ್ತಾರೆ. ಕೊನೆಗೆ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಾಗ ಮಾತ್ರ ವೈದ್ಯರ ಬಳಿ ಹೋಗುತ್ತಾರೆ.

ಗುರುಗ್ರಾಮ್‌ನ ಆಂಕ್ವೆಸ್ಟ್ ಲ್ಯಾಬೊರೇಟರೀಸ್ ಲಿಮಿಟೆಡ್‌ನ ಮಾಲಿಕ್ಯುಲರ್ ಬಯಾಲಜಿ ನ್ಯಾಷನಲ್ ರೆಫರೆನ್ಸ್ ಲ್ಯಾಬ್‌ನ ಮುಖ್ಯಸ್ಥ ಡಾ. ವಿನಯ್ ಭಾಟಿಯಾ ಅವರ ಪ್ರಕಾರ, ಕಣ್ಣಿನ ಕ್ಯಾನ್ಸರ್ ಅನ್ನು ನಿಯಂತ್ರಿಸಲು ಆರಂಭಿಕ ಪತ್ತೆ ಅತ್ಯಗತ್ಯ. ಕಣ್ಣಿನ ಕ್ಯಾನ್ಸರ್‌ನ ಸಾಮಾನ್ಯ ಲಕ್ಷಣಗಳೆಂದರೆ ಮಸುಕಾದ ದೃಷ್ಟಿ, ಭಾಗಶಃ ಅಥವಾ ಸಂಪೂರ್ಣ ದೃಷ್ಟಿ ಕಳೆದುಕೊಳ್ಳುವುದು, ಬೆಳಕನ್ನು ನೋಡಲಾಗದೆ ಇರುವುದು, ಕಣ್ಣಿನೊಳಗಿನ ಡಾರ್ಕ್ ಪ್ಯಾಚ್, ಒಂದು ಕಣ್ಣು ಉಬ್ಬುವುದು, ಕಣ್ಣುರೆಪ್ಪೆಗಳ ಮೇಲೆ ಉಂಡೆಗಳು ಉಂಟಾಗುವುದು, ಕಣ್ಣುಗಳಲ್ಲಿ ಅಥವಾ ಸುತ್ತಲೂ ನೋವು ಕಾಣಿಸಿಕೊಳ್ಳುವುದು. ಈ ಲಕ್ಷಣಗಳು ಕಂಡುಬಂದರೆ ಜನರು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಇದನ್ನೂ ಓದಿ: ನಿದ್ರೆ ಮಾಡಲು ಪರದಾಡುತ್ತೀರಾ?; ನಿದ್ರಾಹೀನತೆ ಕ್ಯಾನ್ಸರ್​ಗೂ ಕಾರಣವಾದೀತು ಎಚ್ಚರ!

ಕಣ್ಣಿನ ಕ್ಯಾನ್ಸರ್ ಕೆಲವು ಅಪಾಯಕಾರಿ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಸೆಲ್ಯುಲಾರ್ ಡಿಎನ್‌ಎ, ವಿಲಕ್ಷಣ ಮೋಲ್‌ಗಳು, ಯುವಿಯಾ ಅಥವಾ ಐರಿಸ್‌ನಲ್ಲಿ ಅಸಹಜ ಕಂದು ಕಲೆಗಳು ಮತ್ತು ಕೆಲವು ಕಣ್ಣಿನ ಬಣ್ಣಗಳು ಸೇರಿದಂತೆ ಈ ಅಂಶಗಳು ಕೆಲವು ರೀತಿಯ ಕಣ್ಣಿನ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ಸಂಶೋಧಕರು ಅನ್ವೇಷಣೆ ಮಾಡುತ್ತಿದ್ದಾರೆ.

ಕಣ್ಣಿನ ಕ್ಯಾನ್ಸರ್ ಚಿಕಿತ್ಸೆಯ ಆಯ್ಕೆಗಳಲ್ಲಿ ಶಸ್ತ್ರಚಿಕಿತ್ಸೆ, ವಿಕಿರಣ ಚಿಕಿತ್ಸೆ, ಲೇಸರ್ ಚಿಕಿತ್ಸೆ ಮತ್ತು ಕೀಮೋಥೆರಪಿಗಳು ಇವೆ. ಶಸ್ತ್ರಚಿಕಿತ್ಸೆಯು ಗೆಡ್ಡೆಯ ಪ್ರಕಾರ, ಗಾತ್ರ ಮತ್ತು ವ್ಯಾಪ್ತಿಯನ್ನು ಅವಲಂಬಿಸಿರುತ್ತದೆ. ವಿಕಿರಣ ಚಿಕಿತ್ಸೆಯು ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಹೆಚ್ಚಿನ ಶಕ್ತಿಯ X- ರೇಗಳನ್ನು ಬಳಸುತ್ತದೆ. ಆದರೆ ಲೇಸರ್ ಚಿಕಿತ್ಸೆಯು ಗೆಡ್ಡೆಯನ್ನು ಬಿಸಿಮಾಡಲು ಮತ್ತು ಸುಡಲು ಅತಿಗೆಂಪು ಬೆಳಕನ್ನು ಬಳಸುತ್ತದೆ. ಕ್ಯಾನ್ಸರ್ ದೇಹದ ಇತರ ಭಾಗಗಳಿಗೆ ಹರಡಿದರೆ ಕೀಮೋಥೆರಪಿ ಮಾಡಬೇಕಾಗಬಹುದು. ಆದರೆ ಕಣ್ಣಿನ ಕ್ಯಾನ್ಸರ್ ಇತರ ರೀತಿಯ ಕ್ಯಾನ್ಸರ್​ಗಿಂತ ಕಡಿಮೆ ಅಪಾಯಕಾರಿಯಾಗಿದೆ ಎಂದು ವೈದ್ಯರು ತಿಳಿಸುತ್ತಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:38 pm, Thu, 21 December 23

ತಾಜಾ ಸುದ್ದಿ
ರಸ್ತೆಯಲ್ಲಿ ತಳ್ಳುಗಾಡಿ ಇಟ್ಟಿದ್ದಕ್ಕೆ ಗಲಾಟೆ: ವ್ಯಾಪಾರಿ ಮೇಲೆ ಪಿಸಿ ಹಲ್ಲೆ
ರಸ್ತೆಯಲ್ಲಿ ತಳ್ಳುಗಾಡಿ ಇಟ್ಟಿದ್ದಕ್ಕೆ ಗಲಾಟೆ: ವ್ಯಾಪಾರಿ ಮೇಲೆ ಪಿಸಿ ಹಲ್ಲೆ
ಮೆಟ್ರೋದಲ್ಲಿ ಪರ್ಸ್ ಕದಿಯುವಾಗ ಸಿಕ್ಕಿಬಿದ್ದ ಕಳ್ಳನಿಗೆ ಥಳಿಸಿದ ಪ್ರಯಾಣಿಕರು
ಮೆಟ್ರೋದಲ್ಲಿ ಪರ್ಸ್ ಕದಿಯುವಾಗ ಸಿಕ್ಕಿಬಿದ್ದ ಕಳ್ಳನಿಗೆ ಥಳಿಸಿದ ಪ್ರಯಾಣಿಕರು
ನೀರಲ್ಲಿ ಕಾರು ಕೊಚ್ಚಿಹೋದರೂ ಅದರಲ್ಲಿದ್ದ ನಾಲ್ವರು ಬದುಕುಳಿದಿದ್ದು ಪವಾಡ
ನೀರಲ್ಲಿ ಕಾರು ಕೊಚ್ಚಿಹೋದರೂ ಅದರಲ್ಲಿದ್ದ ನಾಲ್ವರು ಬದುಕುಳಿದಿದ್ದು ಪವಾಡ
ನಡುರಸ್ತೆಯಲ್ಲೇ ಚೂಪಾದ ಆಯುಧದಿಂದ ಥಳಿಸಿ ಕೊಂದ ಜನರು; ವಿಡಿಯೋ ವೈರಲ್
ನಡುರಸ್ತೆಯಲ್ಲೇ ಚೂಪಾದ ಆಯುಧದಿಂದ ಥಳಿಸಿ ಕೊಂದ ಜನರು; ವಿಡಿಯೋ ವೈರಲ್
ಪ್ರತಾಪ್ ಕುಡಿತದ ದಾಸನಾಗಿದ್ದ, ಮಕ್ಕಳಿಲ್ಲದ ಕೊರಗು ಕಾಡುತಿತ್ತು: ಪಾಟೀಲ್
ಪ್ರತಾಪ್ ಕುಡಿತದ ದಾಸನಾಗಿದ್ದ, ಮಕ್ಕಳಿಲ್ಲದ ಕೊರಗು ಕಾಡುತಿತ್ತು: ಪಾಟೀಲ್
ಜು.12ಕ್ಕೆ ದರ್ಶನ್ ನಟನೆಯ ‘ಶಾಸ್ತ್ರಿ’ ಮರು ಬಿಡುಗಡೆ; ಏನಿದು ಪ್ಲ್ಯಾನ್?
ಜು.12ಕ್ಕೆ ದರ್ಶನ್ ನಟನೆಯ ‘ಶಾಸ್ತ್ರಿ’ ಮರು ಬಿಡುಗಡೆ; ಏನಿದು ಪ್ಲ್ಯಾನ್?
ಉಡುಪಿಯಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆಯ ವಿಡಿಯೋ ವೈರಲ್
ಉಡುಪಿಯಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆಯ ವಿಡಿಯೋ ವೈರಲ್
ರಷ್ಯಾಗೆ ಆಗಮಿಸಿದ ಮೋದಿಗೆ ಭಾರತೀಯರಿಂದ ನೃತ್ಯದ ಮೂಲಕ ಅದ್ದೂರಿ ಸ್ವಾಗತ
ರಷ್ಯಾಗೆ ಆಗಮಿಸಿದ ಮೋದಿಗೆ ಭಾರತೀಯರಿಂದ ನೃತ್ಯದ ಮೂಲಕ ಅದ್ದೂರಿ ಸ್ವಾಗತ
ಮಹಾರಾಷ್ಟ್ರ: ಉಕ್ಕಿದ ಹಿರಣ್ಯಕೇಶಿ ನದಿ, ಬೆಳಗಾವಿ ಗಡಿಭಾಗಕ್ಕೆ ಹರಿದ ನೀರು
ಮಹಾರಾಷ್ಟ್ರ: ಉಕ್ಕಿದ ಹಿರಣ್ಯಕೇಶಿ ನದಿ, ಬೆಳಗಾವಿ ಗಡಿಭಾಗಕ್ಕೆ ಹರಿದ ನೀರು
ದರ್ಶನ್​ರನ್ನು ನೋಡಲು ವಕೀಲನ ಜತೆ ಸೆಂಟ್ರಲ್ ಜೈಲಿಗೆ ಬಂದ ನಿರ್ಮಾಪಕ ಕೆ ಮಂಜು
ದರ್ಶನ್​ರನ್ನು ನೋಡಲು ವಕೀಲನ ಜತೆ ಸೆಂಟ್ರಲ್ ಜೈಲಿಗೆ ಬಂದ ನಿರ್ಮಾಪಕ ಕೆ ಮಂಜು