ರಾತ್ರಿ ಬೇಗ ಊಟ ಮಾಡುವುದರಿಂದ ಆರೋಗ್ಯದಲ್ಲಿ 5 ಪ್ರಯೋಜನಗಳನ್ನು ಪಡೆಯಿರಿ

ರಾತ್ರಿ ಬೇಗ ಊಟ ಮಾಡುವುದರಿಂದ ಆರೋಗ್ಯದಲ್ಲಿ 5 ಪ್ರಯೋಜನಗಳನ್ನು ಪಡೆಯಿರಿ
ರಾತ್ರಿ ಬೇಗ ಊಟ ಮಾಡುವುದರಿಂದ ಆರೋಗ್ಯದಲ್ಲಿ 5 ಪ್ರಯೋಜನಗಳನ್ನು ಪಡೆಯಿರಿ

ಆರೋಗ್ಯ ಚೆನ್ನಾಗಿರಲು ಮತ್ತು ನಾವು ಶಕ್ತಿಯುತವಾಗಿರಲು ರಾತ್ರಿ 7:30ರವೊಳಗೆ ಊಟ ಮಾಡಬೇಕು. ಸಮಯಕ್ಕೆ ಸರಿಯಾಗಿ ರಾತ್ರಿ ಊಟ ಮಾಡುವುದರಿಂದ ಆರೋಗ್ಯ ಸುಧಾರಿಸುತ್ತದೆ.

shruti hegde

| Edited By: sandhya thejappa

May 10, 2021 | 4:50 PM

ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸುವುರಿಂದ ಉತ್ತಮ ಅರೋಗ್ಯವನ್ನು ಪಡೆಯಬಹುದು. ದಿನವಿಡೀ ಕೆಲಸ ಮಾಡಿ ದಣಿದಿರುವುದರಿಂದ, ಹಾಗೂ ದೀರ್ಘಕಾಲವರೆಗೆ ಹಸಿದುಕೊಂಡಿರುವುದರಿಂದ ಊಟದ ಸಮಯ ಆದತಕ್ಷಣ ಹೆಚ್ಚು ಸಮಯ ಕಾಯಲು ಸಾಧ್ಯವಿಲ್ಲ. ಆದರೆ ರಾತ್ರಿಯ ವೇಳೆಯ ಊಟದಲ್ಲಿ ನಾವು ಆರಾಮಾಗಿ ಕೂತು ಊಟ ಮಾಡಲು ಬಯಸುತ್ತೇವೆ ಮತ್ತು ವಿವಿಧ ಖಾದ್ಯಗಳೊಡನೆ ಊಟ ಮಾಡಲು ಹೆಚ್ಚು ಆಸೆಪಡುತ್ತೇವೆ.

ರಾತ್ರಿ ಊಟವನ್ನು ತಡವಾಗಿ ಮಾಡುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಆರೋಗ್ಯ ಚೆನ್ನಾಗಿರಲು ಮತ್ತು ನಾವು ಶಕ್ತಿಯುತವಾಗಿರಲು ರಾತ್ರಿ 7:30ರವೊಳಗೆ ಊಟ ಮಾಡಬೇಕು. ಸಮಯಕ್ಕೆ ಸರಿಯಾಗಿ ರಾತ್ರಿ ಊಟ ಮಾಡುವುವರಿಂದ ಆರೋಗ್ಯ ಸುಧಾರಿಸುತ್ತದೆ ಮತ್ತು ಅನಾರೋಗ್ಯದಿಂದ ಮುಕ್ತಿ ಕಾಣಬಹುದಾಗಿದೆ. ಹಾಗಾದರೆ ರಾತ್ರಿ ಬೇಗ ಊಟ ಮಾಡುವುದರಿಂದ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.

ಜೀರ್ಣಕ್ರಿಯೆ ಸುಧಾರಿಸುತ್ತದೆ ನೀವು ಒಮ್ಮೆ ಮಲಗಿದ ನಂತರದಲ್ಲಿ ತಿಂದ ಅಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಅದ್ದರಿಂದ ಮಲಗುವ ಎರಡರಿಂದ ಮೂರು ಗಂಟೆಯ ಮುಂಚೆಯೇ ಊಟ ಮಾಡುವುದು ಉತ್ತಮ. ಇದರಿಂದ ಆಹಾರವು ಸರಿಯಾಗಿ ಜೀರ್ಣವಾಗಲು ಸಹಾಯವಾಗುತ್ತದೆ.

ಹೃದಯದ ಆರೊಗ್ಯವನ್ನು ಸುಧಾರಿಸುತ್ತದೆ ತಡರಾತ್ರಿ ಊಟ ಮಾಡುವುದರಿಂದಾಗಿ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಕೊಬ್ಬಿನಾಮ್ಲಗಳು ಉತ್ಪತ್ತಿಯಾಗುತ್ತದೆ. ಇದರಿಂದ ಹೃದಯರೋಗ, ಹೃದಯಾಘಾತ ಉಂಟಾಗುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ತಡ ಮಾಡದೇ ಬಹುಬೆಗ ರಾತ್ರಿ ಊಟವನ್ನು ಮಾಡುವುದರಿಂದ ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳಿಂದ ದೂರವಿರಬಹುದು.

ದೇಹದ ತೂಕ ಕಳೆಯಲು ಸಹಾಯಕ ಸರಿಯಾದ ಸಮಯಕ್ಕೆ ಊಟ ಮಾಡುವುದರಿಂದ ಆಹಾರ ಸರಿಯಾಗಿ ಜೀರ್ಣವಾಗಲು ಸಹಾಯವಾಗುತ್ತದೆ. ತಿಂದ ಆಹಾರದಲ್ಲಿನ ಪೌಷ್ಠಿಕಾಂಶಗಳು ದೇಹಕ್ಕೆ ಸರಿಯಾಗಿ ಹಿಡಿಯುತ್ತದೆ. ಚಯಾಪಚಯ ಕ್ರಿಯೆ ಸರಿಯಾಗಿ ನಡೆಯುತ್ತದೆ. ಇದರಿಂದ ಬೊಜ್ಜು ನಿಯಂತ್ರಿಸಬಹುದು. ದೇಹದಲ್ಲಿ ತೂಕವನ್ನು ಕಳೆಯಲು ಸಹಾಯಕವಾಗುತ್ತದೆ.

ಮಧುಮೇಹದಂತಹ ಕಾಯಿಲೆಯಿಂದ ದೂರವಿರಬಹುದು ಮಧುಮೇಹ ದೇಹದಲ್ಲಿ ಗ್ಲುಕೋಸ್​ ಪದಾರ್ಥದ ನಿಯಂತ್ರಣ ವ್ಯವಸ್ಥೆಯ ದೋಷಗಳಿಂದ ಉಂಟಾಗುವ ಒಂದು ಕಾಯಿಲೆ. ಹೀಗಿರುವಾಗ ಸರಿಯಾದ ಸಮಯಕ್ಕೆ ಊಟ ಮಅಡುವುದರಿಂದ ಮಧು ಮೇಹದಂತಹ ಕಾಯಿಲೆಗಳು ಬಾರದಂತೆ ನಿಯಂತ್ರಿಸಬಹುದು.

ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ ನೀವು ತಡವಾಗಿ ಅಹಾರಸೇವಿಸಿದರೆ ಮಲಗುವ ಸಮಯದಲ್ಲಿ ದೇಹದಲ್ಲಿ ಆಹಾರ ಜೀರ್ಣವಾಗಲು ಪ್ರಾರಂಭಿಸುತ್ತದೆ. ಇದರಿಂದ ನಿದ್ದೆ ಬಾರದ ಪರಿಸ್ಥಿತಿ ಎದುರಾಗುತ್ತದೆ. ಹಾಗಿರುವಾಗ ಬೇಗ ಊಟ ಮಾಡಿದರೆ ಮಲಗುವ ವೇಳೆ ಬರುವಷ್ಟರಲ್ಲಿ ಆಹಾರ ಸಂಪೂರ್ಣವಾಗಿ ಜೀರ್ಣವಾಗಿರುತ್ತದೆ. ಆಗ ಆರೋಗ್ಯ ಸುಧಾರಿಸಲು ಸಾಧ್ಯ. ಮತ್ತು ನಿದ್ದೆ ಚೆನ್ನಾಗಿ ಬರುತ್ತದೆ.

ಇದನ್ನೂ ಓದಿ: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನಂದಿನಿ ಆಯುರ್ವೇದಿಕ್​ ಹಾಲು; ಕೆಎಂಎಫ್​ನಿಂದ ಹೊಸ ಉತ್ಪನ್ನಗಳ ಬಿಡುಗಡೆ

Follow us on

Related Stories

Most Read Stories

Click on your DTH Provider to Add TV9 Kannada