ಬಿಸಿಲಿನಿಂದ ಚರ್ಮ ರಕ್ಷಿಸಲು ಸ್ವದೇಶೀ ಉಪಾಯ; ಖರ್ಚಿಲ್ಲದೇ ಮನೆಯಲ್ಲೇ ಅನುಸರಿಸಲು ಇಲ್ಲಿದೆ ಟಿಪ್ಸ್

guruganesh bhat

guruganesh bhat | Edited By: Ayesha Banu

Updated on: Apr 12, 2021 | 6:47 AM

ಏಸಿಯೂ ಬೇಡ ಫ್ಯಾನೂ ಬೇಡ. ಕೇವಲ ಈ ವಸ್ತುಗಳಿದ್ದರೆ ಸಾಕು. ಕರೆಂಟ್ ಇಲ್ಲದೆ ಫ್ಯಾನು, ಏಸಿ ಹಚ್ಚಲಾಗದೇ ಬಸವಳಿಯುತ್ತ ಇರುವ ನಿಮ್ಮ ಚರ್ಮವನ್ನು ಉಲ್ಲಾಸದಿಂದ ನರ್ತಿಸುವಂತೆ ಮಾಡಬಹುದು. ಕಡು ಬಿಸಿಲಿನ ಸಂತ್ರಸ್ತ ಚರ್ಮಕ್ಕೆ ಸೂಕ್ತ ಮಾರ್ಗೋಪಾಯಗಳ ಮೂಲಕ ಉತ್ತಮ ಯೋಜನೆಯೊಂದರ ಫಲಾನುಭವಿಯನ್ನಾಗಿ ಮಾಡಬಹುದು.

ಬಿಸಿಲಿನಿಂದ ಚರ್ಮ ರಕ್ಷಿಸಲು ಸ್ವದೇಶೀ ಉಪಾಯ; ಖರ್ಚಿಲ್ಲದೇ ಮನೆಯಲ್ಲೇ ಅನುಸರಿಸಲು ಇಲ್ಲಿದೆ ಟಿಪ್ಸ್
ಬಿಸಿಲಿಗೆ ಏನು ಕುಡಿದರೆ ಉತ್ತಮ?

ಬೇಸಿಗೆ ಬಂದೇ ಬಿಟ್ಟಿದೆ. ಕಡು ಉರಿಯ ಬೇಸಿಗೆಯಲ್ಲಿ ತಾಪಮಾನವೇ ಅತಿ ದೊಡ್ಡ ಸಮಸ್ಯೆ. ಬಿಸಿಲಿನಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಈ ಕಾಲದ ಅತಿ ದೊಡ್ಡ ಟಾಸ್ಕ್. ಈ ಟಾಸ್ಕ್​ನಲ್ಲಿ ಗೆಲ್ಲದೇ ಇರಲು ಬಯಸದವರಿಲ್ಲ. ಎಲ್ಲರಿಗೂ ಅವರವರ ತ್ವಚೆಯನ್ನು ಕೋಮಲವಾಗಿಯೇ ಇಟ್ಟುಕೊಳ್ಳಬೇಕೆಂಬ ಹಂಬಲ. ಅದಕ್ಕಾಗಿಯೇ ನಾನಾ ನಮೂನೆಯ ಪ್ರಯತ್ನಗಳಲ್ಲಿ ನಿರತರಾಗುತ್ತೇವೆ. ಒಂದಿಷ್ಟು ಹಳೆಯ ವಿಧಾನಗಳಾದರೇ, ದಿನೇದಿನೇ ಹುಟ್ಟಿಕೊಳ್ಳುವ ಹೊಸ ವಿಧಾನಗಳು ಇನ್ನೊಂದೆಡೆ. ಹಾಗಾದರೆ ಯಾವೆಲ್ಲಾ ವಿಧಾನಗಳಿಂದ ನಮ್ಮ ತ್ವಚೆಯ ಕಾಂತಿಯನ್ನು ಜತನದಿಂದ ಕಾದುಕೊಳ್ಳಬಹುದು ಎಂದು ನೋಡೋಣ.

ಏಸಿಯೂ ಬೇಡ ಫ್ಯಾನೂ ಬೇಡ. ಕೇವಲ ಈ ವಸ್ತುಗಳಿದ್ದರೆ ಸಾಕು. ಕರೆಂಟ್ ಇಲ್ಲದೆ ಫ್ಯಾನು, ಏಸಿ ಹಚ್ಚಲಾಗದೇ ಬಸವಳಿಯುತ್ತ ಇರುವ ನಿಮ್ಮ ಚರ್ಮವನ್ನು ಉಲ್ಲಾಸದಿಂದ ನರ್ತಿಸುವಂತೆ ಮಾಡಬಹುದು. ಕಡು ಬಿಸಿಲಿನ ಸಂತ್ರಸ್ತ ಚರ್ಮಕ್ಕೆ ಸೂಕ್ತ ಮಾರ್ಗೋಪಾಯಗಳ ಮೂಲಕ ಉತ್ತಮ ಯೋಜನೆಯೊಂದರ ಫಲಾನುಭವಿಯನ್ನಾಗಿ ಮಾಡಬಹುದು.

ತಾಜಾ ಸುದ್ದಿ

ಲಸ್ಸಿ ಲಸ್ಸಿ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಲಸ್ಸಿ ಬಹು ಪುರಾತನ ಕಾಲದಿಂದಲೂ ನಮ್ಮ ಆಹಾರದಲ್ಲಿ ಅಂತರ್ಗತವಾಗಿದೆ. ಹೇಗೆಂದು ಕೇಳಿದಿರಾ? ಮಜ್ಜಿಗೆ ಮೊಸರು ನಮ್ಮ ಆಹಾರದಲ್ಲೇ ಇದ್ದೇ ಇದೇ ತಾನೆ. ಮಜ್ಜಿಗೆ ನೀರು ಕುಡಿಯುತ್ತ ನಾವು ಬೇಸಿಗೆಯನ್ನು ಕಳೆಯುತ್ತಿದ್ದೆವು. ಸಾಂಪ್ರದಾಯಿಕವಾಗಿಯೇ ನಾವು ಮಜ್ಜಿಗೆ ಪ್ರಿಯರೇ. ಹಾಗೆಯೇ ಮಜ್ಜಿಗೆ ಕುಡಿಯುವುದರಿಂದ ನಮ್ಮ ಚರ್ಮವೂ ಪ್ರಜ್ವಲ ಕಾಂತಿ ಹೊಂದಿರುತ್ತೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ತಾನೇ. ಹೆಚ್ಚು ಮಜ್ಜಿಗೆ ಕುಡಿಯುತ್ತ ನಮ್ಮ ಚರ್ಮದ ಆರೋಗ್ಯವನ್ನು ಕಾಪಾಡೋಣ. ಜತೆಗೆ ಲಸ್ಸಿಯನ್ನು ಹೆಚ್ಚೆಚ್ಚು ಕುಡಿಯೋಣ. ಲಸ್ಸಿಗೂ ನಮ್ಮ ಚರ್ಮವನ್ನು ಬಿಸಿಲಿನಿಂದ ಕಾಪಾಡುವ ಶಕ್ತಿಯಿದೆ.

ಜೀರಿಗೆ-ಒಗ್ಗರಣೆ ಸೊಪ್ಪಿನ ಮಜ್ಜಿಗೆ ಮನೆಯ ಮಜ್ಜಿಗೆ ಕಪಾಟಿನಿಂದ ಮಜ್ಜಿಗೆ ತೆಗೆಯಿರಿ. ಮಜ್ಜಿಗೆಗೆ ಒಂದಿಷ್ಟು ನೀರು ಹೊಯ್ಯಿರಿ. ಆ ಮಜ್ಜಿಗೆ ನೀರಿನಿಂದ ಆದ ತೆಳ್ಳನೆಯ ಪಾನೀಯಕ್ಕೆ ಒಂದಿಷ್ಟು ಜೀರಿಗೆ ಮತ್ತು ಬೇವಿನ ಸೊಪ್ಪು ಸೇರಿಸಿ. ಈ ಪಾನೀಯ ಎಂದರೆ ಚರ್ಮದ ಜೀವಕೋಶಗಳಿಗೆ ತುಂಬಾನೇ ಖುಷಿಯಂತೆ. ನೀವು ಈ ಪಾನೀಯವನ್ನು ಬೇಸಿಗೆಯಲ್ಲಿ ಹೆಚ್ಚೆಚ್ಚು ಕುಡಿದಷ್ಟೂ ಚರ್ಮ ಕಾಂತಿಯುತ ಮತ್ತು ಸತ್ವಯುತವಾಗಿ ಇರುತ್ತದಂತೆ.

ನಿಂಬೆ ಹಣ್ಣಿನ ಪಾನಕ ನಿಂಬೆ ಹಣ್ಣು ಯಾರಿಗೂ ಗೊತ್ತಿಲ್ಲದ ಹಣ್ಣೇನಲ್ಲ. ಅದು ತರಕಾರಿಯೋ ಹಣ್ಣೋ ಎಂಬುದು ಬೇರೆಯದೇ ವಿಷಯ. ನಿಂಬೆ ಹಣ್ಣಿನ ರಸವನ್ನು ನೀರಿಗೆ ಸೇರಿಸಿ. ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಿ. ಇದೀಗ ಭೂಮಿಯ ಮೇಲಿನ ಅತ್ಯುತ್ತಮ ಪೇಯವೊಂದು ನಿಮ್ಮೆದುರಿಗಿದೆ. ಗುಟುಕು ಗುಟುಕನ್ನೂ ಹೀರುತ್ತಾ ಕುಡಿಯಿರಿ. ನೋಡಿ, ನಿಮ್ಮ ದೇಹಕ್ಕೆ ರುಚಿಯ ಜತೆಗೆ ನಿಂಬೆಯಲ್ಲಿನ ಸಿ ವಿಟಾಮಿನ್ ಸಹ ಅನಾಯಾಸವಾಗಿ ದೊರೆಯಿತು. ಹೆಚ್ಚು ಖರ್ಚಿಲ್ಲ ಏನಿಲ್ಲ.

ನಿಂಬೆರಸವನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ಅದಕ್ಕೊಂದಿಷ್ಟು ಉಪ್ಪು ಸೇರಿಸಿ ಕುಡಿಯಲೂಬಹುದು. ಇದೂ ಇನ್ನೊಂದು ಅತ್ಯುತ್ತಮ ಪೇಯ.

ಎಳನೀರು ಏನನ್ನು ಮರೆತರೂ ಎಳನೀರನ್ನು ಮರೆಯಂತಿಲ್ಲ ಗೆಳೆಯರೇ. ಎಳನೀರು ಬೇಸಿಗೆಯ ಅತ್ಯುತ್ತಮ ಆಹಾರದಲ್ಲೊಂದು. ಎಳನೀರು ಕುಡಿದು ಒಳಗಿನ ಗಂಜಿ ತಿಂದರಾಯಿತು. ಬಾಯಿಗೂ ಹಿತ, ದೇಹಕ್ಕೂ ಹಿತ. ಎಳನೀರು ಬೆಳೆಯುವ ಮತ್ತು ಮಾರುವವರಿಗೂ ಒಳ್ಳೆಯದು.

ಇದನ್ನೂ ಓದಿ: Health Tips: ಡಯಟ್ ಮಾಡೋಕೆ ಆಗ್ತಿಲ್ಲ ಎಂದು ಚಿಂತೆ ಬೇಡ; ಫಿಟ್​ ಆಗಿ, ಆರೋಗ್ಯಕರವಾಗಿರಲು ಇಷ್ಟೆಲ್ಲ ದಾರಿಗಳಿವೆ ನೋಡಿ..

ಸದಾ ಹೊಳೆಯುತ್ತಿರಲಿ ಮೈಕಾಂತಿ; ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಇಲ್ಲಿವೆ ಸರಳ ಉಪಾಯಗಳು

(5 desi summer 2021 skin care tips in kannada you must read)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada