ವಾಕಿಂಗ್ ಎಂಬುದು ವ್ಯಾಯಾಮದ ಒಂದು ರೂಪವಾಗಿದೆ. ಜನರು ತೂಕ ಕಡಿಮೆ ಮಾಡಿಕೊಳ್ಳಲು ಕೆಲವು ಕಠಿಣ ವ್ಯಾಯಾಮಗಳನ್ನು ಅಥವಾ ಕಠಿಣ ಆಹಾರ ಪದ್ದತಿಯನ್ನು ಹುಡುಕುತ್ತಾರೆ. ಆದರೆ ನಿಮ್ಮ ದಿನನಿತ್ಯ ಜೀವನದಲ್ಲಿ ಸರಳ ವಾಕಿಂಗ್ ದಿನಚರಿಯನ್ನು ಅಳವಡಿಸಿಕೊಳ್ಳುವುದರಿಂದ ಗಮನಾರ್ಹ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ತೂಕ ಇಳಿಸಿಕೊಳ್ಳುವುದರ ಜೊತೆಗೆ ನಿಮ್ಮ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ಬಯಸುತ್ತಿದ್ದರೆ 6-6-6 ಎಂಬ ಸರಳ ರೀತಿಯ ವ್ಯಾಯಾಮದ ದಿನಚರಿಯನ್ನು ಅನುಕರಣೆ ಮಾಡಬಹುದು. ಈ ವಾಕಿಂಗ್ ಮಾದರಿ ನಿಮ್ಮ ಆರೋಗ್ಯಕ್ಕೆ ಹೇಗೆ ಸಹಾಯ ಮಾಡುತ್ತದೆ ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಇದು ನೀವು ಆರೋಗ್ಯವಾಗಿರಲು ಮಾಡಿಕೊಳ್ಳಬಹುದಾದ ಸರಳ ಮತ್ತು ಶಕ್ತಿಯುತ ವಿಧಾನವಾಗಿದೆ. ಇದರರ್ಥ ಬೆಳಿಗ್ಗೆ 6 ಅಥವಾ ಸಂಜೆ 6 ಗಂಟೆಗೆ ಒಟ್ಟು 60 ನಿಮಿಷಗಳ ಕಾಲ ನಡಿಗೆ ಮಾಡುವುದು. ನಿಮ್ಮ ನಡಿಗೆಯ ಪ್ರಯೋಜನಗಳನ್ನು ಮತ್ತಷ್ಟು ಹೆಚ್ಚಿಸಲು, ನಡಿಗೆ ಮಾಡುವ ಮೊದಲು 6 ನಿಮಿಷಗಳ ಅಭ್ಯಾಸ ಮತ್ತು ನಂತರ 6 ನಿಮಿಷಗಳ ಕೂಲ್-ಡೌನ್ ಸೆಷನ್ ಅನ್ನು ಅಳವಡಿಸಿಕೊಳ್ಳಿ ಎಂಬುದಾಗಿದೆ.
ಬೆಳಿಗ್ಗೆ 6 ಗಂಟೆಗೆ ನಡಿಗೆಯನ್ನು ಆರಂಭ ಮಾಡುವುದರಿಂದ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹಲವಾರು ರೀತಿಯ ಪ್ರಯೋಜನಗಳು ಸಿಗುತ್ತದೆ. ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಇದು ಅದ್ಭುತ ಮಾರ್ಗವಾಗಿದೆ, ಅಲ್ಲದೆ ಇದು ಕ್ಯಾಲೊರಿಗಳನ್ನು ಕಡಿಮೆ ಮಾಡಲು ಅನುವು ಮಾಡಿಕೊಡುತ್ತದೆ. ಜೊತೆಗೆ ಬೆಳಗಿನ ಸಮಯದ ನಡಿಗೆಯು ತಾಜಾ, ಶುದ್ಧ ಗಾಳಿಯನ್ನು ತೆಗೆದುಕೊಳ್ಳಲು ಸಹಕಾರಿಯಾಗಿದೆ. ಇದು ಶ್ವಾಸಕೋಶ ಮತ್ತು ಆರೋಗ್ಯಕರ ಉಸಿರಾಟಕ್ಕೆ ಸಹಾಯ ಮಾಡುತ್ತದೆ. ಅಲ್ಲದೆ, ಮುಂಜಾನೆಯ ಶಾಂತಿಯುತ ವಾತಾವರಣ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು ಅದಲ್ಲದೆ ಇದು ಒತ್ತಡ ಮತ್ತು ಆತಂಕವನ್ನು ಕೂಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜರ್ನಲ್ ಆಫ್ ಎನ್ವಿರಾನ್ಮೆಂಟಲ್ ಸೈಕಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, 20 ನಿಮಿಷಗಳ ಕಾಲ, ಹೊರಗಿನ ವಾವರಣದಲ್ಲಿ ನಡೆಯುವುದು, 20 ನಿಮಿಷಗಳ ಕಾಲ ಒಳಾಂಗಣ ಜಾಗದಲ್ಲಿ ನಡೆಯುವುದಕ್ಕಿಂತ ಹೆಚ್ಚು ಪ್ರಯೋಜನಗಳನ್ನು ನೀಡುತ್ತದೆ. ತ್ವರಿತ ನಡಿಗೆಯೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸುವುದು ನಿಮ್ಮ ಮನಸ್ಥಿತಿ, ಶಕ್ತಿಯ ಮಟ್ಟ ಮತ್ತು ಒಟ್ಟಾರೆ ಯೋಗಕ್ಷೇಮಕ್ಕೆ ಪ್ರಯೋಜನಕಾರಿಯಾಗಿದೆ.
ಸಂಜೆ 6 ಗಂಟೆಗೆ ನಡೆಯುವುದು ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ, ವಿಶೇಷವಾಗಿ ಕುಳಿತು ಕೆಲಸ ಮಾಡುವವರಿಗೆ ಒಳ್ಳೆಯದು. ಅಲ್ಲದೆ ಇದು ದಿನವಿಡೀ ಉಂಟಾಗುವ ದೈಹಿಕ ಮತ್ತು ಮಾನಸಿಕ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಚುರುಕಾದ, ಸಂಜೆ ಸಮಯದ ನಡಿಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಉಬ್ಬರವನ್ನು ಕಡಿಮೆ ಮಾಡುತ್ತದೆ ಮತ್ತು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಇದು ರಕ್ತದೊತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ನಿಮ್ಮ ದಿನಚರಿಯಲ್ಲಿ ಸಂಜೆ ಸಮಯದಲ್ಲಿ ನಡಿಗೆ ಮಾಡುವುದನ್ನು ಸೇರಿಸುವ ಮೂಲಕ, ನಿಮ್ಮ ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸಿಕೊಳ್ಳಬಹುದು. ಜರ್ನಲ್ ಆಫ್ ಡಯಾಬಿಟಿಸ್ ಕೇರ್ ನಲ್ಲಿ ಪ್ರಕಟವಾದ ಅಧ್ಯಯನವು ಸಂಜೆಯ ವ್ಯಾಯಾಮವು ತೂಕ ಇಳಿಸಿಕೊಳ್ಳಲು ಮತ್ತು ಹಲವಾರು ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಎಂಬುದನ್ನು ಬಹಿರಂಗ ಪಡಿಸಿದೆ.
ಇದನ್ನೂ ಓದಿ: ಈ 10 ಲಕ್ಷಣಗಳು ಕಂಡು ಬರುತ್ತಿದ್ದರೆ ನೀವು ಅತಿಯಾಗಿ ಸಕ್ಕರೆ ತಿನ್ನುತ್ತಿದ್ದೀರಿ ಎಂದರ್ಥ
ದಿನಕ್ಕೆ 60 ನಿಮಿಷಗಳ ಕಾಲ ವಾಕಿಂಗ್ ಮಾಡುವುದರಿಂದ ಅನೇಕ ರೀತಿಯ ಪ್ರಯೋಜನಗಳನ್ನು ಪಡೆಯಬಹುದು. ಇದು ಹೃದಯವನ್ನು ಬಲಪಡಿಸುವ ಮೂಲಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸಲು ಇದು ಅತ್ಯುತ್ತಮ ಮಾರ್ಗವಾಗಿದೆ. ನಿಯಮಿತ ಚುರುಕಾದ ವಾಕಿಂಗ್ ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ ಮತ್ತು ಮಧುಮೇಹ ಮತ್ತು ಹೃದ್ರೋಗದಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ದಿನಕ್ಕೆ ಒಂದು ಗಂಟೆ ನಡೆಯುವುದು ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಮ್ಮ ಫಿಟ್ನೆಸ್ ನಿಯಮಾವಳಿಯಲ್ಲಿ 60 ನಿಮಿಷಗಳ ನಡಿಗೆಯನ್ನು ಸೇರಿಸುವ ಮೂಲಕ, ನಿಮ್ಮ ಒಟ್ಟಾರೆ ಯೋಗಕ್ಷೇಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಹುದು. ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್ನಲ್ಲಿ ಪ್ರಕಟವಾದ ಅಧ್ಯಯನವು ವಾರಕ್ಕೆ 30- 60 ನಿಮಿಷಗಳ ಕಾಲ ಸ್ನಾಯುಗಳನ್ನು ಬಲಪಡಿಸುವ ಚಟುವಟಿಕೆಗಳು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಿಕೊಟ್ಟಿದೆ.
ವ್ಯಾಯಾಮಕ್ಕೆ ಮೊದಲು ವಾರ್ಮ್ ಅಪ್ ಮುಖ್ಯವಾಗಿದೆ. ಇದು ಕ್ರಮೇಣ ನಿಮ್ಮನ್ನು ಕಠಿಣ ವ್ಯಾಯಾಮಗಳಿಗೆ ಸಿದ್ಧಪಡಿಸುತ್ತದೆ. ಜೊತೆಗೆ ಸ್ನಾಯುಗಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇಂಟರ್ನ್ಯಾಷನಲ್ ಜರ್ನಲ್ ಆಫ್ ಕ್ರಿಯೇಟಿವ್ ರಿಸರ್ಚ್ ಥಾಟ್ಸ್ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಕಂಡುಬರುವಂತೆ, ದೇಹದ ತಾಪಮಾನವು ಸ್ನಾಯುಗಳ ಕಾರ್ಯವನ್ನು ಹೆಚ್ಚಿಸುವ ಮೂಲಕ ಸ್ನಾಯು ನೋವನ್ನು ಕಡಿಮೆ ಮಾಡುತ್ತದೆ ಜೊತೆಗೆ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
ಸಣ್ಣ ನಡಿಗೆಯ ನಂತರ 6 ನಿಮಿಷ ದೇಹವನ್ನು ಕೂಲ್-ಡೌನ್ ಆಗಲು ಬಿಡಿ. ಇದು ಒಟ್ಟಾರೆ ಆರೋಗ್ಯಕ್ಕೆ ಅತ್ಯಗತ್ಯ. ಇದು ನಿಮ್ಮ ದೇಹವನ್ನು ನಿಧಾನವಾಗಿ ವಿಶ್ರಾಂತಿ ಸ್ಥಿತಿಗೆ ತರಲು ಅನುವು ಮಾಡಿಕೊಡುತ್ತದೆ. ಈ ಸಮಯದಲ್ಲಿ, ನಿಮ್ಮ ಹೃದಯ ಬಡಿತ ಮತ್ತು ವೇಗವಾಗಿದ್ದ ಉಸಿರಾಟ ಕ್ರಮೇಣ ನಿಧಾನವಾಗುತ್ತವೆ, ಇದು ದೇಹದ ತಾಪಮಾನವನ್ನು ಸರಿಹೊಂದಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದನ್ನು ನಿಮ್ಮ ವಾಕಿಂಗ್ ದಿನಚರಿಯಲ್ಲಿ ಸೇರಿಸುವ ಮೂಲಕ, ವ್ಯಾಯಾಮದ ಪ್ರಯೋಜನಗಳನ್ನು ಹೆಚ್ಚಿಸಿಕೊಳ್ಳಬಹುದು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:27 pm, Thu, 21 November 24