ಮಳೆಗಾಲದಲ್ಲಿ ನೀವು ಎಂತಹ ಆಹಾರ ಸೇವನೆ ಮಾಡುತ್ತೀರಿ ಎಂಬುದರ ಮೇಲೆ ನಿಮ್ಮ ಆರೋಗ್ಯವನ್ನು ಎಷ್ಟು ಜೋಪಾನಗೊಳಿಸಬಹುದು ಎಂದು ಆಲೋಚಿಸಬಹುದು. ಹೌದು, ಬೇರೆಲ್ಲಾ ಕಾಲಗಳಿಗಿಂತ ಮಳೆಗಾದಲ್ಲಿ ಹೆಚ್ಚು ಎಚ್ಚರಿಕೆವಹಿಸಬೇಕಾಗುತ್ತದೆ, ಹಾಗೆಯೇ ನೀವು ತಿನ್ನುವ ಆಹಾರ, ಕುಡಿಯುವ ನೀರು ಎರಡೂ ತುಂಬಾ ಶುದ್ಧವಿರಬೇಕು.
ವಿಟಮಿನ್ ಸಿಯುಕ್ತ ಹಣ್ಣುಗಳು ನಿಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಮಳೆಗಾಲದಲ್ಲಿ ಡೆಂಗ್ಯೂ, ಕಾಲರಾ ರೀತಿಯ ರೋಗಗಳು ಹೆಚ್ಚು ಕಂಡುಬರುತ್ತವೆ.
ಮಳೆಗಾಲದಲ್ಲಿ ಆಹಾರ ಸೇವನೆಯ ಕುರಿತು ಜಾಗೃತಿ ಅತ್ಯಗತ್ಯ. ಹೊರಗಿನ ತಣ್ಣಗಿನ ವಾತಾವರಣಕ್ಕೆ ಬೆಚ್ಚಗಿನ ತಿಂಡಿ ಬೇಕೆನಿಸಿದರೂ ಅವು ಆರೋಗ್ಯಕಾರಿಯಲ್ಲ. ಯಾವುದೇ ಆರೋಗ್ಯ ಸಮಸ್ಯೆಗಳು ಬಾರದಂತೆ ಆರೋಗ್ಯಕರ ಆಹಾರ ಸೇವನೆಯನ್ನು ಅನುಸರಿಸಬೇಕು. ಮಳೆಗಾಲದಲ್ಲಿ ಹಣ್ಣುಗಳ ಸೇವೆನೆಗೂ ಪ್ರಾಮುಖ್ಯತೆ ನೀಡಬೇಕು. ಮಳೆಗಾಲದಲ್ಲಿ ಸೇವಿಸುವ ಆಹಾರದಲ್ಲಿ ಈ ಹಣ್ಣುಗಳಿಗೆ ಜಾಗವಿರಲಿ.
ಲೀಚಿ ಹಣ್ಣು: ವಿಟಮಿನ್ ಸಿ ಯನ್ನು ಹೊಂದಿರುವ ಈ ಹಣ್ಣು ರೋಗನಿರೋಧಕ ಶಕ್ತಿ ಹೊಂದಿದೆ. ಶೀತ, ನೆಗಡಿಯನ್ನು ತಡೆಯುವಲ್ಲಿ ಇದು ಸಹಾಯಕ ಹಾಗೂ ಚರ್ಮದ ಆರೋಗ್ಯಕ್ಕೆ ಈ ಹಣ್ಣಿನ ರಸ ಪ್ರಯೋಜನಕಾರಿ.
ಚೆರ್ರಿ: ಚೆರ್ರಿ ಹಣ್ಣು ಮಳೆಗಾಲದಲ್ಲಿ ಹೇರಳವಾಗಿರುತ್ತದೆ. ಚೆರ್ರಿ ಹಣ್ಣು ಮಳೆಗಾಲದಲ್ಲಿ ತಿನ್ನಬಹುದಾದ ಹಣ್ಣಾಗಿದ್ದು, ಇದು ಕಡಿಮೆ ಕ್ಯಾಲರಿ ಹೊಂದಿದೆ. ಇದು ಯಥೇತ್ಛ ಪೌಷ್ಟಿಕಾಂಶ, ಜೀವಸತ್ವ ಗಳು ಮತ್ತು ಖನಿಜಾಂಶಗಳಿಂದ ಕೂಡಿದೆ. ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಹಣ್ಣು ಇದಾಗಿದೆ.
ನೇರಳೆ ಹಣ್ಣು: ಇದು ಕಿಡ್ನಿ ಮತ್ತು ಲಿವರ್‌ನ ಆರೋಗ್ಯಕ್ಕೆ ಉತ್ತಮ. ಇದರ ರಸವನ್ನು ನಿಯಮಿತವಾಗಿ ಸೇವಿಸಿದರೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಬಹುದು. ಹೆಚ್ಚು ವಿಟಮಿನ್, ಖನಿಜಾಂಶ ಹೊಂದಿರುವ ನೇರಳೆ ಹಣ್ಣು ಮಳೆಗಾಲದಲ್ಲಿ ಹೇರಳವಾಗಿ ದೊರೆಯುವ ಹಣ್ಣು.
ಮಳೆಗಾಲದಲ್ಲಿ ಎಲ್ಲ ಹಣ್ಣುಗಳು ತಿನ್ನಲು ಸೂಕ್ತವಲ್ಲ. ಶೀತ, ಅನಾರೊಗ್ಯದ ಅಪಾಯ ಹೆಚ್ಚಿರುವುದರಿಂದ ಮಳೆಗಾಲದಲ್ಲಿ ತಿನ್ನಬಹುದಾದ ಹಣ್ಣುಗಳನ್ನು ಮಾತ್ರ ಸೇವಿಸಬೇಕು.
ದಾಳಿಂಬೆ: ಕ್ಯಾನ್ಸರ್, ಹೃದ್ರೋಗದ ವಿರುದ್ಧ ಹೋರಾಡುತ್ತದೆ. ವಿಟಮಿನ್ ಬಿ ಯನ್ನು ಹೊಂದಿರುವ ಇದು ಕೆಂಪು ರಕ್ತ ಕಣಗಳನ್ನು ವೃದ್ಧಿಸುತ್ತದೆ. ಸಮೃದ್ಧ ಪೋಷಕಾಂಶಗಳನ್ನು ಹೊಂದಿರುವ ದಾಳಿಂಬೆ ಮಳೆಗಾಲದಲ್ಲಿ ರೋಗ ಬಾರದಂತೆ ತಡೆಯಲು ಸಹಕಾರಿಯಾಗಿದೆ.
ದಾಳಿಂಬೆ, ಸೇಬುಹಣ್ಣು, ನೇರಳೆ ಹಣ್ಣುಗಳನ್ನು ಹೆಚ್ಚು ಸೇವನೆ ಮಾಡಿ, ಕರಿದ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಬೇಕು. ಎಣ್ಣೆ ಪದಾರ್ಥಗಳನ್ನು ಹೆಚ್ಚು ತಿನ್ನುವುದರಿಂದ ಕೆಮ್ಮು ದೀರ್ಘಕಾಲದವರೆಗೆ ಇರಬಹುದು.
ನೆಲ್ಲಿಕಾಯಿ, ದಾಲ್ಚಿನ್ನಿ, ಅರಿಶಿನ ಮತ್ತು ಕರಿಮೆಣಸು ಚಹಾವನ್ನು ಕುಡಿಯುವುದು ಉತ್ತಮ, ಸಂಜೆ ಸಮಯದಲ್ಲಿ ಕಷಾಯವನ್ನು ಕುಡಿಯಬೇಕು.