AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಕೈ ಸೆಳೆತ ಸಮಸ್ಯೆ ಕಾಡುತ್ತಿದೆಯಾ? ಕಾರಣಗಳೇನು ಗೊತ್ತಾ?

ಪದೇ ಪದೇ ಕೈ ಸೆಳೆತ ಕಾಣಿಸಿಕೊಳ್ಳುತ್ತಿದೆಯೇ? ಸಮಸ್ಯೆಯನ್ನು ಎಂದಿಗೂ ನಿರ್ಲಕ್ಷ್ಯಿಸಬೇಡಿ. ಆರೋಗ್ಯದಲ್ಲಿ ಏನೇ ಏರು- ಪೇರು ಉಂಟಾದರೂ ತಕ್ಷಣ ವೈದ್ಯರಲ್ಲಿ ಸಲಹೆ ಪಡೆಯಿರಿ.

Health Tips: ಕೈ ಸೆಳೆತ ಸಮಸ್ಯೆ ಕಾಡುತ್ತಿದೆಯಾ? ಕಾರಣಗಳೇನು ಗೊತ್ತಾ?
ಕೈ ಸೆಳೆತ
TV9 Web
| Edited By: |

Updated on: Nov 06, 2021 | 9:27 AM

Share

ನಮ್ಮ ದೇಹದಲ್ಲಿ ಆಗುವ ಬದಲಾವಣೆಗಳು ಅರಿವಾಗುತ್ತದೆ. ಆದರೆ ನಿರ್ಲಕ್ಷ್ಯದಿಂದ ಅಪಾಯದ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಸಾಮಾನ್ಯವಾಗಿ ಕೈ ಸೆಳೆತ, ಕಾಲು ಸೆಳೆತ ಕಾಣಿಸಿಕೊಳ್ಳುವುದು ಸಹಜ. ಕೆಲಸ ಮಾಡಿ ಸುಸ್ತಾದಾಗ ಅಥವಾ ನರಗಳಲ್ಲಿ ರಕ್ತಪರಿಚಲನೆಗೆ ಅಡ್ಡಿಯುಂಟಾದಾಗ ಸಮಸ್ಯೆ ಕಾಣಿಸಿಕೊಳಗ್ಳುತ್ತದೆ. ಆದರೆ ಪದೇ ಪದೇ ಕಾಣಿಸಿಕೊಳ್ಳುವ ಕೈಸೆ ಸೆಳೆತದಿಂದ ಅಪಾಯ ಇನ್ನಷ್ಟು ಹೆಚ್ಚಬಹುದು. ನರಗಳ ಮೇಲೆ ಒತ್ತಡ ಬಿದ್ದಾಗ ರಕ್ತ ಪೂರೈಕೆ ನಿಲ್ಲುತ್ತದೆ ಅಥವಾ ಅಡೆತಡೆಗಳು ಉಂಟಾಗುತ್ತವೆ. ನರದ ಮೇಲೆ ಒತ್ತಡ ಉಂಟಾದಾಗ ಕೈ ಸೆಳೆತ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಕೈ ಕಾಲು ಸೆಳೆತ ಆಗಾಗ ಕಾಣಿಸಿಕೊಳ್ಳುತ್ತಿದ್ದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಿಸಬೇಡಿ.

ಕೆಲವರಿಗೆ ಐದು ನಿಮಿಷ ಕೈ ಸೆಳೆತ ಉಂಟಾದಂತೆ ಅನಿಸಿದರೂ ಬಳಿಕ ಕಡಿಮೆಯಾಗುತ್ತದೆ. ಇನ್ನು ಕೆಲವರಿಗೆ ಪದೇ ಪದೇ ಕೈ ಸೆಳೆತ ಕಾಣಿಸಿಕೊಳ್ಳುವುದು ಇಲ್ಲವೇ ದಿನಪೂರ್ತಿ ಸೆಳೆತ ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಮಲಗಿ ಎದ್ದಾಕ್ಷಣ ಕೈ ಹಿಡಿದಂತಾಗುತ್ತದೆ. ಇದು ರಕ್ತದ ಒತ್ತಡದಿಂದ ಹಾಗೂ ನರಗಳಿಗೆ ಸಂಬಂಧಿಸಿದ ಸಮಸ್ಯೆಯಾಗಿದೆ.

ಕಂಪ್ಯೂಟರ್ ನೋಡುತ್ತಾ ಹೆಚ್ಚು ಹೊತ್ತು ಕುಳಿತಾಗ ಕುತ್ತಿಗೆ ಸೆಳೆತ, ಭುಜದ ಸೆಳೆತ ಕಾಣಿಸಿಕೊಳ್ಳುತ್ತದೆ. ಇದನ್ನು ಥೋರಾಸಿಕ್ ಔಟ್ಲೇಟ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಭುಜದ ವ್ಯಾಯಾಮ ಮಾಡುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆದರೆ ಭುಜದ ನೋವು ತುಂಬಾ ಕಾಡುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಕೈ ಸೆಳೆತದಿಂದ ಸೊಂಟದ ನೋವೂ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು. ಇದನ್ನು ಕಾರ್ಪಲ್ ಟನಲ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಹೀಗಿರುವಾಗ ನೋವು ವೈದ್ಯರನ್ನು ಸಂಪರ್ಕಿಸುವುದು ಒಳಿತು. ವ್ಯಾಯಾಮದ ಮೂಲಕ ಕಡಿಮೆ ಆಗುವುದಾದರೂ ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮ.

ನೀವು ಪ್ರತಿನಿತ್ಯ ವ್ಯಾಯಾಮ ಅಭ್ಯಾಸ ಮಾಡುವುದನ್ನು ರೂಢಿಯಲ್ಲಿಟ್ಟುಕೊಳ್ಳಿ. ಪ್ರತಿನಿತ್ಯದ ವ್ಯಾಯಾಮ ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ ಜೊತೆಗೆ ಆಹಾರದ ಪದ್ಧತಿಯಲ್ಲಿ ಯಾವಾಗಲೂ ಪೌಷ್ಟಿಕಾಂಶಯುಕ್ತ ಆಹಾರ ಸೇರಿರಲಿ. ಹೆಚ್ಚು ತರಕಾರಿ, ಹಣ್ಣುಗಳನ್ನು ಸೇವಿಸಿ. ನರ ದೌರ್ಬಲ್ಯದಿಂದಲೂ ಸಹ ಕೈ ಕಾಲು ಸೆಳೆತ ಉಂಟಾಗುತ್ತದೆ.

ಇದನ್ನೂ ಓದಿ:

Health Tips: ಜ್ಞಾಪಕ ಶಕ್ತಿ ಕಡಿಮೆಯಾಗುತ್ತಿದೆಯೇ? ಆಹಾರ ಕ್ರಮದ ಬಗ್ಗೆ ಇರಲಿ ಎಚ್ಚರ

Health Tips: ಕಹಿಯಾಗಿದ್ದರೂ ಆರೋಗ್ಯಕರ ಗುಣಗಳನ್ನು ಹೊಂದಿರುವ ಈ 5 ಪದಾರ್ಥಗಳ ಬಗ್ಗೆ ತಿಳಿಯಿರಿ