ಅನೀಮಿಯಾ, ಅಲ್ಸರ್ ನಿವಾರಣೆಗೆ ಗುಲ್ಕನ್​ ಮದ್ದು; ಆಯುರ್ವೇದಿಕ್​ ವೈದ್ಯರೇ ತಿಳಿಸಿದ್ದಾರೆ ಈ ಸಿಹಿ ಜಾಮ್​ನ ಅನುಕೂಲಗಳನ್ನು !

ಅನೀಮಿಯಾ, ಅಲ್ಸರ್ ನಿವಾರಣೆಗೆ ಗುಲ್ಕನ್​ ಮದ್ದು; ಆಯುರ್ವೇದಿಕ್​ ವೈದ್ಯರೇ ತಿಳಿಸಿದ್ದಾರೆ ಈ ಸಿಹಿ ಜಾಮ್​ನ ಅನುಕೂಲಗಳನ್ನು !
ಗುಲ್ಕನ್​

ಮುಟ್ಟಿನ ದಿನಗಳಲ್ಲಿ ತೀವ್ರವಾಗಿ ರಕ್ತಸ್ರಾವವಾಗುತ್ತಿದ್ದರೆ, ಅದರ ನಿಯಂತ್ರಣಕ್ಕೆ ಗುಲ್ಕನ್​ ಸೇವನೆ ಒಳ್ಳೆಯದು. ದೇಹಕ್ಕೆ ಗ್ಲುಕೋಸ್ ಅಂಶ ನೀಡುತ್ತದೆ.

TV9kannada Web Team

| Edited By: Lakshmi Hegde

Apr 05, 2022 | 7:30 AM

ಗುಲ್ಕನ್​​ ಯಾರಿಗೆ ಗೊತ್ತಿಲ್ಲ ಹೇಳಿ?..ಅದರಲ್ಲೂ ಸಿಹಿ ಪಾನ್​ (ಸಿಹಿ ಕವಳ) ತಿಂದಿದ್ದರೆ ಗುಲ್ಕನ್​ ಬಗ್ಗೆ ಗೊತ್ತೇ ಇರುತ್ತದೆ. ಊಟದ ನಂತರ ಹಾಕುವ ಎಲೆ-ಅಡಿಕೆಯ ಜತೆ ಗುಲಾಬಿ ದಳದ ಗುಲ್ಕನ್​ ಹಾಕಿ ತಿಂದರೆ ಅದರ ರುಚಿಯೇ ಬೇರೆ. ಗುಲಾಬಿ ಎಸಳುಗಳು ಮತ್ತು ಸಾಕಷ್ಟು ಸಕ್ಕರೆ ಹಾಕಿ ಮಾಡುವ ಒಂದು ಜಾಮ್​ ಇದು. ಗುಲ್ಕನ್​ ಹುಟ್ಟಿದ್ದು ಎಲ್ಲಿಂದ? ಯಾವಾಗಿನಿಂದ ಎಂಬ ಬಗ್ಗೆ ಖಚಿತತೆ ಇರದಿದ್ದರೂ ಈಗೀಗ ಇದು ಆರೋಗ್ಯಕ್ಕೂ ಒಳ್ಳೆಯದು ಎಂಬ ಮಾತು ಕೇಳಿಬರುತ್ತಿದೆ. ಅಷ್ಟೇ ಅಲ್ಲ, ಆಯುರ್ವೇದ ಪದ್ಧತಿಯಲ್ಲಿ ಗುಲ್ಕನ್​​ನ್ನು ಆರೋಗ್ಯಕ್ಕಾಗಿ ಬಳಕೆ ಕೂಡ ಮಾಡಲಾಗುತ್ತದೆ. ಅದೇ ಆಯುರ್ವೇದ ತಜ್ಞರಾದ ಡಾ. ದೀಕ್ಷಾ ಭಸ್ವಾರ್​ ಎಂಬುವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಗುಲ್ಕನ್​ದ ಅನುಕೂಲಗಳನ್ನು ಹೇಳಿದ್ದಾರೆ. ಅವು ಹೀಗಿದೆ ನೋಡಿ..

1. ಗುಲ್ಕನ್​​ನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಗಂಭೀರ ಸ್ವರೂಪದ ಅಲ್ಸರ್​ಗಳು ನಿಯಂತ್ರಣವಾಗುತ್ತವೆ. ಅಷ್ಟೇ ಅಲ್ಲ, ಎದೆಯುರಿ, ಮಲಬದ್ಧತೆ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.

2. ಈಗಂತೂ ಬೇಸಿಗೆ ಕಾಲ. ಅತಿಯಾದ ಉಷ್ಣವಿರುವ ಈ ಕಾಲದಲ್ಲಿ ಗುಲ್ಕಂದ ಸೇವನೆ ದೇಹಕ್ಕೆ ಒಳ್ಳೆಯದು. ಸನ್​ ಸ್ಟ್ರೋಕ್​​, ಮೂಗಿನಲ್ಲಿ ರಕ್ತಬರುವುದು, ತಲೆ ತಿರುಗುವ ಸಮಸ್ಯೆಗಳಿಂದ ಮುಕ್ತಿಹೊಂದಬಹುದು. ಇದು ದೇಹವನ್ನು ತಂಪಾಗಿಸುತ್ತದೆ.

3.ಮುಟ್ಟಿನ ದಿನಗಳಲ್ಲಿ ತೀವ್ರವಾಗಿ ರಕ್ತಸ್ರಾವವಾಗುತ್ತಿದ್ದರೆ, ಅದರ ನಿಯಂತ್ರಣಕ್ಕೆ ಗುಲ್ಕನ್​ ಸೇವನೆ ಒಳ್ಳೆಯದು. ದೇಹಕ್ಕೆ ಗ್ಲುಕೋಸ್ ಅಂಶ ನೀಡುತ್ತದೆ. ರಕ್ತಹೀನತೆಯನ್ನು ಹೋಗಲಾಡಿಸುತ್ತದೆ. ರಕ್ತ ಶುದ್ಧಿ ಮಾಡುವ ಅತ್ಯುತ್ತಮ ಆಹಾರ.

4. ಗುಲ್ಕನ್ ಅತ್ಯುದ್ಭತ ಟಾನಿಕ್ ಆಗಿದ್ದು, ದೇಹದಲ್ಲಿ ಚಯಾಪಚಯ ಕ್ರಿಯೆ ಸರಾಗವಾಗುವಂತೆ ಮಾಡುತ್ತದೆ. ಈ ಮೂಲಕ ದೇಹವನ್ನು ಆರೋಗ್ಯಯುತವಾಗಿ ಮತ್ತು ಸುಸ್ಥಿತಿಯಲ್ಲಿಡುತ್ತದೆ. ಇದರಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾಗಿದ್ದು, ಉತ್ಕರ್ಷಣ ನಿರೋಧಕವಾಗಿದೆ. ಇದನ್ನು ಯಾವುದೇ ರೀತಿಯ ದೇಹಪ್ರಕೃತಿಯಿರುವವರೂ ತಿನ್ನಬಹುದು. ಅದರಲ್ಲೂ ಪಿತ್ತ ಅಂಶ ಹೆಚ್ಚಾಗಿರುವವರು ಇದನ್ನು ತಿನ್ನುವುದು ತುಂಬ ಒಳ್ಳೆಯದು ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಸೌಹಾರ್ದತೆಗೆ ಸಾಕ್ಷಿಯಾದ ಅಡ್ಡಪಲ್ಲಕ್ಕಿ ಉತ್ಸವ, ಜಾತಿ-ಮತ ಮರೆತು ಶ್ರೀಗಳ ದರ್ಶನ ಪಡೆದ ಮುಸ್ಲಿಂ ಮುಖಂಡರು!

Follow us on

Related Stories

Most Read Stories

Click on your DTH Provider to Add TV9 Kannada