
ಸಾಮಾನ್ಯವಾಗಿ ಕಿತ್ತಳೆ ಹಣ್ಣನ್ನು ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ. ಇದು ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ. ಅದರಲ್ಲಿಯೂ ಚಳಿಗಾಲದಲ್ಲಿ ಜನರು ಸಾಕಷ್ಟು ಕಿತ್ತಳೆ ಹಣ್ಣುಗಳನ್ನು ಸೇವಿಸುತ್ತಾರೆ. ಇದನ್ನು ತಿನ್ನುವುದರಿಂದ ನಮ್ಮ ಚರ್ಮ ಆರೋಗ್ಯವಾಗಿರುತ್ತದೆ. ಆದರೆ ಈ ಹಣ್ಣನ್ನು ತಿಂದು ಅದರ ಸಿಪ್ಪೆಯನ್ನು ಅಥವಾ ತೊಗಟೆಯನ್ನು ಎಸೆಯುತ್ತಾರೆ. ನಿಮಗೆ ಗೊತ್ತೆ? ಇದರಲ್ಲಿ ಅನೇಕ ರೀತಿಯ ಆರೋಗ್ಯ ಗುಣಗಳಿವೆ. ಇದನ್ನು ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿದರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳಿವೆ. ಇದರಲ್ಲಿ ಆಂಟಿಆಕ್ಸಿಡೆಂಟ್ಗಳು, ವಿಟಮಿನ್ ಸಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಇದು ನಮ್ಮ ಆರೋಗ್ಯಕ್ಕೆ ಮಾತ್ರವಲ್ಲದೆ ದೈನಂದಿನ ದಿನಚರಿಯಲ್ಲೂ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅದಲ್ಲದೆ ಕಿತ್ತಳೆ ಸಿಪ್ಪೆಯನ್ನು ಮನೆಯನ್ನು ಸ್ವಚ್ಛಗೊಳಿಸಲು ಮತ್ತು ಇತರ ಕೆಲಸಗಳಿಗೆ ಬಳಸಲಾಗುತ್ತದೆ. ಹಾಗಾದರೆ ಉಪಯುಕ್ತವಾಗಿ ಕಿತ್ತಳೆ ಸಿಪ್ಪೆಯನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿದುಕೊಳ್ಳಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ