ಬೆಂಗಳೂರು: ಇತ್ತೀಚಿಗಷ್ಟೇ ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿ ತಯಾರಿಕೆಯಲ್ಲಿ ಕೃತಕ ಬಣ್ಣ ಬಳಸದಂತೆ ರಾಜ್ಯ ಸರ್ಕಾರ ನಿಷೇಧ ಹೇರಿತ್ತು. ಇದೀಗ ಚಿಕನ್, ಫಿಶ್ , ಹಾಗೂ ವೆಜ್ ಕಬಾಬ್ ಗೆ ಕಲರ್ ಬಳಸದಂತೆ ಕರ್ನಾಟಕ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕಬಾಬ್, ಫಿಶ್, ಚಿಕನ್‌ಗೆ ಕೃತಕ ಬಣ್ಣ ಬಳಕೆ ಬ್ಯಾನ್ ಆಗಲು ಕಾರಣವೇನು? ಆಹಾರದಲ್ಲಿ ಬಳಸುವ ಈ ಬಣ್ಣಗಳು ಮಾನವನ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ? ಎಷ್ಟು ಅಪಾಯಕಾರಿಯಾಗಿದೆ? ಎಂಬುದರ ಕುರಿತು ಬೆಂಗಳೂರಿನ ಆಹಾರ ತಜ್ಞೆ ಡಾ ಕೀರ್ತಿ ಹಿರಿಸಾವೆ ಟಿವಿ9 ನೀಡಿರುವ ಮಾಹಿತಿ ಇಲ್ಲಿದೆ.
ಡಾ ಕೀರ್ತಿ ಹಿರಿಸಾವೆ ಹೇಳುವಂತೆ ” ಆಹಾರ ತಯಾರಿಕೆಯಲ್ಲಿ ಸೇರಿಸುವ ಬಣ್ಣ ರುಚಿಯ, ಜೊತೆಗೆ ನಿಮ್ಮ ಕಣ್ಣುಗಳಿಗೂ ಆಕರ್ಷಣೆಯನ್ನು ನೀಡುತ್ತದೆ. ಆದರೆ ಇವುಗಳ ಸೇವನೆ ನಿಮ್ಮ ದೇಹದ ವಿವಿಧ ಅಂಗಾಂಗಗಳ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಬಹುದು ಎಂದು ಎಚ್ಚರಿಸುತ್ತಾರೆ. ” ಕೃತಕ ಕಲರ್ ಬಳಕೆಯಿಂದ ನಾನಾ ಸಮಸ್ಯೆ ಕಂಡು ಬರುತ್ತಿವೆ. ಇದರಿಂದಾಗಿ ಬಿಪಿ ಶುಗರ್ ಏರಿಕರ ಹಾಗೂ ಕಿಡ್ನಿ ಸಮಸ್ಯೆಯೂ ಹೆಚ್ಚು. ಇಲಾಖೆಯು ಪ್ರಯೋಗಾಲಯಗಳಲ್ಲಿ 39 ಕಬಾಬ್‌ಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿತ್ತು. ಆ ಕಬಾಬ್ ಗಳಲ್ಲಿ ಎಂಟು ಕಬಾಬ್ ಗಳಲ್ಲಿ ಕೃತಕ ಬಣ್ಣವನ್ನು ಬಳಸಿರುವುದು ಪತ್ತೆಯಾಗಿದ್ದುದೆ. ಮೆಟಾಲಿಕ್ ಗ್ರೀನ್, ಮೆಟಾಲಿಕ್ ಯೆಲ್ಲೋ ಕಲರ್ ತುಂಬಾ ಅಪಾಯಕಾರಿ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯಾದ್ಯಂತ ಕಬಾಬ್, ಫಿಶ್, ಚಿಕನ್‌ಗೆ ಕೃತಕ ಬಣ್ಣ ಬಳಕೆಗೆ ನಿರ್ಬಂಧಿಸಿದ ಸರ್ಕಾರ
ಕಾರ್ಮೋಸಿನ್ ಕೂಡಾ ಒಂದು ಕೆಮಿಕಲ್ ಅಂಶವಾಗಿದ್ದು, ಕಾರ್ಮೋಸಿನ್ ಆಹಾರ ಕೆಂಪಾಗುವಂತೆ ಮಾಡುತ್ತದೆ. ಈ ಕಾರ್ಮೋಸಿನ್ ಕಿಡ್ನಿ ಮೇಲೆ ಸಮಸ್ಯೆ ಮಾಡುತ್ತದೆ. ಕಾರ್ಮೋಸಿನ್ 100pp ಕ್ಕಿಂತ ಹೆಚ್ಚು ಆಹಾರದಲ್ಲಿ ಬಳಸಿದ್ರೆ ಆಹಾರ ತುಂಬಾ ಕೆಂಪಾಗುತ್ತದೆ. ಇದಲ್ಲದೇ ಕಾರ್ಮೋಸಿನ್ ಅತಿಯಾದಾಗ ಮಕ್ಕಳಿಗೆ ಚಿಕ್ಕ ಸವಯಸ್ಸಿನಲ್ಲಿಯೇ ಬಿಪಿ ಕಿಡ್ನಿ ಫೇಲ್ಯೂರ್ ಆಗುವ ಸಾಧ್ಯತೆ ಇದೆ. ಇದಲ್ಲದೇ ಹೃದಯಘಾತ ಸೇರಿದ್ದಂತೆ ಅನೇಕ ಸಮಸ್ಯೆಗೂ ಕಾರಣವಾಗುತ್ತದೆ ಎಂದು ಡಾ ಕೀರ್ತಿ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ಜಾರಿಗೆ ತಂದಿರುವ ನಿಯಮ ಉಲ್ಲಂಘಿಸುವ ಆಹಾರ ಮಾರಾಟಗಾರರ ವಿರುದ್ಧ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು 10 ಲಕ್ಷದವರೆಗೆ ದಂಡ ಸೇರಿದಂತೆ “ಗಂಭೀರ ಕ್ರಮ” ವನ್ನು ಜರಗಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಹೇಳಿದ್ದಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: