Pregnancy care: ಗರ್ಭಾವಸ್ಥೆಯಲ್ಲಿ ವಾಂತಿಯಾಗುವುದಕ್ಕೆ ಕಾರಣವೇನು? ಅದನ್ನು ತಡೆಯಲು ಇಲ್ಲಿದೆ ಸರಳ ಸಲಹೆಗಳು
ಗರ್ಭಾವಸ್ಥೆಯಲ್ಲಿ ವಾಂತಿ ಅಥವಾ ವಾಕರಿಕೆ ಸಮಸ್ಯೆ ಕಂಡು ಬರುತ್ತದೆ. ಇದು ಗರ್ಭಧಾರಣೆಯ ಆರನೇ ವಾರದಿಂದ ಪ್ರಾರಂಭವಾಗಿ ಕೆಲವೊಮ್ಮೆ ಮೂರು ತಿಂಗಳ ವರೆಗೂ ಕಂಡು ಬರುತ್ತದೆ. ಗರ್ಭಿಣಿಯರು ಈ ವಾಂತಿಯ ಸಮಸ್ಯೆಯನ್ನು ಅನುಭವಿಸುವುದಕ್ಕೆ ಕಾರಣವೇನು ಮತ್ತು ಅದನ್ನು ತಡೆಯುವುದು ಹೇಗೆ ಎಂಬುದರ ಬಗ್ಗೆ ಡಾ. ಐಶ್ವರ್ಯಾ ಪ್ರಭಾಕರ್ ಆಚಾರ್ ಎನ್ನುವವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಕೆಲವು ಮಾಹಿತಿ ಹಂಚಿಕೊಂಡಿದ್ದು, ಆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಗರ್ಭಾವಸ್ಥೆಯಲ್ಲಿ ಮಹಿಳೆಯರಲ್ಲಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಂಡು ಬರುವುದು ಸರ್ವೇ ಸಾಮಾನ್ಯ. ಅದರಲ್ಲಿ ವಾಂತಿ ಅಥವಾ ವಾಕರಿಕೆ ಸಮಸ್ಯೆಯೂ ಒಂದು. ಇದು ಗರ್ಭಧಾರಣೆಯ ಆರನೇ ವಾರದಿಂದ ಪ್ರಾರಂಭವಾಗಿ ಕೆಲವೊಮ್ಮೆ ಮೂರು ತಿಂಗಳ ವರೆಗೂ ಕಂಡು ಬರುತ್ತದೆ. ಕೆಲವರಲ್ಲಿ ಇದು ಕಂಡು ಬರದೆಯೂ ಇರಬಹುದು. ಆದರೆ ಗರ್ಭಾವಸ್ಥೆಯಲ್ಲಿ ವಾಕರಿಕೆ ಮತ್ತು ವಾಂತಿ ಸಮಸ್ಯೆ ಕಂಡು ಬರಲು ಕಾರಣವೇನು? ಯಾಕೆ ಈ ರೀತಿ ಆಗುತ್ತದೆ? ಈ ಸಮಸ್ಯೆಯನ್ನು ತಪ್ಪಿಸುವುದು ಹೇಗೆ ಎಂಬುದು ತಿಳಿದಿದ್ದರೆ ಬಹಳ ಒಳ್ಳೆಯದು. ಇದರಿಂದ ನಿಮ್ಮಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಸರಿಯಾಗಿ ತಿಳಿಯುವ ಮೂಲಕ ಅದಕ್ಕೆ ಪರಿಹಾರ ಕಂಡು ಕೊಳ್ಳಬಹುದಾಗಿದೆ. ಇದಕ್ಕೆ ಪೂರಕ ಎಂಬಂತೆ ಗರ್ಭಿಣಿಯರು ಈ ವಾಂತಿಯ ಸಮಸ್ಯೆಯನ್ನು ಅನುಭವಿಸಲು ಕಾರಣವೇನು ಮತ್ತು ಅದನ್ನು ತಡೆಯುವುದು ಹೇಗೆ ಎಂಬುದರ ಬಗ್ಗೆ ಡಾ. ಐಶ್ವರ್ಯಾ ಪ್ರಭಾಕರ್ ಆಚಾರ್ ಎನ್ನುವವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಕೆಲವು ಮಾಹಿತಿ ಹಂಚಿಕೊಂಡಿದ್ದು, ಆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
- ಹೆಚ್ ಸಿ ಜಿ ಹಾರ್ಮೋನ್ ಬರುವುದರಿಂದ ಈ ರೀತಿಯ ವಾಕರಿಕೆ ಮತ್ತು ವಾಂತಿ ಸಮಸ್ಯೆ ಕಂಡು ಬರುತ್ತದೆ.
- ಪ್ರೊಜೆಸ್ಟರಾನ್ ಮತ್ತು ಈಸ್ಟ್ರೋಜನ್ ಹಾರ್ಮೋನ್ ಗಳು ಹೆಚ್ಚಾಗುವುದರಿಂದ ಈ ರೀತಿಯ ಸಮಸ್ಯೆ ಕಂಡು ಬರಬಹುದು.
- ನೀವು ಹೆಚ್ಚು ಒತ್ತಡ ತೆಗೆದುಕೊಳ್ಳುವುದರಿಂದ ಮತ್ತು ಆತಂಕ ಪಡುವುದರಿಂದ ಆಗುತ್ತದೆ.
- ಕೆಲವರಿಗೆ ಈ ಸಂದರ್ಭಗಳಲ್ಲಿ ವಾಸನೆ ಅಥವಾ ಪರಿಮಳ ಹೆಚ್ಚಾಗಿ ಗೊತ್ತಾಗುವುದರಿಂದಲೂ ವಾಂತಿ ಬರುವಂತೆ ಅನಿಸಬಹುದು.
ಇದನ್ನೂ ಓದಿ: ಈ ರೀತಿಯ ಲಕ್ಷಣಗಳು ಪದೇ ಪದೇ ಕಂಡು ಬಂದರೆ ನಿಮ್ಮ ಕಿಡ್ನಿ ಆರೋಗ್ಯವಾಗಿಲ್ಲ ಎಂದರ್ಥ
ಇದನ್ನು ನೈಸರ್ಗಿಕವಾಗಿ ಕಡಿಮೆ ಮಾಡುವುದು ಹೇಗೆ?
- ಒಂದೇ ಬಾರಿ ಹೆಚ್ಚು ಆಹಾರ ಸೇವನೆ ಮಾಡುವುದನ್ನು ಆದಷ್ಟು ತಪ್ಪಿಸಬೇಕು. ಅದರ ಬದಲು ಸ್ವಲ್ಪ ಸ್ವಲ್ಪವೇ ಆಹಾರವನ್ನು ಸೇವನೆ ಮಾಡಿ, ಹಸಿವಾದಾಗ ತಿನ್ನುತ್ತೀರಿ.
- ಮುಖ್ಯವಾಗಿ, ಅತಿಯಾಗಿ ಯೋಚನೆ ಮಾಡುವುದನ್ನು ಬಿಡಿ. ಎಲ್ಲವೂ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆ ಇರಲಿ. ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ.
- ವಾಂತಿ ಬರುವಂತಾದಾಗ ಸ್ವಲ್ಪ ಶುಂಠಿ ತಿನ್ನಿ. ನಿಂಬೆ ಹಣ್ಣಿನ ಪರಿಮಳ ತೆಗೆದುಕೊಳ್ಳಿ
- ನೀರು ಕುಡಿಯುವುದನ್ನು ಮರೆಯಬೇಡಿ.
- ಒಂದೇ ಬಾರಿಗೆ ಹೆಚ್ಚು ನೀರು ಮತ್ತು ಜ್ಯೂಸ್ ತೆಗೆದುಕೊಳ್ಳಬೇಡಿ. ಬದಲಿಗೆ ಸ್ವಲ್ಪ ಸ್ವಲ್ಪವೇ ಸೇವನೆ ಮಾಡಿ.
- ಈ ವಾಂತಿಯ ಸಮಸ್ಯೆಯು ಸಾಮಾನ್ಯವಾಗಿ ಬೆಳಗ್ಗಿನ ಸಮಯದಲ್ಲಿ ಹೆಚ್ಚು ಇರುತ್ತದೆ. ಇದನ್ನು ಮಾರ್ನಿಂಗ್ ಸಿಕ್ ನೆಸ್ ಎಂದೂ ಕರೆಯುತ್ತಾರೆ. ಇದನ್ನು ತಪ್ಪಿಸಲು, ರಾತ್ರಿಯ ಊಟದ ಸಮಯದಲ್ಲಿ ಹೆಚ್ಚಿನ ಪ್ರೋಟೀನ್ ಭರಿತ ಆಹಾರಗಳನ್ನು ಸೇವಿಸಿ.
- ವಾಕರಿಕೆ ಮತ್ತು ವಾಂತಿ ಸಮಸ್ಯೆ ಕಂಡು ಬಂದಾಗ ತಾಜಾ ಕಿತ್ತಳೆ ರಸವನ್ನು ಒಂದು ಅಥವಾ ಎರಡು ಬಾರಿ ಕುಡಿಯಿರಿ. ಈ ಸಮಸ್ಯೆಗೆ ತಕ್ಷಣ ಪರಿಹಾರ ಸಿಗುತ್ತದೆ. ಜ್ಯೂಸ್ ಇಷ್ಟವಿಲ್ಲದವರು ಕಿತ್ತಳೆ ಹಣ್ಣನ್ನು ಹಾಗೆಯೇ ತಿನ್ನಬಹುದು.
- 4 ರಿಂದ 5 ಹಸಿರು ಪುದೀನ ಎಲೆಗಳನ್ನು ತೆಗೆದುಕೊಂಡು, ಅವುಗಳನ್ನು ತೊಳೆದು ಕಪ್ಪು ಉಪ್ಪಿನ ಜೊತೆಯಲ್ಲಿ ನಿಧಾನವಾಗಿ ಅಗಿಯಿರಿ. ಇದರಿಂದ ನೀವು ವಾಂತಿ ಸಮಸ್ಯೆಯಿಂದ ತಕ್ಷಣ ಪರಿಹಾರ ಪಡೆಯಬಹುದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ