ಆಫೀಸ್ ಕೆಲಸದ ವೇಳೆ ನಿಮ್ಮ ಡಯೆಟ್ ಹೇಗಿರಬೇಕು?
ಕೆಲಸದ ವೇಳೆ ಅಡುಗೆ ಮಾಡಿಕೊಳ್ಳಲು ಸಮಯವಿರದ ಕಾರಣದಿಂದ ಸುಲಭವಾಗಿ ಲಭ್ಯವಿರುವ, ಅಧಿಕ ಕ್ಯಾಲೋರಿ ಇರುವ ಜಂಕ್ ಫುಡ್ ಸೇವಿಸುವವರ ಸಂಖ್ಯೆ ಹೆಚ್ಚು. ಇದು ಕ್ರಮೇಣ ನಮ್ಮ ತೂಕವನ್ನು ಹೆಚ್ಚಿಸುತ್ತದೆ. ಆಫೀಸ್ ಕೆಲಸ ಮಾಡುವಾಗ ಯಾವ ರೀತಿಯ ಡಯೆಟ್ ಪ್ಲಾನ್ ಮಾಡಬೇಕು ಎಂಬುದರ ಮಾಹಿತಿ ಇಲ್ಲಿದೆ.
ದಿನವಿಡೀ ಒಂದೇ ಕಡೆ ಕುಳಿತು ಕೆಲಸ ಮಾಡುವಾಗ ನಮ್ಮ ಆರೋಗ್ಯ ಹದಗೆಡುವುದು ಸಾಮಾನ್ಯ. ಕೆಲಸದ ನಡುವೆ ಅನೇಕರು ಏನು ತಿನ್ನುತ್ತಿದ್ದೇನೆ. ಎಷ್ಟು ತಿನ್ನುತ್ತಿದ್ದೇನೆ ಎಂಬುದರ ಬಗ್ಗೆಯೂ ಗಮನ ಕೊಡುವುದಿಲ್ಲ. ಇದರಿಂದಾಗಿ ಅನಾರೋಗ್ಯ ಉಂಟಾಗುವ ಸಾಧ್ಯತೆ ಹೆಚ್ಚು. ಹಾಗೇ, ಈ ಅಭ್ಯಾಸದಿಂದಲೇ ಅನೇಕರಿಗೆ ತೂಕ ಹೆಚ್ಚಾಗುತ್ತದೆ. ಹೀಗಾಗಿ, ಆಫೀಸ್ ಕೆಲಸ ಮಾಡುವಾಗ ಯಾವ ರೀತಿಯ ಡಯೆಟ್ ಪ್ಲಾನ್ ಮಾಡಬೇಕು, ಯಾವ ರೀತಿಯ ಆಹಾರದ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂಬುದರ ಮಾಹಿತಿ ಇಲ್ಲಿದೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ಸುಮಾರು ಶೇ. 10ರಷ್ಟು ಭಾರತೀಯರು ಅದರಲ್ಲೂ ಮಹಿಳೆಯರು ಡೀಪ್ ಫ್ರೈಡ್ ಅಥವಾ ಕರಿದ ಊಟವನ್ನು ಸೇವಿಸುತ್ತಾರೆ. ಈ ಬಗ್ಗೆ ಡಾ. ಬಾತ್ರಾ ಹೆಲ್ತ್‌ಕೇರ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ. ಮುಖೇಶ್ ಬಾತ್ರಾ ಮಾಹಿತಿ ನೀಡಿದ್ದು, ಕೆಲಸದ ವೇಳೆ ಅಡುಗೆ ಮಾಡಿಕೊಳ್ಳಲು ಸಮಯವಿರದ ಕಾರಣದಿಂದ ಸುಲಭವಾಗಿ ಲಭ್ಯವಿರುವ, ಅಧಿಕ ಕ್ಯಾಲೋರಿ ಇರುವ ಜಂಕ್ ಫುಡ್ ಸೇವಿಸುವವರ ಸಂಖ್ಯೆ ಹೆಚ್ಚು. ಇದು ಕ್ರಮೇಣ ನಮ್ಮ ತೂಕವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.
ಇದನ್ನೂ ಓದಿ: Rambutan Benefits: ಫೈಬರ್ಭರಿತವಾಗಿರುವ ರಾಂಬುಟಾನ್ ಹಣ್ಣಿನ ಅಚ್ಚರಿಯ ಪ್ರಯೋಜನಗಳಿವು
ಹೀಗಾಗಿ, ಕೆಲಸದ ವೇಳೆ ಪೋಷಕಾಂಶಭರಿತವಾದ ನಟ್ಸ್, ಮೊಸರು, ತರಕಾರಿ, ಹಣ್ಣುಗಳನ್ನು ನಮ್ಮ ಮುಂದಿಟ್ಟುಕೊಳ್ಳಬೇಕು. ಎಷ್ಟೇ ಕೆಲಸದಲ್ಲಿ ಮುಳುಗಿದ್ದರೂ ಪ್ರತಿದಿನ 3ರಿಂದ 4 ಲೀಟರ್ ನೀರನ್ನು ಸೇವಿಸಲು ಮರೆಯಬಾರದು. ಸಕ್ಕರೆ ಹಾಕಿರುವ ಜ್ಯೂಸ್, ಕಾಫಿ, ಚಹಾವನ್ನು ಸೇವಿಸುವ ಬದಲು ನೀರು, ಮಜ್ಜಿಗೆ, ಗಿಡಮೂಲಿಕೆಗಳ ಚಹಾವನ್ನು ಸೇವಿಸಿ.
ಕೆಲಸದ ವೇಳೆ ಏನು ಸೇವಿಸಬೇಕು ಎಂಬ ಮಾಹಿತಿ ಇಲ್ಲಿದೆ.
1. ಸಾಕಷ್ಟು ನೀರು ಕುಡಿಯಿರಿ:
ಬೆಳಗ್ಗೆ ಒಂದು ಲೋಟ ನೀರು ಕುಡಿಯುವ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಿ. ದಿನವಿಡೀ ಆಗಾಗ ನೀರನ್ನು ಕುಡಿಯುತ್ತಿರಿ. ಇದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ. ಇದು ನಿಮ್ಮ ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
2. ಆರೋಗ್ಯಕರ ತಿಂಡಿಗಳು:
ಅನಾರೋಗ್ಯಕರ ತಿಂಡಿಗಳಿಗೆ ತಲುಪುವ ಬದಲು, ಪೌಷ್ಟಿಕಾಂಶದ ಆಹಾರವಿರುವ ಒಂದು ಬಾಕ್ಸನ್ನು ನಿಮ್ಮ ಮುಂದಿಟ್ಟುಕೊಳ್ಳಿ. ಅದರಲ್ಲಿ ದ್ರಾಕ್ಷಿ, ಬಾದಾಮಿ, ಪಿಸ್ತಾ, ಗೋಡಂಬಿ ಮುಂತಾದವುಗಳ ಮಿಶ್ರಣ ಇರಲಿ. ಇವುಗಳು ಪ್ರೊಟೀನ್, ಫೈಬರ್ ಮತ್ತು ಅಗತ್ಯ ಪೋಷಕಾಂಶಗಳನ್ನು ಒದಗಿಸಿ ನಿಮ್ಮನ್ನು ತೃಪ್ತರನ್ನಾಗಿಸುತ್ತವೆ.
ಇದನ್ನೂ ಓದಿ: ದಿನವೂ ಜೇನುತುಪ್ಪ, ದಾಲ್ಚಿನ್ನಿ ಸೇವಿಸುವುದರಿಂದ ಏನು ಪ್ರಯೋಜನ?
3. ಕೆಫೀನ್ ಕಡಿಮೆ ಸೇವಿಸಿ:
ಒಂದು ಕಪ್ ಕಾಫಿ ಅಥವಾ ಚಹಾವು ತ್ವರಿತವಾಗಿ ನಿಮಗೆ ಶಕ್ತಿಯಯನ್ನು ಒದಗಿಸುತ್ತದೆ. ಆದರೆ, ಅತಿಯಾದ ಕೆಫೀನ್ ಹೈಪರ್ ಆಸಿಡಿಟಿಗೆ ಕಾರಣವಾಗಬಹುದು. ಅದರ ಬದಲು ಗಿಡಮೂಲಿಕೆ ಚಹಾಗಳು ಅಥವಾ ತಾಜಾ ಹಣ್ಣಿನ ರಸಗಳಂತಹ ಆರೋಗ್ಯಕರ ಪಾನೀಯವನ್ನು ಸೇವಿಸಿ.
4. ಸಮತೋಲಿತವಾದ ಊಟ ಮಾಡಿ:
ಸಾಧ್ಯವಾದಾಗಲೆಲ್ಲಾ ನಿಮ್ಮ ಊಟವನ್ನು ಮನೆಯಲ್ಲಿಯೇ ತಯಾರಿಸಿ. ಪ್ರೋಟೀನ್ಗಳು, ಧಾನ್ಯಗಳು, ತರಕಾರಿಗಳು ಮತ್ತು ಹಣ್ಣುಗಳನ್ನು ಸೇರಿಸಿ ಅಡುಗೆ ತಯಾರಿಸಿಕೊಳ್ಳಿ. ಈ ಸಮತೋಲಿತ ಊಟವು ದಿನವಿಡೀ ನಿರಂತರ ಶಕ್ತಿಯನ್ನು ನೀಡುತ್ತದೆ.
5. ಆರೋಗ್ಯಕರ ಸ್ನ್ಯಾಕ್ಸ್ ತಿನ್ನಿ:
ಹಸಿವಾದಾಗ ಚಾಕೋಲೇಟ್, ಬಿಸ್ಕತ್, ಬರ್ಗರ್, ಪಿಜ್ಜಾವನ್ನು ಆರ್ಡರ್ ಮಾಡುವ ಬದಲು ಮೊಳಕೆ ಬರಿಸಿದ ಕಾಳುಗಳು, ಪ್ರೋಟೀನ್ ಬಾರ್ನಂತಹ ಆರೋಗ್ಯಕರ ಸ್ನ್ಯಾಕ್ಸ್ ಅನ್ನು ತಿನ್ನಿರಿ.