ಮಲಬದ್ಧತೆಯಿಂದ ಬಳಲುತ್ತಿದ್ದೀರಾ?; ಇದರ ಕಾರಣಗಳು, ಪರಿಹಾರವೇನು?
ಗುದನಾಳದಿಂದ ರಕ್ತಸ್ರಾವ, ನಿಮ್ಮ ಮಲದಲ್ಲಿ ರಕ್ತ, ನಿರಂತರ ಹೊಟ್ಟೆ ನೋವು, ಕೆಳಗಿನ ಬೆನ್ನಿನಲ್ಲಿ ನೋವು, ವಾಂತಿ, ಜ್ವರ, ತೂಕ ಕಡಿಮೆಯಾಗುವುದು ಈ ಲಕ್ಷಣಗಳು ಕಂಡುಬಂದರೆ ನೀವು ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.
ಮಲಬದ್ಧತೆ ಚಿಕ್ಕ ಮಕ್ಕಳಿಂದ ವಯಸ್ಸಾದವರವರೆಗೆ ಎಲ್ಲರನ್ನೂ ಒಂದಲ್ಲ ಒಂದು ಬಾರಿ ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ನಮ್ಮ ಆಹಾರ ಪದ್ಧತಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುವ ಮೂಲಕ ಇದರಿಂದ ಮುಕ್ತಿ ಪಡೆಯಬಹುದು. ಆದರೆ, ನಿರ್ಲಕ್ಷ್ಯ ಮಾಡಿದರೆ ಇದೇ ದೊಡ್ಡ ಸಮಸ್ಯೆಯಾದೀತು. ದೇಹದಲ್ಲಿ ನಾರಿನಂಶ ಅಥವಾ ಫೈಬರ್ ಕಡಿಮೆಯಾದಾಗ ಹಾಗೂ ನೀರಿನಂಶ ಕಡಿಮೆಯಾದಾಗ ಮಲಬದ್ಧತೆ ಉಂಟಾಗುತ್ತದೆ. ದಿನನಿತ್ಯ ಸೇವಿಸುವ ಆಹಾರದಲ್ಲಿ ಈ ಎರಡು ಅಂಶಗಳು ಸೇರಿಸಿಕೊಂಡರೆ ಮಲಬದ್ಧತೆಯಿಂದ ಪಾರಾಗಬಹುದು.
ಮಲಬದ್ಧತೆಯ ರೋಗಲಕ್ಷಣಗಳು:
ಪ್ರತಿಯೊಬ್ಬ ವ್ಯಕ್ತಿಯ ಕರುಳಿನ ಅಭ್ಯಾಸಗಳು ವಿಭಿನ್ನವಾಗಿರುತ್ತದೆ. ಕೆಲವರು ದಿನಕ್ಕೆ ಮೂರು ಬಾರಿ ಟಾಯ್ಲೆಟಿಗೆ ಹೋಗುತ್ತಾರೆ, ಕೆಲವರು ವಾರಕ್ಕೆ ಮೂರು ಬಾರಿ ಹೋಗುತ್ತಾರೆ. ನೀವು ಈ ಕೆಳಗಿನ ರೋಗಲಕ್ಷಣಗಳನ್ನು ಅನುಭವಿಸಿದರೆ ನೀವು ಮಲಬದ್ಧತೆಗೆ ಒಳಗಾಗಿದ್ದೀರಿ ಎಂದು ಅರ್ಥ.
– ವಾರಕ್ಕೆ ಮೂರು ಬಾರಿಗಿಂತ ಕಡಿಮೆ ಮಲವಿಸರ್ಜನೆಯಾಗುವುದು.
– ಮುದ್ದೆಯಾದ, ಗಟ್ಟಿಯಾದ ಅಥವಾ ಒಣ ಮಲ ವಿಸರ್ಜನೆ.
– ಮಲ ವಿಸರ್ಜನೆ ಮಾಡುವಾಗ ಆಯಾಸ ಅಥವಾ ನೋವು.
– ಮಲವಿಸರ್ಜನೆಯ ಬಳಿಕವೂ ಹೊಟ್ಟೆ ಭಾರವಾದ ಅನುಭವ.
ಇವು ಮಲಬದ್ಧತೆಯ ಆರಂಭಿಕ ಹಂತದ ಲಕ್ಷಣಗಳು.
ಇದನ್ನೂ ಓದಿ: ತೂಕ ಇಳಿಸಿಕೊಳ್ಳಬೇಕಾ?; ನಿಮ್ಮ ಡಯೆಟ್ನಲ್ಲಿ ಈ ಹಣ್ಣುಗಳನ್ನು ಸೇರಿಸಿಕೊಳ್ಳಿ
ಗುದನಾಳದಿಂದ ರಕ್ತಸ್ರಾವ, ನಿಮ್ಮ ಮಲದಲ್ಲಿ ರಕ್ತ, ನಿರಂತರ ಹೊಟ್ಟೆ ನೋವು, ಕೆಳಗಿನ ಬೆನ್ನಿನಲ್ಲಿ ನೋವು, ವಾಂತಿ, ಜ್ವರ, ತೂಕ ಕಡಿಮೆಯಾಗುವುದು ಈ ಲಕ್ಷಣಗಳು ಕಂಡುಬಂದರೆ ನೀವು ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.
ಮಲಬದ್ಧತೆಗೆ ಕಾರಣಗಳು:
ಕಡಿಮೆ ಫೈಬರ್ಯುಕ್ತ ಆಹಾರ ಸೇವನೆ, ವಿಶೇಷವಾಗಿ ಮಾಂಸ ಸೇವನೆ, ನಿರ್ಜಲೀಕರಣ, ಕಡಿಮೆ ವ್ಯಾಯಾಮ, ಪ್ರಯಾಣ ಅಥವಾ ದಿನಚರಿಯಲ್ಲಿ ಇತರ ಬದಲಾವಣೆಗಳು, ಕೆಲವು ಆಂಟಿಸಿಡ್ಗಳು, ನೋವಿನ ಔಷಧಿಗಳು, ಮೂತ್ರವರ್ಧಕಗಳು ಮತ್ತು ಪಾರ್ಕಿನ್ಸನ್ ಕಾಯಿಲೆಗೆ ಕೆಲವು ಚಿಕಿತ್ಸೆಗಳು ಸೇರಿದಂತೆ ಔಷಧಿಗಳನ್ನು ಸೇವಿಸುವುದು, ಗರ್ಭಾವಸ್ಥೆ ಮಲಬದ್ಧತೆಗೆ ಸಾಮಾನ್ಯ ಕಾರಣಗಳಾಗಿವೆ.
ಇದನ್ನೂ ಓದಿ: ನಿಮ್ಮ ಮೆದುಳಿನ ಆರೋಗ್ಯಕ್ಕೆ ಈ 10 ಅಭ್ಯಾಸಗಳಿಂದ ದೂರವಿರಿ
ಮಲಬದ್ಧತೆಗೆ ಪರಿಹಾರ ಮತ್ತು ಚಿಕಿತ್ಸೆ:
– ನಿಮ್ಮ ಆಹಾರಕ್ರಮವನ್ನು ಬದಲಾಯಿಸುವುದು ಮತ್ತು ನಿಮ್ಮ ದೈಹಿಕ ಚಟುವಟಿಕೆಯ ಮಟ್ಟವನ್ನು ಹೆಚ್ಚಿಸುವುದು ಮಲಬದ್ಧತೆ ತಡೆಗಟ್ಟಲು ಸುಲಭವಾದ ಮಾರ್ಗವಾಗಿದೆ.
– ಪ್ರತಿದಿನ ದೇಹವನ್ನು ಹೈಡ್ರೇಟ್ ಮಾಡಲು 1.5 ರಿಂದ 2 ಲೀಟರ್ ನೀರು ಕುಡಿಯಿರಿ.
– ನಿರ್ಜಲೀಕರಣಕ್ಕೆ ಕಾರಣವಾಗುವ ಆಲ್ಕೋಹಾಲ್ ಮತ್ತು ಕೆಫೀನ್ ಮಾಡಿದ ಪಾನೀಯಗಳ ಸೇವನೆಯನ್ನು ಮಿತಿಗೊಳಿಸಿ.
– ಹಸಿ ಹಣ್ಣುಗಳು ಮತ್ತು ತರಕಾರಿಗಳು, ಧಾನ್ಯಗಳು, ಬೀನ್ಸ್, ಒಣದ್ರಾಕ್ಷಿಗಳಂತಹ ಫೈಬರ್-ಭರಿತ ಆಹಾರಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ.
– ಮಾಂಸ, ಹಾಲು, ಚೀಸ್ ಮತ್ತು ಸಂಸ್ಕರಿಸಿದ ಆಹಾರಗಳಂತಹ ಕಡಿಮೆ ಫೈಬರ್ ಆಹಾರಗಳನ್ನು ಕಡಿಮೆ ಮಾಡಿ.
– ಪ್ರತಿ ವಾರ ಸುಮಾರು 150 ನಿಮಿಷಗಳ ಕಾಲ ವ್ಯಾಯಾಮ ಮಾಡಿ, ನಡೆಯಿರಿ, ಈಜಿರಿ.