ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತಿ ಪಡೆಯಲು ದಿನವೂ ಈ ಅಭ್ಯಾಸ ರೂಢಿಸಿಕೊಳ್ಳಿ

Gastric Problems: ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ನಿವಾರಿಸಲು ನೀವು ಕೆಲವು ಮನೆಮದ್ದುಗಳನ್ನು ಬಳಸಬಹುದು. ಎಲ್ಲ ಹೊಟ್ಟೆನೋವೂ ಗ್ಯಾಸ್ಟ್ರಿಕ್​ನ ಲಕ್ಷಣವಲ್ಲ ಎಂಬುದು ನಿಮಗೆ ತಿಳಿದಿರಬೇಕು.ಈ ಕೆಲವು ಸರಳ ಅಭ್ಯಾಸಗಳು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತವೆ.

ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತಿ ಪಡೆಯಲು ದಿನವೂ ಈ ಅಭ್ಯಾಸ ರೂಢಿಸಿಕೊಳ್ಳಿ
ಗ್ಯಾಸ್ಟ್ರಿಕ್Image Credit source: iStock
Follow us
ಸುಷ್ಮಾ ಚಕ್ರೆ
|

Updated on: Nov 06, 2023 | 6:34 PM

ಗ್ಯಾಸ್ಟ್ರಿಕ್ ಸಮಸ್ಯೆಯು ಅತ್ಯಂತ ತ್ರಾಸದಾಯಕ ಮತ್ತು ಮುಜುಗರದ ಸಮಸ್ಯೆಯಾಗಿದೆ. ಭಾರತೀಯರಲ್ಲಿ ಇದು ಸಾಮಾನ್ಯ ಮತ್ತು ದಿನನಿತ್ಯದ ಸಮಸ್ಯೆಯಾಗಿದೆ. ಇಲ್ಲಿನ ಜನರು ರುಚಿ ರುಚಿಯಾದ, ಮಸಾಲೆಯುಕ್ತ ಆಹಾರವನ್ನು ಹೆಚ್ಚು ತಿನ್ನುತ್ತಾರೆ. ಗ್ಯಾಸ್ಟ್ರಿಕ್ ಬಂದಾಗ ಹೊಟ್ಟೆನೋವು ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಲಕ್ಷಣವಾಗಿದೆ. ಆದರೆ, ಎಲ್ಲ ಹೊಟ್ಟೆನೋವೂ ಗ್ಯಾಸ್ಟ್ರಿಕ್​ನ ಲಕ್ಷಣವಲ್ಲ ಎಂಬುದು ಕೂಡ ನಿಮಗೆ ತಿಳಿದಿರಬೇಕು.

ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ನಿವಾರಿಸಲು ನೀವು ಕೆಲವು ಮನೆಮದ್ದುಗಳನ್ನು ಬಳಸಬಹುದು. ಗ್ಯಾಸ್ಟ್ರಿಕ್ ಸಮಸ್ಯೆಗಳು, ಲಕ್ಷಣಗಳು ಮತ್ತು ಪರಿಹಾರಗಳ ಬಗ್ಗೆ ಮಾಹಿತಿ ಇಲ್ಲಿದೆ. ಗ್ಯಾಸ್ಟ್ರಿಕ್ ಸಮಸ್ಯೆಯನ್ನು ತಡೆಯಲು ಈ ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಉತ್ತಮ. ಈ ಕೆಲವು ಸರಳ ಅಭ್ಯಾಸಗಳು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತವೆ.

ಇದನ್ನೂ ಓದಿ: Acidity Pills Side Effect: ಗ್ಯಾಸ್ ಸಮಸ್ಯೆಯೇ? ಅಸಿಡಿಟಿ ಮಾತ್ರೆ ಸೇವಿಸುವ ಮುನ್ನ ಅಡ್ಡಪರಿಣಾಮಗಳ ಬಗ್ಗೆ ತಿಳಿಯಿರಿ

ಊಟವನ್ನು ಬಿಟ್ಟುಬಿಡಬೇಡಿ ಮತ್ತು ದಿನಕ್ಕೆ 5 ಬಾರಿ ತಿನ್ನಿರಿ:

ಖಾಲಿ ಹೊಟ್ಟೆಯು ಗ್ಯಾಸ್ ಅಥವಾ ಆಮ್ಲೀಯತೆಗೆ ಕಾರಣವಾಗಬಹುದು. ಒಂದೇ ಬಾರಿ ಹೊಟ್ಟೆ ತುಂಬುವಷ್ಟು ಭಾರೀ ಊಟವನ್ನು ತಿನ್ನುವ ಬದಲು, ದಿನಕ್ಕೆ 5 ಬಾರಿ ಸ್ವಲ್ಪ ಸ್ವಲ್ಪ ಆಹಾರ ಸೇವಿಸಿ. “ಬೆಳಗಿನ ಉಪಹಾರವನ್ನು ರಾಜನಂತೆ, ಮಧ್ಯಾಹ್ನದ ಊಟವನ್ನು ರಾಜಕುಮಾರನಂತೆ ಮತ್ತು ರಾತ್ರಿಯ ಊಟವನ್ನು ಬಡವನಂತೆ ಸೇವಿಸಿ” ಎಂದು ಹೇಳಲಾಗುತ್ತದೆ. ಮೊಸರು, ಆಯಾ ಸೀಸನ್​ನಲ್ಲಿ ಸಿಗುವ ಹಣ್ಣುಗಳು, ತರಕಾರಿಗಳು, ಮೊಟ್ಟೆಗಳನ್ನು ತಿನ್ನಿರಿ. ಆದಷ್ಟೂ ಜಂಕ್ ಫುಡ್, ಕರಿದ, ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರವನ್ನು ಕಡಿಮೆ ಮಾಡಿ.

ಧೂಮಪಾನ ಮಾಡಬೇಡಿ, ಆಲ್ಕೊಹಾಲ್ ಸೇವನೆಯನ್ನು ಬಿಟ್ಟುಬಿಡಿ:

ಧೂಮಪಾನವು ಎದೆಯುರಿ ಮತ್ತು ಆಸಿಡ್ ರಿಫ್ಲಕ್ಸ್‌ಗೆ ಕಾರಣವಾಗುತ್ತದೆ. ಇದು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಉಂಟುಮಾಡುವ ಜೀರ್ಣಕಾರಿ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತದೆ. ಅತಿಯಾದ ಆಲ್ಕೋಹಾಲ್ ಸಹ ಜೀರ್ಣಾಂಗ ವ್ಯವಸ್ಥೆಯನ್ನು ಕೆರಳಿಸುತ್ತದೆ.

ಚೆನ್ನಾಗಿ ನಿದ್ರೆ ಮಾಡಿ:

ನಿದ್ರೆಯ ಕೊರತೆಯು ಜೀರ್ಣಾಂಗ ವ್ಯವಸ್ಥೆಯ ಸರಿಯಾದ ಕಾರ್ಯನಿರ್ವಹಣೆಯನ್ನು ಅಡ್ಡಿಪಡಿಸುತ್ತದೆ. ಆದ್ದರಿಂದ, ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಲು 7-8 ಗಂಟೆಗಳ ನಿದ್ರೆ ಬಹಳ ಮುಖ್ಯ.

ಇದನ್ನೂ ಓದಿ: Sleeping Tips: ಮಲಗಿದ ಕೂಡಲೆ ನಿದ್ರೆ ಬರಲು ಏನು ಮಾಡಬೇಕು?

ಕೆಲವು ಇತರ ಆರೋಗ್ಯಕರ ಅಭ್ಯಾಸಗಳು ಹೀಗಿವೆ:

– ಕಾರ್ಬೊನೇಟೆಡ್ ಪಾನೀಯಗಳನ್ನು ಸೇವಿಸಬೇಡಿ. ಅದರ ಬದಲಿಗೆ ಎಳನೀರನ್ನು ಸೇವಿಸಿ.

– ದಿನವೂ ವ್ಯಾಯಾಮ ಮಾಡಿ.

– ಹೈಡ್ರೇಟೆಡ್ ಆಗಿರಿ.

– ಜೀರ್ಣಿಸಿಕೊಳ್ಳಲು ಕಷ್ಟಕರವಾದ ಆಹಾರವನ್ನು ಸೇವಿಸಬೇಡಿ.

– ಊಟವಾದ ತಕ್ಷಣ ಮಲಗಬೇಡಿ.

– ದಿನವೂ ಮಲವಿಸರ್ಜನೆ ಮಾಡುವುದು ಕೂಡ ಅತಿ ಮುಖ್ಯ. ಆ ಬಗ್ಗೆಯೂ ಗಮನವಿರಲಿ.

– ನಿಧಾನವಾಗಿ ತಿನ್ನಿರಿ ಮತ್ತು ನಿಮ್ಮ ಆಹಾರವನ್ನು ಸರಿಯಾಗಿ ಅಗಿದು ತಿನ್ನಿರಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ