Heart Attack: ನಿದ್ರೆ ಮಾಡುವಾಗ ಗೋಚರವಾಗುವ ಹೃದಯಾಘಾತದ 5 ಲಕ್ಷಣಗಳೇನು?

|

Updated on: Oct 12, 2023 | 5:11 PM

ಹೃದಯಾಘಾತದ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಹೃದಯ ವೈಫಲ್ಯದ ಹಲವಾರು ಅಪಾಯಕಾರಿ ಚಿಹ್ನೆಗಳು ನಿದ್ರಿಸುವಾಗಲೇ ಹೆಚ್ಚು ಗಮನಕ್ಕೆ ಬರಬಹುದು. ಈ ಎಚ್ಚರಿಕೆಯ ಚಿಹ್ನೆಗಳ ಬಗ್ಗೆ ತಿಳಿದಿರುವುದು ಅತ್ಯಗತ್ಯ. ರಾತ್ರಿ ಮಲಗಿರುವಾಗ ನಮ್ಮ ಅನುಭವಕ್ಕೆ ಬರುವ ಹೃದಯಾಘಾತದ 5 ಲಕ್ಷಣಗಳಿವು.

Heart Attack: ನಿದ್ರೆ ಮಾಡುವಾಗ ಗೋಚರವಾಗುವ ಹೃದಯಾಘಾತದ 5 ಲಕ್ಷಣಗಳೇನು?
ಸಾಂದರ್ಭಿಕ ಚಿತ್ರ
Image Credit source: iStock
Follow us on

ಇತ್ತೀಚೆಗೆ ಮಧ್ಯ ವಯಸ್ಕರಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚಾಗುತ್ತಿದೆ. ಹೃದಯ ವೈಫಲ್ಯವು ಗಂಭೀರವಾದ ವೈದ್ಯಕೀಯ ಸ್ಥಿತಿಯಾಗಿದ್ದು, ಹೃದಯವು ರಕ್ತವನ್ನು ಪರಿಣಾಮಕಾರಿಯಾಗಿ ಪಂಪ್ ಮಾಡಲು ಸಾಧ್ಯವಾಗದಿದ್ದಾಗ ಶ್ವಾಸಕೋಶಗಳು ಮತ್ತು ಇತರ ಅಂಗಾಂಶಗಳಲ್ಲಿ ದ್ರವದ ಸಂಗ್ರಹಕ್ಕೆ ಕಾರಣವಾಗುತ್ತದೆ. ಹೃದಯಾಘಾತದ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಹೃದಯ ವೈಫಲ್ಯದ ಹಲವಾರು ಅಪಾಯಕಾರಿ ಚಿಹ್ನೆಗಳು ನಿದ್ರಿಸುವಾಗಲೇ ಹೆಚ್ಚು ಗಮನಕ್ಕೆ ಬರಬಹುದು. ಈ ಎಚ್ಚರಿಕೆಯ ಚಿಹ್ನೆಗಳ ಬಗ್ಗೆ ತಿಳಿದಿರುವುದು ಅತ್ಯಗತ್ಯ.

ರಾತ್ರಿ ಮಲಗಿರುವಾಗ ನಮ್ಮ ಅನುಭವಕ್ಕೆ ಬರುವ ಹೃದಯಾಘಾತದ 5 ಲಕ್ಷಣಗಳಿವು. ಇವುಗಳು ಎಲ್ಲರಿಗೂ ಒಂದೇ ರೀತಿಯಲ್ಲಿ ಇರುವುದಿಲ್ಲವಾದರೂ ಈ ಲಕ್ಷಣಗಳು ಕಂಡುಬಂದರೆ ಅದನ್ನು ನಿರ್ಲಕ್ಷ್ಯ ಮಾಡುವುದು ಒಳ್ಳೆಯದಲ್ಲ. ತಕ್ಷಣ ಉತ್ತಮ ವೈದ್ಯರನ್ನು ಭೇಟಿಯಾಗಿ, ತಪಾಸಣೆ ಮಾಡಿಸಿಕೊಳ್ಳಿ.

1. ಉಸಿರಾಟದ ತೊಂದರೆ:

ಮಲಗಿರುವಾಗ ಹಠಾತ್ ಉಸಿರಾಟದ ತೊಂದರೆ ಅನುಭವಿಸುವುದು ನಿದ್ರೆಯ ಸಮಯದಲ್ಲಿ ಹೃದಯ ವೈಫಲ್ಯದ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ. ನಿಮಗೆ ದಿಂಬುಗಳ ಸಹಾಯದಿಂದ ಎದ್ದು ಕುಳಿತು ಉಸಿರಾಡಬೇಕಾದ ಅನಿವಾರ್ಯತೆ ಎದುರಾದರೆ, ಮಲಗಿದಾಗ ಉಸಿರಾಡಲು ಕಷ್ಟವಾದರೆ ಈ ಸ್ಥಿತಿಯನ್ನು ಆರ್ಥೋಪ್ನಿಯಾ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ನಿಮ್ಮ ಚರ್ಮಕ್ಕೆ ವ್ಯಾಸಲಿನ್ ಹಚ್ಚುವುದು ಒಳ್ಳೆಯದಾ? ಪೆಟ್ರೋಲಿಯಂ ಜೆಲ್ಲಿಯ ಅಡ್ಡ ಪರಿಣಾಮಗಳೇನು?

ಪ್ಯಾರೊಕ್ಸಿಸ್ಮಲ್ ನೊಕ್ಟರ್ನಲ್ ಡಿಸ್ಪ್ನಿಯಾ (PND):

ಹೃದಯಾಘಾತದಿಂದ ಬಳಲುತ್ತಿರುವ ಜನರು ರಾತ್ರಿಯ ಸಮಯದಲ್ಲಿ ತೀವ್ರವಾದ ಉಸಿರಾಟದ ತೊಂದರೆಗಳನ್ನು ಅನುಭವಿಸಬಹುದು. ಇದನ್ನು ಪ್ಯಾರೊಕ್ಸಿಸ್ಮಲ್ ರಾತ್ರಿಯ ಡಿಸ್ಪ್ನಿಯಾ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ನಿದ್ರೆ ಮಾಡಿದ ಕೆಲವು ಗಂಟೆಗಳ ನಂತರ ಸಂಭವಿಸುತ್ತದೆ. ವಿಪರೀತ ಆತಂಕದ ಭಾವನೆ ಮತ್ತು ಕುಳಿತುಕೊಳ್ಳಲು ಅಥವಾ ನಿಲ್ಲಬೇಕೆಂಬ ಚಡಪಡಿಕೆ ಶುರುವಾಗುತ್ತದೆ.

ಕೆಮ್ಮು ಮತ್ತು ಉಬ್ಬಸ:

ಶ್ವಾಸಕೋಶದಲ್ಲಿ ದ್ರವ ಶೇಖರಣೆಯಾಗುವುದರಿಂದ ಕೆಮ್ಮು ಮತ್ತು ಉಬ್ಬಸ ಉಂಟಾಗಬಹುದು. ವಿಶೇಷವಾಗಿ ರಾತ್ರಿಯಲ್ಲಿ ಈ ಸಮಸ್ಯೆ ಹೆಚ್ಚಾಗುತ್ತದೆ. ಗುಲಾಬಿ ಬಣ್ಣದ ಕಫ ಕೂಡ ಉಂಟಾಗಬಹುದು.

ವೇಗದ ಹೃದಯ ಬಡಿತ:

ಹೃದಯ ವೈಫಲ್ಯವು ಅನಿಯಮಿತ ಅಥವಾ ವೇಗದ ಹೃದಯ ಬಡಿತವನ್ನು ಉಂಟುಮಾಡಬಹುದು. ವಿಶೇಷವಾಗಿ ನಿದ್ರೆಯ ಸಮಯದಲ್ಲಿ ಈ ರೀತಿಯಾಗುವುದು ಸಾಮಾನ್ಯ. ಇದು ವ್ಯಕ್ತಿಯನ್ನು ನಿದ್ರೆಯಿಂದ ಎಚ್ಚರಗೊಳಿಸಬಹುದು.

ಇದನ್ನೂ ಓದಿ: Cardamom Benefits: ಏಲಕ್ಕಿ ಸೇವನೆಯಿಂದ ಆರೋಗ್ಯಕ್ಕೆ ಆಗುವ 10 ಪ್ರಯೋಜನಗಳಿವು

ದಿಢೀರನೆ ಎಚ್ಚರಾಗುವುದು:

ಹೃದಯ ವೈಫಲ್ಯದ ಬಹುತೇಕ ಪ್ರಕರಣಗಳಲ್ಲಿ ಎದೆ ನೋವು ಕಾಣಿಸಿಕೊಂಡು, ನಿದ್ರೆಯಿಂದ ದಿಢೀರನೆ ಎಚ್ಚರಾಗಬಹುದು. ಈ ಎಚ್ಚರಿಕೆಯ ಚಿಹ್ನೆಗಳು ಉಂಟಾದರೆ ತಕ್ಷಣ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುತ್ತದೆ.

ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ ಮಲಗಿರುವಾಗ ಈ ಯಾವುದೇ ಲಕ್ಷಣಗಳನ್ನು ಅನುಭವಿಸಿದರೆ ವೈದ್ಯರ ಸಲಹೆ ಪಡೆಯುವುದು ಅಗತ್ಯ. ಹೃದಯಾಘಾತವು ಗಂಭೀರ ಸ್ಥಿತಿಯಾಗಿದ್ದು, ಔಷಧಿಗಳು, ಜೀವನಶೈಲಿಯ ಬದಲಾವಣೆ ಮತ್ತು ಕೆಲವು ಸಂದರ್ಭಗಳಲ್ಲಿ ಅಳವಡಿಸಬಹುದಾದ ಸಾಧನಗಳು ಅಥವಾ ಶಸ್ತ್ರಚಿಕಿತ್ಸೆ ಸೇರಿದಂತೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ