ಕೊವಿಡ್ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡಲು ಪ್ರಾರಂಭಿಸಿತು. ಸೋಂಕಿಗೆ ಒಳಗಾದವರ ನಿದ್ದೆ ಕೆಡಿಸಿತು. ಅದೆಷ್ಟೊ ವಯಸ್ಸಾದವರ ನೆಮ್ಮದಿಯನ್ನು ಕಿತ್ತುಕೊಂಡಿತು. ಮಾನಸಿಕ ನೆಮ್ಮದಿ ಇದ್ದರೆ ಮನುಷ್ಯ ನೆಮ್ಮದಿಯ ಜೀವನವನ್ನು ನಡೆಸಬಲ್ಲ. ಹೀಗಿರುವಾಗ ಮುಖ್ಯವಾಗಿ ಮಾನಸಿಕ ಸದೃಢತೆ ಜತೆಗೆ ಉತ್ತಮ ಆರೋಗ್ಯ ಮುಖ್ಯ. ಸೋಂಕು ಹರಡಬಹುದು ಎಂಬ ಚಿಂತೆ ವಯಸ್ಕರ ಖುಷಿಯನ್ನು ಕಿತ್ತುಕೊಳ್ಳುತ್ತಿದೆ. ಹೀಗಿರುವಾಗ ಅವರಿಗೆ ಮಾನಸಿಕ ಧೈರ್ಯ ತುಂಬುವತ್ತ ಹೆಚ್ಚಿನ ಗಮನವನ್ನು ನೀಡಬೇಕಾಗಿದೆ.
ಕೊರೊನಾ ಸೋಂಕಿನ ತೀವ್ರತೆಯಿಂದ ಬಳಲುತ್ತಿರುವವರ ಸುದ್ದಿಯನ್ನು ಕೇಳಿದಾಕ್ಷಣ ಮನೆಯಲ್ಲಿದ್ದ ವಯಸ್ಕರ ಆತಂಕ ಹೆಚ್ಚಾಗುತ್ತದೆ. ಹಾಗಿರುವಾಗ ಅವರಿಗೆ ಮಾನಸಿಕ ಸದೃಢತೆಯ ಜತೆಗೆ ಧೈರ್ಯ ತುಂಬುವ ಮಾತುಬೇಕು. ದಿನನಿತ್ಯ ಒಳ್ಳೆಯ ಮಾತನಾಡುತ್ತಾ ಅವರಿಗಾಗಿಯೇ ಒಂದಿಷ್ಟು ಸಮಯವನ್ನು ಮೀಸಲಿಡುವ ಮೂಲಕ ಅವರ ಚಿಂತೆ ದೂರಮಾಡಬೇಕು. ಆಗ ಅವರ ಆರೋಗ್ಯ ಸುಧಾರಿಸುತ್ತದೆ. ಹೀಗಿರುವಾಗ ವಯಸ್ಕರನ್ನು ಸಂತೋಷದಿಂದ ನೋಡಿಕೊಳ್ಳಲು ಕೆಲವು ಸಲಹೆಗಳು ಹೀಗಿವೆ.
ವಯಸ್ಸಾದವರ ಮಧ್ಯೆ ಮಾನಸಿಕ ಆರೋಗ್ಯವನ್ನು ಸುಧಾರಿಸುವ ಸರಳ ವಿಧಾನಗಳು * ವಯಸ್ಕರ ಭಾವನೆಗಳನ್ನು ಹಂಚಿಕೊಳ್ಳುವ ವ್ಯಕ್ತಿಗಳೊಡನೆ ಅವರಿಗೆ ಮಾತನಾಡಲು ಅವಕಾಶ ಮಾಡಿಕೊಡಿ. * ಅವರ ಕುರಿತಾಗಿ ಹೆಚ್ಚಾಗಿ ಕಾಳಜಿಯನ್ನು ವಹಿಸಿ. ಜತೆಗೆ ಯಾವಾಗಲೂ ಮಾನಸಿಕ ಸ್ಥೈರ್ಯ ತುಂಬುತ್ತಿರಿ. * ಸಮಯಕ್ಕನುಸಾರವಾದ ಔಷಧಿ, ವ್ಯಾಯಾಮ ಮತ್ತು ಕುಟುಂಬದವರೊಂದಿಗೆ ಹೆಚ್ಚಿನ ಸಮಯ ಕಳೆಯಲು ಅವಕಾಶ ಮಾಡಿಕೊಡಿ. * ದೈನಂದಿನ ಅವರ ಕೆಲಸವನ್ನು ಇತರರು ಮಾಡಿಕೊಡಬೇಕು ಎಂಬುದರ ಕುರಿತಾಗಿ ಅವರು ಬೇಸರದಿಂದಿರಬಹುದು. ಹಾಗಾಗಿ ಅವರ ಜೀವನ ಅನುಭವ ಮತ್ತು ಕೌಶಲ್ಯಗಳ ಕುರಿತಾಗಿ ಅವರಿಗೆ ನೆನಪಿಸುತ್ತಿರಿ ಜತೆಗೆ ಅವರೊಂದಿಗೆ ಖುಷಿಯಿಂದ ಕಾಲ ಕಳೆಯಿರಿ. * ಯಾವಾಗಲೂ ಖುಷಿಯಿಂದ ನಗುತ್ತಿರುವಂತೆ ಅವರನ್ನು ನೋಡಿಕೊಳ್ಳಿ. * ಹಳೆಯ ಸುಮಧುರ ಹಾಡುಗಳನ್ನು ಕೇಳುವುದು, ತೋಟದಲ್ಲಿ ಅವರೊಡನೆ ಸುತ್ತಾಡುವುದು ಹಾಗೂ ಅವರ ಕಾಲದ ಕಥೆಗಳನ್ನು ಹಂಚಿಕೊಳ್ಳಲು ಅವರಿಗಾಗಿ ಒಂದಿಷ್ಟು ಸಮಯವನ್ನು ಕೊಡಿ. * ಆಗಾಗ ಹೊರಡುತ್ತಿರುವ ಧೈರ್ಯಗೆಡಿಸುವ ಸುದ್ದಿಗಳನ್ನು ಆದಷ್ಟು ಅವರಿಂದ ತಪ್ಪಿಸಿ. ಆದರೂ ಅವರಿಗೆ ತಿಳಿದಲ್ಲಿ ವಿಷಯದ ಕುರಿತಾಗಿ ತಿಳಿ ಹೇಳಿ. * ಆತಂಕದಿಂದ ಅವರನ್ನು ಹೊರತರಲು ಒಬ್ಬಂಟಿಯಾಗಿ ಬಿಡಬೇಡಿ. ಅವರ ಒಬ್ಬಂಟಿ ತನವು ಚಿಂತೆಗೆ ಒಳಗಾಗುವಂತೆ ಮಾಡುತ್ತದೆ ಇದರಿಂದ ಅವರ ಮಾನಸಿಕ ಸ್ಥಿತಿಗತಿ ಏರು-ಪೇರಾಗುವುದು.
ಇದನ್ನೂ ಓದಿ:
ಕೊರೊನಾ ರೋಗಿಗಳು ಉಸಿರಾಟದ ವ್ಯಾಯಾಮ ಮಾಡುವುದು ಹೇಗೆ?..ಇಲ್ಲಿದೆ ನೋಡಿ ಕೇಂದ್ರ ಸರ್ಕಾರ ಸೂಚಿಸಿದ ಕ್ರಮಗಳು
Health Tips: ಆರೋಗ್ಯ ಕಾಪಾಡಿಕೊಳ್ಳಲು ಮಹಿಳೆಯರಿಗಾಗಿ ಕಿವಿಮಾತು; ನಿಮಗಾಗಿಯೇ ಒಂದಿಷ್ಟು ಸಮಯ ಮೀಸಲಿಡಿ