ಮಹಿಳೆಯರಲ್ಲಿ ಕಾಡುವ ಗರ್ಭಕಂಠದ ಕ್ಯಾನ್ಸರ್ಗೆ ಕಾರಣಗಳೇನು? ಯಾವ ರೀತಿ ಚಿಕಿತ್ಸೆ ಅಗತ್ಯ? ಇಲ್ಲಿದೆ ಮಾಹಿತಿ
ಗರ್ಭಕಂಠದ ಕ್ಯಾನ್ಸರ್ಗೆ ಶಸ್ತ್ರಚಿಕಿತ್ಸೆ, ಕಿಮೋಥೆರಪಿ, ರೇಡಿಯೋ ಥೆರಫಿಗಳಂತಹ ಚಿಕಿತ್ಸಾ ವಿಧಾಗಳಿವೆ. ಆದರೆ ಈ ಚಿಕಿತ್ಸೆಗಳು ವಯಸ್ಯ, ಕ್ಯಾನ್ಸರ್ನ ಹಂತ ಮತ್ತು ಮಹಿಳೆಯ ಆರೋಗ್ಯದ ಮೇಲೆ ನಿರ್ಧಾರವಾಗುತ್ತದೆ
ಕ್ಯಾನ್ಸರ್ ಹೆಸರು ಕೇಳಿದರೇ ಒಂದು ರೀತಿಯ ಭಯ ಆರಂಭವಾಗುತ್ತದೆ. ಜೀವವನ್ನೇ ಕಿತ್ತು ತಿನ್ನುವ ಕ್ಯಾನ್ಸರ್ಗಳಲ್ಲಿ ಹಲವು ವಿಧಗಳಿವೆ. ಅದರಲ್ಲಿ ಒಂದು ಗರ್ಭಕಂಠದ ಕ್ಯಾನ್ಸರ್ (Cervical Cancer) ಮಹಿಳೆಯರಲ್ಲಿ ಕಾಡುವ ಈ ಕಾಯಿಲೆ ಗರ್ಭಾಶಯ ಮತ್ತು ಯೋನಿಯನ್ನು ಸಂಪರ್ಕಿಸುವ ಗರ್ಭಕಂಠದಲ್ಲಿ ಜೀವಕೋಶಗಳು ಬದಲಾದಾಗ ಗರ್ಭಕಂಠದ ಕ್ಯಾನ್ಸರ್ ಸಂಭವಿಸುತ್ತದೆ. ಹ್ಯುಮನ್ ಪ್ಯಾಪಿಲೋಮವೈರಸ್ (HPV -human papillomavirus) ಸೋಂಕಿನಿಂದ ಗರ್ಭಕಂಠದ ಕ್ಯಾನ್ಸರ್ ಉಂಟಾಗುತ್ತವೆ, ಇದನ್ನು ಲಸಿಕೆಯಿಂದ ತಡೆಗಟ್ಟಬಹುದಾಗಿದೆ. ಆದರೆ ಈ ಕಾಯಿಲೆ ಆರಂಭದಲ್ಲಿ ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ. ಆದ್ದರಿಂದ ದೇಹದಲ್ಲಿ ಆಗುವ ಸಣ್ಣ ಬದಲಾವಣೆಯನ್ನೂ ಎಚ್ಚರಿಕೆಯಿಂದ ಗಮನಿಸುವುದು ಅಗತ್ಯವಾಗಿದೆ. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ (Centers for Disease Control and Prevention (CDC)) ಸಂಸ್ಥೆ ಗರ್ಭಕಂಠದ ಕ್ಯಾನ್ಸರ್ಗೆ 9-26 ವರ್ಷದ ಎಲ್ಲಾ ಮಹಿಳೆಯರಿಗೆ ಚುಚ್ಚುಮದ್ದನ್ನು ಸಲಹೆ ನೀಡಿದೆ. ಇದೀಗ 26-45 ವರ್ಷದ ಮಹಿಳೆಯರಿಗೂ ಚುಚ್ಚುಮದ್ದನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದೆ.
ಗರ್ಭಕಂಠದ ಕ್ಯಾನ್ಸರ್ನ ಸಾಮಾನ್ಯ ಲಕ್ಷಣಗಳು ಮೆಡಿಕಲ್ ನ್ಯೂಸ್ ಟುಡೆ ವರದಿಯ ಪ್ರಕಾರ, ಸಾಮಾನ್ಯವಾಗಿ ಗರ್ಭಕಂಠದ ಕ್ಯಾನ್ಸರ್ ರೋಗವು ರೋಗ ಲಕ್ಷಣಗಳನ್ನು ತೋರಿಸುವುದಿಲ್ಲ. ಆದರೆ ಈ ಲಕ್ಷಣಗಳು ನಿಮಗೆ ಮುನ್ಸೂಚನೆಯನ್ನು ನೀಡುತ್ತವೆ.
ಮಾಸಿಕ ದಿನಗಳ ನಡುವೆ ರಕ್ತಸಾವ ಲೈಂಗಿಕ ಸಂಭೋಗದ ಬಳಿಕ ರಕ್ತಸ್ರಾವವಾಗುವುದು ಸಂಭೋಗದ ನಡುವೆ ಅಸ್ವಸ್ಥತೆ ಕಾಡುವುದು ಯೋನಿಯಲ್ಲಿ ಅನಗತ್ಯ ರಕ್ತಸ್ರಾವ ಯೋನಿಯಲ್ಲಿ ಆಗಾಗ ನೋವು ಕಾಣಿಸಿಕೊಳ್ಳುವುದು.
ಗರ್ಭಕಂಠ ಕ್ಯಾನ್ಸರ್ನ ಹಂತಗಳು ಕ್ಯಾನ್ಸರ್ ಯಾವ ಹಂತದಲ್ಲಿದೆ ಎಂದು ತಿಳಿದುಕೊಂಡರೆ ವೈದ್ಯರಿಗೂ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ. ಹೀಗಾಗಿ ಕ್ಯಾನ್ಸರ್ನ 4 ಹಂತಗಳ ಬಗ್ಗೆ ತಿಳಿದುಕೊಳ್ಳಿ.
ಮೊದಲು ದೇಹದಲ್ಲಿ ಕೇವಲ ಕ್ಯಾನ್ಸರ್ಗೆ ಕಾರಣವಾದ ಜೀವಕೋಶಗಳು ಇರುತ್ತವೆ. ಮೊದಲನೇ ಹಂತದಲ್ಲಿ ಕ್ಯಾನ್ಸರ್ ಕೋಶಗಳು ಬೆಳೆದು ಗರ್ಭಕಂಠಕ್ಕೆ ಹೋಗುತ್ತವೆ. ಕೆಲವೊಮ್ಮ ಗರ್ಭಾಶಯಕ್ಕೂ ತಗುಲುವ ಸಾಧ್ಯತೆಗಳಿರುತ್ತದೆ. ಎರಡನೇ ಹಂತದಲ್ಲಿ ಗರ್ಭಕಂಠ ಮತ್ತು ಗರ್ಭಾಶಯದ ಬಳಿ ಇರುವ ಈ ಜೀವಕೋಶಗಳು ದುಗ್ಧರಸ ಗ್ರಂಥಿಗಳ ಮೇಲೆ ಪರಿಣಾಮ ಬೀರುತ್ತದೆ. ಮೂರನೇ ಹಂತದಲ್ಲಿ ಕ್ಯಾನ್ಸರ್ ಕೋಶಗಳು ಯೋನಿ ಮತ್ತು ಸೊಂಟದ ಗೋಡೆಗಳಲ್ಲಿ ಸೇರಿಕೊಂಡು ಮೂತ್ರನಾಳಗಳನ್ನು ನಿರ್ಬಂಧಿಸುತ್ತವೆ, ಮೂತ್ರಕೋಶದಿಂದ ಮೂತ್ರವನ್ನು ಸಾಗಿಸುವ ನಾಳಗಳ ಮೇಲೆ ಪರಿಣಾಮ ಬೀರಬಹುದು ಅಥವಾ ಬೀರದೆಯೂ ಇರಬಹುದು. ಇನ್ನು ನಾಲ್ಕನೇ ಹಂತದಲ್ಲಿ ಕ್ಯಾನ್ಸರ್ ಕೋಶಗಳು ಗುದನಾಳ, ಮೂತ್ರಕೋಶಗಳಿಗೆ ಹರಡಿ ನಂತರ ಯಕೃತ್ತು, ಮೂಳೆಗಳು, ಶ್ವಾಸಕೋಶ, ದುಗ್ಥ ಗ್ರಂಥಿಗಳು ಸೇರದಂತೆ ದೇಹದ ಇತರ ಭಾಗಗಳಿಗೂ ಹರಡುತ್ತದೆ.
ಗರ್ಭಕಂಠದ ಕ್ಯಾನ್ಸರ್ಗೆ ಕಾರಣಗಳೇನು? ಅನಿಯಂತ್ರಿತ ಕ್ಯಾನ್ಸರ್ ಕೋಶಗಳ ಉತ್ಪಾದನೆ ಮತ್ತು ಅಸಹಜ ಬೆಳವಣಿಗೆ ಅಪಾಯಕಾರಿ ಗರ್ಭಕಂಠದ ಕ್ಯಾನ್ಸರ್ಗೆ ಕಾರಣವಾಗುತ್ತದೆ. ಕ್ರಮೇಣ ಇದು ಗಡ್ಡೆಗಳಾಗಿ ಮಾರ್ಪಾಡಾಗುತ್ತದೆ.
HPV (human papillomavirus) ಇದು ಅಸುರಕ್ಷಿತ ಲೈಂಗಕತೆಯಿಂದ ಹರಡುವ ವೈರಸ್ ಆಗಿದೆ. 100 ಕ್ಕೂ ಹೆಚ್ಚು ವಿವಿಧ ರೀತಿಯ ಈ ವೈರಸ್ಗಳಲ್ಲಿ 13 ವೈರಸ್ಗಳು ಗರ್ಭಕಂಠದ ಕ್ಯಾನ್ಸರ್ಗೆ ಕಾರಣವಾಗಿದೆ.
ಅಸುರಕ್ಷಿತ ಲೈಂಗಿಕತೆ ಮತ್ತು ಜನನ ನಿಯಂತ್ರಣ ಮಾತ್ರೆ ಸೇವನೆ HPV ಸೋಂಕಿರುವ ಪುರುಷರೊಂದಿಗೆ ಲೈಂಗಿಕತೆಗೆ ಒಳಪಟ್ಟಾಗ ಸೋಂಕು ಮಹಿಳೆಯರಿಗೆ ತಗುಲುತ್ತದೆ. ಇದರಿಂದ ವೈರಸ್ ದೇಹದಲ್ಲಿ ಬೆಳವಣಿಗೆಯಾಗಿ ಗರ್ಭಕಂಠದ ಕ್ಯಾನ್ಸರ್ಗೆ ಕಾರಣವಾಗುತ್ತದೆ. ಇದರ ಜತೆಗೆ ಮುಖ್ಯವಾಗಿ ಜನನ ನಿಯಂತ್ರಣ ಮಾತ್ರೆಗಳನ್ನು ಹೆಚ್ಚು ಸೇವಿಸಿದಾಗ ಗರ್ಭಕಂಠದ ಕ್ಯಾನ್ಸರ್ ತಗುಲುತ್ತದೆ ಎನ್ನುತ್ತಾರೆ ತಜ್ಞರು
ಧೂಮಪಾನ ಮತ್ತು ರೋಗ ನಿರೋಧಕ ಶಕ್ತಿಯ ಕೊರತೆ ಧೂಮಪಾನದಿಂದ ಗರ್ಭಕಂಠದ ಕ್ಯಾನ್ಸರ್ ಉಂಟಾಗುತ್ತದೆ. ಅದೇ ರೀತಿ ಎಚ್ಐವಿ, ಏಡ್ಸ್ನಂತಹ ಕಾಯಿಲೆಯಿರುವವವರಲ್ಲಿ ರೋಗ ನಿರೋಧಕ ಶಕ್ತಿ ಕೂಡ ಕಡಿಮೆ ಇರುತ್ತದೆ. ಆದ್ದರಿಂದ ಈ ರೋಗ ಸುಲಭವಾಗಿ ದೇಹವನ್ನು ಆಕ್ರಮಿಸಿಕೊಳ್ಳುತ್ತದೆ.
ಚಿಕಿತ್ಸೆಗಳೇನು?
ಗರ್ಭಕಂಠದ ಕ್ಯಾನ್ಸರ್ಗೆ ಶಸ್ತ್ರಚಿಕಿತ್ಸೆ, ಕಿಮೋಥೆರಪಿ, ರೇಡಿಯೋ ಥೆರಫಿಗಳಂತಹ ಚಿಕಿತ್ಸಾ ವಿಧಾಗಳಿವೆ. ಆದರೆ ಈ ಚಿಕಿತ್ಸೆಗಳು ವಯಸ್ಯ, ಕ್ಯಾನ್ಸರ್ನ ಹಂತ ಮತ್ತು ಮಹಿಳೆಯ ಆರೋಗ್ಯದ ಮೇಲೆ ನಿರ್ಧಾರವಾಗುತ್ತದೆ. ಕ್ಯಾನ್ಸರ್ ಗರ್ಭಕಂಠಕ್ಕೆ ಹರಡದಿದ್ದಾಗ ಶಸ್ತ್ರಚಿಕಿತ್ಸೆಯ ಮೂಲಕ ಗುಣಮುಖರನ್ನಾಗಿಸಬಹುದು. ಆದರೆ ಮುಂದುವರೆದ ಹಂತಕ್ಕೆ ಹೋದರೆ ಕೀಮೋಥೆರಪಿ ಅಥವಾ ರೇಡಿಯೋ ಥೆರಪಿ ಚಿಕಿತ್ಸೆ ನೀಡಬೇಕಾಗುತ್ತದೆ. ರೇಡಿಯೋ ಥೆರಪಿ ಕ್ಯಾನ್ಸರ್ ಮತ್ತೆಂದೂ ಕಾಡದ ರೀತಿಯಲ್ಲಿ ಪರಿಹಾರ ನೀಡುತ್ತದೆ ಎನ್ನುವುದು ತಜ್ಞರ ಸಲಹೆ.
ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಿಕೆ ಹೇಗೆ?
ಲಸಿಕೆ ತೆಗೆದುಕೊಳ್ಳುವುದು ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಕ್ಯಾನ್ಸರ್ಗೆ ಕಾರಣವಾಗಿರುವ Human papillomavirus (HPV) ಸೋಂಕಿನ ವಿರುದ್ದ ಲಸಿಕೆಯನ್ನು ಪಡೆದುಕೊಳ್ಳಬೇಕು. ಈಗಾಗಲೇ 9 ವರ್ಷ ಮೇಲ್ಪಟ್ಟ ಎಲ್ಲಾ ಹೆಣ್ಣು ಮಕ್ಕಳಿಗೆ ಲಸಿಕೆ ನೀಡಲು ಅಮೆರಿಕದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ ಸೂಚಿಸಿದೆ.
ಸುರಕ್ಷಿತ ಲೈಂಗಿಕ ಕ್ರಿಯೆ ಮತ್ತು ಧೂಮಪಾನದಿಂದ ದೂರವಿರುವುದು ರೋಗದಿಂದ ದೂರಉಳಿಯಲು ಸುರಕ್ಷಿತ ಲೈಂಗಿಕ ಕ್ರಿಯೆಯನ್ನು ರೂಢಿಸಿಕೊಳ್ಳಬೇಕು. ಸ್ವಚ್ಛತೆಯೆಡೆಗೆ ಹೆಚ್ಚು ಗಮನ ನೀಡಬೇಕು. ಜತೆಗೆ ಧೂಮಪಾನದಿಂದ ದೂರುಳಿಯಬೇಕು. ಇದರ ಜತೆಗೆ ಆದಷ್ಟು ಲೈಂಗಿಕ ಸಂಭೋಗಕ್ಕೆ ಒಳಪಡುವುದನ್ನು ಮುಂದೂಡಿ.
ಸ್ಕ್ರೀನಿಂಗ್ ಗರ್ಭಕಂಠದ ಕ್ಯಾನ್ಸರ್ನ ಲಕ್ಷಣಗಳು ಕಾಣಿಸಿಕೊಂಡರೆ ಸ್ಕ್ರೀನಿಂಗ್ ಅಥವಾ ಎಕ್ಸರೆ ಮಾಡಿಸಿಕೊಳ್ಳಿ.ಆದಗ ದೇಹದಲ್ಲಾದ ಬದಲಾವಣೆ ಗೊತ್ತಾಗುತ್ತದೆ.
ಇದನ್ನೂ ಓದಿ:
ಡಿಯೋಡರೆಂಟ್ ಬಳಕೆ ಕ್ಯಾನ್ಸರ್ಗೆ ಕಾರಣವಾಗುತ್ತದೆಯೇ? ಇಲ್ಲಿದೆ ಮಾಹಿತಿ ಪರಿಶೀಲಿಸಿ