ಶವರ್ಮಾ ತಿಂದು ಬಾಲಕಿ ಸಾವು; ಆಕೆ ಸೇವಿಸಿದ ಆಹಾರದಲ್ಲಿತ್ತು ಶಿಗೆಲ್ಲ ಬ್ಯಾಕ್ಟೀರಿಯಾ, ಏನಿದು? ಇದೆಷ್ಟು ಅಪಾಯಕಾರಿ?

| Updated By: ರಶ್ಮಿ ಕಲ್ಲಕಟ್ಟ

Updated on: May 06, 2022 | 2:43 PM

Shigella bacteria ಅನಾರೋಗ್ಯಕ್ಕೆ ಕಾರಣವಾಗಲು ಕಡಿಮೆ ಸಂಖ್ಯೆಯ ಬ್ಯಾಕ್ಟೀರಿಯಾಗಳು ಸಾಕು. ಇವು ಸುಲಭವಾಗಿ ಸೋಂಕು ಹರಡಿಸುತ್ತವೆ ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಹೇಳುತ್ತದೆ.

ಶವರ್ಮಾ ತಿಂದು ಬಾಲಕಿ ಸಾವು; ಆಕೆ ಸೇವಿಸಿದ ಆಹಾರದಲ್ಲಿತ್ತು ಶಿಗೆಲ್ಲ ಬ್ಯಾಕ್ಟೀರಿಯಾ, ಏನಿದು? ಇದೆಷ್ಟು ಅಪಾಯಕಾರಿ?
ಶಿಗೆಲ್ಲ ಬ್ಯಾಕ್ಟೀರಿಯಾ
Follow us on

ಫುಡ್ ಪಾಯ್ಸನಿಂಗ್​​ನಿಂದಾಗಿ ಕಾಸರಗೋಡಿನಲ್ಲಿ 16 ವರ್ಷದ ಬಾಲಕಿ ಸಾವಿಗೀಡಾದ ಬೆನ್ನಲ್ಲೇ ಆಕೆಯ ಜೀವಕ್ಕೆ ಸಂಚಕಾರ  ತಂದಿದ್ದು ಶಿಗೆಲ್ಲ ಬ್ಯಾಕ್ಟೀರಿಯಾ (Shigella bacteria) ಎಂದು ಕೇರಳದ ಆರೋಗ್ಯ ಇಲಾಖೆ (Kerala health department) ಪತ್ತೆ ಹಚ್ಚಿದೆ. ಕಳೆದ ವಾರ ಕಾಸರಗೋಡಿನ ಚೆರುವತ್ತೂರಿನಲ್ಲಿ ಚಿಕನ್ ಶವರ್ಮಾ(chicken shawarma) ಸೇವಿಸಿದ ಬಳಿಕ ಚಿಕಿತ್ಸೆ ಪಡೆಯುತ್ತಿದ್ದವರ ರಕ್ತ ಮತ್ತು ಮಲದಲ್ಲಿ ಬ್ಯಾಕ್ಟೀರಿಯಾ ಇರುವುದು ದೃಢಪಟ್ಟಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಉಪಾಹಾರ ಗೃಹದ ಮಾಲೀಕ ಹಾಗೂ ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಕೇರಳ ಹೈಕೋರ್ಟ್ ಈ ಘಟನೆಯನ್ನು ಗಮನಕ್ಕೆ ತೆಗೆದುಕೊಂಡಿದೆ ಮತ್ತು ಅದರ ಬಗ್ಗೆ ರಾಜ್ಯ ಸರ್ಕಾರದ ನಿಲುವನ್ನು ಕೇಳಿದೆ.

ಏನಿದು ಶಿಗೆಲ್ಲ ಬ್ಯಾಕ್ಟೀರಿಯಾ?

ಅತಿಸಾರಕ್ಕೆ ಕಾರಣವಾಗುವ ಪ್ರಮುಖ ಬ್ಯಾಕ್ಟೀರಿಯಾಗಳಲ್ಲಿ ಒಂದಾಗಿದೆ  ಶಿಗೆಲ್ಲ .ಇದು ಕರುಳಿನ ಸೋಂಕಿಗೆ ಕಾರಣವಾಗುವ ಬ್ಯಾಕ್ಟೀರಿಯಾದ ಕುಟುಂಬಕ್ಕೆ ಸೇರಿದೆ. ಶಿಗೆಲ್ಲ ಸೋಂಕಿನ ಕೆಲವು ಸಾಮಾನ್ಯ ಲಕ್ಷಣಗಳೆಂದರೆ ಅತಿಸಾರ, ಹೊಟ್ಟೆ ನೋವು, ಜ್ವರ, ವಾಂತಿ, ಸುಸ್ತು ಮತ್ತು ಮಲದಲ್ಲಿನ ರಕ್ತ.

ಇದನ್ನೂ ಓದಿ
Stop Food Waste Day 2022: ದಯವಿಟ್ಟು ಆಹಾರ ಪೋಲು ಮಾಡಬೇಡಿ; ಈ ಸಿಂಪಲ್​ ವಿಧಾನಗಳ ಮೂಲಕ ಫುಡ್​ ವೇಸ್ಟ್​ ತಡೆಯಿರಿ

ಅನಾರೋಗ್ಯಕ್ಕೆ ಕಾರಣವಾಗಲು ಕಡಿಮೆ ಸಂಖ್ಯೆಯ ಬ್ಯಾಕ್ಟೀರಿಯಾಗಳು ಸಾಕು. ಇವು ಸುಲಭವಾಗಿ ಸೋಂಕು ಹರಡಿಸುತ್ತವೆ ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಹೇಳುತ್ತದೆ.
ರೋಗಿಯ ಮಲವಿಸರ್ಜನೆಯೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕದಿಂದ ರೋಗವು ಸುಲಭವಾಗಿ ಹರಡುತ್ತದೆ. ನೀವು ಈಜಿದರೆ ಅಥವಾ ಕಲುಷಿತ ನೀರಿನಲ್ಲಿ ಸ್ನಾನ ಮಾಡಿದರೆ ನೀವು ಸೋಂಕಿಗೆ ಒಳಗಾಗಬಹುದು.

ಹೇಗೆ ಹರಡುತ್ತದೆ?

ಗರ್ಭಾವಸ್ಥೆಯಲ್ಲಿ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಮತ್ತು ದುರ್ಬಲಗೊಂಡ ರೋಗನಿರೋಧಕ ಶಕ್ತಿ ಹೊಂದಿರುವವರಿಗೆ ಸೋಂಕು ಬೇಗನೆ ಹರಡುತ್ತದೆ. ಸಿಡಿಸಿ ಪ್ರಕಾರ, ನಾಲ್ಕು ವಿಧದ ಶಿಗೆಲ್ಲ ಬ್ಯಾಕ್ಟೀರಿಯಾಗಳು ಮಾನವರ ಮೇಲೆ ಪರಿಣಾಮ ಬೀರುತ್ತವೆ. ಅವುಗಳೆಂದರೆ ಶಿಗೆಲ್ಲ ಸೊನ್ನೈ, ಶಿಗೆಲ್ಲ ಫ್ಲೆಕ್ಸ್ನೆರಿ, ಶಿಗೆಲ್ಲ ಬಾಯ್ಡಿ, ಮತ್ತು ಶಿಗೆಲ್ಲ ಡಿಸೆಂಟೆರಿಯಾ. ನಾಲ್ಕನೆಯ ವಿಧವು ಹೆಚ್ಚು ವಿಷಕಾರಿಯಾಗಿದ್ದು ಅತ್ಯಂತ ತೀವ್ರವಾದ ರೋಗವನ್ನು ಉಂಟುಮಾಡುತ್ತದೆ.

ರೋಗಲಕ್ಷಣಗಳು ಏನು?

ಅತಿಸಾರ (ಹೆಚ್ಚಾಗಿ ರಕ್ತ ಅಥವಾ ಲೋಳೆಯನ್ನು ಹೊಂದಿರುತ್ತದೆ)

ಹೊಟ್ಟೆ ನೋವು ಅಥವಾ ಸೆಳೆತ

ಜ್ವರ

ವಾಕರಿಕೆ ಅಥವಾ ವಾಂತಿ

ವೈದ್ಯರ ಬಳಿ ಯಾವಾಗ ಹೋಗಬೇಕು?

ತೀವ್ರವಾದ ಅತಿಸಾರವನ್ನು ಹೊಂದಿರುವ ವ್ಯಕ್ತಿ – ಅಂದರೆ ಒಂದು ದಿನದಲ್ಲಿ 20 ಅಥವಾ ಹೆಚ್ಚು ಬಾರಿ ಮಲವಿಸರ್ಜನೆ ಆಗಿದ್ದರೆ ಒಂದು ದಿನದೊಳಗೆ ವೈದ್ಯರನ್ನು ಭೇಟಿ ಮಾಡಬೇಕು. ಸೌಮ್ಯವಾದ ಅತಿಸಾರ ಹೊಂದಿರುವ ರೋಗಿಯು ವೈದ್ಯರ ಬಳಿಗೆ ಹೋಗುವ ಮೊದಲು ಮೂರರಿಂದ ನಾಲ್ಕು ದಿನಗಳವರೆಗೆ ಕಾಯಬಹುದು.

ನೀವು ಅಥವಾ ನಿಮ್ಮ ಮಗುವಿಗೆ ರಕ್ತಸಿಕ್ತ ಅತಿಸಾರ ಅಥವಾ ಅತಿಸಾರವು ದೇಹದ ತೂಕ ನಷ್ಟ ಮತ್ತು ನಿರ್ಜಲೀಕರಣವನ್ನು ಉಂಟುಮಾಡುವಷ್ಟು ತೀವ್ರವಾಗಿದ್ದರೆ, ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು. ಸೋಂಕಿತ ವ್ಯಕ್ತಿಯು 101 ಡಿಗ್ರಿ ಎಫ್ (38 ಡಿಗ್ರಿ ಸೆಲ್ಸಿಯಸ್) ಅಥವಾ ಅದಕ್ಕಿಂತ ಹೆಚ್ಚಿನ ಜ್ವರವನ್ನು ಹೊಂದಿದ್ದರೆ, ತಕ್ಷಣ ಆಸ್ಪತ್ರೆಯನ್ನು ಸಂಪರ್ಕಿಸಬೇಕು.

ಶಿಗೆಲ್ಲದಿಂದ ಸಾವು ಬರುತ್ತದೆಯೆ?

ರೋಗಿಯು ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿಲ್ಲದಿದ್ದರೆ ಅಥವಾ ರೋಗಕಾರಕವು ಸೂಚಿಸಲಾದ ಪ್ರತಿಜೀವಕಗಳಿಗೆ ನಿರೋಧಕವಾಗಿದ್ದರೆ ಸೋಂಕಿನಿಂದ ಸಾವು ಸಂಭವಿಸುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಹೇಳುತ್ತಾರೆ.

ಮುನ್ನೆಚ್ಚರಿಕೆಗಳೇನು?

ಇತರ ಆಹಾರ ಮತ್ತು ನೀರಿನಿಂದ ಹರಡುವ ರೋಗಗಳಂತೆ, ಊಟದ ಮೊದಲು ಮತ್ತು ನಂತರ ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆಯಿರಿ. ನೀವು ಕುಡಿಯುವ ನೀರು ಶುದ್ಧವಾಗಿದೆ ಮತ್ತು ಹಣ್ಣುಗಳು ಮತ್ತು ತರಕಾರಿಗಳು ತಾಜಾವಾಗಿವೆ ಎಂದು ಖಚಿತಪಡಿಸಿಕೊಳ್ಳಿ. ಹಾಲು, ಕೋಳಿ ಮತ್ತು ಮೀನುಗಳಂತಹ ಉತ್ಪನ್ನಗಳನ್ನು ಕೆಡುವ ಹೆಚ್ಚಿನ ಪ್ರವೃತ್ತಿಯನ್ನು ಹೊಂದಿರುವ ಉತ್ಪನ್ನಗಳನ್ನು ಸರಿಯಾದ ತಾಪಮಾನದಲ್ಲಿ ಇಡಬೇಕು ಮತ್ತು ಚೆನ್ನಾಗಿ ಬೇಯಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.