AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗರ್ಭಿಣಿಗೆ ಡೆಂಗ್ಯೂ ಬಂದರೆ ಎಷ್ಟು ಅಪಾಯಕಾರಿ, ಮುಂಜಾಗ್ರತಾ ಕ್ರಮಗಳೇನು?

ಡೆಂಗ್ಯೂ ಎಂಬುದು ಸೊಳ್ಳೆಯಿಂದ ಹರಡುವ ರೋಗ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಗರ್ಭಾವಸ್ಥೆಯಲ್ಲಿರುವಾಗ ಡೆಂಗ್ಯೂ ಬಂದರೆ ಏನಾಗುತ್ತೆ, ಮಹಿಳೆಗಿರುವ ಸವಾಲುಗಳೇನು ಎನ್ನುವ ಕುರಿತ ಮಾಹಿತಿ ಇಲ್ಲಿದೆ.

ಗರ್ಭಿಣಿಗೆ ಡೆಂಗ್ಯೂ ಬಂದರೆ ಎಷ್ಟು ಅಪಾಯಕಾರಿ, ಮುಂಜಾಗ್ರತಾ ಕ್ರಮಗಳೇನು?
ಗರ್ಭಿಣಿ-ಸಾಂದರ್ಭಿಕ ಚಿತ್ರ
ನಯನಾ ರಾಜೀವ್
|

Updated on: Jul 19, 2024 | 2:45 PM

Share

ಇತ್ತೀಚಿನ ದಿನಗಳಲ್ಲಿ ಕರ್ನಾಟಕದಾದ್ಯಂತ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿವೆ, ತಕ್ಷಣದ ಚಿಕಿತ್ಸೆ ಸಿಗದ ಕಾರಣ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಾಗೆಯೇ ಒಂದೊಮ್ಮೆ ಗರ್ಭಾವಸ್ಥೆಯಲ್ಲಿರುವಾಗ ಮಹಿಳೆಗೆ ಡೆಂಗ್ಯೂ ಬಂದರೆ ಏನು ಮಾಡಬೇಕು ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ಡೆಂಗ್ಯೂ ಸೋಂಕು ಎದುರಾದ ಸಾಕಷ್ಟು ರೋಗಿಗಳಲ್ಲಿ ಕೆಲವೊಮ್ಮೆ ಯಾವುದೇ ತರಹದ ರೋಗ ಲಕ್ಷಣಗಳು ಕಂಡುಬರುವುದಿಲ್ಲ. ಹಾಗೂ ಒಂದು ವೇಳೆ ರೋಗ ಲಕ್ಷಣಗಳು ಕಂಡು ಬಂದರೆ ಅದನ್ನು ಬೇರೆ ಕಾಯಿಲೆ ಇರಬಹುದು ಎಂದು ಕೊಳ್ಳುತ್ತಾರೆ.

ಸೊಳ್ಳೆ ಕಚ್ಚಿದ ನಾಲ್ಕರಿಂದ ಹತ್ತು ದಿನಗಳ ಒಳಗೆ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಡೆಂಗ್ಯೂ ಜ್ವರ ಇದ್ದರೆ ದೇಹದ ತಾಪಮಾನ ಒಂದೇ ಸಮನೆ ಹೆಚ್ಚಾಗುತ್ತದೆ. ಇದರ ಜೊತೆಗೆ ಈ ಕೆಳಗಿನ ರೋಗ ಲಕ್ಷಣಗಳು ಸಹ ಕಾಣಿಸಿಕೊಳ್ಳಬಹುದು. ತಲೆನೋವು ಮೈಕೈ ನೋವು ಅಥವಾ ಕೀಲು ನೋವು ವಾಕರಿಕೆ ಕಣ್ಣುಗಳ ಹಿಂಭಾಗದಲ್ಲಿ ನೋವು ಊದಿಕೊಂಡಿರುವ ಗ್ರಂಥಿಗಳು ಚರ್ಮದ ಭಾಗದಲ್ಲಿ ದದ್ದುಗಳು

ಒಂದೊಮ್ಮೆ ಗರ್ಭಿಣಿಗೆ ಡೆಂಗ್ಯೂ ಬಂದರೆ ಏನೆಲ್ಲಾ ಪರಿಣಾಮ ಉಂಟಾಗಬಹುದು, ಮಗುವಿನ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಈ ಕುರಿತು ಮಾಹಿತಿ ಇಲ್ಲಿದೆ. ಗರ್ಭಾವಸ್ಥೆಯಲ್ಲಿ ಡೆಂಗ್ಯೂ ಬರುವುದರಿಂದ ರಕ್ತಸ್ರಾವ ಉಂಟಾಗಿ ಮಗು ಅವಧಿಗೂ ಮುನ್ನವೇ ಜನಿಸಬಹುದು. ಮಹಿಳೆಯ ತೂಕ ಹೆಚ್ಚಾಗಬಹುದು. ಮಗುವಿನ ತೂಕ ಕಡಿಮೆಯಾಗಬಹುದು. ಮಗು ಅಕಾಲಿಕವಾಗಿ ಜನಿಸಿದರೆ ಉಸಿರಾಟದ ತೊಂದರೆ, ಇಂಟರ್ವೆಂಟ್ರಿಕ್ಯುಲರ್ ಹೆಮರೇಜ್, ಬೆಳವಣಿಗೆ ಕುಂಠಿತವಾಗುವ ಸಾಧ್ಯತೆಯೂ ಇರುತ್ತದೆ.

ಮತ್ತಷ್ಟು ಓದಿ: ಡೆಂಗ್ಯೂ ಕೇಸ್ ಹೆಚ್ಚಳ: ಬೆಂಗಳೂರಿನ 5 ಆಸ್ಪತ್ರೆಗಳಲ್ಲಿ ಬೆಡ್ ಕಾಯ್ದಿರಿಸಲು ಸೂಚನೆ

ತಾಯಿಯ ಬಗ್ಗೆ ಹೇಳುವುದಾದರೆ ಗರ್ಭಾವಸ್ಥೆಯಲ್ಲಿ ಡೆಂಗ್ಯೂ ಪ್ರೀ ಎಕ್ಲಾಂಪ್ಸಿಯಆ ಅಪಾಯಕ್ಕೆ ಕಾರಣವಾಗಬಹುದು, ಈ ಸ್ಥಿತಿಯಲ್ಲಿ, ಅಧಿಕ ರಕ್ತದೊತ್ತಡ, ಮೂತ್ರದಲ್ಲಿ ಪ್ರೋಟೀನ್ ಕಂಡುಬರುವುದು, ಪ್ಲೇಟ್ಲೆಟ್ಗಳು ಕಡಿಮೆಯಾಗುವುದು, ಪ್ಲಾಸ್ಮಾ ಸೋರಿಕೆ ಇತ್ಯಾದಿಗಳು ಹೆರಿಗೆಯ ಸಮಯದಲ್ಲಿ ರಕ್ತಸ್ರಾವದ ಅಪಾಯವನ್ನು ಹೆಚ್ಚಿಸುತ್ತದೆ. ಅದೇ ಸಮಯದಲ್ಲಿ, ಸಿಸೇರಿಯನ್ ಹೆರಿಗೆಯ ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ತಾಯಿ ಮತ್ತು ಮಗುವಿನ ಜೀವಗಳು ಅಪಾಯದಲ್ಲಿರಬಹುದು.

ಮುಂಜಾಗ್ರತೆವಹಿಸಿ ಗರ್ಭಿಣಿಯರು ಆದಷ್ಟು ಫುಲ್ ಸ್ಲೀವ್ ಬಟ್ಟೆಗಳನ್ನು ಧರಿಸಿ ಸೊಳ್ಳೆಗಳ ಕಾಟದಿಂದ ರಕ್ಷಿಸಿಕೊಳ್ಳಲು ಆಯಿಂಟ್​ಮೆಂಟ್​ ಬಳಸುವುದೇ ಡೆಂಗ್ಯೂ ಬಾರದಿರುವ ಮಾರ್ಗವಾಗಿದೆ. ಸೊಳ್ಳೆ ಪರದೆಯೊಳಗೆ ಮಾತ್ರ ಮಲಗಬೇಕು. ಮಳೆ ನೀರು ಎಲ್ಲೆಲ್ಲಿ ಶೇಖರಣೆಗೊಂಡರೂ ಸೊಳ್ಳೆಗಳ ಸಂಖ್ಯೆ ಹೆಚ್ಚಾಗದಂತೆ ಅದನ್ನು ತೆಗೆಯಬೇಕು. ಗರ್ಭಿಣಿ ಮಳೆಗಾಲದಲ್ಲಿ ಜ್ವರ, ತಲೆನೋವು ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ , ಅವರು ಯಾವುದೇ ವಿಳಂಬವಿಲ್ಲದೆ ವೈದ್ಯರನ್ನು ಸಂಪರ್ಕಿಸಬೇಕು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?