ನಿರ್ಜಲೀಕರಣ ಕಿಡ್ನಿ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ತಿಳಿದಿದೆಯೇ?

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 25, 2025 | 3:30 PM

ಕೆಲಸದ ಮೇಲೆ ಹೆಚ್ಚು ಮಗ್ನರಾಗಿರುವವರು ಊಟ, ನೀರು ಎಲ್ಲವನ್ನೂ ಮರೆತು ಬಿಡುತ್ತಾರೆ. ಹೀಗಾಗಿ ನೀರು ಕುಡಿಯುವುದನ್ನು ನಿರ್ಲಕ್ಷಿಸುವವರೇ ಹೆಚ್ಚು. ಇದು ಕ್ರಮೇಣ ದೇಹದ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಇದು ವ್ಯಕ್ತಿಯ ಆರೋಗ್ಯದ ಮೇಲೆ ಅದರಲ್ಲಿಯೂ ಕಿಡ್ನಿಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾದರೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ? ನಿರ್ಜಲೀಕರಣವನ್ನು ತಡೆಯಲು ಏನು ಮಾಡಬೇಕು ಎಂಬುದನ್ನು ತಜ್ಞರಿಂದ ತಿಳಿದುಕೊಳ್ಳಿ.

ನಿರ್ಜಲೀಕರಣ ಕಿಡ್ನಿ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ತಿಳಿದಿದೆಯೇ?
ಸಾಂದರ್ಭಿಕ ಚಿತ್ರ
Follow us on

ಬೇಸಿಗೆಯಲ್ಲಿ ದೇಹ ನಿರ್ಜಲೀಕರಣ(Dehydration) ವಾಗುವುದು ಸಾಮಾನ್ಯ. ಅದರಲ್ಲಿಯೂ ಪ್ರತಿದಿನ ಕೆಲಸಕ್ಕೆಂದು ಹೊರಗೆ ಹೋಗುವವರು ತಮಗೆ ನೀರು ಕುಡಿಯಲು ಕೂಡ ಸಮಯ ಸಿಗುವುದಿಲ್ಲ ಎಂದು ಹೇಳುವುದನ್ನು ನೀವು ಕೇಳಿರಬಹುದು. ಈ ರೀತಿಯ ಕಾರ್ಯನಿರತ ವೇಳಾಪಟ್ಟಿ ಮತ್ತು ಹವಾನಿಯಂತ್ರಣ ಸೇರಿದಂತೆ ಕೆಲಸದಲ್ಲಿನ ಅನೇಕ ವಿಷಯಗಳು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಅದರಲ್ಲಿಯೂ ಕೆಲಸದ ಮೇಲೆ ಹೆಚ್ಚು ಮಗ್ನರಾಗಿರುವವರು ಊಟ, ನೀರು ಎಲ್ಲವನ್ನೂ ಮರೆತು ಬಿಡುತ್ತಾರೆ. ಹೀಗಾಗಿ ನೀರು ಕುಡಿಯುವುದನ್ನು ನಿರ್ಲಕ್ಷಿಸುವವರೇ ಹೆಚ್ಚು. ಇದು ಕ್ರಮೇಣ ದೇಹದ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಇದು ವ್ಯಕ್ತಿಯ ಆರೋಗ್ಯದ ಮೇಲೆ ಅದರಲ್ಲಿಯೂ ಕಿಡ್ನಿಯ(kidneys) ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾದರೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ? ನಿರ್ಜಲೀಕರಣವನ್ನು ತಡೆಯಲು ಏನು ಮಾಡಬೇಕು ಎಂಬುದನ್ನು ತಜ್ಞರಿಂದ ತಿಳಿದುಕೊಳ್ಳಿ.

ಡಾ. ಶಿವಾನಿ ಗುಪ್ತಾ ಅವರು ಹೇಳುವ ಪ್ರಕಾರ, “ಬೇಸಿಗೆಯಲ್ಲಿ ಸಾಮಾನ್ಯ ಸಮಸ್ಯೆಯಾಗಿರುವ ನಿರ್ಜಲೀಕರಣವು ಮೂತ್ರಪಿಂಡದ ಆರೋಗ್ಯಕ್ಕೆ ಗಮನಾರ್ಹ ಅಪಾಯವನ್ನುಂಟು ಮಾಡುತ್ತದೆ. ಜೊತೆಗೆ ಮಲಬದ್ಧತೆ, ತಲೆನೋವು, ಏಕಾಗ್ರತೆಯ ಕೊರತೆ, ಆಲಸ್ಯ, ಆಯಾಸ, ಹೆಚ್ಚಿದ ಚರ್ಮದ ಸುಕ್ಕುಗಳು ಮತ್ತು ವಯಸ್ಸಾದ ಪರಿಣಾಮಗಳಂತಹ ದೈಹಿಕ ರೋಗಲಕ್ಷಣ ಗಳಿಗೆ ಕಾರಣವಾಗುತ್ತದೆ. ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ನಿಮ್ಮ ದೇಹ ನಿಮಗೆ ಸೂಚನೆ ನೀಡುತ್ತದೆ ಅದನ್ನು ನಿರ್ಲಕ್ಷಿಸಬಾರದು. ಸಾಮಾನ್ಯವಾಗಿ ಮೂತ್ರವಿಸರ್ಜನೆಯ ಆವರ್ತನ ಮತ್ತು ಮೂತ್ರದ ಬಣ್ಣಗಳ ಮೂಲಕ ನಿರ್ಜಲೀಕರಣವನ್ನು ಕಂಡು ಹಿಡಿಯಬಹುದು. ನೀರು ಕಡಿಮೆ ಕುಡಿಯುವವರಿಗೆ ಮೂತ್ರದ ಮಟ್ಟವು ತುಂಬಾ ಕಡಿಮೆ ಇದ್ದು, ಮೂತ್ರ ಹಳದಿ ಬಣ್ಣಕ್ಕೆ ತಿರುಗಿರುತ್ತದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ದೇಹದಲ್ಲಿ ಸಂಗ್ರಹವಾದ ಕೆಟ್ಟ ತ್ಯಾಜ್ಯ ಹೊರಹಾಕಲು ಈ ರೀತಿ ಮಾಡಿ

ಇದನ್ನೂ ಓದಿ
ಕರಬೂಜ ಹಣ್ಣನ್ನು ಈ ಆರೋಗ್ಯ ಸಮಸ್ಯೆಗಳಿರುವವರು ಸೇವನೆ ಮಾಡಬೇಡಿ
ಬೇಸಿಗೆಯಲ್ಲಿ ಸಿಗುವ ಈ ಹಣ್ಣನ್ನು ತಪ್ಪದೆ ಸೇವನೆ ಮಾಡಿ
ಗರ್ಭವಾಸ್ಥೆಯಲ್ಲಿ ಪ್ಯಾರಾಸಿಟಮಾಲ್ ಸೇವನೆ ಅಪಾಯಕಾರಿ! ಅಧ್ಯಯನದಿಂದ ಬಹಿರಂಗ
ಬಾಹ್ಯಾಕಾಶದಲ್ಲಿ ಸುನೀತಾ ವಿಲಿಯಮ್ಸ್ ಅವರ ಆಹಾರ ಹೇಗಿತ್ತು ಗೊತ್ತಾ?

ನಿರ್ಜಲೀಕರಣದಿಂದ ಉಂಟಾಗುವ ಸಮಸ್ಯೆಗಳೇನು?

ಸಾಮಾನ್ಯವಾಗಿ ದೇಹದ ನಿರ್ಜಲೀಕರಣವು ಸದ್ದಿಲ್ಲದೆ ಮೂತ್ರಪಿಂಡಗಳನ್ನು ಹಾನಿಗೊಳಿಸುತ್ತದೆ. ಜೊತೆಗೆ ಮೂತ್ರನಾಳದ ಸೋಂಕಿನ ಅಪಾಯವನ್ನು ಕೂಡ ಹೆಚ್ಚಿಸುತ್ತದೆ. ಅಲ್ಲದೆ ನೀರಿನ ಅಂಶ ಕಡಿಮೆಯಾದಾಗ ಮೂತ್ರಪಿಂಡಗಳು ಅತಿಯಾಗಿ ಕೆಲಸ ಮಾಡುತ್ತದೆ ಇದರಿಂದ ಕಲ್ಮಶಗಳು ಮತ್ತು ಮೂತ್ರಪಿಂಡದ ಕಲ್ಲುಗಳನ್ನು ಹೆಚ್ಚಾಗುವ ಅಪಾಯ ಇರುತ್ತದೆ. ಜೊತೆಗೆ ರಕ್ತ ಪೂರೈಕೆಯನ್ನು ಕಡಿಮೆ ಮಾಡುತ್ತದೆ. ಇದು ಅಂತಿಮವಾಗಿ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗೆ (ಸಿಕೆಡಿ) ಕಾರಣವಾಗುತ್ತದೆ.

ನಿರ್ಜಲೀಕರಣವನ್ನು ತಡೆಯುವುದು ಹೇಗೆ?

*ಪ್ರತಿದಿನ ದೊಡ್ಡ ಲೋಟಗಳಲ್ಲಿ ಕನಿಷ್ಠ ಎಂಟು ಲೋಟ ನೀರು ಕುಡಿಯುವುದು

*ಬಾಯಾರಿಕೆಯಾಗದಿದ್ದರೂ ನೀರು ಕುಡಿಯುವುದು

*ಹೈಡ್ರೀಕರಿಸಿದ ಹಣ್ಣು ಮತ್ತು ತರಕಾರಿಗಳನ್ನು ತಿನ್ನುವುದು

*ಸಕ್ಕರೆ ಪಾನೀಯಗಳನ್ನು ಮಿತಿಗೊಳಿಸುವುದು

*ಚಹಾ, ಕಾಫಿ, ಕಾರ್ಬೊನೇಟೆಡ್ ಪಾನೀಯಗಳು ಮತ್ತು ಪ್ಯಾಕೇಜ್ ಮಾಡಿದ ಹಣ್ಣಿನ ರಸಗಳ ಸೇವನೆಯನ್ನು ಕಡಿಮೆ ಮಾಡುವುದು

*ಮನೆಯೊಳಗೆ ಕೆಲಸ ಮಾಡುವವರು ಅಥವಾ ಎಸಿಯಲ್ಲಿ ಕುಳಿತುಕೊಳ್ಳುವವರು ದಿನಕ್ಕೆ 6- 8 ಲೋಟ ನೀರು ಕುಡಿಯುವುದು ಒಳ್ಳೆಯದು.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ