ನೀರಿಲ್ಲದೆ ನಾವು ನಮ್ಮ ಜೀವನವನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ. ನೀರಿನ ಹಲವಾರು ಕಾರ್ಯಗಳು ದೇಹದ ಪ್ರತಿಯೊಂದು ಭಾಗಕ್ಕೂ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಸಾಗಿಸುವುದು ಮತ್ತು ದೇಹದ ಉಷ್ಣತೆಯನ್ನು ನಿಯಂತ್ರಿಸುವುದು. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಮೂತ್ರ, ಬೆವರು ಅಥವಾ ಮಲ ರೂಪದಲ್ಲಿ ದೇಹದಿಂದ ತ್ಯಾಜ್ಯವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನೀರು ನಿಮ್ಮ ಕೀಲುಗಳಿಗೆ ಲೂಬ್ರಿಕಂಟ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಉತ್ತಮ ಜಲಸಂಚಯನವು ರಕ್ತ ಪರಿಚಲನೆ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಶಕ್ತಿಯ ಮಟ್ಟವನ್ನು ಮತ್ತು ಒಟ್ಟಾರೆ ಆರೋಗ್ಯವನ್ನು ಸಹ ನಿರ್ವಹಿಸುತ್ತದೆ. ಸಾಕಷ್ಟು ನೀರು ಕುಡಿಯುವುದು ನಮ್ಮ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಒತ್ತಡ ಮತ್ತು ಸೋಂಕುಗಳಿಂದ ಉತ್ತಮ ರಕ್ಷಣೆ ನೀಡುತ್ತದೆ. ಹೆಚ್ಚುವರಿಯಾಗಿ, ಇದು ಮೆದುಳಿನ ಕಾರ್ಯ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ನಿರ್ಜಲೀಕರಣವು ದೇಹದ ನೈಸರ್ಗಿಕ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುವುದರಿಂದ ಈ ಬಗ್ಗೆ ಕಾಳಜಿ ವಹಿಸಬೇಕು. ಸಾಕಷ್ಟು ಪ್ರಮಾಣದ ನೀರನ್ನು ಕುಡಿಯುವ ಮೂಲಕ ನಮ್ಮ ಒಟ್ಟಾರೆ ಆರೋಗ್ಯವನ್ನು ನೋಡಿಕೊಳ್ಳುವುದು ಮುಖ್ಯ.
ತಜ್ಞರ ಮಾಹಿತಿಯಂತೆ, ನಾವು ಈಗಾಗಲೇ ನಿರ್ಜಲೀಕರಣಗೊಂಡಿದ್ದೇವೆ ಎಂದು ಸೂಚಿಸುವ ಲಕ್ಷಣಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಂತಹ ಸಂದರ್ಭದಲ್ಲಿ ನೀರು ಕುಡಿಯುವ ಮೂಲಕ ಆದಷ್ಟು ಬೇಗ ಸರಿದೂಗಿಸಬೇಕು. ಹಣ್ಣುಗಳು ಮತ್ತು ತರಕಾರಿಗಳಾದ ಸೌತೆಕಾಯಿ, ಕಲ್ಲಂಗಡಿ, ದ್ರಾಕ್ಷಿ, ಕಿತ್ತಳೆ, ಕೋಸುಗಡ್ಡೆ ಮತ್ತು ಟೊಮೆಟೊ ಇತ್ಯಾದಿ ಹೆಚ್ಚಿನ ನೀರಿನ ಅಂಶವಿರುವ ಆಹಾರಗಳನ್ನು ತಿನ್ನುವುದು ಕೂಡ ದೇಹಕ್ಕೆ ಅಪಾರವಾಗಿ ಸಹಾಯ ಮಾಡುತ್ತದೆ.
ನೀವು ಈಗಾಗಲೇ ನಿರ್ಜಲೀಕರಣಗೊಂಡಿದ್ದರೆ ಹೇಗೆ ಕಂಡುಹಿಡಿಯುವುದು ಎಂದು ತಜ್ಞರ ಮಾಹಿತಿ ಆಧರಿಸಿ ಇಲ್ಲಿ ನಿಮಗೆ ಹೇಳಲಾಗಿದೆ:
ತಜ್ಞರ ಪ್ರಕಾರ, ಹವಾಮಾನವು ಬಿಸಿ ಮತ್ತು ಆರ್ದ್ರವಾಗಿರುವಾಗ, ಬೆವರು ಮೂಡುವುದು ಸಹಜ. ಈ ಕಾರ್ಯವಿಧಾನದ ಮೂಲಕ ದೇಹವು ತನ್ನ ತಾಪಮಾನವನ್ನು ನಿಯಂತ್ರಿಸುತ್ತದೆ. ಆದಾಗ್ಯೂ, ಒಬ್ಬರು ಬೆವರುತ್ತಿಲ್ಲ ಎಂದರೆ ನಿರ್ಜಲೀಕರಣಗೊಂಡಿದ್ದಾರೆ ಎಂದು ಅರ್ಥ. ಆಗ ಯಾವುದೇ ಬೆವರು ಇರುವುದಿಲ್ಲ.
ನಿಮ್ಮ ದೇಹದಲ್ಲಿ ಸಾಕಷ್ಟು ನೀರು ಇದೆಯೇ ಅಥವಾ ಇಲ್ಲವೇ ಎಂಬುದನ್ನು ನಿಮ್ಮ ಹೃದಯ ಬಡಿತವು ಸೂಚಿಸುತ್ತದೆ. ಒಬ್ಬರು ನಿರ್ಜಲೀಕರಣಗೊಂಡರೆ ವೇಗವಾಗಿ ಹೃದಯ ಬಡಿತ ಇರುತ್ತದೆ ಎಂದು ಹೇಳುತ್ತಾರೆ. ಕಡಿಮೆ ನೀರು ಎಂದರೆ ಕಡಿಮೆ ರಕ್ತದ ಪ್ರಮಾಣ. ಅಂದರೆ ನಿಮ್ಮ ಹೃದಯವು ರಕ್ತವನ್ನು ಇನ್ನಷ್ಟು ಗಟ್ಟಿಯಾಗಿ ಪಂಪ್ ಮಾಡಬೇಕು. ಅದಕ್ಕಾಗಿಯೇ ನಿಮ್ಮ ಹೃದಯವು ತುಂಬಾ ವೇಗವಾಗಿ ಬಡಿಯುತ್ತಿದೆ ಎಂದು ಹೇಳುತ್ತಾರೆ.
ಕೊನೆಯದಾಗಿ, ನಿಮ್ಮ ದೇಹಕ್ಕೆ ನೀರಿನ ತುರ್ತು ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿಮ್ಮ ಚರ್ಮವು ಸಹ ನಿಮಗೆ ಸೂಚಿಸುತ್ತದೆ. ಚರ್ಮವು ಶುಷ್ಕವಾಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ತಕ್ಷಣವೇ ನೀರನ್ನು ಕುಡಿಯಲು ಈ ಲಕ್ಷಣಗಳು ನಿಮಗೆ ಹೇಳುತ್ತದೆ. ನೀರು ಕುಡಿಯುವುದು ಬೇಸಿಗೆ ಕಾಲದ ಅಗತ್ಯ ಮಾತ್ರವಲ್ಲ. ಬದಲಾಗಿ ಎಲ್ಲಾ ಕಾಲದಲ್ಲೂ ನೀರು ಸಾಕಷ್ಟು ಕುಡಿಯುವುದು ಅಗತ್ಯ.
ಇದನ್ನೂ ಓದಿ: Skin Care: ತ್ವಚೆಯ ಸೌಂದರ್ಯಕ್ಕೆ ತೆಂಗಿನ ನೀರು ಉತ್ತಮ ಪರಿಹಾರ; ಅದರಿಂದ ಈ 5 ಸಮಸ್ಯೆಗಳು ದೂರವಾಗುತ್ತೆ!
ಇದನ್ನೂ ಓದಿ: Health Care: ಕಡಿಮೆ ನೀರು ಕುಡಿಯುವ ಅಭ್ಯಾಸವಿದೆಯೇ? ಅಪಾಯ ಎದುರಿಸಬೇಕಾಗುತ್ತದೆ ಎಚ್ಚರ
Published On - 9:38 pm, Mon, 28 March 22