ಬೇಸಿಗೆಯ ಬಿಸಿಯನ್ನು ಕಡಿಮೆ ಮಾಡಲು ನಮ್ಮಲ್ಲಿ ಬಹುತೇಕ ಜನರು ಫ್ರಿಡ್ಜ್ನಲ್ಲಿ ಬಾಟಲಿಗಳಲ್ಲಿ ನೀರು ಇಡಲು ಆರಂಭಿಸುತ್ತೇವೆ. ಈ ತಂಪಾದ ನೀರನ್ನು ಕುಡಿದಾಗ ಸೆಖೆಗೆ ಬಹಳ ಆರಾಮವೆನಿಸುವುದು ನಿಜ. ಆದರೆ, ಈ ರೀತಿ ಅತಿಯಾದ ತಣ್ಣನೆಯ ನೀರು (Ice Water) ಕುಡಿಯುವುದರಿಂದ ನಮ್ಮ ಗಂಟಲಿನ ಮೇಲೆ ಮಾತ್ರವಲ್ಲದೆ ಆರೋಗ್ಯದ ಇತರ ಅಂಶಗಳ ಮೇಲೂ ಪರಿಣಾಮ ಬೀರಬಹುದು ಎಂದು ನಿಮಗೆ ತಿಳಿದಿರುವುದು ಉತ್ತಮ. ಇತ್ತೀಚೆಗೆ ದೇಹದಾರ್ಢ್ಯ ಪಟುಯೊಬ್ಬರು ಐಸ್ ಹಾಕಿದ ತಣ್ಣೀರನ್ನು ಸೇವಿಸಿದ ನಂತರ ತಮ್ಮ ಹೃದಯವು ಜೋರಾಗಿ ಬಡಿದುಕೊಳ್ಳುವುದನ್ನು ಮತ್ತು ಎದೆ ಭಾರವಾಗುವುದನ್ನು ಗಮನಿಸಿದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ತಣ್ಣನೆಯ ಐಸ್ ನೀರು ಕುಡಿದು ಆಸ್ಪತ್ರೆಗೆ ದಾಖಲಾದ 35 ವರ್ಷದ ಫ್ರಾಂಕ್ಲಿನ್ ಅರಿಬಿಯಾನಾ ಅವರಿಗೆ ವೈದ್ಯರು ಪರೀಕ್ಷೆ ಮಾಡಿದಾಗ ಅವರಲ್ಲಿ ಅನಿಯಮಿತ ಹೃದಯ ಬಡಿತ ಉಂಟಾಗಿರುವುದನ್ನು ಪತ್ತೆ ಮಾಡಿದರು. ಬಾಡಿ ಬಿಲ್ಡರ್ ಆಗಿದ್ದ ಅವರು ವ್ಯಾಯಾಮದ ನಂತರ ಐಸ್ ಹಾಕಿದ ತಣ್ಣನೆಯ ನೀರನ್ನು ಸೇವಿಸಿದ್ದರು. ಆಗ ಅವರ ಹೃದಯವು ಅನಿಯಮಿತವಾಗಿ ಮತ್ತು ವೇಗವಾಗಿ ಹೊಡೆದುಕೊಳ್ಳಲಾರಂಭಿಸಿತು ಎಂದು ವೈದ್ಯರು ಪತ್ತೆಹಚ್ಚಿದರು.
ಇದನ್ನೂ ಓದಿ: Plastic Bottle: ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುತ್ತೀರಾ? ಈ ಕ್ಷಣವೇ ನಿಲ್ಲಿಸಿ
ಇದನ್ನು ವೈದ್ಯಕೀಯವಾಗಿ ಹೃತ್ಕರ್ಣದ ಕಂಪನ ಎಂದು ಕರೆಯಲಾಗುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದಲ್ಲಿ ಇದು ಸಾವಿಗೂ ಕಾರಣವಾಗಬಹುದು. ಈ ಸಮಸ್ಯೆಗೆ ಚಿಕಿತ್ಸೆ ನೀಡಲು ವೈದ್ಯರು ನಂತರ ಹೃದಯ ಶಸ್ತ್ರಚಿಕಿತ್ಸೆ ನಡೆಸಿದರು. ಫ್ರಾಂಕ್ಲಿನ್ ಅವರಿಗೆ 18 ವರ್ಷವಾಗಿದ್ದಾಗ ತಣ್ಣೀರು ಕುಡಿದ ನಂತರ ಮೊದಲ ಬಾರಿಗೆ ಕುಸಿದುಬಿದ್ದಿದ್ದರು. ವೈದ್ಯರು ಅವರಿಗೆ ಅನಿಯಮಿತ ಹೃದಯ ಬಡಿತದ ಸಮಸ್ಯೆಯಿದೆ ಎಂದು ಪತ್ತೆಹಚ್ಚುವ ಮೊದಲು ಕಳೆದ 15 ವರ್ಷಗಳಲ್ಲಿ 20 ಬಾರಿ ಇದೇ ಸಮಸ್ಯೆಯಿಂದ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಈ ಸಮಸ್ಯೆಗೆ ತಣ್ಣೀರಿನ ಸೇವನೆಯೇ ಕಾರಣವೆಂದು ಅವರಿಗೆ ತಿಳಿದಿರಲಿಲ್ಲ.
ರೋಗಿಯು ನೀರು ಕುಡಿದ ನಂತರ ಎದೆಯಲ್ಲಿ ಜೋರಾದ ಬಡಿತದ ಬಗ್ಗೆ ವೈದ್ಯರಿಗೆ ಹೇಳಿದ್ದರು. ವೈದ್ಯರ ಆ ರೋಗಿಯ ಅಂಗಿಯನ್ನು ತೆಗೆದುಹಾಕಿ ಮತ್ತು ಅವರ ಎದೆಯಿಂದ ಹೃದಯ ಬಡಿತವನ್ನು ನೋಡಿದರು. ಹೃದಯ ಬಡಿದುಕೊಳ್ಳುತ್ತಿತ್ತು. ಮೊದಲು, ಅವರು ಹೃದಯದ ಹಿಗ್ಗುವಿಕೆಯನ್ನು ಗಮನಿಸಿದರು. ಈ ಸಮಸ್ಯೆ ಶುರುವಾದ 15 ವರ್ಷಗಳ ನಂತರ ಇದು ಹೃತ್ಕರ್ಣದ ಕಂಪನ ಸಮಸ್ಯೆ ಎಂದು ವೈದ್ಯರು ಕಂಡುಹಿಡಿದಿದ್ದಾರೆ.
ಇದನ್ನೂ ಓದಿ: Heart Attack: ಅತಿಯಾಗಿ ವರ್ಕ್ಔಟ್ ಮಾಡಿದರೂ ಹೃದಯಾಘಾತ ಆಗುತ್ತಾ?; ವೈದ್ಯರ ಸಲಹೆ ಇಲ್ಲಿದೆ
ಹೃತ್ಕರ್ಣದ ಕಂಪನ ಎಂದರೇನು?:
ಹೃತ್ಕರ್ಣದ ಕಂಪನವು ಹೃದಯದ ಮೇಲಿನ ಕೋಣೆಗಳು ಅನಿಯಮಿತವಾಗಿ ಬಡಿಯುವ ಸ್ಥಿತಿಯಾಗಿದೆ. ಅವು ಕೆಳಗಿನ ಹೃದಯದ ಕೋಣೆಗಳೊಂದಿಗೆ ಸಿಂಕ್ ಆಗುವುದಿಲ್ಲ. ಹೆಚ್ಚಿನ ರೋಗಿಗಳಲ್ಲಿ ಇದು ಯಾವುದೇ ರೋಗಲಕ್ಷಣಗಳನ್ನು ಉಂಟುಮಾಡುವುದಿಲ್ಲ. ಆದರೂ ಕೆಲವೊಮ್ಮೆ, ಅನಿಯಮಿತ ಹೃದಯ ಬಡಿತವು ಈ ಕೆಳಗಿನ ರೋಗಲಕ್ಷಣಗಳಿಗೆ ಕಾರಣವಾಗಬಹುದು…
– ಜೋರಾದ ಹೃದಯ ಬಡಿತ
– ತಲೆತಿರುಗುವಿಕೆ
– ಉಸಿರಾಟದ ತೊಂದರೆ
– ಸುಸ್ತು
ಈ ಸಮಸ್ಯೆಯನ್ನು ಗುರುತಿಸದೆ ಮತ್ತು ಚಿಕಿತ್ಸೆ ನೀಡದೆ ಬಿಡುವುದರಿಂದ ಪಾರ್ಶ್ವವಾಯುವಿನ ಅಪಾಯ 5 ಪಟ್ಟು ಹೆಚ್ಚಬಹುದು. ಫ್ರಾಂಕ್ಲಿನ್ ಪ್ರಕರಣದಲ್ಲಿ ಐಸ್ ನೀರು ಮೆದುಳನ್ನು ಹೃದಯಕ್ಕೆ ಸಂಪರ್ಕಿಸುವ ವಾಗಸ್ ನರವನ್ನು ಕೆರಳಿಸಿರಬಹುದು. ಇದರಿಂದಾಗಿ ಹೃತ್ಕರ್ಣದ ಕಂಪನ ಉಂಟಾಗಿರಬಹುದು ಎಂದು ವೈದ್ಯರು ಹೇಳುತ್ತಾರೆ. ದೇಹವು ತಣ್ಣನೆಯ ನೀರಿಗೆ ಒಡ್ಡಿಕೊಂಡಾಗ ಇದು ಡೈವಿಂಗ್ ರಿಫ್ಲಕ್ಸ್ ಅನ್ನು ಉಂಟುಮಾಡುತ್ತದೆ. ಇದು ಹೃದಯದ ಕೆಲಸವನ್ನು ನಿಧಾನಗೊಳಿಸುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:28 pm, Thu, 29 February 24