ICMR Dietary Guidelines Part 14 : ಊಟದ ಮೊದಲು ಹಾಗೂ ನಂತರ ಕಾಫಿ ಟೀ ಸೇವನೆ ಮಾಡಬೇಡಿ, ಎಚ್ಚರಿಕೆ ನೀಡಿದ ಸರ್ಕಾರದ ಮಾಗಸೂರ್ಚಿ

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಇತ್ತೀಚೆಗೆ ಭಾರತೀಯರಿಗೆ 17 ಆಹಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು ಇದರಲ್ಲಿ ದೇಹಕ್ಕೆ ಇಂತಿಷ್ಟು ಲೋಟಗಳಷ್ಟು ನೀರು ಅಗತ್ಯವಾಗಿ ಬೇಕು ಹಾಗೂ ಕಾಫಿ ಹಾಗೂ ಟೀ ಸೇವನೆಯು ಮಿತವಾಗಿರಲಿ ಎಂದು ತಿಳಿಸಿದೆ.

ICMR Dietary Guidelines Part 14 : ಊಟದ ಮೊದಲು ಹಾಗೂ ನಂತರ ಕಾಫಿ ಟೀ ಸೇವನೆ ಮಾಡಬೇಡಿ, ಎಚ್ಚರಿಕೆ ನೀಡಿದ ಸರ್ಕಾರದ ಮಾಗಸೂರ್ಚಿ
Edited By:

Updated on: May 25, 2024 | 5:50 PM

ಇತ್ತೀಚೆಗಿನ ದಿನಗಳಲ್ಲಿ ಜೀವನ ಶೈಲಿ ಹಾಗೂ ಆಹಾರ ಕ್ರಮದಲ್ಲಾದ ಬದಲಾವಣೆಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರಿದೆ. ಹೀಗಾಗಿ ಆರೋಗ್ಯಕರ ಜೀವನಕ್ಕಾಗಿ ಉತ್ತಮ ಗುಣಮಟ್ಟದ ವೈವಿಧ್ಯಮಯ ಆಹಾರ ಸೇವನೆಯಿರಲಿ. ದಿನಕ್ಕೆ ಇಂತಿಷ್ಟು ನೀರು ದೇಹಕ್ಕೆ ಅಗತ್ಯವಾಗಿ ಬೇಕು. ಶುದ್ಧ ನೀರನ್ನು ಸೇವಿಸುವುದು ಆರೋಗ್ಯಕ್ಕೆ ಹಿತಕರ. ಆದರೆ ಕಾಫಿ ಟೀ ಸೇವನೆಯನ್ನು ಕಡಿಮೆಗೊಳಿಸದೇ ಹೋದಲ್ಲಿ ಆರೋಗ್ಯ ಸಮಸ್ಯೆಗಳು ಕಾಡಬಹುದು ಎಂದು ಆಹಾರ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ.

ತಾಜಾ ಪಾನೀಯಗಳ ಬಳಕೆಯಿರಲಿ

ಅತಿಯಾದ ಸಾಫ್ಟ್ ಡ್ರಿಂಕ್ಸ್ ಸೇವನೆ ದಂತಗಳ ಆರೋಗ್ಯವನ್ನು ಹಾಳು ಮಾಡುತ್ತವೆ. ಸಾಫ್ಟ್ ಡ್ರಿಂಕ್ಸ್ ಆರೋಗ್ಯಕ್ಕೆ ಹಿತಕರವಲ್ಲ. ಹೀಗಾಗಿ ರೆಡಿಮೇಡ್ ಸಾಫ್ಟ್ ಡ್ರಿಂಕ್ಸ್ ಹಾಗೂ ಜ್ಯೂಸ್ ಗಳ ಬದಲಿಗೆ ಎಳನೀರು, ಮಜ್ಜಿಗೆ, ಲಿಂಬೆ ಹಣ್ಣು,ಕಿತ್ತಳೆ, ಕಲ್ಲಂಗಡಿ, ಮಾವಿನ ಹಣ್ಣು, ಫೈನಾಪಲ್, ದಾಳಿಂಬೆ ಹಣ್ಣಿನ ರಸವನ್ನು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು.

ಕಾಫಿ ಟೀ ಸೇವನೆ ಅತಿಯಾಗದಿರಲಿ

ಊಟವಾದ ಬಳಿಕ ಅಥವಾ ಮೊದಲು ಟೀ, ಕಾಫಿ ಸೇವಿಸುತ್ತಿದ್ದರೆ ಈ ಕೂಡಲೇ ಆ ಅಭ್ಯಾಸವನ್ನು ನಿಲ್ಲಿಸಿಬಿಡಿ. ಊಟಕ್ಕಿಂತ ಮೊದಲ ಅಥವಾ 1 ಗಂಟೆ ನಂತರ ಟೀ, ಕಾಫಿ ಸೇವಿಸಿ. ಇದು ಆಹಾರದಲ್ಲಿನ ಕಬ್ಬಿಣಾಂಶವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಹೀಗಾಗಿ ಮನಬಂದಂತೆ ಟೀ ಅಥವಾ ಕಾಫಿ ಕುಡಿಯುವುದರಿಂದ ಕಬ್ಬಿಣಾಂಶ ಕೊರತೆಯಾಗಿ ರಕ್ತಹೀನತೆ ಸಮಸ್ಯೆಯು ಕಾಡುತ್ತದೆ. ಅದರೊಂದಿಗೆ ಆಯಾಸ, ಶಕ್ತಿಯ ಕೊರತೆ ಉಸಿರಾಟದ ತೊಂದರೆ, ತಲೆನೋವು, ತ್ವರಿತ ಹೃದಯ ಬಡಿತ, ಉಗುರುಗಳು ಸೀಳುವುದು, ಕೂದಲು ಉದುರುವ ಸಮಸ್ಯೆ ಹಾಗೂ ಹೃದಯ ಬಡಿತದಲ್ಲಿನ ಅಸಹಜತೆಗಳಿಗೂ ಕಾರಣವಾಗುತ್ತದೆ. ಆದರೆ ಊಟಕ್ಕಿಂತ ಮೊದಲು ಹಾಗೂ ನಂತರದಲ್ಲಿ ಗ್ರೀನ್ ಟೀ, ಬ್ಲಾಕ್ ಟೀ ಕುಡಿಯಬಹುದು ಎಂದು ತಿಳಿಸಿದೆ.

ಇದನ್ನೂ ಓದಿ: ಆಹಾರ ತಯಾರಿಸಲು ಮಣ್ಣಿನ ಪಾತ್ರೆ ಬೆಸ್ಟ್​​ ಎಂದ ಸರ್ಕಾರದ ಮಾರ್ಗಸೂಚಿ

ಹಾಲಿಲ್ಲದ ಟೀ ಕಾಫಿ ಆರೋಗ್ಯಕ್ಕೆ ಹಿತಕರವೇ?

ಹಾಲು ಹಾಕದೇ ಚಹಾವನ್ನು ಸೇವಿಸುವುದರಿಂದ ರಕ್ತ ಪರಿಚಲನೆಯು ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಹೊಟ್ಟೆಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ ಹಾಲಿನಲ್ಲಿ ಕ್ಯಾಲಿಯಂ ಪ್ರಮಾಣವು ಹೆಚ್ಚಾಗಿದ್ದು, ಕುದಿಸಿದ ಹಾಲನ್ನು ಹಾಗೆಯೇ ಕುಡಿಯಬಹುದು. ಆಲ್ಕೋಹಾಲ್ ಸೇವನೆಯು ಆರೋಗ್ಯಕರವಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ