ಇಂದಿನ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಲ್ಲಾಗುವ ಬದಲಾವಣೆಗಳಿಂದ ಗರ್ಭ ಧರಿಸಿದ ಮಹಿಳೆಯರಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಗರ್ಭಿಣಿಯಾದ ಮಹಿಳೆಯು ಆಹಾರಗಳ ಸೇವನೆಯಲ್ಲಿ ಎಷ್ಟು ಜಾಗರೂಕರಾಗಿದ್ದರೂ ಸಾಲದು. ಗರ್ಭಿಣಿ ಮಹಿಳೆಯರ ಆಹಾರ ಕ್ರಮಗಳ ಬಗ್ಗೆ ತಜ್ಞರಾದ ವೈದ್ಯೆ ಡಾ| ಹೇಮಲತಾ ಆರ್. ಅವರ ನೇತೃತ್ವದಲ್ಲಿ ರಚಿಸಲಾದ ಆಹಾರ ಮಾರ್ಗಸೂಚಿಯಲ್ಲಿ ಅಗತ್ಯ ವಿಷಯಗಳನ್ನು ತಿಳಿಸಲಾಗಿದೆ. ಈ ಆಹಾರ ಮಾರ್ಗ ಸೂಚಿಯಲ್ಲಿ 17 ಸಲಹೆಗಳನ್ನು ಒಳಗೊಂಡಿದ್ದು, ಎರಡನೇ ಸಲಹೆಯಲ್ಲಿ ಗರ್ಭಿಣಿ ಮಹಿಳೆಯರ ಆಹಾರ ಕ್ರಮಗಳ ಹೇಗಿರಬೇಕು ಎನ್ನುವುದನ್ನು ಉಲ್ಲೇಖಿಸಲಾಗಿದೆ.
ತಾಯಿ ಹಾಗೂ ಗರ್ಭದಲ್ಲಿ ಬೆಳೆಯುತ್ತಿರುವ ಮಗು ಆರೋಗ್ಯವಂತರಾಗಿಬೇಕಾದರೆ ಹಸಿರು ಎಲೆಗಳ ತರಕಾರಿಗಳು, ಹಣ್ಣುಗಳು ಮಾಂಸಾಹಾರ, ವಿವಿಧ ಕಾಳುಗಳು ಸೇವಿಸುವುದು ಉತ್ತಮ. ಹಾಲಿನಲ್ಲಿ ಕ್ಯಾಲ್ಶಿಯಂ ಹೇರಳವಾಗಿದ್ದು, ನಿಯಮಿತವಾಗಿ ಹಾಲು ಸೇವಿಸುವುದು ಒಳ್ಳೆಯದು 2ನೇ ಟ್ರೈಮಿಸ್ಟರ್ನಲ್ಲಿ ದಿನಕ್ಕೆ 200 ಕ್ಯಾಲೋರಿ ಆಹಾರ ಹಾಗೂ ಮೂರನೇ ಟ್ರೈಮಿಸ್ಟರ್ನಲ್ಲಿ ಇದನ್ನ 400 ಕ್ಯಾಲೋರಿಯನನ್ನು ಸೇವಿಸುವುದು ಮಗುವಿನ ಬೆಳವಣಿಗೆಗೆ ಪೂರಕವಾಗಿದೆ. ಆದರೆ ಗರ್ಭಿಣಿ ಮಹಿಳೆಯರು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ವಿಟಮಿನ್ ಡಿ ಅಂಶವು ದೇಹಕ್ಕೆ ಪ್ರಯೋಜನಕಾರಿಯಾಗಿದೆ. ದಿನಕ್ಕೆ ಅರ್ಧ ಗಂಟೆಗಳ ಕಾಲ ವಾಕ್ ಹಾಗೂ ವ್ಯಾಯಾಮ ಮಾಡುವುದು ಒಳ್ಳೆಯದು ಎನ್ನಲಾಗಿದೆ.
ಗರ್ಭಿಣಿ ಮಹಿಳೆಯರು ಸಂಸ್ಕರಿಸಿದ ಆಹಾರದಿಂದ ದೂರ ಉಳಿಯುವುದು ಆರೋಗ್ಯದ ದೃಷ್ಟಿಯಿಂದ ಹಿತಕರ. ಈ ಆಹಾರದಲ್ಲಿ ಕೊಬ್ಬು, ಸಕ್ಕರೆ ಮತ್ತು ಉಪ್ಪು ಅಧಿಕವಾಗಿರುವ ಕಾರಣ ಗರ್ಭದಲ್ಲಿರುವ ಬೆಳೆಯುತ್ತಿರುವ ಭ್ರೂಣದ ಬೆಳವಣಿಗೆ ಹಾನಿಯುಂಟು ಮಾಡುತ್ತವೆ. ಅಪೌಷ್ಟಿಕತೆಯಿರುವ ಹಾಗೂ ತೂಕ ಕಡಿಮೆಯಿರುವ ಮಹಿಳೆಯರು ಗರ್ಭಾವಸ್ಥೆಯಲ್ಲಿ ಕಡಿಮೆ ಜನನ ತೂಕವನ್ನು ಹೊಂದಿರುವ ಇಲ್ಲವಾದರೆ ಪ್ರಸವಪೂರ್ವ ಶಿಶುಗಳಿಗೆ ಜನ್ಮ ನೀಡುವ ಸಾಧ್ಯತೆಯೇ ಅಧಿಕವಾಗಿರುತ್ತದೆ. ಸಂಸ್ಕರಿಸಿದ ಆಹಾರಗಳ ಜೊತೆಗೆ ಧೂಮಪಾನ ಮತ್ತು ಮದ್ಯಪಾನವನ್ನು ಮಾಡಬಾರದು. ಗರ್ಭಾವಸ್ಥೆಯ ಮಧುಮೇಹವಿದ್ದರೆ ಸಕ್ಕರೆ ಅಂಶಯುಕ್ತ ಆಹಾರ ಸೇವನೆ ಮಾಡಬಾರದು. ಅತಿಯಾದ ಡಯಟ್ ಮಾಡುವುದು ಒಳ್ಳೆಯದಲ್ಲ. ಮಗುವಿನ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ ಎಂದು ಮಾರ್ಗಸೂಚಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ನೀರು ಕುಡಿಯುವುದನ್ನು ಮರೆತು ಬಿಡುತ್ತೀರಾ? ಈ ಟಿಪ್ಸ್ ಪಾಲಿಸಿ
ಅಧಿಕ ರಕ್ತದೊತ್ತಡ ಹಾಗೂ ಮಧುಮೇಹ ಸಮಸ್ಯೆಯಿದ್ದರೆ ಗರ್ಭಾವಸ್ಥೆಯಲ್ಲಿ ತೂಕ ಇಳಿಕೆಯ ಕೆಲಸಕ್ಕೆ ಕೈ ಹಾಕಬಾರದು. ಒಂದು ವೇಳೆ ತೂಕ ಇಳಿಕೆಯತ್ತ ಗಮನ ಹರಿಸಿದರೆ ಹುಟ್ಟುವ ಮಕ್ಕಳು ಮಧುಮೇಹ ಸಮಸ್ಯೆ ಇಲ್ಲವಾದರೆ ಸ್ಥೂಲಕಾಯದ ಸಮಸ್ಯೆಗೆ ಒಳಗಾಗುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಸಮತೋಲಿತ ಆಹಾರ ಸೇವನೆಗಳ ಜೊತೆಗೆ ಸಕ್ಕರೆ ಅಂಶ ಹಾಗೂ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಆಹಾರ ಸೇವನೆಯತ್ತ ಗಮನ ಕೊಡುವುದು ಒಳ್ಳೆಯದು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ