ICMR Dietary Guidelines Part 13 : ಆಹಾರ ತಯಾರಿಸಲು ಮಣ್ಣಿನ ಪಾತ್ರೆ ಬೆಸ್ಟ್ ಎಂದ ಸರ್ಕಾರದ ಮಾರ್ಗಸೂಚಿ
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (ಎನ್‌ಐಎನ್) ಅಡುಗೆಯ ಪೂರ್ವ ತಯಾರಿ ಮತ್ತು ಅಡುಗೆ ತಂತ್ರಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ. ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುವುದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಐಸಿಎಂಆರ್ 17 ಆಹಾರ ಮಾರ್ಗಸೂಚಿಯಲ್ಲಿ ತಿಳಿಸಿದೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಭಾರತೀಯರಿಗೆ 17 ಆಹಾರದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದೂ, ಇದರಲ್ಲಿ ಅಡುಗೆ ಮಾಡುವ ಕ್ರಮ ಹಾಗೂ ಬಳಸುವ ಪಾತ್ರೆಗಳನ್ನು ಹೇಗಿರಬೇಕು. ತಮ್ಮ ಆಹಾರಗಳಲ್ಲಿ ಪೋಷಕಾಂಶಗಳನ್ನು ಉಳಿಸಿಕೊಳ್ಳಲು ಮತ್ತು ಅಡುಗೆ ಮಾಡುವಾಗ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೆಲವು ವಿಧಾನಗಳನ್ನು ಅನುಸರಿಸಬೇಕು ಎಂದು ತಿಳಿಸಿದೆ.
ಅಡುಗೆ ಮಾಡುವ ವಿಧಾನವು ಹೇಗಿರಬೇಕು?
ಐಸಿಎಂಆರ್ ಆಹಾರದ ಪೌಷ್ಟಿಕಾಂಶದ ಗುಣಮಟ್ಟ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಡುಗೆಯ ಪೂರ್ವ ವಿಧಾನಗಳ ಬಗ್ಗೆ ತಿಳಿಸಿದೆ. ಅಡುಗೆ ಮಾಡುವ ಮೊದಲು ತರಕಾರಿಗಳನ್ನು ಶುದ್ಧವಾದ ನೀರಿನಿಂದ ತೊಳೆಯುವುದು ಸೂಕ್ಷ್ಮಜೀವಿ, ಕೀಟನಾಶಕಗಳನ್ನು ತೆಗೆದುಹಾಕಲು ಹಾಗೂ ಪೋಷಕಾಂಶಗಳನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ. ಅದಲ್ಲದೇ, ಆವಿಯಲ್ಲಿ ಬೇಯಿಸುವುದು ಅಥವಾ ಲಘುವಾಗಿ ಕುದಿಸುವಂತಹ ವಿಧಾನಗಳನ್ನು ಅನುಸರಿಸಿದರೆ ತರಕಾರಿಗಳಲ್ಲಿನ ವಿಟಮಿನ್ ಸಿ ನಂತಹ ನೀರಿನಲ್ಲಿ ಕರಗಿ ಪೋಷಕಾಂಶವು ನಷ್ಟವಾಗುವುದಿಲ್ಲ.
ಆಹಾರವನ್ನು ನೇರವಾಗಿ ಬೇಯಿಸುವುದಕ್ಕೆ ಹೋಲಿಸಿದರೆ ಪೂರ್ವ ಅಡುಗೆಯ ವಿಧಾನಗಳು ಆಹಾರ ಪದಾರ್ಥಗಳಲ್ಲಿ ಪೋಷಕಾಂಶಗಳನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಪ್ರೆಶರ್ ಕುಕ್ಕರ್‌ನಲ್ಲಿ ಅಡುಗೆ ಮಾಡುವುದರಿಂದ ಆಹಾರದ ಪೋಷಕಾಂಶಗಳನ್ನು ಹಬೆಯ ಒತ್ತಡದಲ್ಲಿ ತ್ವರಿತವಾಗಿ ಬೇಯಿಸುವ ಮೂಲಕ ಅವುಗಳನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಹುರಿಯುವುದು ಆಹಾರದ ಕೊಬ್ಬಿನಾಂಶವನ್ನು ಹೆಚ್ಚಿಸುತ್ತದೆ. ಆದರೆ ಅತಿಯಾಗಿ ಸೇವಿಸಿದರೆ ಹೃದಯರಕ್ತನಾಳದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ.
ಮೈಕ್ರೋವೇವ್ ಅಡುಗೆಯ ವಿಧಾನವು ಕಡಿಮೆ ಸಮಯದಲ್ಲಿ ಪೋಷಕಾಂಶಗಳನ್ನು ಪರಿಣಾಮಕಾರಿಯಾಗಿ ಸಂರಕ್ಷಿಸುತ್ತದೆ. ಹುರಿಯುವುದು ಹಾಗೂ ಗ್ರಿಲ್ಲಿಂಗ್ ನಂತಹ ಈ ಅಡುಗೆ ವಿಧಾನಗಳು ಸರಿಯಾಗಿ ಮಾಡದಿದ್ದಲ್ಲಿ ಪಾಲಿಸಿಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು ಹಾಗೂ ಸುಧಾರಿತ ಗ್ಲೈಕೇಶನ್ ಎಂಡ್ ಉತ್ಪನ್ನಗಳು ನಂತಹ ಹಾನಿಕಾರಕ ಸಂಯುಕ್ತಗಳು ಬಿಡುಗಡೆಯಾಗುತ್ತದೆ. ಹೀಗಾಗಿ ಅಡುಗೆ ಮಾಡುವಾಗ ಸರಿಯಾದ ಪಾತ್ರೆಗಳ ಬಳಕೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಇದನ್ನೂ ಓದಿ: ನಾನ್‌ಸ್ಟಿಕ್ ಪಾತ್ರೆಯಲ್ಲಿ ಅಡುಗೆ ಮಾಡಬೇಡಿ, ನಿಮ್ಮ ಆರೋಗ್ಯಕ್ಕೆ ನೀವೇ ಹೊಣೆ ಎಚ್ಚರಿಕೆ ನೀಡಿದ ಸರ್ಕಾರ
ಮಣ್ಣಿನ ಪಾತ್ರೆಗಳ ಬಳಕೆ ಹೆಚ್ಚಿರಲಿ
ಆರೋಗ್ಯಕ್ಕೆ ಸ್ನೇಹಿಯಾಗಿರುವ ಕಡಿಮೆ ತೈಲ ಅವಶ್ಯಕತೆಗಳು ಮತ್ತು ಪೋಷಕಾಂಶಗಳನ್ನು ಉಳಿಸಿಕೊಳ್ಳಲು ಮಣ್ಣಿನ ಪಾತ್ರೆ ಉತ್ತಮ. ಈ ಮಣ್ಣಿನ ಪಾತ್ರೆ ಸಮಾನ ಶಾಖ ವಿತರಿಸುತ್ತದೆ ಹಾಗೂ ಆಹಾರದಲ್ಲಿ ಪೋಷಕಾಂಶಗಳನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಈ ಆರೋಗ್ಯ ದೃಷ್ಟಿಯಲ್ಲಿ ನಾನ್-ಸ್ಟಿಕ್ ಪಾತ್ರೆಗಳು ಹಾನಿಕಾರಕವಾಗಿದೆ ಎಂದು ತಿಳಿಸಿದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ