Alzheimer’s Disease: ಮೂಗಿನೊಳಗೆ ಬೆರಳು ಹಾಕುವ ಅಭ್ಯಾಸ ನಿಮಗಿದೆಯೇ? ಈ ಅಪಾಯಕಾರಿ ಕಾಯಿಲೆ ಬರಬಹುದು ಎಚ್ಚರ
Excerpt - ನಿಮಗೆ ಕಿರಿಕಿರಿಯಾದಾಗ ನಿಮ್ಮ ಬೆರಳನ್ನು ಮೂಗಿಗೆ ಹಾಕುವುದು ಸಹಜ. ಆದರೆ ಈ ಅಭ್ಯಾಸ ಕೆಲವರಿಗೆ ಬಾಲ್ಯದಿಂದಲೂ ಇರುತ್ತದೆ. ಇದು ಒಳ್ಳೆಯ ಅಭ್ಯಾಸವಲ್ಲ ಜೊತೆಗೆ ಈ ರೀತಿ ಮಾಡುವುದರಿಂದ ಇತರರಿಗೆ ಮುಜುಗರವಾಗುತ್ತದೆ. ಇದು ಕೇವಲ ಸಭ್ಯತೆಯ ವಿಷಯವಲ್ಲ ನಿಮ್ಮ ಮೂಗಿನಲ್ಲಿ ಬೆರಳನ್ನು ಹಾಕುವ ಅಭ್ಯಾಸವು ಅಲ್ಝೈಮರ್ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಇತ್ತೀಚಿನ ಸಂಶೋಧನೆ ತೋರಿಸಿ ಕೊಟ್ಟಿದೆ.
ನಿಮಗೆ ಕಿರಿಕಿರಿಯಾದಾಗ ನಿಮ್ಮ ಬೆರಳನ್ನು ಮೂಗಿಗೆ ಹಾಕುವುದು ಸಹಜ. ಆದರೆ ಈ ಅಭ್ಯಾಸ ಕೆಲವರಿಗೆ ಬಾಲ್ಯದಿಂದಲೂ ಇರುತ್ತದೆ. ಇದು ಒಳ್ಳೆಯ ಅಭ್ಯಾಸವಲ್ಲ ಜೊತೆಗೆ ಈ ರೀತಿ ಮಾಡುವುದರಿಂದ ಇತರರಿಗೆ ಮುಜುಗರವಾಗುತ್ತದೆ. ಇದು ಕೇವಲ ಸಭ್ಯತೆಯ ವಿಷಯವಲ್ಲ ನಿಮ್ಮ ಮೂಗಿನಲ್ಲಿ ಬೆರಳನ್ನು ಹಾಕುವ ಅಭ್ಯಾಸವು ಅಲ್ಝೈಮರ್ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಇತ್ತೀಚಿನ ಸಂಶೋಧನೆ ತೋರಿಸಿ ಕೊಟ್ಟಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.
ಅಲ್ಝೈಮರ್ ಬಗ್ಗೆ ನಡೆಸಿದ ಕೆಲವು ಅಧ್ಯಯನಗಳಲ್ಲಿಯೂ ಮೂಗಿನೊಳಗೆ ಕೈಹಾಕುವುದು ಮತ್ತು ಅಲ್ಝೈಮರ್‌ಗೆ ಖಾಯಿಲೆಗೆ ಸಂಬಂಧ ಇದೆ ಎಂದು ಕಂಡುಕೊಂಡಿದೆ. ಅಲ್ಝೈಮರ್ ಪ್ರಗತಿಗೆ ಬಿಟಾ ಅಮಿಲಾಯ್ಡ್ ಎನ್ನುವ ಪ್ರೋಟೀನ್ ಪ್ರಮುಖ ಪಾತ್ರ ವಹಿಸುತ್ತದೆ. ಮೂಗಿನೊಳಗೆ ಕೈ ಹಾಕುವುದರಿಂದ ಉತ್ಪತ್ತಿಯಾಗುವಂತಹ ರೋಗಕಾರಕಗಳು ಬಿಟಾ ಅಮಿಲಾಯ್ಡ್‌ನ್ನು ಮೆದುಳಿನಲ್ಲಿ ಉತ್ಪತ್ತಿ ಮಾಡುತ್ತದೆ. ಅಲ್ಝೈಮರ್ ಸಮಸ್ಯೆಯನ್ನು ತಡೆಯಲು ಮೂಗನ್ನು ಶುಚಿಯಾಗಿಡುವುದು ಅತೀ ಅಗತ್ಯವೆಂದು ಈ ಅಧ್ಯಯನವು ಹೇಳಿದೆ. ಜೊತೆಗೆ ಮೂಗಿನೊಳಗಿರುವ ಕೊದಲನ್ನು ತೆಗೆಯಬಾರದು ಎಂದು ತಜ್ಞರು ಹೇಳುತ್ತಾರೆ.
ಅಲ್ಝೈಮರ್ ಕಾಯಿಲೆಯು ನ್ಯೂರೋಡಿಜೆನರೇಟಿವ್ ಕಾಯಿಲೆಯಾಗಿದ್ದು, ಇದು ಕ್ರಮೇಣ ಮೆದುಳಿನ ಕೋಶಗಳನ್ನು ನಾಶಪಡಿಸುತ್ತದೆ. ಈ ರೋಗದಿಂದಾಗಿ, ಜ್ಞಾಪಕ ಶಕ್ತಿ ದುರ್ಬಲವಾಗುತ್ತದೆ. ಯೋಚಿಸುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಇದರಿಂದಾಗಿ ವ್ಯಕ್ತಿಯು ದೈನಂದಿನ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಅಲ್ಝೈಮರ್‌ಗೆ ಪ್ರಸ್ತುತ ಯಾವುದೇ ಶಾಶ್ವತ ಚಿಕಿತ್ಸೆ ಇಲ್ಲ. ಆದರೆ ಜೀವನಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳುವ ಮೂಲಕ ಮತ್ತು ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಅದರ ಅಪಾಯವನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ. ಮೂಗು ಮತ್ತು ಅಲ್ಝೈಮರ್ ನಡುವೆ ನೇರ ಸಂಬಂಧವಿದೆ ಎಂದು ಸ್ಪಷ್ಟಪಡಿಸಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ.
ಇದನ್ನೂ ಓದಿ: ನೀವು ಒಬ್ಬಂಟಿಯಾಗಿ ವಾಸಿಸುತ್ತಿದ್ದೀರಾ? ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಚ್ಚರ
ಗ್ರಿಫಿತ್ ವಿಶ್ವವಿದ್ಯಾಲಯದ (ಆಸ್ಟ್ರೇಲಿಯಾ) ಸಂಶೋಧಕರು ಇಲಿಗಳ ಮೇಲೆ ನಡೆಸಿರುವಂತಹ ಅಧ್ಯಯನವು ಇದಕ್ಕೆ ಪೂರಕವಾಗಿರುವಂತಹ ಫಲಿತಾಂಶವನ್ನು ನೀಡಿದೆ. ಮೂಗಿನ ಮೂಲಕವಾಗಿ ರೋಗಕಾರಕ ಬ್ಯಾಕ್ಟೀರಿಯಾಗಳು ಹೇಗೆ ಮೆದುಳನ್ನು ಪ್ರವೇಶ ಮಾಡುತ್ತದೆ ಎಂದು ಇಲಿಗಳ ಮೇಲೆ ನಡೆಸಿರುವಂತಹ ಅಧ್ಯಯನದಿಂದ ತಿಳಿದುಬಂದಿದೆ. ಮನುಷ್ಯರಲ್ಲಿ ಕೂಡ ಇಂತಹ ಅಧ್ಯಯನಗಳನ್ನು ನಡೆಸಲಾಗುತ್ತಿದೆ ಜೊತೆಗೆ ಹೇಗೆ ತಡೆಗಟ್ಟಬೇಕು ಎಂಬುದನ್ನು ತಿಳಿಯಲು ಪ್ರಯತ್ನಿಸಲಾಗುತ್ತಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: