ಡಿಸೀಸ್ ಎಕ್ಸ್​ ಎದುರಿಸಲು ಸಿದ್ಧವಾಗುತ್ತಿದೆ ಭಾರತ; ಏನಿದು ಹೊಸ ರೋಗ?

ಹೊಸ ಸಾಂಕ್ರಾಮಿಕ ರೋಗಕ್ಕೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಡಿಸೀಸ್ ಎಕ್ಸ್ ಎಂದು ಹೆಸರಿಟ್ಟಿದೆ. ಈ ಹೊಸ ರೋಗ ಈಗಾಗಲೇ ಆಕ್ರಮಿಸುವ ಸಿದ್ಧತೆಯಲ್ಲಿರಬಹುದು. ಇದು ಕೋವಿಡ್ -19 ಸೋಂಕಿಗಿಂತ 20 ಪಟ್ಟು ಮಾರಣಾಂತಿಕವಾಗಿರಲಿದೆ.

ಡಿಸೀಸ್ ಎಕ್ಸ್​ ಎದುರಿಸಲು ಸಿದ್ಧವಾಗುತ್ತಿದೆ ಭಾರತ; ಏನಿದು ಹೊಸ ರೋಗ?
ಡಿಸೀಸ್​ ಎಕ್ಸ್Image Credit source: shutter stock
Follow us
ಸುಷ್ಮಾ ಚಕ್ರೆ
|

Updated on: Oct 09, 2023 | 1:11 PM

ನವದೆಹಲಿ: ಕೊರೊನಾ ಬಳಿಕ ವಿಶ್ವಾದ್ಯಂತ ಇದೀಗ ಡಿಸೀಸ್ ಎಕ್ಸ್​ ಎಂಬ ರೋಗದ ಭೀತಿ ಆವರಿಸಿದೆ. ಮುಂದಿನ ಈ ಸಾಂಕ್ರಾಮಿಕ ರೋಗವು 50 ಮಿಲಿಯನ್ ಜೀವಗಳನ್ನು ಬಲಿ ತೆಗೆದುಕೊಳ್ಳಬಹುದು ಎಂದು ಇಂಗ್ಲೆಂಡ್​ನ ಲಸಿಕೆ ಕಾರ್ಯಪಡೆಯ ಅಧ್ಯಕ್ಷರಾದ ಡೇಮ್ ಕೇಟ್ ಬಿಂಗ್‌ಹ್ಯಾಮ್ ಹೇಳಿದ್ದಾರೆ. ಈ ಹೊಸ ರೋಗ ಈಗಾಗಲೇ ಆಕ್ರಮಿಸುವ ಸಿದ್ಧತೆಯಲ್ಲಿರಬಹುದು. ಇದು ಕೋವಿಡ್ -19 ಸೋಂಕಿಗಿಂತ 20 ಪಟ್ಟು ಮಾರಣಾಂತಿಕವಾಗಿದೆ ಎಂದು ಹೇಳಿದ್ದಾರೆ. ಹೊಸ ಸಾಂಕ್ರಾಮಿಕ ರೋಗಕ್ಕೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಡಿಸೀಸ್ ಎಕ್ಸ್ ಎಂದು ಹೆಸರಿಟ್ಟಿದೆ.

ಈ ಜಗತ್ತು ಮತ್ತೊಮ್ಮೆ ಸಾಮೂಹಿಕ ಲಸಿಕಾ ಅಭಿಯಾನಕ್ಕೆ ತಯಾರಾಗಬೇಕು. ಈ ಬಾರಿ ತುರ್ತಾಗಿ ಎಲ್ಲರಿಗೂ ಲಸಿಕೆಯ ಡೋಸ್‌ಗಳನ್ನು ತಲುಪಿಸಬೇಕು. ಮುಂದೆ ಬರುವ ಸಾಧ್ಯತೆಯಿರುವ ಡಿಸೀಸ್ ಎಕ್ಸ್ ದಡಾರದಂತೆ ಸಾಂಕ್ರಾಮಿಕವಾಗಿದೆ. ಈ ರೋಗ ಜಗತ್ತಿನ ಮೂಲೆಮೂಲೆಗಳಲ್ಲಿ ಮರುಕಳಿಸುತ್ತಲೇ ಇರುತ್ತದೆ ಎಂದು ಬಿಂಗ್​ಹ್ಯಾಮ್ ಹೇಳಿದ್ದಾರೆ.

ಹೀಗಾಗಿ, ವೈದ್ಯಕೀಯ ತಜ್ಞರು ಮತ್ತು ವಿಜ್ಞಾನಿಗಳು ಈಗ ಡಿಸೀಸ್ ಎಕ್ಸ್​ ಎಂಬ ಸಂಭಾವ್ಯ ಹೊಸ ಸಾಂಕ್ರಾಮಿಕ ರೋಗಕ್ಕೆ ತಯಾರಿ ನಡೆಸುತ್ತಿದ್ದಾರೆ. ಆರೋಗ್ಯ ತಜ್ಞರು ಈ ಹೊಸ ವೈರಸ್ ಸ್ಪ್ಯಾನಿಷ್‌ನಂತೆಯೇ ವಿನಾಶಕಾರಿಯಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ರೋಗದ ಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ಈಗಲೇ ಹೇಳಲು ಕಷ್ಟ. ಆದರೆ, ಇದು ಲಕ್ಷಾಂತರ ಜನರನ್ನು ಸಾವಿಗೀಡಾಗುವಂತೆ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ನಿಫಾ ವೈರಸ್ ಸೋಂಕು ಹೆಚ್ಚಳ; ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹೈ ಅಲರ್ಟ್

ಸಾಂಕ್ರಾಮಿಕ ರೋಗಗಳು ಪ್ರತಿ 100 ವರ್ಷಗಳಿಗೊಮ್ಮೆ ಸಂಭವಿಸುತ್ತವೆ ಎಂದು ಕೆಲವರು ನಂಬುತ್ತಾರೆ. ಆದರೆ, ಇದನ್ನು ವಿಜ್ಞಾನಿಗಳು ಒಪ್ಪುವುದಿಲ್ಲ. ಕಳೆದ 3 ವರ್ಷಗಳಲ್ಲಿ ಈ ಡಿಸೀಸ್ ಎಕ್ಸ್​ 2ನೇ ಸಾಂಕ್ರಾಮಿಕ ರೋಗವಾಗಿರಲಿದೆ. ಈ ಡಿಸೀಸ್​ ಎಕ್ಸ್​ ವೈರಸ್ ಆಗಿರುತ್ತದಾ ಅಥವಾ ಬ್ಯಾಕ್ಟೀರಿಯಾ ಆಗಿರುತ್ತದಾ ಎಂಬುದು ಇನ್ನೂ ಗೌಪ್ಯವಾಗಿದೆ. ಆ ಬಗ್ಗೆ ಯಾರಿಗೂ ಮಾಹಿತಿ ಸಿಕ್ಕಿಲ್ಲ.

ಮನುಷ್ಯರು, ಪ್ರಾಣಿಗಳು ಮತ್ತು ಪರಿಸರ ವ್ಯವಸ್ಥೆಗಳ ನಡುವಿನ ಪರಸ್ಪರ ಕ್ರಿಯೆಯು ಎಂದೂ ತಪ್ಪುವುದಿಲ್ಲ. ಈ 3 ಘಟಕಗಳ ನಡುವಿನ ಸಂಬಂಧವು ಪ್ರತಿಯೊಬ್ಬರ ಉಳಿವಿಗಾಗಿ ಅತ್ಯಗತ್ಯ ಎಂಬುದನ್ನು ನಾವು ಮರೆಯಬಾರದು. ಆರೋಗ್ಯ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸುವಲ್ಲಿ ಕೇರಳ ಯಾವಾಗಲೂ ಯಶಸ್ವಿಯಾಗುತ್ತದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಸಮುದಾಯದ ಒಳಗೊಳ್ಳುವಿಕೆ ಎಂದು ಅನೇಕ ಆರೋಗ್ಯ ತಜ್ಞರು ಹೇಳುತ್ತಾರೆ. ಕೇರಳದಲ್ಲಿ ನಿಪಾ ವೈರಸ್ ಆರ್ಭಟ ಹೆಚ್ಚಾದಾಗ ಭಾರತದ ಉನ್ನತ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಸಾಂಕ್ರಾಮಿಕ ರೋಗ ವಿಭಾಗದ ಮಾಜಿ ಮುಖ್ಯಸ್ಥ ಡಾ. ರಾಮನ್ ಗಂಗಾಖೇಡ್ಕರ್ ಅವರು ನಿಪಾ ರೋಗ ಏಕಾಏಕಿ ಹರಡುವುದನ್ನು ತಡೆಯುವ ಪ್ರಯತ್ನ ನಡೆಸಿದರು. ಆಗ ಅವರು ಇಡೀ ಸಮುದಾಯವನ್ನು ಒಳಗೊಂಡು, ರೋಗ ನಿಯಂತ್ರಣಕ್ಕೆ ಮುಂದಾಗಿದ್ದರಿಂದ ನಿಪಾ ವೈರಸ್ ನಿಯಂತ್ರಣ ಸಾಧ್ಯವಾಯಿತು. ಅಲ್ಲಿನ ಜನರು ಆಪತ್ಕಾಲದಲ್ಲಿ ಅಥವಾ ಕಷ್ಟದ ಕಾಲದಲ್ಲಿ ಹೇಗೆ ಒಗ್ಗಟ್ಟಾಗಿ ಎದುರಿಸಬೇಕು ಎಂಬುದನ್ನು ಕಲಿತಿದ್ದಾರೆ. ಅದೇ ಮಾದರಿಯನ್ನು ಎಲ್ಲ ರಾಜ್ಯದವರೂ ರೂಢಿಸಿಕೊಂಡರೆ ಸಾಂಕ್ರಾಮಿಕ ರೋಗದ ನಿಯಂತ್ರಣ ಕಷ್ಟವೇನಲ್ಲ ಎಂಬುದು ತಜ್ಞರ ಅಭಿಪ್ರಾಯ.

ಇದನ್ನೂ ಓದಿ: ಯಕೃತ್ತಿನ ಆರೋಗ್ಯಕ್ಕಾಗಿ ಈ ಪದಾರ್ಥಗಳು ಸಹಾಯಕ

ಸಾಮಾನ್ಯ ಜನರಲ್ಲಿ ಝೂನೋಟಿಕ್ ಕಾಯಿಲೆಗಳ ಬಗ್ಗೆ ಅರಿವಿನ ಕೊರತೆಯಿದೆ. ಆದ್ದರಿಂದ, ಅದರ ಬಗ್ಗೆ ಜಾಗೃತಿ ಮೂಡಿಸಲು ಶಾಲಾ ಮಕ್ಕಳು ಸೇರಿದಂತೆ ಸಮುದಾಯಗಳನ್ನು ಬಳಸಿಕೊಳ್ಳವುದು ಕಡ್ಡಾಯವಾಗಿದೆ. ಹಾಗೇ, ಭಾರತವು ವಿಶ್ವದ ಫಾರ್ಮಸಿ ಎಂದು ಹೆಮ್ಮೆಯಿಂದ ಹೆಮ್ಮೆಪಡುತ್ತಿರುವಾಗ, ಪರಿಣಾಮಕಾರಿ ಆಂಟಿವೈರಲ್ ಔಷಧಿಗಳ ಶ್ರೇಣಿಯನ್ನು ಅಭಿವೃದ್ಧಿಪಡಿಸುವ ಸವಾಲಿನ ಮತ್ತು ಅತ್ಯಂತ ಮಹತ್ವದ ಕಾರ್ಯದ ಕಡೆಗೆ ಪ್ರಯತ್ನಗಳನ್ನು ಮಾಡುತ್ತಿದೆ.

ಈ ಕಾರ್ಯಾಚರಣೆಯು ಸಾಂಕ್ರಾಮಿಕ ಸಮಯದಲ್ಲಿ ವಿಶ್ವದಾದ್ಯಂತ ಹಲವಾರು ಜೀವಗಳನ್ನು ಉಳಿಸುವ ಸಾಮರ್ಥ್ಯವನ್ನು ಹೊಂದಿದೆ. ಡಿಸೀಸ್ ಎಕ್ಸ್ ರೋಗ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಭಾರತವು ತನ್ನ ಜೀನೋಮಿಕ್ ಕಣ್ಗಾವಲು ಸಂಸ್ಥೆ INSACOGನ ವ್ಯಾಪ್ತಿಯನ್ನು ವಿಸ್ತರಿಸಲು ಯೋಜಿಸುತ್ತಿದೆ. ಒಟ್ಟಾರೆಯಾಗಿ, ಮುಂದಿನ ಸಾಂಕ್ರಾಮಿಕ ರೋಗದ ನಿರೀಕ್ಷೆಯಲ್ಲಿ ಭಾರತವು ಸಮಗ್ರ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಆದರೆ, ಡಿಸೀಸ್​ ಎಕ್ಸ್​ ರೋಗದ ತೀವ್ರತೆ ಎಷ್ಟಿರುತ್ತದೆ ಎಂಬುದು ಆ ರೋಗ ಹರಡಲು ಶುರುವಾದ ಮೇಲೆ ಮಾತ್ರ ತಿಳಿಯುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ