Kidney Problem: ನಿಮ್ಮ ಈ ಅಭ್ಯಾಸಗಳು ನಿಮಗೇ ತಿಳಿಯದಂತೆ ಕಿಡ್ನಿ ಮೇಲೆ ಪರಿಣಾಮ ಬೀರಬಹುದು
ನಿಮ್ಮ ದೇಹದ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದ್ದರೆ ನಿಮ್ಮ ಕಿಡ್ನಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರಬೇಕು. ಇದು ದೇಹದಲ್ಲಿರುವ ಹೆಚ್ಚಿನ ಫ್ಲೂಯಡ್ ಅನ್ನು ಹೊರಹಾಕುತ್ತದೆ. ಕಿಡ್ನಿಗೆ ಹಾನಿಯಾಗಿ ಕಷ್ಟಪಡುವ ಬದಲು , ಕಿಡ್ನಿಯ ಆರೋಗ್ಯಕ್ಕೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ಹೇಗೆ ಎಂದು ಯೋಚಿಸುವುದು ತುಂಬಾ ಒಳ್ಳೆಯದು.
ನಿಮ್ಮ ದೇಹದ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದ್ದರೆ ನಿಮ್ಮ ಕಿಡ್ನಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರಬೇಕು. ಇದು ದೇಹದಲ್ಲಿರುವ ಹೆಚ್ಚಿನ ಫ್ಲೂಯಡ್ ಅನ್ನು ಹೊರಹಾಕುತ್ತದೆ. ಕಿಡ್ನಿಗೆ ಹಾನಿಯಾಗಿ ಕಷ್ಟಪಡುವ ಬದಲು , ಕಿಡ್ನಿಯ ಆರೋಗ್ಯಕ್ಕೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ಹೇಗೆ ಎಂದು ಯೋಚಿಸುವುದು ತುಂಬಾ ಒಳ್ಳೆಯದು. ಮದ್ಯಪಾನ ಮಾಡುವವರಿಗೆ ಮಾತ್ರ ಕಿಡ್ನಿ ಹಾಳಾಗುತ್ತದೆ ಎಂಬ ತಪ್ಪು ಕಲ್ಪನೆ ಹೆಚ್ಚಿನವರಲ್ಲಿದೆ. ಆದರೆ ಯಾವುದೇ ದುರಾಭ್ಯಾಸ ಇಲ್ಲದಿದ್ದರೂ, ಕಿಡ್ನಿಯ ಆರೋಗ್ಯದ ಬಗ್ಗೆ ಗಮನ ಕೊಡದಿದ್ದರೆ ಅದರ ಆರೋಗ್ಯ ಕುಂದಬಹುದು.
ನಿಮಗೇ ತಿಳಿದರುವಂತೆ ನಾವು ತಿನ್ನುವ ಆಹಾರ ಮತ್ತು ನಮ್ಮ ಅಭ್ಯಾಸಕ್ಕೂ , ನಮ್ಮ ದೇಹದ ಅಂಗಗಳ ಆರೋಗ್ಯಕ್ಕೂ ಒಂದಕ್ಕೊಂದು ನೇರ ಸಂಬಂಧವಿದೆ. ಕಿಡ್ನಿ ಆರೋಗ್ಯದ ಬಗ್ಗೆ ನೋಡುವುದಾದರೆ ಅದನ್ನು ಶುದ್ಧ ಮಾಡುವ ಆಹಾರವನ್ನು ತಿನ್ನಬೇಕು.
ಕಿಡ್ನಿಯಲ್ಲಿ ಕಲ್ಮಶ ಸಂಗ್ರಹವಾಗುತ್ತಾ ಹೋದಂತೆ ಕಿಡ್ನಿಯಲ್ಲಿ ಕಲ್ಲು ಮುಂತಾದ ಸಮಸ್ಯೆ ಕಂಡು ಬರುವುದು. ನಿಮ್ಮ ಕಿಡ್ನಿಯ ಆರೋಗ್ಯ ನೀವು ಬಯಸುವುದಾದರೆ ಈ ಕೆಳಗಿನ ಟಿಪ್ಸ್ ಪಾಲಿಸುವುದು ಒಳ್ಳೆಯದು.
ಪೇನ್ ಕಿಲ್ಲರ್ಗಳ ಬಳಕೆ ಕಡಿಮೆ ಮಾಡಿ ನೀವು ಒಮ್ಮೆ ಪೇನ್ ಕಿಲ್ಲರ್ಗಳನ್ನು ತೆಗೆದುಕೊಳ್ಳಲು ಶುರು ಮಾಡಿದರೆ ನಿಮಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ಮಾತ್ರೆಗಳಿಲ್ಲದೆ ಹಾಗೆಯೇ ಗುಣಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗೆಯೇ ತಲೆನೋವು, ಶೀತ ಹೀಗೆ ಹಲವು ಸಣ್ಣ ಸಣ್ಣ ಕಾರಣಗಳಿಗಾಗಿ ತೆಗೆದುಕೊಳ್ಳುವ ಮಾತ್ರೆಗಳು ನಿಮ್ಮ ಕಿಡ್ನಿ ಮೇಲೆ ಪರಿಣಾಮ ಬೀರಬಲ್ಲದು.
ನಿತ್ಯ ವ್ಯಾಯಾಮವಿಲ್ಲದೆ ಇರುವುದು ನೀವು ನಿತ್ಯ ಅರ್ಧಗಂಟೆಯೂ ವಾಕ್ ಮಾಡದೇ ಇರುವುದು, ಯಾವುದೇ ವ್ಯಾಯಾಮ ಇಲ್ಲದೇ ಇರುವುದರಿಂದ ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆಯೂ ಎದುರಾಗಬಹುದು. ಹಾಗೆಯೇ ಹೃದಯ ಸಂಬಂಧಿ ಕಾಯಿಲೆಗಳು ಕೂಡ ಬರಬಹುದು. ಹೀಗಾಗಿ ನಿತ್ಯ ಅರ್ಧಗಂಟೆಯಾದರೂ ವಾಕ್ ಅಥವಾ ವ್ಯಾಯಾಮಕ್ಕೆ ಮೀಸಲಿಡಿ.
ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ ನೀರು ಹೆಚ್ಚಿನವರಿಗೆ ನೀರು ಕಮ್ಮಿ ಕುಡಿಯುವ ಅಭ್ಯಾಸವಿರುತ್ತದೆ. ಎರಡು ಗ್ಲಾಸ್ ಗಿಂತ ಕಡಿಮೆ ನೀರು ಕುಡಿಯುವವರೂ ಇರುತ್ತಾರೆ. ಬಾಯಾರಿಕೆ ಆಗುವುದಿಲ್ಲ, ಮತ್ತೆ ಹೆಚ್ಚು ನೀರು ಕುಡಿಯುವುದು ಹೇಗೆ ಅನ್ನುವುದೇ ಅವರ ಸಮಸ್ಯೆಯಾಗಿರುತ್ತದೆ. ಬಾಯಾರಿಕೆಯಾದಾಗ ನೀರು ಕುಡಿಯುತ್ತೇವೆ ಅಂದರೆ ಹೆಚ್ಚು ನೀರು ಕುಡಿಯಲು ಸಾಧ್ಯವಾಗುವುದಿಲ್ಲ. ನೀರನ್ನು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಬೇಕು.
ಮೂತ್ರವನ್ನು ತಡೆಹಿಡಿಯಬೇಡಿ ಮೂತ್ರವಿಸರ್ಜನೆ ಮೂತ್ರ ವಿಸರ್ಜನೆಗೆ 2-3 ಗಂಟೆಗಳಗೊಮ್ಮೆ ಹೋಗಿ. ಮೂತ್ರ ಬಂದರೆ ತಡೆ ಹಿಡಿಯುವ ಪ್ರಯತ್ನ ಮಾಡಬೇಡಿ. ಮೂತ್ರವನ್ನು ತಡೆ ಹಿಡಿಯುವುದರಿಂದ ಕಿಡ್ನಿ ಸ್ಟೋನ್ಸ್ ಬರಬಹುದು
ಆಂಟಿ ಆಕ್ಸಿಡೆಂಟ್ಸ್ ಹೆಚ್ಚಿರುವ ಆಹಾರಗಳನ್ನು ಸೇವನೆ ಮಾಡಿ ಆಂಟಿ ಆಕ್ಸಿಡೆಂಟ್ಸ್ ಇರುವ ಆಹಾರಗಳು ಆಂಟಿ ಆಕ್ಸಿಡೆಂಟ್ಸ್ ಅಧಿಕವಿರುವ ಹಣ್ಣು-ತರಕಾರಿಗಳನ್ನು ತಿನ್ನಿ. ಬೆರ್ರಿ ಹಣ್ಣುಗಳಲ್ಲಿ ಈ ಅಂಶ ಅಧಿಕವಿರುತ್ತದೆ. ಕೊತ್ತಂಬರಿ ಸೊಪ್ಪು ಕೊತ್ತಂಬರಿ ಸೊಪ್ಪು ಕಣ್ಣಿಗೆ ಮತ್ತು ಕಿಡ್ನಿಗೆ ತುಂಬಾ ಒಳ್ಳೆಯದು. ಇದು ಕಿಡ್ನಿಯಲ್ಲಿರುವ ಕಲ್ಮಶವನ್ನು ಹೊರಹಾಕಿ ಕಿಡ್ನಿಯನ್ನು ಶುದ್ಧ ಮಾಡುತ್ತದೆ.
ಉಪ್ಪು ಕಿಡ್ನಿ ಸಮಸ್ಯೆ ಇರುವವರು ಕಲ್ಲುಪ್ಪು ತಿನ್ನುವುದು ಒಳ್ಳೆಯದು ಖಾರದ ಆಹಾರಗಳಿಂದ ದೂರವಿರಿ ಅತೀಯಾದ ಖಾರದ ಆಹಾರಗಳು ಆರೋಗ್ಯಕರವಲ್ಲ. ಖಾರವನ್ನು ಮಿತಿಯಲ್ಲಿ ತಿನ್ನಿ. ಖಾರ ಕಮ್ಮಿ ತಿನ್ನುವುದು ಲಿವರ್ ಗೂ ಒಳ್ಳೆಯದು. ಸೊಪ್ಪು ಸೊಪ್ಪನ್ನು ತಿನ್ನಿ. ಇದರಲ್ಲಿ ವಿಟಮಿನ್ ಕೆ ಮತ್ತು ಕಬ್ಬಿಣದಂಶ, ನಾರಿನಂಶ ಅಧಿಕವಿದ್ದು ಕಿಡ್ನಿಯ ಆರೋಗ್ಯವನ್ನು ಕಾಪಾಡುತ್ತದೆ.