Heart Attack: ಹೃದಯಾಘಾತದ ಸಾಮಾನ್ಯ ಲಕ್ಷಣಗಳಾವುವು? ತಿಳಿಯಲೇಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ
ಹೃದಯಾಘಾತದ ಲಕ್ಷಣಗಳಾವುವು? ಎಂಬುದರ ಕುರಿತಾಗಿ ಮಾಹಿತಿ ಇಲ್ಲಿದೆ. ಯಾವುದೇ ಕಾರಣಕ್ಕೂ ನಿಮ್ಮ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದರೆ ತಕ್ಷಣ ವೈದ್ಯರಲ್ಲಿ ಸಲಹೆ ಪಡೆಯಿರಿ.
ಇತೀಚೆಗೆ ಹೃದಯಾಘಾತದಿಂದ ಮರಣ ಹೊಂದುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಿದೆ. ಹೆಚ್ಚು ಫಿಟ್ ಆಗಿರುವ, ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲದಿರುವ ವ್ಯಕ್ತಿಗಳು ಸಹ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಹೃದಯಾಘಾತವು ಕೆಲವೊಮ್ಮೆ ಸಣ್ಣ ಅಥವಾ ಸೌಮ್ಯ ಲಕ್ಷಣದ ಹೃದಯಾಘಾತವಾಗಿರಬಹುದು. ಅಧಿಕ ಕೊಲೆಸ್ಟ್ರಾಲ್ ಮಟ್ಟ ಅಥವಾ ಅಪಧಮನಿಗಳ ಕಿರಿದಾಗುವಿಕೆ, ಹೃದಯಕ್ಕೆ ರಕ್ತ ಪರಿಚಲನೆ ಮತ್ತು ಆಮ್ಲಜನಕದ ಪೂರೈಕೆಗೆ ಅಡ್ಡಿಯಾದಾಗ ಹೃದಯಾಘಾತ ಸಂಭವಿಸುತ್ತದೆ. ಹೃದಯಾಘಾತದಲ್ಲಿ ಎದೆನೋವು ಕಂಡು ಬರುವುದು ಸಾಮಾನ್ಯ ಲಕ್ಷಣಗಳಾಗಿವೆ ಎಂದು ಅಮೆರಿಕನ್ ಹಾರ್ಟ್ ಅಸೋಷಿಯೇಷನ್ ಹೇಳುತ್ತದೆ.
ಸೌಮ್ಯ ಲಕ್ಷಣದ ಹೃದಯಾಘಾತ ಎಂದರೇನು? ಹೃದಯಾಘಾತವು ನಿಮ್ಮನ್ನು ದುರ್ಬಲಗೊಳಿಸಬಹುದು ಆದರೆ ಇದು ತೀವ್ರವಾಗಿರುವುದಿಲ್ಲ. ತಜ್ಞರ ಪ್ರಕಾರ, ಸೌಮ್ಯ ಅಥವಾ ಸೌಮ್ಯ ಲಕ್ಷಣದ ಹೃದಯಾಘಾತದಲ್ಲಿ ಹೃದಯವು ಹೆಚ್ಚು ಹಾನಿಗೊಳಗಾಗಿರುವುದಿಲ್ಲ. ಸಾಮಾನ್ಯವಾಗಿ ಪಂಪ್ ಮಾಡುವುದನ್ನು ಮುಂದುವರೆಸುತ್ತದೆ. ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಪ್ರಕಾರ, ಹೃದಯಾಘಾತಕ್ಕೆ ಸಂಬಂಧಿತ ಕಾರಣಗಳು ತಿಳಿದು ಬಂದಾಗ ಅವುಗಳನ್ನು ಪರೀಕ್ಷಿಸುವ ಮೂಲಕ ತೀವ್ರ ಹೃದಯಾಘಾತದ ಲಕ್ಷಣಗಳಿಂದ ರಕ್ಷಿಸಬಹುದು. ಅದೇನೇ ಆದರೂ ಸೌಮ್ಯ ಲಕ್ಷಣದ ಹೃದಯಾಘಾತ ಸಂಬಂಧಿಸಿದಾಗ ಉಂಟಾಗುವ ಲಕ್ಷಣಗಳೇನು ಎಂಬುದರ ಬಗ್ಗೆ ತಿಳಿದಿರಲಿ.
ಕುತ್ತಿಗೆ ಅಥವಾ ದವಡೆಯ ನೋವು ತೋಳು, ದವಡೆ, ಕುತ್ತಿಗೆ ನೋವು ಸಣ್ಣ ಹೃದಯಾಘಾತದ ಲಕ್ಷಣಗಳಾಗಿವೆ. ಪುರುಷರಿಗಿಂತ ಹೆಚ್ಚು ಮಹಿಳೆಯರಲ್ಲಿ ಈ ಲಕ್ಷಣ ಕಂಡು ಬರುತ್ತದೆ. ಈ ಲಕ್ಷಣಗಳು ನಿಮ್ಮ ನಿದ್ರೆಯನ್ನು ಕೆಡಿಸಬಹುದು, ವ್ಯಾಯಾಮದಲ್ಲಿ ಅಡ್ಡಿಯಾಗಬಹುದು, ಯಾವ ಸಂದರ್ಭದಲ್ಲಿಯೂ ಕಾಣಿಸಿಕೊಳ್ಳಬಹುದು ಹಾಗಾಗಿ ಈ ಲಕ್ಷಣಗಳ ಬಗ್ಗೆ ನಿರ್ಲಕ್ಷ್ಯ ಬೇಡ.
ತಲೆತಿರುಗುವುದು, ಆಯಾಸ ಸೌಮ್ಯ ಲಕ್ಷಣದ ಹೃದಯಾಘಾತ ಉಂಟಾದಾಗ ರಕ್ತದ ಒತ್ತಡದಿಂದ ತಲೆತಿರುಗುವುದು, ಆಯಾಸದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಅತಿಯಾದ ಆಯಾಸ ತಲೆತಿರುಗುವಿಕೆ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರದೇ ಎಚ್ಚರವಹಿಸಿ.
ಉಸಿರಾಟದ ತೊಂದರೆ ಎದೆನೋವಿನ ಸಮಸ್ಯೆ ಕಾಣಿಸಿಕೊಂಡಾಗ ರಕ್ತದ ಒತ್ತಡ ಮತ್ತು ಉಸಿರಾಟಕ್ಕೆ ತೊಂದರೆಗೊಳಗಾಗುವ ಲಕ್ಷಣಗಳು ಕಂಡು ಬರುತ್ತವೆ. ಅಸ್ತಮಾ ರೋಗಿಗಳಲ್ಲಿ ಇದು ಹೆಚ್ಚಾಗಿ ಕಂಡು ಬರುವ ಸಾಧ್ಯತೆಗಳಿರುತ್ತವೆ.
ವಾಕರಿಕೆ ವಾಕರಿಕೆ ಹೃದಯಾಘಾತದ ಲಕ್ಷಣಗಳಲ್ಲಿ ಒಂದು. ವಯಸ್ಸಾದವು, ಮಹಿಳೆಯರು ಮತ್ತು ಮಧುಮೇಹಿಗಳಲ್ಲಿ ಇದು ಸಾಮಾನ್ಯ ಲಕ್ಷಣ. ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಪ್ರಕಾರ, ಹೃದಯಾಘಾತದ ಸಂದರ್ಭದಲ್ಲಿ ಅರ್ಧದಷ್ಟು ಮಾತ್ರ ಎದೆನೋವು ಕಾಣಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಅಸ್ವಸ್ಥತೆ, ಒತ್ತಡದಂತಹ ಭಾವನೆ ಅನುಭವಿಸುವ ಸಾಧ್ಯತೆ ಹೆಚ್ಚಿರುತ್ತದೆ.
ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಯಾವುದೇ ಕಾರಣಕ್ಕೂ ನಿಮ್ಮ ಆರೋಗ್ಯದ ಕುರಿತಾಗ ನಿರ್ಲಕ್ಷ್ಯ ಬೇಡ. ನಿಮ್ಮ ಆರೋಗ್ಯದಲ್ಲಿ ಏನೇ ಏರು ಪೇರು ಕಂಡು ಬಂದರೂ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಪರೀಕ್ಷಿಸಿಕೊಳ್ಳಿ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಇರಲಿ.
ಇದನ್ನೂ ಓದಿ:
Heart Attack: ಹೃದಯಾಘಾತಕ್ಕೆ ಕಾರಣಗಳೇನು? ಈ ಬಗ್ಗೆ ವೈದ್ಯರು ಹೇಳುವುದೇನು?
Heart Attack: ಹೃದಯಾಘಾತವನ್ನು ತಡೆಗಟ್ಟಲು ಈ ಐದು ಕ್ರಮಗಳನ್ನು ಅನುಸರಿಸಿ