Nipah Virus: ನಿಫಾ ವೈರಸ್ ಎಂದರೇನು? ಇದು ಕೊರೊನಾ ವೈರಸ್ಗಿಂತಲೂ ಹೆಚ್ಚು ಮಾರಕವೇ?
ನಿಫಾ ವೈರಸ್: ಬದುಕುಳಿದವರಲ್ಲಿ ದೀರ್ಘಕಾಲದವರೆಗೆ ಅಡ್ಡ ಪರಿಣಾಮಗಳು ಜತೆಗೆ ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತವೆ ಎಂಬುದು ವರದಿಯಾಗಿದೆ.
ಮಹಾರಾಷ್ಟ್ರದ ಎರಡು ಜಾತಿಯ ಬಾವಲಿಗಳಲ್ಲಿ ಈ ಮಾರಣಾಂತಿಕ ನಿಫಾ ವೈರಸ್ ಪತ್ತೆಯಾಗಿದೆ. ಪುಣೆ ಮೂಲದ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ವಿಜ್ಞಾನಿಗಳು ಮೊದಲ ಬಾರಿಗೆ ಈ ವೈರಸ್ಅನ್ನು ಕಂಡು ಹಿಡಿದಿದ್ದಾರೆ. 2020ರಲ್ಲಿ ಸತಾರಾ ಜಿಲ್ಲೆಯಲ್ಲಿರುವ ಮಹಾಬಲೇಶ್ವರ ಗುಹೆಯಲ್ಲಿ ವಾಸಿಸುತ್ತಿರುವ ಬಾವಲಿಗಳಲ್ಲಿ ನಿಫಾ ವೈರಸ್ ಪತ್ತೆಯಾಗಿವೆ.
ಯಾವುದೇ ಲಸಿಕೆಗಳು ಅಥವಾ ಔಷಧಿಗಳು ಇಲ್ಲದಿರುವುದರಿಂದ ನಿಫಾ ವೈರಸ್ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಕೊವಿಡ್-19 ಸೋಂಕಿನಿಂದ ಬಳಲುತ್ತಿರುವವರಲ್ಲಿ (ಫೆಟಲಿಟಿ ರೇಟ್, ಸಿಎಫ್‌ಆರ್) ಶೇ. 1-2 ರಷ್ಟಿದ್ದರೆ ನಿಫಾ ಸೋಂಕು ಪೀಡಿತರಲ್ಲಿ ಶೇ. 65-100ರಷ್ಟಿರುತ್ತದೆ. ಆದ್ದರಿಂದ ನಿಫಾ ವೈರಸ್ ಪೀಡಿತರಲ್ಲಿ ಸಾವಿನ ಪ್ರಮಾಣ ಹೆಚ್ಚು.
ವಿಶ್ವ ಆರೋಗ್ಯ ಸಂಸ್ಥೆಯ ಟಾಪ್ 10 ರೋಗಗಳ ಪಟ್ಟಿಯಲ್ಲಿ ನಿಫಾ ವೈರಸ್ ಇದೆ. ಏಕಾಏಕಿ ಮಾರಣಾಂತಿಕ ನಿಫಾ ವೈರಸ್ ತಗುಲಿದ ದೇಶಗಳು ಭಾರತ, ಬಾಂಗ್ಲಾದೇಶ, ಮಲೇಶಿಯಾ ಮತ್ತು ಸಿಂಗಾಪುರ.
ನಿಫಾ ವೈರಸ್ 1998-9ರಲ್ಲಿ ಮಲೇಶಿಯಾದಲ್ಲಿ ಹಂದಿ ಸಾಕುವವರಲ್ಲಿ ಏಕಾಏಕಿ ಪತ್ತೆಯಾಯಿತು. ಪ್ರಕರಣದಲ್ಲಿ ಸಾವಿನ ಪ್ರಮಾಣವು ಶೇ. 40ರಷ್ಟಿತ್ತು.
2001ರಲ್ಲಿ ಪಶ್ಚಿಮ ಬಂಗಾಳದ ಸಿಲಿಗುರಿ ಬಳಿ, 2007ರಲ್ಲಿ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ 2018ರಲ್ಲಿ ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ (18 ಸಾವು) ಹಾಗೂ 2019ರಲ್ಲಿ ಮತ್ತೆ ಕೇರಳದ ಕೋಯಿಕ್ಕೋಡ್ನಲ್ಲಿ ಪತ್ತೆಯಾಗಿದೆ.
ನಿಫಾಲ್ ವೈರಸ್ ನಿಫಾ ವೈರಸ್ ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಸ್ ಆಗಿದೆ. ಹಾರುವ ಬಾವಲಿಯಿಂದ, ನರಿಗಳಿಂದ ಹರಡುತ್ತವೆ. ಜತೆಗೆ ಹಂದಿಗಳಿಂದಲೂ ಸಹ ಈ ವೈರಸ್ ಹರಡುತ್ತವೆ ಎಂಬುದು ತಿಳಿದು ಬಂದಿದೆ.
ನಿಫಾ ವೈರಸ್ ಲಕ್ಷಣಗಳು ಇದೊಂದು ಮಾರಣಾಂತಿಕ ವೈರಸ್. ಜತೆಗೆ ಮಿದುಳಿಗೆ ಸಂಬಂಧಿಸಿದ ಖಾಯಿಲೆಗಳು ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಜ್ವರ, ತಲೆನೋವು, ಗಂಟಲು ಕೆರೆತ, ಉಸರಾಟದ ತೊಂದರೆ, ವಾಂತಿ ಈ ರೀತಿಯಾದ ಲಕ್ಷಣಗಳು ಕಂಡು ಬರುತ್ತದೆ. ಜತೆಗೆ ಅರೆನಿದ್ರಾವಸ್ಥೆ, ಗೊಂದಲ, ಕೋಮಾ ಸ್ಥಿತಿಗಳಿಗೂ ಇದರ ಲಕ್ಷಣ ತಲುಪಬಹುದು. ಬದುಕುಳಿದವರಲ್ಲಿ ದೀರ್ಘಕಾಲದವರೆಗೆ ಅಡ್ಡ ಪರಿಣಾಮಗಳು ಜತೆಗೆ ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತವೆ ಎಂಬುದು ವರದಿಯಾಗಿದೆ.
ತಡೆಗಟ್ಟುವ ಕ್ರಮ *ಸಾಬೂನಿನಲ್ಲಿ ನಿಯಮಿತವಾಗಿ ಕೈತೊಳೆಯುವ ಅಭ್ಯಾಸ ರೂಢಿಯಲ್ಲಿರಲಿ *ಅನಾರೋಗ್ಯದ ಬಾವಲಿಗಳು ಮತ್ತು ಹಂದಿಗಳಿಂದ ದೂರವಿರಿ *ಬಾವಲಿಗಳು ಹೆಚ್ಚು ಓಡಾಡುವ ಪ್ರದೇಶಗಳಲ್ಲಿ ಓಡಾಡುವುದನ್ನು ತಪ್ಪಿಸಿ *ಬಾವಲಿಗಳಿಂದ ಕಲುಷಿತಗೊಂಡಿರುವ ಹಣ್ಣುಗಳ ಸೇವನೆಯನ್ನು ತಪ್ಪಿಸಿ *ಸೋಂಕಿಗೆ ಒಳಗಾದ ವ್ಯಕ್ತಿಯಿಂದ ದೂರವಿರಿ
ಸೂಚನೆ: ನಿಮ್ಮ ಆರೋಗ್ಯದಲ್ಲಿ ಏನೇ ಏರು-ಪೇರಾದರೂ ಕೂಡಾ ಮೊದಲು ವೈದ್ಯರನ್ನು ಸಂಪರ್ಕಿಸಿ. ಯಾವುದೇ ಕಾರಣಕ್ಕೂ ನಿಮ್ಮ ಆರೋಗ್ಯದ ಕುರಿತಾಗಿ ನಿರ್ಲಕ್ಷ್ಯ ಬೇಡ. ಸೋಂಕು ತಡೆಗಟ್ಟಲು ಸೂಚಿಸಿರುವ ನಿಯಮಗಳನ್ನು ತಪ್ಪದೇಪಾಲಿಸಿ.
ಇದನ್ನೂ ಓದಿ:
ನಿಫಾ ನಂತರ ಮತ್ತೊಂದು ಡೆಡ್ಲಿ ವೈರಸ್ ಎಂಟ್ರಿ! ಚೀನಾಗೆ ಭೇಟಿ ನೀಡುವ ಮುನ್ನ ಎಚ್ಚರ!
ಕರ್ನಾಟಕದಲ್ಲಿ ವೈರಸ್ ರಹಸ್ಯ ಸಂಶೋಧನೆಗೆ ಹಣ ನೀಡಿದ ವಿಶ್ವದ ದೊಡ್ಡಣ್ಣ!
Published On - 11:58 am, Wed, 23 June 21