ಮುಂಜಾನೆ ನೀವು ತೃಪ್ತಿದಾಯಕ ಉಪಾಹಾರವನ್ನು ಸೇವಿಸದಿದ್ದರೆ, ಮಧ್ಯಾಹ್ನದ ಸಮಯದಲ್ಲಿ ಹಸಿವಿನಿಂದ ಕೆಲವೊಂದು ಆಹಾರಗಳನ್ನು ಸೇವಿಸುವ ಸಾಧ್ಯತೆಯಿದೆ. ಬೆಳಿಗ್ಗೆ 10 ಗಂಟೆ ನಂತರದ ಮತ್ತು ಊಟದ ನಡುವಿನ ಉಪಾಹಾರ ಅಥವಾ ಇನ್ನಿತರ ತಿಂಡಿ ತಿನ್ನುವುದು ದೇಹಕ್ಕೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ಆರೋಗ್ಯಕರವಲ್ಲದ ಆಹಾರಗಳನ್ನು ಮಧ್ಯಾಹ್ನ ಸೇವನೆ ಮಾಡುವುದು ಆರೋಗ್ಯದ ಮೇಲೆ ಅಡ್ಡಪರಿಣಾಮಗಳನ್ನು ಉಂಟು ಮಾಡಬಹುದು. ಈ ಅವಧಿಯಲ್ಲಿ ಸೇವನೆ ಮಾಡಲು ಬಯಸುವ ಆಹಾರಗಳು ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿರುವುದರ ಜೊತೆಗೆ ಕೆಟ್ಟ ಕೊಬ್ಬುಗಳನ್ನು ಹೊಂದಿರುತ್ತದೆ, ಅದಲ್ಲದೆ ಸಿಹಿತಿಂಡಿಗಳು ಮತ್ತು ಇತರ ಖಾಲಿ ಕ್ಯಾಲೊರಿಗಳಿಂದ ಅನಗತ್ಯ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ತೂಕ ಹೆಚ್ಚಳಕ್ಕೆ ಕಾರಣವಾಗುವ ಕೆಲವು ಅನಾರೋಗ್ಯಕರ ಆಹಾರಗಳನ್ನು ತಿಳಿದುಕೊಳ್ಳುವ ಬಗ್ಗೆ ಡೆಹ್ರಾಡೂನ್ನ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ಡೋಲಿ ಬಲಿಯಾನ್ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಬೆಳಿಗ್ಗೆ ನಾವು ಅತಿಯಾಗಿ ಸೇವಿಸುವ ಕೆಲವು ಅನಾರೋಗ್ಯಕರ ಆಹಾರಗಳನ್ನು ತಜ್ಞರು ಪಟ್ಟಿ ಮಾಡಿದ್ದು, ಅವು ತೂಕ ಇಳಿಸುವ ಪ್ರಕ್ರಿಯೆಗೆ ಅಡ್ಡಿಯಾಗಬಹುದು ಎಂದಿದ್ದಾರೆ.
1. ಬಿಸ್ಕತ್ತು; ಬಿಸ್ಕತ್ತುಗಳು ಅಥವಾ ಬೇಕರಿ ಪದಾರ್ಥಗಳಾದ ಕುಕೀಗಳು ಮತ್ತು ಪೇಸ್ಟ್ರಿಗಳನ್ನು ಮಧ್ಯಾಹ್ನದ ಸಮಯದಲ್ಲಿ ಸೇವನೆ ಮಾಡಬಾರದು. ಏಕೆಂದರೆ ಅವುಗಳು ಅನಾರೋಗ್ಯಕರ ಕೊಬ್ಬುಗಳು ಮತ್ತು ಸಂಸ್ಕರಿಸಿದ ಪದಾರ್ಥಗಳು ಮತ್ತು ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತವೆ, ಇದು ಅನಾರೋಗ್ಯಕರವಾಗಿದೆ ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ” ಎಂದು ತಜ್ಞರು ಹೇಳುತ್ತಾರೆ.
2. ಸಕ್ಕರೆ ಬೆರೆತ ಆಹಾರಗಳು; ಕೆಲವರು ಬೆಳಿಗ್ಗೆ ಒಂದು ಕಪ್ ಚಹಾ ಅಥವಾ ಕಾಫಿಯೊಂದಿಗೆ ಸಿಹಿ ತಿನಿಸುಗಳನ್ನು ಸವಿಯಲು ಇಷ್ಟಪಡುತ್ತಾರೆ. ಇದು ವಿಷವಲ್ಲದಿದ್ದರೂ, ಅತಿಯಾಗಿ ಕುಕೀಗಳು, ಕ್ಯಾಂಡಿ ಮತ್ತು ಸಕ್ಕರೆಗಳಂತಹ ಆಹಾರಗಳು ತೆಗೆದುಕೊಂಡಾಗ, ಕ್ಯಾಲೊರಿಗಳನ್ನು ಹೆಚ್ಚು ಮಾಡುತ್ತವೆ. ಇದು ಸಕ್ಕರೆ ಸ್ಪೈಕ್ ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ನೀವು ಸಕ್ಕರೆ ಬೆರೆತ ಆಹಾರಗಳನ್ನು ತಿನ್ನುವ ಬಯಕೆ ಹೊಂದಿದ್ದರೆ, ನೈಸರ್ಗಿಕವಾಗಿ ಸಿಹಿ ಇರುವ ಅಥವಾ ಸಣ್ಣ ಪ್ರಮಾಣದಲ್ಲಿ ಏನನ್ನಾದರೂ ಸೇವಿಸಿ. “ಜೊತೆಗೆ ಸೋಡಾ ಮತ್ತು ಇತರ ಸಕ್ಕರೆ / ಕಾರ್ಬೊನೇಟೆಡ್ ಪಾನೀಯಗಳು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಹಾಗಾಗಿ ಹಗಲಿನಲ್ಲಿ ದೇಹವನ್ನು ಹೈಡ್ರೇಟ್ ಮಾಡುವುದು ಮುಖ್ಯ” ಎಂದು ತಜ್ಞರು ಹೇಳುತ್ತಾರೆ.
3. ಪರೋಟ; ಉತ್ತರ ಭಾರತದ ಅಚ್ಚುಮೆಚ್ಚಿನ ಪರೋಟಗಳನ್ನು ಭಾರತದ ವಿವಿಧ ಭಾಗಗಳಲ್ಲಿ ಉಪಾಹಾರವಾಗಿ ಸೇವಿಸಲಾಗುತ್ತದೆ. ಪರೋಟಗಳಿಗೆ ಹಾಕುವ ತರಕಾರಿಗಳು ಮತ್ತು ಗೋಧಿಯ ಮಿಶ್ರಣದೊಂದಿಗೆ ಇದು ಆರೋಗ್ಯಕರ ಆಯ್ಕೆಯಾಗಬಹುದಾದರೂ, ಹೆಚ್ಚಿನ ಪ್ರಮಾಣದ ಬೆಣ್ಣೆ ಮತ್ತು ಉಪ್ಪಿನಕಾಯಿಗಳನ್ನು ಸೇರಿಸುವುದರಿಂದ ಅವುಗಳನ್ನು ಅನಾರೋಗ್ಯಕರ ಕ್ಯಾಲೊರಿ ಎಂದು ಹೇಳಬಹುದು.
4. ಸಂಸ್ಕರಿಸಿದ ಮತ್ತು ಹೆಚ್ಚಿನ ಕೊಬ್ಬಿನ ಅಂಶವಿರುವ ಆಹಾರಗಳು; ಚಿಪ್ಸ್, ಕರಿದ ತಿಂಡಿಗಳು ಮತ್ತು ಜಿಡ್ಡಿನ ಫಾಸ್ಟ್ ಫುಡ್ ನಂತಹ ಆಹಾರಗಳ ನಿರಂತರ ಸೇವನೆಯು ಅನಗತ್ಯ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು ಏಕೆಂದರೆ ಅವು ಕ್ಯಾಲೊರಿ ತುಂಬಿದ ಆಹಾರಗಳಾಗಿವೆ. ಹಣ್ಣುಗಳು, ತರಕಾರಿಗಳು, ಮೊಸರು ಅಥವಾ ಬಾದಾಮಿಯಂತ ಸಣ್ಣ ಖಾದ್ಯಗಳನ್ನು ಆರೋಗ್ಯಕರ ಪರ್ಯಾಯವಾಗಿ ನೀವು ಕಂಡುಕೊಳ್ಳಬಹುದು”.
5. ಉಪ್ಪುಯುಕ್ತ ಆಹಾರಗಳು; ಉಪ್ಪಿನ ಆಹಾರಗಳು ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿರುತ್ತವೆ. ಇದು ನಿಮಗೆ ಹೊಟ್ಟೆ ಉಬ್ಬಿದ ಮತ್ತು ಭಾರವಾದ ಅನುಭವವನ್ನು ನೀಡುತ್ತದೆ. ಉದಾಹರಣೆಗೆ ಉಪ್ಪು ಹಾಕಿದ ಬಾದಾಮಿ ಮತ್ತು ಪಾಪ್ಕಾರ್ನ್ ಜೊತೆಗೆ ಬೆಣ್ಣೆ ಮತ್ತು ಉಪ್ಪು ಸೇರಿರುವಂತಹ ಆಹಾರಗಳು. ಇಂತಹ ಹೆಚ್ಚುವರಿ ಉಪ್ಪು ದೇಹದಲ್ಲಿ ಉರಿಯೂತವನ್ನು ಉಂಟುಮಾಡಬಹುದು.
ಈ ತಿಂಡಿಗಳು ಅನಗತ್ಯ ತೂಕ ಹೆಚ್ಚಳಕ್ಕೆ ಕಾರಣವಾಗಲು ಪ್ರಾಥಮಿಕ ಕಾರಣವೆಂದರೆ ಅವುಗಳ ಹೆಚ್ಚಿನ ಕ್ಯಾಲೊರಿಗಳು, ಸಕ್ಕರೆ ಮತ್ತು ಅನಾರೋಗ್ಯಕರ ಕೊಬ್ಬುಗಳು. ಅವುಗಳನ್ನು ಹೆಚ್ಚಾಗಿ ಹೈಡ್ರೋಜನೀಕರಿಸಿದ ಎಣ್ಣೆಗಳಲ್ಲಿ ಹೆಚ್ಚಿನ ತಾಪಮಾನದಲ್ಲಿ ಡೀಪ್ ಫ್ರೈ ಮಾಡಲಾಗುತ್ತದೆ, ಇದು ಫ್ರೀ ರಾಡಿಕಲ್ಗಳ ರಚನೆಗೆ ಕಾರಣವಾಗುತ್ತದೆ, ಜೊತೆಗೆ ಇದು ಕೊಲೆಸ್ಟ್ರಾಲ್ ಮಟ್ಟವನ್ನು ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಈ ತಿಂಡಿಗಳಿಂದ ಸಿಗುವ ಅತಿಯಾದ ಕ್ಯಾಲೊರಿ ಸೇವನೆಯು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು ಮತ್ತು ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಕೀಲು ಸಮಸ್ಯೆಗಳು ಸೇರಿದಂತೆ ವಿವಿಧ ಆರೋಗ್ಯ ಪರಿಸ್ಥಿತಿಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ಇದನ್ನೂ ಓದಿ:ಈ 5 ಡ್ರೈ ಫ್ರೂಟ್ಸ್ ತೂಕವನ್ನು ಕಳೆದುಕೊಳ್ಳಲು ಹೇಗೆ ಸಹಾಯ ಮಾಡುತ್ತವೆ ಎಂದು ತಿಳಿಯಿರಿ
ಇದು ಅನಗತ್ಯ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಅತಿಯಾದ ತಿಂಡಿಯು ಹೆಚ್ಚುವರಿ ಕ್ಯಾಲೊರಿಗಳ ಸೇವನೆಗೆ ಕಾರಣವಾಗಬಹುದು, ಊಟದ ಸಮಯದಲ್ಲಿ ನಿಮ್ಮ ಹಸಿವನ್ನು ಕಡಿಮೆ ಮಾಡುತ್ತದೆ ಅಥವಾ ಊಟವನ್ನು ಸಂಪೂರ್ಣವಾಗಿ ಬಿಟ್ಟು ಬಿಡಲು ಕಾರಣವಾಗಬಹುದು. ಜೊತೆಗೆ ಇದು ಅಗತ್ಯ ಪೋಷಕಾಂಶಗಳ ಕೊರತೆಗೆ ಕಾರಣವಾಗಬಹುದು ಮತ್ತು ನಿಮ್ಮ ಒಟ್ಟಾರೆ ಆಹಾರ ಸಮತೋಲನವನ್ನು ಅಡ್ಡಿಪಡಿಸಬಹುದು.
ಬೆಳಿಗ್ಗೆ ಅಥವಾ ಹಗಲಿನಲ್ಲಿ ಅನಾರೋಗ್ಯಕರ ಆಹಾರ ಪದ್ಧತಿಯ ಅಭ್ಯಾಸವನ್ನು ರೂಢಿಸಿಕೊಳ್ಳಲು ತಜ್ಞರು ಕೆಲವು ಅತ್ಯಂತ ಉಪಯುಕ್ತ ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
● ತಿನ್ನುವ ಪ್ರಮಾಣದ ಮೇಲೆ ಗಮನವಿರಲಿ: ಸಾಮಾನ್ಯವಾಗಿ, ಒಬ್ಬ ಮನುಷ್ಯ ಸುಮಾರು 200 ಕ್ಯಾಲೊರಿ ಮತ್ತು ಕನಿಷ್ಠ 10 ಗ್ರಾಂ ಪ್ರೋಟೀನ್ ಅನ್ನು ಸೇವಿಸಬೇಕು, ಇದು ನಿಮ್ಮ ಮುಂದಿನ ಊಟದವರೆಗೂ ಹೊಟ್ಟೆ ತುಂಬಿರಲು ಸಹಾಯ ಮಾಡುತ್ತದೆ ಆದರೆ ಇದು ಊಟವನ್ನು ಬಿಟ್ಟುಬಿಡುವಷ್ಟು ಹೊಟ್ಟೆ ತುಂಬಿದ ಭಾವನೆಯನ್ನು ನೀಡುವುದಿಲ್ಲ. ಹಾಗಾಗಿ ನಿಮ್ಮ ಆರೋಗ್ಯಕ್ಕೂ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ.
● ಆವರ್ತನ: ಒಬ್ಬ ವ್ಯಕ್ತಿಯು ಸೇವಿಸುವ ತಿಂಡಿಗಳು ಅಥವಾ ಆಹಾರಗಳ ಸಂಖ್ಯೆಯು, ಚಟುವಟಿಕೆಯ ಮಟ್ಟಗಳು ಮತ್ತು ಊಟದ ಮೇಲೆ ಬದಲಾಗುತ್ತದೆ. ಒಬ್ಬರು ತುಂಬಾ ಸಕ್ರಿಯರಾಗಿದ್ದರೆ, ಅವರು ದಿನಕ್ಕೆ 2- 3 ಬಾರಿ ತಿಂಡಿ ಮಾಡಬಹುದು, ಆದರೆ ಜಡ ವ್ಯಕ್ತಿ ಅಂದರೆ ಕುಳಿತಲ್ಲಿಯೇ ಇರುವವರು, ತಿಂಡಿಯನ್ನು ದಿನಕ್ಕೆ ಒಮ್ಮೆ ಮಾತ್ರ ಸೀಮಿತಗೊಳಿಸಬೇಕು.
● ತಪ್ಪಿಸಬೇಕಾದ ತಿಂಡಿಗಳು: ಸಂಸ್ಕರಿಸಿದ, ಹೆಚ್ಚಿನ ಸಕ್ಕರೆಯ ತಿಂಡಿಗಳನ್ನು ತಪ್ಪಿಸಿ. ಏಕೆಂದರೆ ಇದು ನಿಮ್ಮ ದೇಹಕ್ಕೆ ಒಳ್ಳೆಯದಲ್ಲ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: