Health: ಎಚ್ಚರ! ಎಲ್ಲವನ್ನೂ ದಕ್ಕಿಸಿಕೊಳ್ಳುತ್ತಿದ್ದೀರಿ, ಆದರೆ ನಿದ್ರೆಯನ್ನು?

Good Sleep: ನಿದ್ರೆಗೂ ಹೃದಯಾಘಾತಕ್ಕೂ ಸಂಬಂಧವಿದೆ. ಹಾಗಾಗಿ ಟೈಪ್​ 2 ಮಧುಮೇಹ, ರಕ್ತದೊತ್ತಡದಿಂದ ಬಳಲುತ್ತಿರುವವರು ಹೆಚ್ಚು ಜಾಗರೂಕರಾಗಿ ನಿದ್ರೆಗಾಗಿ ಸೂಕ್ತ ಸಮಯವನ್ನು ಮೀಸಲಿಡುತ್ತಿದ್ಧಾರೆ ಎನ್ನುತ್ತಿದೆ ಸಂಶೋಧನೆ.

Health: ಎಚ್ಚರ! ಎಲ್ಲವನ್ನೂ ದಕ್ಕಿಸಿಕೊಳ್ಳುತ್ತಿದ್ದೀರಿ, ಆದರೆ ನಿದ್ರೆಯನ್ನು?
ಸೌಜನ್ಯ : ಅಂತರ್ಜಾಲ
ಶ್ರೀದೇವಿ ಕಳಸದ | Shridevi Kalasad

|

Jul 04, 2022 | 2:55 PM

Good Sleep : ನಾವು ಉತ್ತಮ ಉದ್ಯೋಗ, ಆಹಾರ, ವಸತಿ ಇತ್ಯಾದಿಯೆಡೆ ಗಮನ ಕೊಡುತ್ತಿದ್ದೇವೆ. ಅದಕ್ಕಾಗಿ ಹೆಚ್ಚೆಚ್ಚು ದುಡಿಯುತ್ತಿದ್ದೇವೆ. ಅದಕ್ಕಾಗಿ ಯಾಂತ್ರೀಕೃತ ಬದುಕಿನ ದಾಸರಾಗುತ್ತಿದ್ದೇವೆ. ತುದಿಬೆರಳಲ್ಲಿ ಜಗತ್ತನ್ನೇ ಸುತ್ತುತ್ತಿದ್ದೇವೆ. ನಮ್ಮ ಬದುಕು ಹೆಚ್ಚು ಡಿಜಿಟೈಸ್ ಆದಷ್ಟೂ ಜೀವನಶೈಲಿಯ ಅಡ್ಡಪರಿಣಾಮಗಳು ಹೆಚ್ಚುತ್ತಿವೆ. ಮುಖ್ಯವಾಗಿ ನಿದ್ರೆ. ಅತಿಯಾದ ಡಿಜಿಟಲ್ ಸಾಧನಗಳ ಬಳಕೆಯಿಂದಾಗಿ ನಿದ್ರಾಹೀನತೆಯಿಂದ ಬಳಲುತ್ತಿದ್ದೇವೆ. ನಿದ್ರೆಯಲ್ಲಿ ಏರುಪೇರಾದಾಗ ಸಹಜವಾಗಿ ಆರೋಗ್ಯ ಕೈಕೊಡುತ್ತದೆ. ಕೈಕೊಟ್ಟಮೇಲೂ ಎಚ್ಚೆತ್ತುಕೊಳ್ಳದಿದ್ದರೆ ಏನಾಗಬಹುದು? ಏನಾಗಬಾರದೋ ಅದೇ ಆಗುತ್ತಿದೆ. ಹೃದಯದ ರಕ್ತನಾಳದ ತೊಂದರೆಯಿಂದ ಅನೇಕರು ಸಣ್ಣ ವಯಸ್ಸಿನಲ್ಲಿಯೇ ಸಾವನ್ನಪ್ಪುತ್ತಿದ್ದಾರೆ. ಇದನ್ನು ಗಮನಿಸುತ್ತಿರುವ ಕೆಲವರು ಅತ್ಯಂತ ಜಾಗರೂಕರಾಗಿ ಆರೋಗ್ಯವನ್ನು ಕಾಯ್ದುಕೊಳ್ಳುವ ಪ್ರಯತ್ನಲ್ಲೂ ಇದ್ಧಾರೆ ಎನ್ನುತ್ತಿವೆ ಇತ್ತೀಚಿನ ಸಂಶೋಧನೆಗಳು. ಒಟ್ಟಿನಲ್ಲಿ ನಿದ್ರೆ ಬಹಳೇ ಮುಖ್ಯ.

ಅಮೆರಿಕನ್ ಹಾರ್ಟ್​ ಅಸೋಶಿಯೇಷನ್ (AHA), ಆರೋಗ್ಯಕರ ಹೃದಯ ಮತ್ತು ಮೆದುಳಿಗೆ ಸರಿಯಾದ ನಿದ್ರೆಯೂ ಅತ್ಯವಶ್ಯ ಎಂದು ಹೇಳಿದೆ. ಇಷ್ಟು ದಿನ ಸಂತುಲಿತ ಆಹಾರ, ದೈಹಿಕ ಚಟುವಟಿಕೆ, ಕೊಲೆಸ್ಟ್ರಾಲ್​, ಮಧುಮೇಹದೊಂದಿಗೆ ರಕ್ತದೊತ್ತಡ ನಿಯಂತ್ರಣದಲ್ಲಿದ್ದರೆ ಸಾಕು ಒಬ್ಬ ವ್ಯಕ್ತಿ ಆರೋಗ್ಯವಾಗಿರಲು ಎಂದಿತ್ತು ಆದರೆ ಇದಕ್ಕೀಗ ನಿದ್ರೆಯನ್ನೂ ಸೇರಿಸಲಾಗಿದೆ. ಏಕೆಂದರೆ ಹೃದಯ ರಕ್ತನಾಳದ ಕಾಯಿಲೆ (CVDs) ಅನೇಕರ ಸಾವಿಗೆ ಕಾರಣವಾಗುತ್ತಿವೆ. 2019ರಲ್ಲಿ ಅಂದಾಜು 17.9 ಮಿಲಿಯನ್ ಜನರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಶೇ. 85 ರಷ್ಟು ಸಾವುಗಳು ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ : Health: ನಿಮ್ಮನ್ನು ಕಾಡುವ ತಲೆನೋವು ಎಂಥದೆಂದು ತಿಳಿದುಕೊಂಡಿದ್ದೀರಾ?

ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ಮುಕ್ಕಾಲು ಭಾಗದಷ್ಟು CVD ಸಾವುಗಳು ಸಂಭವಿಸಿವೆ. ಕಳೆದ ಎರಡು ದಶಕಗಳಲ್ಲಿ ವಿವಿಧ ಸಂಶೋಧನಾ ಅಧ್ಯಯನಗಳ ಪ್ರಕಾರ, ಹೃದಯರಕ್ತನಾಳದಿಂದ ಸಂಭವಿಸಿದ ಸಾವುಗಳಲ್ಲಿ, ಶೇ. 80ಕ್ಕಿಂತಲೂ ಹೆಚ್ಚು ಸಾವುಗಳು ಸಂಭವಿಸಿದ್ದು ಅನಾರೋಗ್ಯಕರ ಜೀವನಶೈಲಿಯಿಂದಲೇ. ಅಪಾಯದ ಮುನ್ಸೂಚನೆ ಗೊತ್ತಾಗುತ್ತಿದ್ದಂತೆ ಎಚ್ಚರವಹಿಸಿದ್ದರೆ ಸಾವನ್ನು ತಡೆಯಬಹುದಾಗಿತ್ತು.

ಇದನ್ನೂ ಓದಿ : Health: ವಯಸ್ಸೀಗ 30? ನಿಮ್ಮ ಹೃದಯವನ್ನೇ ಇಣುಕಿ ನೋಡಿಕೊಳ್ಳುವ ಸಮಯ

‘ಟೈಪ್​ 2 ಮಧುಮೇಹ, ರಕ್ತದೊತ್ತಡದಿಂದ ಬಳಲುತ್ತಿರುವವರು ಹೆಚ್ಚು ಜಾಗರೂಕರಾಗಿ ನಿದ್ರೆಗಾಗಿ ಸೂಕ್ತ ಸಮಯವನ್ನು ಮೀಸಲಿಡುತ್ತಿದ್ಧಾರೆ. ಅಲ್ಲದೆ, ನಿದ್ರೆಯನ್ನು ಮಾಪನ ಮಾಡುವ ಡಿಜಿಟಲ್ ಸಾಧನಗಳು ಈ ವಿಷಯವಾಗಿ ಹೆಚ್ಚು ಸಹಕಾರಿಯಾಗಿದ್ದು, ಜನ ಹೆಚ್ಚೆಚ್ಚು ಆಕರ್ಷಿತರಾಗುತ್ತಿದ್ದಾರೆ.’ ಎಂದು ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯದ ಫೀನ್‌ಬರ್ಗ್​ನಲ್ಲಿ ಹೃದಯ ಸಂಶೋಧನೆಯ ಪ್ರಾಧ್ಯಾಪಕರಾದ ಲಾಯ್ಡ್-ಜೋನ್ಸ್ ಹೇಳಿದ್ದಾರೆ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada